• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಹಿಂದೂ ಯುವತಿಯನ್ನು ಮದುವೆಯಾದರೆ 2ನೇ ಮದುವೆ ಇಲ್ಲ!?

Hanumantha Kamath Posted On December 2, 2020
0


0
Shares
  • Share On Facebook
  • Tweet It

ಮುಸ್ಲಿಮರು ನಮ್ಮ ದೇಶದಲ್ಲಿ 600 ವರ್ಷಗಳಿಂದ ವಾಸಿಸುತ್ತಿದ್ದಾರೆ. ಹಿಂದೂ ಮತ್ತು ಮುಸ್ಲಿಮರಲ್ಲಿ ಹಲವರು ಕ್ರಾಸ್ ಆಗಿ ಹುಟ್ಟಿದ್ದಾರೆ ಎಂದು ಘನವೆತ್ತ ಕರ್ನಾಟಕದ ಮಾನ್ಯ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹೇಳಿದ್ದಾರೆ. ಅದಕ್ಕಾಗಿ ಲವ್ ಜಿಹಾದಿಗೆ ಹೊಸ ಕಾನೂನು ಬೇಡಾ ಎನ್ನುವುದು ಅವರ ಅಭಿಪ್ರಾಯ. ಸ್ವಾಮಿ ಸಿದ್ಧರಾಮಯ್ಯನವರೇ, ಮುಸ್ಲಿಮರು 600 ವರ್ಷಗಳಿಂದ ಇಲ್ಲಿ ಇದ್ದಾರೆ ಎನ್ನುವುದು ನಮಗೆ ಗೊತ್ತಿದೆ. ಭಾರತದ ಮೇಲೆ ದಂಡೆತ್ತಿ ಬಂದ ಮುಸ್ಲಿಂ ರಾಜರು ಮತ್ತು ಅವರ ಸೈನಿಕರು ನಮ್ಮ ಹಿಂದೂ ರಾಣಿಯರಿಂದ ಹಿಡಿದು ಪಾಪದ ಮಹಿಳೆಯರನ್ನು ಬಿಡದೆ ಅತ್ಯಾಚಾರ ಮಾಡಿದ್ದನ್ನು ನೀವೆಷ್ಟು ಓದಿದ್ದಿರೋ ಅಷ್ಟೇ ನಾವು ಓದಿದ್ದೇವೆ.
ಇನ್ನು ಭಾರತದ ಕೆಲವು ಹಿಂದೂ ರಾಜರು ಮುಸ್ಲಿಂ ರಾಜರ ದಬ್ಬಾಳಿಕೆಗೆ ಒಳಗಾಗಿ ಅವರಿಗೆ ಕಪ್ಪ ಕೊಟ್ಟಿರಬಹುದು. ಇದರಿಂದ ಕಾಲಾಂತರದಲ್ಲಿ ದಂಡೆತ್ತಿ ಬಂದ ಮುಸ್ಲಿಂ ರಾಜರು ಮೃತರಾದರೂ ಅವರ ಪಳೆಯುಳಿಕೆಗಳಂತಿದ್ದವರು ಇಲ್ಲಿಯೇ ಉಳಿದು ಸಂತಾನ ಹೆಚ್ಚಿಸಿ ಭಾರತದಲ್ಲಿ ನೆಲೆಸಿರಬಹುದು. ಈಗ ಅಂತವರ ಒಟ್ಟು ಸಂಖ್ಯೆಯೆ ದೇಶದ ಸರಾಸರಿ 18 ಶೇಕಡಾದಷ್ಟು ಇದೆ. ಸಿದ್ದುಜಿ, ಮೊದಲು ನಿಮ್ಮ ಆತಂಕ ಸರಿಮಾಡೋಣ. ಲವ್ ಜಿಹಾದ್ ಕಠಿಣ ಕಾನೂನು ಬಂದರೆ ಮುಸ್ಲಿಮರು ಈ ದೇಶ ಬಿಟ್ಟು ಹೋಗಬೇಕಾಗಿರುವ ಪರಿಸ್ಥಿತಿ ಬರುವುದಿಲ್ಲ. ನಿಮ್ಮ ವೋಟ್ ಬ್ಯಾಂಕ್ ನಿಮ್ಮನ್ನು ಬಿಟ್ಟು ಹೋಗುತ್ತದಾ ಎಂದು ಸಿದ್ಧರಾಮಯ್ಯನವರೇ ನೀವು ಆತಂಕಿತಗೊಳ್ಳಬೇಡಿ. ಅಂತಹ ಕಾನೂನು ಇದಲ್ಲ. ಇನ್ನು ಹಿಂದೂ ಮತ್ತು ಮುಸ್ಲಿಮರು ಒಟ್ಟಾಗಿ ಕ್ರಾಸ್ ಮಕ್ಕಳು ಹುಟ್ಟಿದ್ದಾರೆ ಎಂದು ನಿಮ್ಮ ಮಾತಿನ ತಾತ್ಪರ್ಯವನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ.
ಒಂದು ವೇಳೆ ಲವ್ ಜಿಹಾದ್ ಕಾನೂನು ಬಂದರೆ ಈ ಕ್ರಾಸ್ ಗೆ ಹುಟ್ಟಿದ ಮಕ್ಕಳು ದೇಶ ಬಿಟ್ಟು ಹೋಗಬೇಕಾಗಬಹುದು ಎಂದು ಸಿದ್ದು ಭಯಪಟ್ಟುಕೊಂಡಿರುವಂತೆ ಕಾಣುತ್ತದೆ. ಅಂತಹುದು ಏನೂ ಆಗುವುದಿಲ್ಲ ಎಂದು ಈ ಮೂಲಕ ಎಲ್ಲರೂ ಸಿದ್ಧರಾಮಯ್ಯನವರಿಗೆ ಧೈರ್ಯ ಕೊಡೋಣ. ಸರಿಯಾಗಿ ನೋಡಿದರೆ ಭಾರತೀಯ ಜನತಾ ಪಾರ್ಟಿಯಲ್ಲಿಯೇ ಅನೇಕ ಉನ್ನತ ನಾಯಕರುಗಳ ಮಗಳಂದಿರು ಮುಸ್ಲಿಂ ಯುವಕರನ್ನೇ ಮದುವೆಯಾಗಿದ್ದಾರೆ. ಅನೇಕ ಸಿನೆಮಾ ಸ್ಟಾರ್ ಮುಸ್ಲಿಂ ಹೀರೋಗಳು ಹಿಂದೂ ಹೆಣ್ಣುಮಕ್ಕಳನ್ನೇ ಮದುವೆಯಾಗಿದ್ದಾರೆ. ಶಾರೂಕ್ ಖಾನ್, ಅಮೀರ್ ಖಾನ್, ಸೈಫ್ ಅಲಿ ಖಾನ್ ನಂತಹ ಮುಸ್ಲಿಂ ಹೀರೋಗಳ ಹೆಂಡತಿಯರು ಹಿಂದೂಗಳೇ. ವಿಷಯ ಇರುವುದು ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿ ಮದುವೆಯಾಗುವುದರಲ್ಲಿ ಅಲ್ಲವೇ ಅಲ್ಲ. ಲವ್ ಜಿಹಾದ್ ಕಾನೂನು ಬಂದರೂ ಇಂತಹ ಮದುವೆಗಳಿಗೆ ನಿಷೇಧ ಹಾಕಲು ಸಾಧ್ಯವೇ ಇಲ್ಲ. ಯಾಕೆಂದರೆ ನಮ್ಮ ಸಂವಿಧಾನದಲ್ಲಿಯೇ 18 ತುಂಬಿದ ಯುವತಿ ಮತ್ತು 21 ತುಂಬಿದ ಯುವಕ ಯಾರನ್ನು ಬೇಕಾದರೂ ಮದುವೆಯಾಗಬಹುದು. ಅದನ್ನು ಯಾವ ಹಿಂದೂ ಸಂಘಟನೆಗಳೂ ತಡೆಯಲು ಸಾಧ್ಯವಿಲ್ಲ. ಆದರೆ ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರನ್ನು ಪ್ರೀತಿಸಿ, ಮೈಂಡ್ ವಾಶ್ ಮಾಡಿ, ತಮ್ಮ ಧರ್ಮಕ್ಕೆ ಮತಾಂತರ ಮಾಡಿಸಿ ನಂತರ ನಿಖಾ ಆಗಿ ಎರಡು ವರ್ಷ ಬಳಸಿ ನಂತರ ಎಂಜಿಲೆಲೆ ತರಹ ಬಿಸಾಡುವುದಿದೆಯಲ್ಲ ಅದು ಕೆಟ್ಟದು. ಅದನ್ನು ತಡೆಯಲು ಈಗ ಕಾನೂನು ಬರಬೇಕಿದೆ.
ಒಂದು ಪ್ರಾಪ್ತ ವಯಸ್ಸಿನ ತರುಣಿ ತನ್ನದೇ ಜಾತಿಯ ಯುವಕನನ್ನು ಮದುವೆಯಾದರೆ ವಿಚ್ಚೇದನ ಆಗಲ್ವಾ ಎಂದು ಕೆಲವರು ಕೇಳಬಹುದು. ವಿವಾಹ ವಿಚ್ಚೇದನ ಎನ್ನುವುದು ಎಲ್ಲಾ ಕಡೆ ಆಗುತ್ತದೆ. ಆದರೆ ಹಿಂದೂ ಧರ್ಮದಲ್ಲಿ ತನ್ನ ಗಂಡನಿಂದ ದೌರ್ಜನ್ಯ ಆಗಿದೆ ಎಂದು ಹೆಂಡತಿ ನ್ಯಾಯಾಲಯದಲ್ಲಿ ವಾದಿಸಿ ಗೆದ್ದರೆ ಆಗ ಕೋರ್ಟ್ ಅವಳಿಗೆ ಜೀವನಾಂಶ ಕೊಡಲು ಹೇಳುತ್ತದೆ. ಆದರೆ ಇಲ್ಲಿ ನಿಖಾ ಆಗುವ ಮಹಿಳೆಗೆ ತಾನು ಇಂತಿಂತಹ ವ್ಯಕ್ತಿಯನ್ನು ಮದುವೆಯಾಗಿದ್ದೇನೆ ಎಂದು ಆಯಾ ಮಸೀದಿಯವರು ಪ್ರಮಾಣ ಪತ್ರ ನೀಡಿದರೆ ಮಾತ್ರ ಅವಳಿಗೆ ಮದುವೆಯಾಗಿರುವುದಕ್ಕೆ ದಾಖಲೆ ಇರುತ್ತದೆ. ಅನೇಕ ಸಂದರ್ಭದಲ್ಲಿ ಮತಾಂತರ ಆಗಿ ಮದುವೆಯಾಗುವ ಮಹಿಳೆಗೆ ಆಯಾ ಮಸೀದಿಯವರು ಇಂತಹ ಪತ್ರ ನೀಡುವುದೇ ಇಲ್ಲ. ಎರಡು ವರ್ಷ ಬಳಿಕ ಆಕೆಯ ಬಳಿ ಇನ್ನು ದೋಚಲು ಏನೂ ಇಲ್ಲ ಎಂದಾಗ ಗಂಡ ಅವಳಿಗೆ ಬೇರೆ ಗಂಡಸಿನೊಂದಿಗೆ ಲೈಂಗಿಕ ಕ್ರಿಯೆಗೆ ಸಹಕರಿಸು ಎಂದು ಒತ್ತಾಯ ಮಾಡಿದರೆ ಅವಳು ತಾನೆ ಏನು ಮಾಡಿಯಾಳು. ಒಪ್ಪದೇ ಹೋದರೆ ಮನೆ ಬಿಟ್ಟು ತೊಲಗು ಎಂದರೆ ಅವಳಿಗೆ ಏನು ಗತಿ? ಅವನು ಸುಲಭವಾಗಿ ಇನ್ನೊಂದು ಮದುವೆಯಾಗುತ್ತಾನೆ. ಇವಳು ಬೀದಿಗೆ ಬೀಳುತ್ತಾಳೆ. ಇದನ್ನು ತಪ್ಪಿಸಲು ಒಂದು ವೇಳೆ ಹಿಂದೂ ಯುವತಿ ಮುಸ್ಲಿಂ ಯುವಕನನ್ನು ಪ್ರೀತಿಸಿ ಮದುವೆನೆ ಆದರೆ ಅವಳಿಗೆ ಆರ್ಥಿಕ ಮತ್ತು ಸಾಮಾಜಿಕ ರಕ್ಷಣೆ ಸಿಗಬೇಕು ಎನ್ನುವುದು ಹೊಸ ಕಾನೂನಿನ ಉದ್ದೇಶ. ಇನ್ನು ಮದುವೆಯಾಗುವುದಕ್ಕಾಗಿ ಮತಾಂತರ ಆಗಬೇಕು ಎಂದು ಒತ್ತಾಯಪಡಿಸುವ ನಿಯಮ ಕೂಡ ರದ್ದಾಗಬೇಕಾಗುತ್ತದೆ. ಅದರೊಂದಿಗೆ ಎರಡು ವರ್ಷ ಬಳಸಿ ನಂತರ ಕಿರುಕುಳ ಕೊಟ್ಟರೆ ಅವಳು ವಿಚ್ಚೇದನ ಬಯಸಿದರೆ ಅವಳಿಗೆ ಇಂತಿಷ್ಟು ಲಕ್ಷ ಹಣವನ್ನು ದಂಡವಾಗಿ ನೀಡಬೇಕು ಎನ್ನುವ ಅಂಶ ಕೂಡ ಅಡಕವಾಗಬೇಕು. ಎಲ್ಲದರ ಜೊತೆಗೆ ಹಿಂದೂ ಯುವತಿಯರನ್ನು ಮದುವೆಯಾಗುವ ಮುಸಲ್ಮಾನ ಯುವಕರು ಎರಡನೇ ಮದುವೆಯ ಅವಕಾಶದಿಂದ ವಂಚಿತರಾಗುತ್ತಾರೆ ಎನ್ನುವ ನಿಯಮ ಬಂದರೆ ಎಲ್ಲವೂ ಸರಿಯಾಗುತ್ತದೆ. ಮತ್ತೆ ಬೇಕಾದರೆ ನೋಡಿ, ಯಾವ ಮುಸ್ಲಿಮ್ ತರುಣ ಇಂತಹ ರಿಸ್ಕ್ ತೆಗೆದುಕೊಳ್ಳುವುದಿಲ್ಲ!!
0
Shares
  • Share On Facebook
  • Tweet It




Trending Now
ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
Hanumantha Kamath September 17, 2025
ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
Hanumantha Kamath September 17, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
  • Popular Posts

    • 1
      ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • 2
      ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • 3
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 4
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 5
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!

  • Privacy Policy
  • Contact
© Tulunadu Infomedia.

Press enter/return to begin your search