• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

13 ವರ್ಷ ದಾಟಿದ ಜಾನುವಾರುಗಳ ಹತ್ಯೆಯ ಬಗ್ಗೆ ಈ ಕಾಯ್ದೆ ಸ್ಪಷ್ಟಪಡಿಸಬೇಕು!!

Hanumantha Kamath Posted On December 11, 2020
0


0
Shares
  • Share On Facebook
  • Tweet It

ನಮ್ಮ ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾನೂನು ಜಾರಿಯಾಗಿಲ್ಲ. ಈಗ ಜಾರಿಯಾಗಲಿರುವುದು ಏನಿದ್ದರೂ ಕರ್ನಾಟಕ ಗೋಹತ್ಯೆ ನಿಯಂತ್ರಣ ಮತ್ತು ಜಾನುವಾರು ಸಂರಕ್ಷಣೆ ಕಾಯ್ದೆ. ಈ ಕಾಯ್ದೆ ಸಂಪೂರ್ಣ ಗೋಹತ್ಯಾ ನಿಷೇಧ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಇದರಲ್ಲಿ ಹದಿಮೂರು ವರ್ಷ ದಾಟಿದ ಎಮ್ಮೆ, ಕೋಣಗಳನ್ನು ಸೂಕ್ತ ಪ್ರಾಧಿಕಾರದ ಪರವಾನಿಗೆ ಪಡೆದು ವಧೆ ಮಾಡಬಹುದು. ಪಶು ವೈದ್ಯಾಧಿಕಾರಿಯ ಪ್ರಮಾಣ ಪತ್ರ ಕಡ್ಡಾಯ ಎಂದು ಹೇಳಲಾಗಿದೆ. ಪ್ರಶ್ನೆ ಇರುವುದೇ ಇಲ್ಲಿ. ಈಗ ಪ್ರಸ್ತುತ ಇದ್ದ ಕಾನೂನಿನಲ್ಲಿ ಈ ವಿಷಯದ ಮೇಲೆ ಹೆಚ್ಚುಕಡಿಮೆ ಇದೇ ಅಂಶಗಳಿದ್ದವು. ಪಶು ವೈದ್ಯಾಧಿಕಾರಿಯ ಪ್ರಮಾಣ ಪತ್ರವನ್ನು ಭಾರತದಂತಹ ದೇಶದಲ್ಲಿ ಸಂಪಾದಿಸುವುದು ತುಂಬಾ ಕಷ್ಟವೇನಲ್ಲ. ಈಗ ಭಾರತೀಯ ಜನತಾ ಪಾರ್ಟಿಯ ಸರಕಾರ ಇರುವ ತನಕ ಪಶು ವೈದ್ಯರು ಯಾವುದೇ ರಿಸ್ಕ್ ತೆಗೆದುಕೊಳ್ಳುವುದಿಲ್ಲ. ನಂತರ ಏನು ಕಥೆ. ನಾನು ಎಲ್ಲಾ ಪಶು ವೈದ್ಯರು ಕೂಡ ಒಂದೇ ಲೆಕ್ಕ ಎಂದು ಹೇಳುವುದಿಲ್ಲ. ಆದರೆ ಕೆಲವೊಮ್ಮೆ ಹಣದ ಆಸೆ, ಒತ್ತಡದಿಂದ ಏನು ಕೂಡ ಆಗಬಹುದು. ಈ ವಿಷಯದ ಬಗ್ಗೆ ಈ ಕಾಯ್ದೆಯಲ್ಲಿ ಸ್ಪಷ್ಟತೆ ಬೇಕು. ಯಾವುದೇ ಜಾನುವಾರುಗಳ ಹತ್ಯೆ ಮಾಡಬಾರದು ಎಂದು ಈ ಸರಕಾರ ಹೇಳಿದ್ದರೆ ತುಂಬಾ ಒಳ್ಳೆಯದಿತ್ತು. ಇನ್ನು ಕಾಂಗ್ರೆಸ್ಸಿಗರ ಪ್ರಕಾರ ಮುದಿ ದನ, ಎಮ್ಮೆ, ಎತ್ತು, ಕೋಣಗಳನ್ನು ಕಡಿಯದೇ ಬಿಜೆಪಿ ಶಾಸಕರ, ಸಂಸದರ ಮನೆಯಂಗಳದಲ್ಲಿ ಬಿಡುವುದಾ ಎಂದು ಆಕ್ಷೇಪ ಎತ್ತಿದ್ದಾರೆ. ಬಹುಶ: ಆ ಬೆದರಿಕೆಗೆ ಭಯಪಟ್ಟು ಬಿಜೆಪಿ ಸರಕಾರ 13 ವರ್ಷ ದಾಟಿದ ಎಮ್ಮೆ, ಕೋಣಗಳನ್ನು ವಧಿಸಬಹುದು ಎಂದು ಹೇಳಿರಬಹುದು. ಆದರೆ ಸಾಮಾನ್ಯವಾಗಿ ಎಮ್ಮೆ, ಕೋಣಗಳು ಹದಿಮೂರು ವರ್ಷಗಳ ಬಳಿಕ ಹೆಚ್ಚು ಕಾಲ ಜೀವಿಸಲಾರರು. ಆ ನಿಟ್ಟಿನಲ್ಲಿ ಈ ಅಂಶ ಅಳವಡಿಸಿರಬಹುದು. ಆದರೆ ದನಗಳನ್ನು ಇದರಲ್ಲಿ ಅಡಕ ಮಾಡಿಲ್ಲ ಎಂದು ಹೇಳಲಾಗುತ್ತದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಬಿಜೆಪಿ ಮುಖಂಡರು ಯಾವುದೇ ಅನುಮಾನಗಳಿಗೆ ಆಸ್ಪದೆ ನೀಡದೇ ಆರ್ಟಿಕಲ್ ಅಥವಾ ಸಂವಾದ ಏರ್ಪಡಿಸಬೇಕು. ಅಲ್ಲಿ ತಮ್ಮದೇ ಕಾರ್ಯಕರ್ತರಿಗೆ ಈ ಬಗ್ಗೆ ಸೂಕ್ತ ಮಾಹಿತಿ ನೀಡಬೇಕು. ಸದ್ಯ ಈ ವಿಷಯವೇ ಕೇಸರಿ ವಲಯದಲ್ಲಿ ಹೆಚ್ಚು ಚರ್ಚೆಯಲ್ಲಿದೆ. ಅದನ್ನು ಬಿಜೆಪಿ ಮುಖಂಡರು ಪರಿಹರಿಸಬೇಕು.
ನೋಂದಾಯಿತ ಸಂಸ್ಥೆಗಳಿಗೆ ಗೋಶಾಲೆ ನಡೆಸಲು ಸರಕಾರ ಅವಕಾಶ ನೀಡಲಿದೆ ಎಂದು ಈ ಕಾಯ್ದೆ ಹೇಳಿದೆ. ಒಂದು ಗೋಶಾಲೆ ನಡೆಸುವುದೆಂದರೆ ಅದು ಅಷ್ಟು ಸುಲಭದ ಮಾತಲ್ಲ. ಅದರಲ್ಲಿಯೂ ಮುದಿ ದನಗಳನ್ನು ನೂರಾರು ಸಂಖ್ಯೆಯಲ್ಲಿ ಒಂದು ಗೋಶಾಲೆ ಮಾಡಿ ಸಾಕಲು ಎದೆಗುಂಡಿಗೆ ಗಟ್ಟಿ ಇರಬೇಕು. ಅದಕ್ಕೆ ನಾನು ಏನು ಹೇಳುವುದೆಂದರೆ ನಮ್ಮ ಮುಜುರಾಯಿ ಇಲಾಖೆಯ ಅಡಿಯಲ್ಲಿ ಪ್ರತಿ ಜಿಲ್ಲೆಯ ಅನೇಕ ಶ್ರೀಮಂತ ದೇವಸ್ಥಾನಗಳು ಬರುತ್ತವೆ. ಆ ದೇವಸ್ಥಾನಗಳ ಆದಾಯವು ಸರಕಾರದ ಪಾಲಾಗುತ್ತಲೇ ಇರುತ್ತದೆ. ಈಗ ಸರಕಾರ ಗೋಶಾಲೆಗಳನ್ನು ನಿರ್ಮಾಣ ಮಾಡಿ ಈ ಶ್ರೀಮಂತ ದೇವಸ್ಥಾನಗಳ ಆದಾಯವನ್ನು ಇಲ್ಲಿ ಖರ್ಚು ಮಾಡಲು ಮುಂದಾದರೆ ಆಗ ನಿಜಕ್ಕೂ ಗೋಶಾಲೆಗಳು ನೆಮ್ಮದಿಯಾಗಿ ಇರಬಹುದು. ಅದಕ್ಕೆ ಸರಕಾರ ಏನಾದರೂ ರೂಪುರೇಶೆ ಸಿದ್ಧಪಡಿಸಿದರೆ ಉತ್ತಮ. ಬೇಕಾದರೆ ಗೋಪ್ರೇಮಿ ಖಾಸಗಿಯವರಿಗೆ ಗೋಶಾಲೆಗಳ ಜವಾಬ್ದಾರಿ ನೀಡಿದರೆ ಉತ್ತಮ. ಅವರು ಎಲ್ಲಿಯಾದರೂ ಒಂದಿಷ್ಟು ದಾನಿಗಳನ್ನು ಒಟ್ಟು ಮಾಡಿ ಚೆಂದದಿಂದ ನಡೆಸಿಕೊಂಡು ಹೋಗಬಹುದು. ಅದರೊಂದಿಗೆ ಜನರು ಕೂಡ ಕೈಜೋಡಿಸಿದರೆ ಒಳ್ಳೆಯದಾಗಲಿದೆ. ಇನ್ನು ಇದು ತಿದ್ದುಪಡಿ ಕಾಯ್ದೆ. ಈ ತಿದ್ದುಪಡಿ ಮಾಡುವಾಗ ಅಕ್ರಮ ಗೋಸಾಗಾಟವನ್ನು ಜಾಮೀನುರಹಿತ ಪ್ರಕರಣ ಎಂದು ಪರಿಗಣಿಸಬೇಕೆಂಬ ಬಿಜೆಪಿ ಶಾಸಕರ ಬಹುಕಾಲದ ಬೇಡಿಕೆಗೆ ಮಣೆ ಹಾಕಿಲ್ಲ. 7 ವರ್ಷದವರೆಗೆ ಶಿಕ್ಷೆಗೆ ಅವಕಾಶವಿದ್ದರೂ ಇದನ್ನು ಠಾಣೆಯಲ್ಲಿ ಜಾಮೀನು ಪಡೆಯುವುದಕ್ಕೆ ಅರ್ಹ ಪ್ರಕರಣ ಎಂದೇ ಪರಿಗಣಿಸಲಾಗಿದೆ. ಈ ಬಗ್ಗೆ ಬಿಜೆಪಿ ಶಾಸಕರುಗಳಾದ ಕೆಜೆ ಬೋಪಯ್ಯ, ಅರಗ ಜ್ಞಾನೇಂದ್ರ, ಅರವಿಂದ ಲಿಂಬಾವಳಿಯಂತವರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ನು ಅಕ್ರಮ ಕಸಾಯಿಖಾನೆ ನಡೆಸುವವರ ಬಗ್ಗೆ ಪ್ರತ್ಯೇಕ ಕ್ರಮದ ಬಗ್ಗೆಯೂ ಉಲ್ಲೇಖವಿಲ್ಲ.
ಹಾಗಂತ ಕಾಯ್ದೆ ಪೂರ್ಣವಾಗಿ ಸರಿಯಿಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ. ಪೊಲೀಸರು ವಶಕ್ಕೆ ಪಡೆದುಕೊಂಡ ಹಸುಗಳನ್ನು ಆರೋಪಿಗಳಿಗೆ ಹಿಂದಿರುಗಿಸುವಂತಿಲ್ಲ ಎನ್ನುವ ಅಂಶ ಇದೆ. ಅದು ನಿಜಕ್ಕೂ ಉತ್ತಮ ವಿಷಯ. ಇನ್ನು ವಶಪಡಿಸಿಕೊಂಡ ಹಸುಗಳ ಸಾರ್ವಜನಿಕ ಹರಾಜಿಗೆ ಅವಕಾಶ ಇದೆ ಎನ್ನಲಾಗಿದೆ. ಅದನ್ನು ಹರಾಜಿನಲ್ಲಿ ಪಡೆದುಕೊಂಡವರು ಯಾರು ಮತ್ತು ಅವರ ಉದ್ದೇಶದ ಬಗ್ಗೆ ಕೂಡ ಚಿಂತನೆ ಇದ್ದರೆ ಒಳ್ಳೆಯದು. ಒಟ್ಟಿನಲ್ಲಿ 1964 ರಿಂದಲೇ ಗೋಹತ್ಯೆ ನಿಷೇಧ ಕಾಯಿದೆ ಜಾರಿಯಲ್ಲಿದೆ. ಆದರೆ ಅದು ಹಲ್ಲಿಲ್ಲದ ಹಾವಾಗಿತ್ತು. ಈಗ ಬಂದಿರುವ ಹೊಸ ಕಾನೂನು ಅಕ್ರಮ ಗೋಸಾಗಾಟ ತಡೆ ಮತ್ತು ಗೋಹತ್ಯೆ ನಿಷೇಧಕ್ಕೆ ಉತ್ತಮ ರೀತಿಯಲ್ಲಿ ಬಳಕೆಯಾಗಲಿ ಎನ್ನುವುದು ಎಲ್ಲರ ಹಾರೈಕೆ. ಇದನ್ನು ಕಾಂಗ್ರೆಸ್, ಜೆಡಿಎಸ್ ನವರು ಯಾಕೆ ವಿರೋಧ ಮಾಡುತ್ತಾರೆ ಎನ್ನುವುದೇ ಎಲ್ಲರ ಪ್ರಶ್ನೆ. ಒಂದಂತೂ ನಿಜ. ಇದನ್ನು ಜಾರಿ ಮಾಡುವ ಮೊದಲು ಚರ್ಚೆ ಮಾಡಬೇಕು ಎನ್ನುವುದು ವಿಪಕ್ಷಗಳ ಬೇಡಿಕೆ. ಬಹುಶ: ಬಿಜೆಪಿ ಸರಕಾರ ಹಾಗೆ ಚರ್ಚೆ ಮಾಡಬಹುದಿತ್ತು. ಯಾಕೆಂದರೆ ಚರ್ಚೆ ಮಾಡದೇ ಕಾನೂನು ತಂದರೆ ಬಿಜೆಪಿ ಪರವಾಗಿರುವವರ ಚಪ್ಪಾಳೆ ಗಿಟ್ಟಿಸಬಹುದು. ಆದರೆ ಸಮಾಜದಲ್ಲಿ ಮೂವತ್ತು ಶೇಕಡಾ ನ್ಯೂಟ್ರಲ್ ಮತದಾರರು ಕೂಡ ಇದ್ದಾರೆ. ಅವರು ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿರುತ್ತಾರೆ. ಅಂತವರು ಈ ಕಾಯ್ದೆಗೆ ವಿರೋಧ ಮಾಡುವ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರುಗಳ ಮಾತುಗಳನ್ನು ಕೇಳಿದ್ದರೆ ಹಾಲು ಮತ್ತು ಸುಣ್ಣದ ವ್ಯತ್ಯಾಸ ಗೊತ್ತಾಗುತ್ತಿತ್ತು!
0
Shares
  • Share On Facebook
  • Tweet It




Trending Now
ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
Hanumantha Kamath July 1, 2025
ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
Hanumantha Kamath July 1, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...
    • ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
    • ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!
  • Popular Posts

    • 1
      ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • 2
      ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • 3
      ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • 4
      ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • 5
      ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?

  • Privacy Policy
  • Contact
© Tulunadu Infomedia.

Press enter/return to begin your search