• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ದೇವರ ನಾಡಿನಲ್ಲಿ ಪಂಚೆ ಧರಿಸಿದರೆ ಮಾತ್ರ ಪ್ರವೇಶ, ನಮ್ಮಲ್ಲಿ ಯಾಕಿಲ್ಲ!!

Hanumantha Kamath Posted On January 11, 2021
0


0
Shares
  • Share On Facebook
  • Tweet It

ದಕ್ಷಿಣ ಕನ್ನಡ ಜಿಲ್ಲೆಯ ದೇರಳಕಟ್ಟೆಯ ದೇವಸ್ಥಾನವೊಂದರಲ್ಲಿ ಒಳಪ್ರವೇಶಿಸಲು ಗಂಡಸರು ಹಾಗೂ ಹೆಂಗಸರು ಸಾಂಪ್ರದಾಯಿಕ ಉಡುಗೆಗಳನ್ನು ತೊಡಬೇಕು ಎನ್ನುವ ವಿನಂತಿಯೊಂದನ್ನು ಅಲ್ಲಿನ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಘಟಕ ಹಾಕಿದೆ. ನಿಜಕ್ಕೂ ಒಳ್ಳೆಯ ಹೆಜ್ಜೆ. ಮನೆಯಲ್ಲಿ ಯಾವುದಾದರೂ ಪೂಜೆ, ಹೋಮ, ಹವನ, ಕೋಲ, ನೇಮ ಸಹಿತ ದೈವ-ದೇವರುಗಳ ಯಾವುದೇ ಆಚಾರ-ವಿಚಾರಗಳಿದ್ದಾಗ ನಾವು ಇವತ್ತಿಗೂ ಸಾಂಪ್ರದಾಯಿಕ ಉಡುಪುಗಳನ್ನು ಧರಿಸುತ್ತೇವೆ. ಗಂಡಸರು ಪಂಚೆ, ಶಲ್ಯ ಧರಿಸಿದರೆ ಹೆಣ್ಣುಮಕ್ಕಳು ಸೀರೆ, ರವಿಕೆ ಧರಿಸುತ್ತೇವೆ. ಅದೇ ರೀತಿಯಲ್ಲಿ ತಮ್ಮ ಮನೆಯಲ್ಲಿರುವ ಯುವಕ, ಯುವತಿಯರಿಗೂ ಅಂತಹುದೇ ಸಂಪ್ರದಾಯಿಕ ಧರಿಸನ್ನು ಹೇಳುತ್ತಾರೆ. ಆದರೆ ಅದೇ ಜನರು ದೇವಸ್ಥಾನಕ್ಕೆ ಹೋಗುವಾಗ ತಮ್ಮ ಯುವ ಮಕ್ಕಳಿಗೆ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಲು ಸೂಚಿಸುವುದಿಲ್ಲ.

ಹೇಳಿದರೆ ಯಾರು ಕೇಳುತ್ತಾರೆ ಎನ್ನುವ ಸಬೂಬು ಬೇರೆ. ಇದರಿಂದ ಟೀ ಶರ್ಟ್, ಜೀನ್ಸ್ ಸಹಿತ ಪಾಶ್ಚಿಮಾತ್ಯ ರಾಷ್ಟ್ರಗಳ ಉಡುಪನ್ನು ಧರಿಸಿ ಕಾಲೇಜಿಗೆ ಹೋಗುವ ಯುವತಿಯರು ದೇವಸ್ಥಾನದ ಮೆಟ್ಟಿಲು ಹತ್ತಿ ಇಳಿಯುತ್ತಾರೆ. ಯಾರು ಏನು ಧರಿಸಿದರೂ ನಮ್ಮ ಚಿತ್ತ ದೇವರತ್ತ ಇದ್ದರೆ ಸಾಕು ಎಂದು ಕೆಲವು ಸಿಕ್ಕಾಪಟ್ಟೆ ವಿಚಾರವಾದಿಗಳು ಹೇಳಬಹುದು. ಆದರೆ ಕಠಿಣ ಏಕಾಗ್ರತೆ ಇದ್ದ ವಿಶ್ವಾಮಿತ್ರನಿಗೆ ಮೇನಕೆಯಿಂದ ಬಚಾವಾಗಲು ಆಗಲಿಲ್ಲ. ಹಾಗಿರುವಾಗ ನಾವು ಸಾಮಾನ್ಯ ಮನುಷ್ಯರು ಯಾವ ಮರದ ತೊಪ್ಪಲು? ದೇವರ ಎದುರು ಎಷ್ಟೇ ಭಕ್ತಿಯಿಂದ ಪ್ರಾರ್ತಿಸಿದರೂ ನಾವು ಕಣ್ಣು ಮುಚ್ಚಿ ದೇವಸ್ಥಾನಕ್ಕೆ ಸುತ್ತು ಬರಲು ಆಗುವುದಿಲ್ಲವಲ್ಲ. ಆಗ ದೇವರನ್ನು ಎಷ್ಟೇ ಮನಸ್ಸಿನಲ್ಲಿ ಸ್ತುತಿಸುತ್ತಿದ್ದರೂ ಚಂಚಲ ಕಣ್ಣುಗಳು ಮನಸ್ಸಿನ ಅಂಕೆಯನ್ನು ದಾಟಿ ಅತ್ತಿತ್ತ ಓಡಾಡಿಬಿಡುತ್ತವೆ. ನಿಮಗೆ ಗೊತ್ತಿರಲಿ, ನಾವು ದೇವಾಲಯದ ಒಳಗಿದ್ದಾಗ ಅಲ್ಲೊಂದು ಸಕರಾತ್ಮಕ ಶಕ್ತಿ ಪ್ರವಹಿಸುತ್ತಾ ಇರುತ್ತದೆ. ನೀವು ಸಕರಾತ್ಮಕ ಚಿಂತನೆಯೊಂದಿಗೆ ದೇವಸ್ಥಾನಕ್ಕೆ ಸುತ್ತು ಹಾಕುತ್ತಿದ್ದರೆ ಆ ಸಕರಾತ್ಮಕ ಶಕ್ತಿಗೆ ನಿಮ್ಮ ದೇಹ ಪ್ರವೇಶಿಸಿ ಮನಸ್ಸಿನಲ್ಲಿ ನೆಲೆಗೊಳ್ಳಲು ಅನುಕೂಲವಾಗುತ್ತದೆ. ಅದೇ ನಿಮ್ಮ ಮನಸ್ಸು ಅತ್ತಿತ್ತ ಓಡಾಡುತ್ತಾ ಯಾರನ್ನೋ ಸೂಕ್ಷ್ಮವಾಗಿ ನೋಡುತ್ತಾ ಇದ್ದರೆ ಮನಸ್ಸಿನೊಳಗೆ ನಕರಾತ್ಮಕ ಶಕ್ತಿ ಉತ್ಪತ್ತಿಯಾಗುತ್ತದೆ. ಆಗ ದೇವಸ್ಥಾನದ ಸಕರಾತ್ಮಕ ಶಕ್ತಿ ದೇಹ ಪ್ರವೇಶಿಸಲು ಅಸಾಧ್ಯವಾಗುತ್ತದೆ. ಇದರಿಂದ ನೀವು ದೇವಸ್ಥಾನದ ಒಳಗೆ ಕಾಟಾಚಾರಕ್ಕೆ ಹೋದ ಹಾಗೆ ಆಗುತ್ತೆ ವಿನ: ಬೇರೆನೂ ಪ್ರಯೋಜನವಿಲ್ಲ. ಇನ್ನು ದೇವರನ್ನು ಎಷ್ಟು ಧ್ಯಾನಿಸಲು ಸಾಧ್ಯವಾಗುತ್ತದೋ ಅಷ್ಟು ಏಕಚಿತ್ತದಿಂದ ಭಜಿಸಿದರೆ ಮಾತ್ರ ಒಳ್ಳೆಯದು. ಆದರೆ ನಿಮಗೆ ಭಗವಂತನೆಡೆ ದೃಷ್ಟಿ ನೆಡಲು ಇಂತಹ ತುಂಡು ಲಂಗಗಳು ಅಡ್ಡಿಯಾಗುತ್ತವೆ ಎಂದಾದರೆ ನೀವು ದೇವಸ್ಥಾನದ ಒಳಗೆ ಹೋಗಿ ಕುಳಿತುಕೊಂಡು ಪ್ರಯೋಜನ ಏನು? ಇದೆಲ್ಲ ನಮ್ಮ ಹಿರಿಯರಿಗೆ ಗೊತ್ತಿತ್ತು. ಅದಕ್ಕಾಗಿ ಅವರು ತಮ್ಮ ಮಕ್ಕಳನ್ನು ಗದರಿಸಿಯಾದರೂ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿ ದೇವಸ್ಥಾನ ಪ್ರವೇಶಿಸಲು ಹೇಳುತ್ತಿದ್ದರು. ಅಂತಹ ಸಂಪ್ರದಾಯ ಇವತ್ತಿಗೂ ಕೇರಳದಲ್ಲಿದೆ. ದೇವರ ಸ್ವಂತ ನಾಡಿನಲ್ಲಿ ಇವತ್ತಿಗೂ ದೇವಸ್ಥಾನದ ಒಳ ಆವರಣ ಪ್ರವೇಶಿಸಬೇಕಾದರೆ ನೀವು ಶರ್ಟ್, ಬನಿಯನ್ ಕಳಚಿ, ಪಂಚೆ ಸುತ್ತಿಯೇ ಪ್ರವೇಶಿಸಬೇಕು. ಹೆಣ್ಣು ಮಕ್ಕಳು ಸೀರೆ ಅಥವಾ ಚೂಡಿದಾರ ಬಿಟ್ಟು ಬೇರೆ ಬಟ್ಟೆಯಲ್ಲಿ ಇದ್ದರೆ ಸುತಾರಾಂ ಸಾಧ್ಯವಿಲ್ಲ. ಕೇರಳವನ್ನು ಕಮ್ಯೂನಿಸ್ಟರು ಇಷ್ಟು ವರ್ಷಗಳಿಂದ ನಿರಂತರವಾಗಿ ಆಳಿಕೊಂಡು ಬರುತ್ತಿದ್ದರೂ ಈ ವಿಷಯದಲ್ಲಿ ಮಾತ್ರ ಅವರು ಕೂಡ ರಾಜಿಯಾಗಲಿಲ್ಲ ಎನ್ನುವುದೇ ವಿಷಯ. ಆದರೆ ನಾವು ನೋಡಿ, ಹೇಳಲು ಕೇಸರಿ ಪಡೆಗಳ ಭದ್ರಕೋಟೆ ಎನ್ನುತ್ತೇವೆ. ಆದರೆ ಇಲ್ಲಿ ಎಷ್ಟು ಸ್ವೇಚ್ಚಾಚಾರ ಎಂದರೆ ಅರೆಬರೆ ಬಟ್ಟೆ ತೊಟ್ಟ ಹೆಣ್ಣುಮಕ್ಕಳು ದೇವಸ್ಥಾನ ಪ್ರವೇಶಿಸಿದರೂ ನಾವು ಪಿಟಿಕ್ ಎನ್ನುವುದಿಲ್ಲ. ಹೇಳಿದರೆ ನಾಳೆಯಿಂದ ಭಕ್ತಾದಿಗಳ ಸಂಖ್ಯೆ ಕಡಿಮೆಯಾಗುತ್ತದೆಯೋ ಎನ್ನುವ ಭಯ. ಇದರಿಂದ ಹರಿವಾಣದಲ್ಲಿ, ಡಬ್ಬಿಯಲ್ಲಿ ಕಾಣಿಕೆ ಕಡಿಮೆಯಾದರೆ ಏನು ಎನ್ನುವ ಆತಂಕ ದೇವಸ್ಥಾನದ ಆಡಳಿತ ಮಂಡಳಿಯದ್ದು.
ಆದರೆ ಇನ್ನು ಇಂತಹುಗಳು ನಡೆಯಬಾರದೇಂದರೆ ನಮ್ಮ ದೇವಸ್ಥಾನಗಳು ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸಲೇಬೇಕು. ದೇವಸ್ಥಾನಗಳು ಮಾಲ್ ಗಳಲ್ಲ. ಇಲ್ಲಿ ಸುತ್ತಾಡಲು ನಾವು ಹೋಗುವುದಲ್ಲ. ಭಗವಂತ ಎಲ್ಲಾ ಕಡೆ ಇದ್ದಾನೆ, ದೇವಸ್ಥಾನಕ್ಕೆ ಯಾಕೆ ಹೋಗಬೇಕು ಎಂದು ಯಾರಾದರೂ ಈ ನಿಯಮಕ್ಕೆ ವಿರುದ್ಧವಾಗಿ ಇರುವವರು ಹೇಳಬಹುದು. ಆದರೆ ಆಚಾರವಿಲ್ಲದ ನಾಲಗೆಯಿಂದ ಭಕ್ತಿ ಉದ್ಭವಿಸುವುದಿಲ್ಲ. ಭಕ್ತಿ ಮನಸ್ಸಿನಲ್ಲಿ ಆವರಿಸದಿದ್ದರೆ ದೇಹದೊಳಗೆ ಪಾಸಿಟಿವ್ ವೈಬ್ಸ್ ಸಂಚರಿಸುವುದಿಲ್ಲ. ಪಾಸಿಟಿವ್ ವೈಬ್ಸ್ ಬರದಿದ್ದರೆ ಮನಸ್ಸು ಶುದ್ಧವಾಗುವುದಿಲ್ಲ. ಮನಸ್ಸು ಶುದ್ಧವಿಲ್ಲದಿದ್ದರೆ ದೇವರು ಬಂದು ನೆಲೆಗೊಳ್ಳುವುದಿಲ್ಲ. ನಾವು ಯಾವುದೇ ಕಾರ್ಯದಲ್ಲಿ ಜಯಶಾಲಿಯಾಗಬೇಕಾದರೆ ದೇವರು ನಮ್ಮ ಜೊತೆ ಇರಬೇಕು. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಆದರೆ ಕೆಲವೊಮ್ಮೆ ಬೆತ್ತ ಹಿಡಿದು ಹೇಳದಿದ್ದರೆ ಮನಸ್ಸಿಗೆ ಹೋಗಬೇಕಾದವರಿಗೆ ಹೋಗುವುದಿಲ್ಲ. ಈಗ ವಿನಂತಿ ಇದ್ದದ್ದು ಮುಂದೆ ಆದೇಶ ಆಗುತ್ತದೆ. ಆಗ ವಿವಾದವಾಗುತ್ತದೆ ಮತ್ತು ವಿವಾದ ಮಾಡುವವರು ಬೇರೆ ಯಾರೂ ಅಲ್ಲ, ನಮ್ಮವರೇ!

0
Shares
  • Share On Facebook
  • Tweet It




Trending Now
ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
Hanumantha Kamath September 17, 2025
ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
Hanumantha Kamath September 17, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
  • Popular Posts

    • 1
      ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • 2
      ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • 3
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 4
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 5
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!

  • Privacy Policy
  • Contact
© Tulunadu Infomedia.

Press enter/return to begin your search