ಕುಂಬಳಕಾಯಿ ಕಳ್ಳ ಎಂದರೆ ಸಚಿವರು ಹೆಗಲುಮುಟ್ಟಿ ನೋಡಬೇಕಾ?
Posted On March 8, 2021

ಜಾರಕಿಹೊಳಿ ಸಿಡಿಯ ಕುರಿತು ದಿನಕ್ಕೊಂದು ಕಥೆ ಹುಟ್ಟಿಕೊಳ್ಳುತ್ತಿದೆ. ಓರ್ವ ಹೆಣ್ಣು ತಾನು ಇಂತಿಂತಹ ವ್ಯಕ್ತಿಯಿಂದ ಅನ್ಯಾಯಕ್ಕೆ ಒಳಗಾಗಿದ್ದೇನೆ, ನಂಬಿಸಿ ಮೋಸ ಮಾಡಿಬಿಟ್ಟ ಎಂದು ಹೇಳಿ ಪೊಲೀಸರಿಗೆ ದೂರು ಕೊಟ್ಟು ಅದಕ್ಕೆ ಸಾಕ್ಷ್ಯ ಎನ್ನುವಂತೆ ಈ ಸಿಡಿಗಳನ್ನು ಕೊಟ್ಟರೆ ಆಗ ಪ್ರಕರಣ ಸ್ಟ್ರಾಂಗ್ ಆಗುತ್ತದೆ. ಬೇರೆಯವರ ಮೂಲಕ ಕಳುಹಿಸಿಕೊಟ್ಟು ನಂತರ ಪೊಲೀಸ್ ಉನ್ನತ ಅಧಿಕಾರಿಗಳೊಂದಿಗೆ ಮಾತನಾಡಿದರೆ, ವಿಡಿಯೋ ಕಾಲ್ ಮಾಡಿ ಮಾಹಿತಿ ನೀಡಿದರೂ ಅಲ್ಲಿ ಆಕೆ ವಂಚನೆಗೆ ಒಳಗಾಗಿದ್ದಾಳೆ ಎಂದೇ ಆ ಕ್ಷಣ ನಂಬಬಹುದು. ಆದರೆ ಮೂರನೇ ವ್ಯಕ್ತಿಯೊಬ್ಬ ಈ ಬಗ್ಗೆ ಮಧ್ಯಸ್ಥಿಕೆ ವಹಿಸಿ ಅವಳು ಯಾರೆಂದೇ ಗೊತ್ತಿಲ್ಲದೆ ಹೋರಾಡುವುದಿದೆಯಲ್ಲ ಅದೇ ಈ ಬಾರಿಯ ಸಿಡಿ ಕುತೂಹಲ.
ಈ ಒಟ್ಟು ಪ್ರಕರಣದಲ್ಲಿ ಅಲ್ಲಿ ಅವಳು ಸಂತ್ರಸ್ತೆ ಹೇಗೆ ಆಗುತ್ತಾಳೆ ಎನ್ನುವುದು ಪ್ರಶ್ನೆ. ಇಲ್ಲಿ ರಮೇಶ್ ಒಂದು ವೇಳೆ ವಿಡಿಯೋ ನಿಜವೇ ಆಗಿದ್ದರೆ (ಎದುರಿಗೆ ಕಾಣುತ್ತಿರುವ ಎಲ್ಲಾ ಸಾಕ್ಷ್ಯಗಳು ನೈಜ ಎಂದೇ ಬಿಂಬಿತವಾಗುವಂತಿದೆ) ಅವರು ತಮ್ಮ ಪತ್ನಿಗೆ ಮೋಸ ಮಾಡಿದ್ದಾರೆ ವಿನ: ಆ ವಿಡಿಯೋದಲ್ಲಿರುವ ಹೆಣ್ಣಿಗೆ ಮೋಸ ಆಗಿದೆ ಎನ್ನುವಂತೆ ಕಾಣುತ್ತಿಲ್ಲ. ಏಕೆಂದರೆ ಆ ಯುವತಿ ಯಾರು, ಎಲ್ಲಿದ್ದಾಳೆ, ನಿಜವಾಗಿಯೂ ಅನ್ಯಾಯಕ್ಕೆ ಒಳಗಾಗಿದ್ದಾಳೋ ಎಂದು ಹೇಳಲು ಅವಳೇ ಪೊಲೀಸರ ಮುಂದೆ ಬಂದಿಲ್ಲ. ಆದರೆ ಆಶ್ಚರ್ಯ ಎಂದರೆ ರಮೇಶ್ ಸಿಡಿ ಬರುತ್ತಿದ್ದಂತೆ ಸದ್ಯ 12 ಸಚಿವರು ಕೋರ್ಟಿಗೆ ಹೋಗಿದ್ದಾರೆ ಎಂದು ಮಾಧ್ಯಮಗಳು ಪ್ರಶ್ನಾರ್ಥಕ ಚಿನ್ನೆ ಹಾಕಿ ವರದಿ ಮಾಡುತ್ತಿವೆ. ಅವರಲ್ಲಿ ಆರು ಸಚಿವರು ತಾವು ಕೋರ್ಟಿಗೆ ಹೋಗಿರುವುದು ಹೌದೆಂದು ಒಪ್ಪಿಕೊಂಡಿದ್ದಾರೆ. ಕುಂಬಳಕಾಯಿ ಕಳ್ಳ ಎಂದರೆ ಸಚಿವರು ಹೆಗಲು ಮುಟ್ಟಿ ನೋಡುತ್ತಿರುವುದೇಕೆ ಎಂದು ಜನ ಕೇಳುತ್ತಿದ್ದಾರೆ. ಕಾಂಗ್ರೆಸ್ಸಿನಿಂದ ಆಪರೇಶನ್ ಗೆ ಒಳಗಾಗಿ ಭಾರತೀಯ ಜನತಾ ಪಾರ್ಟಿಗೆ ಬರುವ ಸಮಯದಲ್ಲಿ ಬೆರಳೆಣಿಕೆಯ ತಿಂಗಳುಗಳ ಕಾಲ ಆ ಬಂಡಾಯ ಶಾಸಕರು ವಿವಿಧ ರೆಸಾರ್ಟ್ ಗಳಲ್ಲಿಯೇ ಬೀಡುಬಿಟ್ಟಿದ್ದರು.

- Advertisement -
Leave A Reply