ಬಾಂಗ್ಲಾದ ಯುವತಿ ಬೆಂಗಳೂರು ರೇಪ್ ಸಾಕಷ್ಟು ಪಾಠ ಹೇಳಿಕೊಟ್ಟಿದೆ!
Posted On June 1, 2021
ಬಾಂಗ್ಲಾದೇಶಿಯ ಯುವಕರು ತಮ್ಮದೇ ದೇಶದ ಯುವತಿಯರನ್ನು ಭಾರತಕ್ಕೆ ತಂದು ಇಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿ ನಂತರ ಹಣಕಾಸಿನ ಹಂಚಿಕೆಯಲ್ಲಿ ಗಲಾಟೆಯಾಗಿ ತಂದವರೇ ಆಕೆಯನ್ನು ವಿವಸ್ತ್ರಗೊಳಿಸಿ ಅದನ್ನು ವಿಡಿಯೋ ಮಾಡಿ ಅವಳ ಬಟ್ಟೆಯನ್ನು ಅವಳೇ ಊರಿನ ಹೆಣ್ಣಿಬ್ಬರು ಎಳೆದು ತೆಗೆಯುವುದು ನೋಡುವಾಗ ಇವರೆಲ್ಲರನ್ನು ಕತ್ತು ಹಿಡಿದು ದೇಶದ ಹೊರಗೆ ದೂಡಬೇಕು ಎಂದು ಅನಿಸುವುದಿಲ್ವಾ? ಈಗ ಆರೋಪಿಗಳಲ್ಲಿ ಕೆಲವರನ್ನು ಬಂಧಿಸಲಾಗಿದೆ. ಇನ್ನು ಕೆಲವು ಎಸ್ಕೇಪ್ ಆಗಿದ್ದಾರೆ. ಆ ವೇಶ್ಯೆಯನ್ನು ಹಿಡಿಯಲು ಗಂಡಸರು, ಬಟ್ಟೆ ಬಿಚ್ಚಲು ಹೆಂಗಸರು, ದೌರ್ಜನ್ಯ ಎಸಗಲು ಬೇರೆ ಯುವತಿಯರ ಎದುರು ಇನ್ನಷ್ಟು ಗಂಡಸರು. ಇದೆಲ್ಲ ಆಗುವುದು ಬೆಂಗಳೂರಿನಲ್ಲಿ. ವಿಡಿಯೋ ಆದ ಕಾರಣ ಮತ್ತು ಅದು ವೈರಲ್ ಆದ ಕಾರಣ ಇಂತಹ ಕೃತ್ಯ ನಡೆದಿರುವುದು ಗೊತ್ತಾಗಿದೆ. ಹಾಗಂತ ಇದು ಬೆಂಗಳೂರಿಗೆ ಶೋಭೆಯಲ್ಲ. ಆದರೆ ಹೀಗೆ ವಿಡಿಯೋವೇ ಆಗದೇ ಹೋದ ಘಟನೆಗಳು ಇನ್ನೆಷ್ಟು ಇದೆಯೋ? ಹೀಗೆ ಎಷ್ಟೋ ದುಷ್ಟ ಕೃತ್ಯಗಳಲ್ಲಿ ತೊಡಗಿರುವ ಬಾಂಗ್ಲಾ ದೇಶಿಯರು, ರೋಹೀಂಗ್ಯಾದವರು ಇನ್ನೆಷ್ಟು ಜನ ನಮ್ಮಲ್ಲಿ ಇದ್ದಾರೋ ಯಾರಿಗೆ ಗೊತ್ತು. ಇವರಲ್ಲಿ ಬಹುತೇಕ ಎಲ್ಲರೂ ಅಕ್ರಮ ನುಸುಳುಕೋರರು. ಇವರ ಬಳಿ ಏನೂ ದಾಖಲೆ ಇರುವುದಿಲ್ಲ. ಇನ್ನು ಕೆಲವರು ಬುದ್ಧಿವಂತಿಕೆಯಿಂದ ನಕಲಿ ಐಡಿ, ದಾಖಲೆ ಮಾಡಿಕೊಂಡಿರುತ್ತಾರೆ. ಇವರು ಹನಿಟ್ರಾಪ್, ಭಯೋತ್ಪಾದನೆ, ದರೋಡೆಗೆ ಸುಲಭವಾಗಿ ಇಳಿಯುತ್ತಾರೆ. ಈಗಾಗಲೇ ಇವರನ್ನು ಭಾರತದಿಂದ ಕಳುಹಿಸಬೇಕು ಎಂದು ವಕೀಲರೊಬ್ಬರು ಹಾಕಿರುವ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಪರಿಗಣಿಸಿರುವ ಸುಪ್ರೀಂಕೋರ್ಟ್ ಎಲ್ಲಾ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ನೋಟಿಸು ನೀಡಿ ಆ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಿದೆ. ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಸುಮಾರು 5 ಕೋಟಿ ಅಕ್ರಮ ಬಾಂಗ್ಲಾ ದೇಶಿಗರು ಮತ್ತು ರೋಹಿಂಗ್ಯಾ ಮುಸಲ್ಮಾನರು ಇದ್ದಾರೆ ಎನ್ನುವ ಅನುಮಾನಗಳಿವೆ. ಅವರು ತಮ್ಮನ್ನು ನಿರಾಶ್ರಿತರು ಎಂದು ಪರಿಗಣಿಸಿ ರೋಟಿ, ಕಪಡಾ ಔರ್ ಮಕಾನ್ ಕೊಡಬೇಕೆಂದು ಕೇಂದ್ರ ಸರಕಾರವನ್ನು ಆಗ್ರಹಿಸುತ್ತಿದ್ದಾರೆ. ಆದರೆ ಇವರು ನಮ್ಮ ದೇಶದ ಮೂಲನಿವಾಸಿಗಳ ಉದ್ಯೋಗವನ್ನು ಕಸಿಯುತ್ತಿದ್ದಾರೆ. ಇವರನ್ನು ಇಲ್ಲಿ ಹೀಗೆ ಬಿಟ್ಟರೆ ಏರುತ್ತಿರುವ ಜನಸಂಖ್ಯೆಗೆ ಇವರೇ ದೊಡ್ಡ ಕೊಡುಗೆ ನೀಡಲಿದ್ದಾರೆ. ಆದ್ದರಿಂದ ಇವರನ್ನು ಆದಷ್ಟು ಬೇಗ ಓಡಿಸಲು ವ್ಯವಸ್ಥೆ ಆಗಲೇಬೇಕಿದೆ ಎನ್ನುವುದು ಪ್ರಜ್ಞಾವಂತರ ವಾದ. ಈ ನಡುವೆ ಇವರನ್ನು ಕಳುಹಿಸಬಾರದು ಎಂದು ಮತ್ತೊಂದು ಪಿಐಎಲ್ ಅನ್ನು ಒಬ್ಬರು ಹಾಕಿದ್ದಾರೆ. ಆದರೆ ಅದನ್ನು ವಜಾಗೊಳಿಸಿರುವ ಸುಪ್ರೀಂಕೋರ್ಟ್ ಇಂತಹ ಪಿಐಎಲ್ ಹಾಕುವ ಮೂಲಕ ನಮ್ಮ ಸಮಯ ವ್ಯರ್ಥ ಮಾಡಿದ್ದಕ್ಕಾಗಿ ಅರ್ಜಿದಾರರಿಗೆ ಒಂದು ಲಕ್ಷ ದಂಡ ಕೂಡ ವಿಧಿಸಿದೆ. ಕರ್ನಾಟಕದಲ್ಲಿಯೇ ಸುಮಾರು 50 ಲಕ್ಷದಷ್ಟು ಬಾಂಗ್ಲಾದೇಶಿಗರು ಇದ್ದಾರೆ ಎನ್ನುವ ಮಾಹಿತಿ ಇದೆ. ಇವರನ್ನು ಓಡಿಸಲು ಯಾರು ಕೂಡ ಅಡ್ಡಿಪಡಿಸಲೇಬಾರದು. ಯಾಕೆಂದರೆ ಪಾಕಿಸ್ತಾನ, ಬಾಂಗ್ಲಾ, ಅಪಘಾನಿಸ್ತಾನದಲ್ಲಿ ಹಿಂದೂಗಳು ಅಲ್ಪಸಂಖ್ಯಾತರು. ಅವರು ಅಲ್ಲಿ ನಿತ್ಯ ಮಾನಸಿಕ, ದೈಹಿಕ ಹಿಂಸೆಯನ್ನು ಅನುಭವಿಸುತ್ತಲೇ ಇರುತ್ತಾರೆ. ಅವರನ್ನು ಭಾರತಕ್ಕೆ ತರುವುದನ್ನು ವಿರೋಧಿಸುವ ಕೆಲವರು ಇಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದವರನ್ನು ಅಲ್ಲಿ ಹೋಗುವುದು ಬೇಡಾ ಎನ್ನುತ್ತಾರೆ. ಆಯಾ ರಾಜ್ಯದ, ಆಯಾ ಜಿಲ್ಲೆಯ ಪೊಲೀಸರಿಗೆ ತಮ್ಮ ವ್ಯಾಪ್ತಿಯಲ್ಲಿ ಯಾರೆಲ್ಲ ಅಕ್ರಮ ನಿವಾಸಿಗಳು ಇದ್ದಾರೆ, ಅವರು ಯಾವ ಕೆಲಸ ಮಾಡುತ್ತಿದ್ದಾರೆ, ಯಾವ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ತಿಳಿಯುವುದು ಕಷ್ಟವಲ್ಲ. ಎಷ್ಟೋ ಕಟ್ಟಡ ಕಾರ್ಮಿಕರಲ್ಲಿ ಅರ್ಧದಷ್ಟು ಜನ ಇದೇ ಬಾಂಗ್ಲಾದೇಶದವರು. ಕೇಳಿದರೆ ಪಶ್ಚಿಮ ಬಂಗಾಲ ಎಂದು ಅಪ್ಪಟ ಸುಳ್ಳು ಹೇಳುತ್ತಾರೆ. ಪಶ್ಚಿಮ ಬಂಗಾಲದಿಂದಲೇ ಒಳಗೆ ಬಂದಿರುತ್ತಾರೆ. ನಂತರ ಅಲ್ಲಿಂದ ತಮಗೆ ಬೇಕಾದ ಕಡೆ ವಲಸೆ ಹೋಗಿರುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕನಿಷ್ಟ 5000 ಜನ ಇಂತಹ ಅಕ್ರಮ ನಿವಾಸಿಗಳು ಇದ್ದಾರೆ. ಇವರ ಬಗ್ಗೆ ಬಿಲ್ಡರ್ ಗಳಿಗೆ ಗೊತ್ತಿರುತ್ತದೆ. ಆದರೆ ಹೊರಗೆ ಹೇಳುವುದಿಲ್ಲ. ಯಾಕೆಂದರೆ ಕಡಿಮೆ ಮಜೂರಿಗೆ ಕೆಲಸ ಮಾಡುತ್ತಾರೆ ಎಂದು ಕೂಡ ಇರಬಹುದು. ಇವರ ಜೊತೆ ಬರುವ ಯುವತಿಯರು ವೇಶ್ಯಾವಾಟಿಕೆಯಲ್ಲಿ ತೊಡಗಿಕೊಳ್ಳುತ್ತಾರೆ. ಹೀಗೆ ಇಂತವರು ಇಲ್ಲಿದಷ್ಟು ದಿನ ನಮ್ಮ ದೇಶದ ಜನರಿಗೆ ಉದ್ಯೋಗ ಸಿಗುವುದಿಲ್ಲ. ಅಸಲಿಗೆ ನಮ್ಮವರಿಗೆ ಇಲ್ಲಿ ನಿರುದ್ಯೋಗ ಇದೆ. ಆದರೆ ಯಾವುದೇ ಅಕ್ರಮ ಬಾಂಗ್ಲಾದೇಶದವರು ಉದ್ಯೋಗವಿಲ್ಲದೆ ಸುಮ್ಮನೆ ಇರುವುದಿಲ್ಲ. ಏನೂ ಇಲ್ಲದಿದ್ದರೆ ಹೆದ್ದಾರಿಯಲ್ಲಿ ನಿಂತು ದರೋಡೆಯಾದರೂ ಮಾಡುತ್ತಾರೆ. ಒಂಟಿಮನೆಗೆ ಕನ್ನ ಹಾಕಿ ಸುಲಿಗೆ ಮಾಡುತ್ತಾರೆ. ಬಹುಶ: ಕಾಲ ಸನ್ನಿಹಿತ ಬಂದಂತೆ ಕಾಣುತ್ತದೆ. ಸಿಎಎ ಜಾರಿಗೆ ಬಂದರೆ ಇಲ್ಲಿರುವ ಅಕ್ರಮಿಗಳು ಜಾಗ ಖಾಲಿ ಮಾಡಬೇಕಾಗುತ್ತದೆ. ಹಾಲಿಗೆ ಹಾಲು, ನೀರಿಗೆ ನೀರು ಯಾವುದೆಂದು ಸರಿಯಾಗಿ ಗೊತ್ತಾಗುತ್ತದೆ. ಒಂದು ವೇಳೆ ಇಲ್ಲಿ ಯಾರಾದರೂ ಅಕ್ರಮ ಬಾಂಗ್ಲಾ ದೇಶದವರಿಗೆ ಹುಟ್ಟಿದವರು ಇವರನ್ನು ಹೊರದಬ್ಬುವುದಕ್ಕೆ ವಿರೋಧ ಮಾಡಿದರೆ ನಿಮಗೆ ಗೊತ್ತಾಗುತ್ತೆ, ಯಾರು ಕತ್ತಲೆಯಲ್ಲಿ ಇವರೊಂದಿಗೆ ಡೀಲಿಂಗ್ ಮಾಡುತ್ತಿದ್ದರು!
- Advertisement -
Leave A Reply