ಹಿಂದೂಗಳು ಮುಸ್ಲಿಮರ ಬಳಿ ವ್ಯಾಪಾರ ಮಾಡುವುದು ನಿಲ್ಲಿಸಿದರೆ ಏನಾಗಬಹುದು!!
ನನ್ನಿಂದಲೇ ಹಗಲಾಗುತ್ತದೆ ಎಂದು ಯಾರೂ ಕೂಡ ಅಂದುಕೊಳ್ಳಬಾರದು. ಆದರೆ ಗಂಗೊಳ್ಳಿಯಲ್ಲಿ ಕೆಲವರು ಹಾಗೆ ಅಂದುಕೊಂಡುಬಿಟ್ಟಿರುತ್ತಾರೆ. ಆದ್ದರಿಂದ ಈ ಜಾಗೃತ ಅಂಕಣವನ್ನು ಬರೆಯಬೇಕಾಗಿದೆ. ಯಾಕೆಂದರೆ ಯಾರೋ ಕೆಲವು ಕರ್ಮಠರು ಮಾಡಿದ ತಪ್ಪಿನಿಂದ ತುಳುನಾಡಿನ ಎಲ್ಲಾ ಮುಸ್ಲಿಂ ವ್ಯಾಪಾರಿಗಳು ತೊಂದರೆ ಅನುಭವಿಸದಿರಲಿ ಎನ್ನುವುದು ನಮ್ಮ ಕಳಕಳಿ. ಇತ್ತೀಚೆಗೆ ಗಂಗೊಳ್ಳಿಯಲ್ಲಿ ದನಕಳವು ಪ್ರಕರಣ ಜಾಸ್ತಿಯಾಗುತ್ತಿದೆ. ಗೋವುಗಳು ಇದ್ದಕಿದ್ದಂತೆ ಮಾಯವಾಗುತ್ತಿವೆ. ಈ ಕಳ್ಳತನ ನಿಲ್ಲಿಸಬೇಕು ಮತ್ತು ಗೋಹತ್ಯಾ ನಿಷೇಧ ಸಮರ್ಪಕವಾಗಿ ಅನುಷ್ಟಾನವಾಗಬೇಕು ಎಂದು ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಅಕ್ಟೋಬರ್ 1ರಂದು ಬೃಹತ್ ಪಾದಯಾತೆ, ಪ್ರತಿಭಟನೆ ನಡೆಯಿತು. ಇದರಲ್ಲಿ ಗಂಗೊಳ್ಳಿಯ ಕೆಲವು ಮೀನು ಮಾರಾಟ ಮಾಡುವ ತಾಯಂದಿರು ಕೂಡ ಸೇರಿದ್ದರು. ಗೋವು ಕೇವಲ ಹಿಂದೂಗಳಿಗೆ ಮಾತ್ರ ಅಗತ್ಯ ಎಂದು ಯಾರಾದರೂ ಅಂದುಕೊಂಡಿದ್ದರೆ ಅದಕ್ಕಿಂತ ಮೂರ್ಖತನ ಬೇರೆ ಇಲ್ಲ. ಗೋವು ಸಾಯುವ ತನಕ ವಿವಿಧ ರೀತಿಯಲ್ಲಿ ಮಾನವರಿಗೆ ಉಪಯೋಗಕ್ಕೆ ಬರುತ್ತದೆ. ಆದ್ದರಿಂದ ಗೋವಿನ ಸಂತತಿ ಕಡಿಮೆಯಾದರೆ ಅದು ಹಿಂದೂಗಳಿಗೆ ಮಾತ್ರ ಅಪಾಯ ಎಂದು ಯಾರೂ ಅಂದುಕೊಳ್ಳಬಾರದು. ಆದ್ದರಿಂದ ತಾಯಿ ಹೃದಯದ ಮಹಿಳೆಯರು ಆ ಪ್ರತಿಭಟನೆಯಲ್ಲಿ ಭಾಗವಹಿಸಿದರೆ ಯಾಕೆ ಅನ್ಯಕೋಮಿನವರು ಬೇಸರಗೊಳ್ಳಬೇಕು? ಕೆಲವೇ ಕೆಲವು ದನಕಳ್ಳರಿಂದ ಇವತ್ತಿನ ದಿನಗಳಲ್ಲಿ ಎಲ್ಲಾ ಮುಸಲ್ಮಾನರಿಗೆ ಕಳಂಕ ಬರುತ್ತಿದೆ. ಆದ್ದರಿಂದ ಯಾರೋ ದನಕಳ್ಳರ ವಿರುದ್ಧ ಪ್ರತಿಭಟನೆಗಳಾದರೆ ಸಾರಾಸಗಟಾಗಿ ಎಲ್ಲಾ ಮುಸಲ್ಮಾನರು ಈ ಪ್ರತಿಭಟನೆ ತಮ್ಮ ವಿರುದ್ಧ ಆಗಿರುವುದು ಎಂದು ಅಂದುಕೊಳ್ಳಬಾರದು. ಆದರೆ ಯಾವಾಗ ಈ ಪ್ರತಿಭಟನೆ ಆಯಿತೋ ಕೆಲವರು ಒಂದು ಷಡ್ಯಂತ್ರ ಮಾಡಿದರು. ನಾವು ಯಾರೂ ಕೂಡ ಗಂಗೊಳ್ಳಿಯ ಮೀನುಗಾರ ಮಹಿಳೆಯರ ಬಳಿ ವ್ಯಾಪಾರ ಮಾಡಬಾರದು ಎಂದು ನಿರ್ಧರಿಸಿದರು. ಅಷ್ಟೇ ಅಲ್ಲ, ಕೆಲವು ಮೂಲಭೂತವಾದಿ ಮುಸಲ್ಮಾನರು ಮಾರುಕಟ್ಟೆ ಹೊರಗೆ ನಿಂತು ತಮ್ಮ ಧರ್ಮದ ಜನರು ಮೀನು ಖರೀದಿ ಮಾಡಲು ಬಂದರೆ ಅವರನ್ನು ಹಿಂದೆ ಕಳುಹಿಸುವ ಕೆಲಸ ಕೂಡ ನಡೆಯಿತು. ಇದರಿಂದ ಒಂದಿಷ್ಟು ಮೀನು ಮಾರಾಟ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವ ಮಹಿಳೆಯರಿಗೆ ಆತಂಕವಾಯಿತು. ಆದರೆ ನಮಗೆ ವ್ಯಾಪಾರಕ್ಕಿಂತ ಗೋ ಮುಖ್ಯ ಎಂದು ಯಾವಾಗ ಈ ಮಾತೆಯರಿಗೆ ಅನಿಸಿತೋ ಬರುವುದಾದರೆ ಬನ್ನಿ, ಇಲ್ಲದಿದ್ದರೆ ನಿಮ್ಮ ಅಗತ್ಯ ಇಲ್ಲ ಎನ್ನುವ ಸಂದೇಶ ಮೀನು ಮಾರ್ಕೆಟಿನಿಂದ ಮೂಲಭೂತವಾದಿಗಳಿಗೆ ಹೋಗಿದೆ.
ಈಗ ವಿಷಯ ಇರುವುದು ಏನೆಂದರೆ ಒಂದು ವೇಳೆ ಇದನ್ನೇ ತಿರುಗಿಸಿ ನೋಡಿದರೆ ಮುಸಲ್ಮಾನ ವ್ಯಾಪಾರಿಗಳ ಕಥೆ ಏನಾಗಬಹುದು. ನಮ್ಮ ದೇಶದಲ್ಲಿ ಹಿಂದೂಗಳು ಸದ್ಯಕ್ಕೆ ಬಹುಸಂಖ್ಯಾತರಾಗಿ ಇದ್ದಾರೆ. ನಾವು ಹಿಂದೂಗಳು ಕೇವಲ ಹಿಂದೂಗಳ ಬಳಿ ಮಾತ್ರ ವ್ಯಾಪಾರ ಮಾಡೋಣ ಎಂದು ನಿರ್ಧರಿಸಿ ಹಾಗೆ ನಡೆದುಕೊಂಡರೆ ಎಷ್ಟೋ ಮುಸ್ಲಿಂ ವ್ಯಾಪಾರಿಗಳ ಕಥೆ ಏನಾಗಬಹುದು. ಇನ್ನು ಹೊಟ್ಟೆಪಾಡಿಗಾಗಿ ಹಿಂದೂಗಳ ಹಬ್ಬ, ಜಾತ್ರೆಯನ್ನು, ದೇವಳಗಳ ಉತ್ಸವವನ್ನು ನಂಬಿ ವ್ಯಾಪಾರಕ್ಕೆ ಇಳಿಯುವ ಅನೇಕ ಮುಸ್ಲಿಮರು ಇದ್ದಾರೆ. ಅವರಿಗೆ ದೇವಸ್ಥಾನಗಳ ಜಾತ್ರೆಗಳ ಸಮಯದಲ್ಲಿ ಸ್ಟಾಲ್ ಹಾಕಲು ಅನುಮತಿ ಸಿಗದೇ ಹೋದರೆ ಏನಾಗುತ್ತದೆ? ಒಂದು ವೇಳೆ ಕಾನೂನಾತ್ಮಕವಾಗಿ ಸ್ಟಾಲ್ ಹಾಕಲು ಅನುಮತಿ ಸಿಕ್ಕಿದರೂ ಯಾರೂ ಹಿಂದೂಗಳು ಅವರ ಬಳಿ ವ್ಯಾಪಾರ ಮಾಡದೇ ಇದ್ದರೆ ಏನಾಗುತ್ತದೆ? ಇದನ್ನೆಲ್ಲ ಗಂಗೊಳ್ಳಿಯ ಆ ಮೂಲಭೂತ ಮುಸ್ಲಿಂ ಯುವಕರು ಅರ್ಥ ಮಾಡಿಯೇ ಹಿಂದೂ ಮಹಿಳೆಯರ ಬಳಿ ವ್ಯಾಪಾರ ಮಾಡಬಾರದು ಎಂದು ನಿರ್ಧರಿಸಿದ್ದಾರಾ? ಒಟ್ಟಿನಲ್ಲಿ ಗಂಗೊಳ್ಳಿಯ ಒಂದು ಘಟನೆ ಎಷ್ಟೋ ಮುಸ್ಲಿಮರ ವ್ಯಾಪಾರಕ್ಕೆ ತುಳುನಾಡಿನ ಬೇರೆ ಬೇರೆ ಕಡೆ ಪರಿಣಾಮ ಬೀರಬಹುದು.
ಅಷ್ಟಕ್ಕೂ ಇಂತಹ ಘಟನೆಯನ್ನು ಪ್ರಜ್ಞಾವಂತ ಮುಸ್ಲಿಂ ಸಮಾಜ ಖಂಡಿಸಬೇಕು. ಮೀನು ಮಾರಾಟ ಮಾಡುವ ಹಿಂದೂ ಮಹಿಳೆಯರ ಬಳಿ ಮೀನು ವ್ಯಾಪಾರ ಮಾಡಬೇಡಿ ಎಂದು ಗಂಗೊಳ್ಳಿಯಲ್ಲಿ ನಿರ್ಣಯವಾಗಿರುವುದು ಕೇವಲ ಗಂಗೊಳ್ಳಿಗೆ ಮಾತ್ರ ಸೀಮಿತವೇ ಅಥವಾ ಇಡೀ ರಾಜ್ಯ, ದೇಶದಲ್ಲಿ ಇದನ್ನು ಜಾರಿಗೆ ತರಲು ಚಿಂತನೆ ಆಗುತ್ತಿದೆಯಾ ಎಂದು ಮುಸ್ಲಿಂ ಮುಖಂಡರು ಸ್ಪಷ್ಟನೆ ಕೊಡಬೇಕು. ಯಾಕೆಂದರೆ ಇದನ್ನು ಹೀಗೆ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಬಿಟ್ಟುಬಿಟ್ಟರೆ ಕರಾವಳಿಯ ಬೇರೆ ಕಡೆಯ ಕೆಲವು ಪುಂಡರು ಇದನ್ನು ದುರುಪಯೋಗ ಮಾಡಬಹುದು. ಹಾಗಂತ ಮುಸ್ಲಿಂ ಓಲೈಕೆಯಲ್ಲಿ ರಾಜಕೀಯ ಮಾಡುವ ಕೆಲವು ಪಕ್ಷಗಳು ಈ ವಿಷಯದಲ್ಲಿ ಯಾವುದೇ ನಿರ್ಧಾರವನ್ನು ತಳೆದಿಲ್ಲ. ಗಂಗೊಳ್ಳಿಯ ಹಿಂದೂ ಸಂಘಟನೆಯ ಮುಖಂಡರು ಮಾತ್ರ ಒಂದು ವೇಳೆ ಈ ನಿಮ್ಮ ನಿರ್ಧಾರ ಖಾಯಂ ಎಂದಾದರೆ ನಾವು ನಿಮ್ಮ ಬಳಿ ವ್ಯಾಪಾರ ಮಾಡುವುದನ್ನು ನಿಲ್ಲಿಸಬೇಕಾಗುತ್ತದೆ. ನಿಮಗೆ ಆರ್ಥಿಕ ಬಹಿಷ್ಕಾರ ಹಾಕಬೇಕಾಗುತ್ತದೆ. ಇದರಿಂದ ನೀವು ಮತ್ತೆ ಗುಜರಿ ವ್ಯಾಪಾರಕ್ಕೆ ಮರಳಬೇಕಾಗಬಹುದು ಎಂದು ಎಚ್ಚರಿಸಿದ್ದಾರೆ. ಒಟ್ಟಿನಲ್ಲಿ ಒಂದು ನಿಜ, ಹುಟ್ಟಿಸಿದ ದೇವರು ಹುಲ್ಲು ಮೇಯಿಸಲಾರ ಎಂದು ಹೇಳುತ್ತಾರೆ. ಆದ್ದರಿಂದ ನಮ್ಮಿಂದಲೇ ನೀವು ಬದುಕುವುದು ಎಂದು ಗಂಗೊಳ್ಳಿಯ ಮುಸ್ಲಿಮರು ಅಂದುಕೊಳ್ಳುವುದು ಬಿಡಬೇಕು. ಇಲ್ಲದಿದ್ದರೆ ಸಮಸ್ಯೆ ಉಲ್ಬಣವಾಗುತ್ತದೆ. ಸಮಸ್ಯೆ ಉಲ್ಬಣವಾದರೆ ಬಲಿಷ್ಟನೇ ವಿಜಯಿಯಾಗುತ್ತಾರೆ ಮತ್ತು ಈ ಹಂತದಲ್ಲಿ ಹಿಂದೂಗಳು ಬಹುಸಂಖ್ಯಾತರು ಎಂದು ಯಾರೂ ಮರೆಯಬಾರದು!
Leave A Reply