ಶ್ರೀಗಳ ಪಾದಧೂಳಿನ ಕಣ ಹಂಸಲೇಖ ಹೀಗೆ ಮಾತನಾಡಿದ್ದೇ ಅಸಹ್ಯಕರ!!
ಶತಮಾನಕ್ಕೊಬ್ಬರೇ ವಿಶ್ವೇಶ ತೀರ್ಥರು ಹುಟ್ಟಲು ಸಾಧ್ಯ. ಅವರಿಗೆ ಧರ್ಮದ ಮೇಲೆ ಇದ್ದ ಕಾಳಜಿ, ಹಿಂದೂತ್ವದ ಮೇಲೆ ಅಚಲ ವಿಶ್ವಾಸ ಮತ್ತು ಬದುಕನ್ನೇ ಕೃಷ್ಣನ ಪೂಜೆ, ಆರಾಧನೆಯ ಮೂಲಕ ಸಮಾಜದ ಉನ್ನತಿಗೆ ಶ್ರಮಿಸಿದ ಸಂತ ವಿಶ್ವೇಶ ತೀರ್ಥರಿಗೆ ವಿಶ್ವೇಶ ತೀರ್ಥರೇ ಸಾಟಿ. ಅವರು ಮಾಡಿದ ಸೇವೆಯ ಸಾವಿರ ಭಾಗದ ಒಂದು ಶೇಕಡಾವನ್ನು ಕೂಡ ಹಂಸಲೇಖ ಮಾಡಲು ಸಾಧ್ಯವೂ ಇಲ್ಲ. ಇನ್ನು ಹತ್ತು ಜನ್ಮ ಎತ್ತಿ ಬಂದರೂ ಅದು ಹಂಸಲೇಖರಿಂದ ಸಾಧ್ಯವಿಲ್ಲ. ಶ್ರೀಗಳು ಭೌತಿಕವಾಗಿ ಇದ್ದಾಗ ಅವರ ಪಾದಧೂಳಿಗೂ ಸಮನಲ್ಲದ ಹಂಸಲೇಖ ಈಗ ಶ್ರೀಗಳ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನೋಡುವಾಗ ಅವರು ಇಷ್ಟು ದಿನ ನಿಜಕ್ಕೂ ಸರಸ್ವತಿಯ ಸೇವೆ ಮಾಡುತ್ತಿದ್ದರಾ ಅಥವಾ ಯಾವುದಾದರೂ ಮಾಂಸದ ಅಂಗಡಿಯಲ್ಲಿ ಕೆಲಸಕ್ಕೆ ಇದ್ದರಾ ಎಂದು ಅನಿಸುತ್ತದೆ. ಇದೆಲ್ಲ ಯಾಕೆ ಆಗುತ್ತಿದೆ ಎಂದರೆ ನಾವು ಹಂಸಲೇಖರಂತವರನ್ನು ತಲೆಯ ಮೇಲೆ ಕೂರಿಸಿ ಆಡಿಸಿರುವುದೇ ಕಾರಣ. ನಾಲ್ಕು ಒಳ್ಳೆಯ ಹಾಡುಗಳನ್ನು ಕೊಟ್ಟರು ಎಂದ ಕೂಡಲೇ ಅವರಿಗೆ ನಾದಬ್ರಹ್ಮ ಎಂದು ಹೇಳಿ ಈ ರಿಯಾಲಿಟಿ ಶೋಗಳಲ್ಲಿ ರಾಜನ ಲೆವೆಲ್ಲಿಗೆ ಮೆರೆಸಿದೆವಲ್ಲ, ಅದಕ್ಕೆ ಸಿಕ್ಕಿದ ಬಳುವಳಿ ಎಂದರೆ ಪೂಜ್ಯ ಶ್ರೀಗಳ ವಿರುದ್ಧವಾಗಿ, ಹಗುರವಾಗಿ, ತಮಾಷೆಯಾಗಿ ಮಾತನಾಡುವ ಸ್ವಾತಂತ್ರ್ಯ ಎಂದು ಹಂಸಲೇಖ ಅಂದುಕೊಂಡಿದ್ದರೆ ಅದು ಅವರ ಮೂರ್ಖತನ. ದಲಿತರನ್ನು ಹಿಂದೂ ಸಮಾಜದ ಮುಖ್ಯವಾಹಿನಿಗೆ ತರದೇ ಹೋದರೆ ಹಿಂದೂ ಸಮಾಜ ಶಕ್ತಿಶಾಲಿಯಾಗುವುದಿಲ್ಲ ಎಂದು ಅರಿತ ಶ್ರೀಗಳು ಅದಕ್ಕಾಗಿ ಕ್ರಾಂತಿಕಾರಿ ಹೆಜ್ಜೆಗಳನ್ನು ಇಟ್ಟರು. ಆ ಸಮಯದಲ್ಲಿ ಅವರು ದಲಿತರ ಕೇರಿಗಳಿಗೆ ಕಾಲಿಟ್ಟಾಗ ಅದನ್ನು ಆಶ್ಚರ್ಯಚಕಿತ ದೃಷ್ಟಿಯಿಂದ ನೋಡಿದವರೇ ಹೆಚ್ಚು.
ಶ್ರೀಗಳಿಗೆ ಇದು ಬೇಕಿತ್ತಾ ಎಂದು ಮಡಿವಂತ ಸಮಾಜ ಒಂದು ಕ್ಷಣ ಯೋಚಿಸಿರುವುದು ಕೂಡ ಸುಳ್ಳಲ್ಲ. ಆದರೆ ಶ್ರೀಗಳ ಚಿತ್ತ ದೃಢವಾಗಿತ್ತು. ಏನೇ ಆದರೂ ದಲಿತರನ್ನು ಹಿಂದೂ ಸಮಾಜದ ಮುಖ್ಯವಾಹಿನಿಗೆ ಸೇರಿಸಬೇಕು ಎಂದು ಅವರು ಗುರಿಯಾಗಿತ್ತು. ಅದಕ್ಕಾಗಿ ಅವರು ದಲಿತರ ಮನೆಗಳ ಒಳಗೆ ಕಾಲಿಟ್ಟರು. ಅದರಿಂದ ಆದ ಕ್ರಾಂತಿಕಾರಿ ಬದಲಾವಣೆ ಚಿಕ್ಕದಲ್ಲ. ಆದರೆ ಈಗ ಹಂಸಲೇಖ ಎತ್ತಿರುವ ವಿಷಯವೇ ಅಸಹ್ಯಕರ. ಹಂಸಲೇಖ ಏನು ಕೇಳುತ್ತಾರೆ ಎಂದರೆ ಸ್ವಾಮಿಗಳು ದಲಿತರ ಮನೆಗಳಿಗೆ ಹೋಗಿ ಕುಳಿತುಕೊಳ್ಳಬಹುದು, ಹಾಗಂತ ಅಲ್ಲಿ ಕೋಳಿಮಾಂಸ ತಿನ್ನೋಕೆ ಆಗುತ್ತಾ ಎಂದು ಶುರು ಮಾಡಿ ಏನೇನೋ ಹೇಳುತ್ತಾ ಹೋಗಿದ್ದಾರೆ. ಅದರ ನಂತರ ಅದು ವಿವಾದಕ್ಕೆ ತಿರುಗಿದೆ. ಅಷ್ಟಕ್ಕೂ ಹಂಸಲೇಖ ಹೀಗೆ ಹೇಳಿದ್ದು ತಮ್ಮ ಮನೆಯ ನಾಲ್ಕು ಗೋಡೆಯ ಮಧ್ಯೆ ತಮ್ಮ ಹೆಂಡ್ತಿಯೊಂದಿಗೆ ಅಲ್ಲ. ಸಾಕಷ್ಟು ಜನ ಸೇರಿದ್ದ ವೇದಿಕೆಯ ಮೇಲೆ. ಯಾವಾಗ ಅದು ವಿವಾದಕ್ಕೆ ತಿರುಗಿತೋ ಅದರ ನಂತರ ಅವರು ಕ್ಷಮಾರ್ಪಣೆ ಕೇಳಿದ್ದಾರೆ. ತಮ್ಮ ಮಾತಿನಿಂದ ಹೆಂಡ್ತಿಗೂ ಬೇಸರವಾಗಿದೆ. ಆಕೆಯ ಬಳಿಯೂ ಕ್ಷಮಾರ್ಪಣೆ ಕೇಳಿದ್ದೇನೆ ಎಂದಿದ್ದಾರೆ. ನಿಜಕ್ಕೂ ಮೈಮೇಲೆ ಜ್ಞಾನ ಇರುವ ಮನುಷ್ಯನೊಬ್ಬ ಶ್ರೀಗಳ ಬಗ್ಗೆ ಅಷ್ಟು ಹಗುರವಾಗಿ ಮಾತನಾಡುವುದಿಲ್ಲ. ಒಬ್ಬ ರಾಜಕಾರಣಿಯ ಬಗ್ಗೆ ಮಾತನಾಡುವುದಕ್ಕೂ, ಒಬ್ಬರು ಸ್ವಾಮೀಜಿಯವರ ಬಗ್ಗೆ ಮಾತನಾಡುವುದಕ್ಕೂ ವ್ಯತ್ಯಾಸವಿದೆ. ರಾಜಕಾರಣಿಗಳು ಚುನಾವಣೆಯ ಸಂದರ್ಭದಲ್ಲಿ ದಲಿತರ ಮನೆಗಳಿಗೆ ಹೋಗುತ್ತಾರೆ. ಅಲ್ಲಿ ಕುಳಿತುಕೊಂಡು ತಿಂಡಿ ತಿನ್ನುತ್ತಾರೆ. ಎಷ್ಟೋ ಬಾರಿ ಅದು ಉತ್ತಮ ಹೋಟೇಲಿನಿಂದ ತರಿಸಲಾಗಿರುವ ತಿಂಡಿ, ಕಾಫಿ ಆಗಿರುತ್ತದೆ. ಒಂದು ವೇಳೆ ಒಬ್ಬ ರಾಜಕಾರಣಿ ದಲಿತರ ಮನೆಯಲ್ಲಿ ಮಾಡಿದ್ದ ಅಡುಗೆಯನ್ನೇ ಸೇವಿಸಿದರೂ ಅದರಲ್ಲಿ ಹೆಮ್ಮೆಪಟ್ಟುಕೊಳ್ಳುವಂತದ್ದು ಏನೂ ಇಲ್ಲ.
ಯಾಕೆಂದರೆ ದಲಿತರು ಕೂಡ ಮನುಷ್ಯರಲ್ಲವೇ? ಒಬ್ಬ ವ್ಯಕ್ತಿ ಎಷ್ಟು ಶುಚಿಯಲ್ಲಿ ತನ್ನ ಪರಿಸರವನ್ನು, ಮನೆಯನ್ನು, ಜೀವನವನ್ನು ಇಟ್ಟುಕೊಳ್ಳುತ್ತಾನೆ ಎನ್ನುವುದನ್ನು ನೋಡಬೇಕೆ ವಿನ: ಅವನ ಜಾತಿಯ ಮೇಲೆ ವ್ಯಕ್ತಿತ್ವವನ್ನು ಅಳೆಯಬಾರದು ಎಂದು ಪ್ರಾಜ್ಞರು ಹೇಳುತ್ತಾರೆ. ಒಂದು ಕಾಲದಲ್ಲಿ ದಲಿತರ ಮೇಲೆ ದೌರ್ಜನ್ಯ ಆಗುತ್ತಿತ್ತು ನಿಜ, ಅದರ ನಂತರ ಅವರಿಗೆ ಮೀಸಲಾತಿಯಂತಹ ಸೌಲಭ್ಯಗಳನ್ನು ಕಲ್ಪಿಸಿ ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಮತ್ತು ಆರ್ಥಿಕವಾಗಿ ಮೇಲೆ ತರುವ ಕೆಲಸವನ್ನು ಸರಕಾರಗಳು ಮಾಡಿವೆ. ಅದನ್ನು ಬಳಸಿ ಪರಿಶಿಷ್ಟ ಜಾತಿ, ಪಂಗಡದವರು ಹಂತಹಂತವಾಗಿ ಅಭಿವೃದ್ಧಿ ಸಾಧಿಸಿದ್ದಾರೆ. ಆದರೆ ಎಷ್ಟೋ ಕಡೆ ಅಂದು, ಇಂದು ದಲಿತರು ಸಮಾಜದಿಂದ ಅಂತರ ಕಾಯ್ದುಕೊಂಡು ಸಂಕಷ್ಟವನ್ನು ಅನುಭವಿಸುತ್ತಿರುವುದನ್ನು ಬೇರೆ ಕೆಲವು ಜನ ಮತಾಂತರದಂತಹ ಪ್ರಕ್ರಿಯೆಗೆ ಮುಂದಾಗಿರುವುದರಿಂದ ಅದನ್ನು ಈ ಪ್ರಜ್ಞಾವಂತ ಸಮಾಜ ತಡೆಯಲೇಬೇಕಾಗಿತ್ತು. ಅದರ ನೇತೃತ್ವವನ್ನು ಶ್ರೀಗಳು ವಹಿಸಿದ್ದಾರೆ. ಅವರು ಎಷ್ಟು ಸಾಧ್ಯವೋ ಅಷ್ಟು ಶಕ್ತಿ ಮೀರಿ ತಮ್ಮ ಸೇವೆ ಸಲ್ಲಿಸಿದ್ದಾರೆ. ಒಂದು ವೇಳೆ ಅವರು ಹಾಗೆ ಏನೂ ಮಾಡದಿದ್ದರೂ ಅವರನ್ನು ಯಾರೂ ಪ್ರಶ್ನಿಸುತ್ತಿರಲಿಲ್ಲ. ಯಾಕೆಂದರೆ ಶ್ರೀಗಳಿಗೆ ಯಾವುದೇ ಚುನಾವಣೆಗೆ ನಿಲ್ಲಬೇಕಾಗಿರಲಿಲ್ಲ. ಅವರ ಆ ಸೇವೆಯಿಂದ ಸರಕಾರಗಳು ಗುರುತಿಸಿ ಏನಾದರೂ ದೊಡ್ಡ ಬಿರುದು ಕೊಡಲಿ ಎಂದು ಇವರು ಅಪೇಕ್ಷಿಸಲಿರಲಿಲ್ಲ. ಅವರು ಜನ್ಮದಿಂದಲೇ ಪದ್ಮಭೂಷಣರೇ ಆಗಿದ್ದಾರೆ. ಆದರೆ ಹಂಸಲೇಖ ಹಣಕ್ಕಾಗಿ ಪದ್ಯ ಬರೆದು ಜೀವನ ಮಾಡಿದವರು. ಸಂಗೀತ ನೀಡಲು ಲಕ್ಷಗಟ್ಟಲೆ ಹಣ ಕೇಳಿಯೇ ಇಷ್ಟು ಮೇಲೆ ಬೆಳೆದವರು. ಅವರು ತಮ್ಮ ಕುಟುಂಬಕ್ಕಾಗಿ ಜೀವಿಸಿದ್ದಾರೆ ಹೊರತು ಸಮಾಜಕ್ಕಾಗಿ ಏನು ಮಾಡಿದ್ದಾರೆ. ಅವರ ಮಗನಿಗೆ ಸಿನೆಮಾ ಮಾಡಿದ್ದಾರೆ. ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕುಳಿತು ತಮ್ಮ ತಿಜೋರಿ ತುಂಬಿಸಿದ್ದಾರೆ. ಅವರು ಯಾರ ಉದ್ಧಾರಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ. ಅಂತವರನ್ನು ನಾದಬ್ರಹ್ಮ ಎಂದು ಕರೆಯುವುದೇ ಅಸಹ್ಯ. ನಾದಬ್ರಹ್ಮ ಎಂದರೆ ಪಾಂಡುರಂಗ ವಿಠಲ ದೇವರ ಅನೇಕ ಹೆಸರುಗಳಲ್ಲಿ ಒಂದು. ಹಂಸಲೇಖ ಏನೂ ಸೃಷ್ಟಿಸಲಿಲ್ಲ. ಅವರು ಇಲ್ಲಿಂದಲ್ಲೇ ಏನೋ ರಾಗ ಎತ್ತಿ ಅದನ್ನು ಹಣಕ್ಕಾಗಿ ಮಾರಿದ್ದಾರೆ!!
Leave A Reply