• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮಂಗಳೂರಿನಲ್ಲಿ ರಾಜಕಾರಣಿಗಳ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ಮಹಾದೇವಿ!

TNN Correspondent Posted On August 21, 2017
0


0
Shares
  • Share On Facebook
  • Tweet It

ಮಂಗಳೂರಿನಲ್ಲಿ ರಾಜಕಾರಣಿಗಳ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ್ ಪತ್ನಿ ಮಹಾದೇವಿ!
ಜಾತಿ ಬಗ್ಗೆ ಮಾತಾಡುವ ನಮ್ಮ ರಾಜಕಾರಣಿಗಳು ಗಡಿ ಪ್ರದೇಶದಲ್ಲಿ ಐದು ನಿಮಿಷ ಇದ್ದು ಬನ್ನಿ ಎಂದು ಗುಡುಗಿದ  ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ್ ಅವರ ಪತ್ನಿ ಮಹಾದೇವಿ ಈ ದೇಶದ ಜನಪ್ರತಿನಿಧಿಗಳ ಬಗ್ಗೆ ಇರುವ ಕೋಪವನ್ನು ಹೊರ ಹಾಕಿದರು.
ಮಂಗಳೂರಿನ ಪುರಭವನದಲ್ಲಿ ನಡೆದ ಅಮರ್ ಜವಾನ್ ಕಾರ್ಯಕ್ರಮದಲ್ಲಿ ಮಾತನಾಡಿದ ಮಹಾದೇವಿ ಈ ದೇಶದಲ್ಲಿರುವ ರಾಜಕಾರಣಿಗಳು ಜಾತಿ ಜಾತಿ ಎಂದು ಹೇಳುವ ಬದಲು ಗಡಿಯಲ್ಲಿ ಐದು ನಿಮಿಷ ಇದ್ದು ಬಂದರೆ ಸೈನಿಕರ ಪರಿಸ್ಥಿತಿ ಗೊತ್ತಾಗುತ್ತದೆ ಎಂದು ಅವರ ಮೇಲಿನ ಬೇಸರವನ್ನು ವ್ಯಕ್ತ ಪಡಿಸಿದ್ದಾರೆ.  ಸಿಯಾಚಿನ್‌ನ ಹಿಮಪಾತದಲ್ಲಿ ಸಿಲುಕಿ ಬದುಕುಳಿದು ಬಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ವೀರ ಯೋದ ಹನುಮಂತಪ್ಪ ಕೊಪ್ಪದ್ ರವರ ಪತ್ನಿ ಮಹಾದೇವಿ ಮಾತಾನಾಡುತ್ತಾ ರಾಜಕಾರಣಿಗಳ ಬಗ್ಗೆ ಸಾಕಷ್ಟು ಬೇಸರವನ್ನು ಕಾರ್ಯಕ್ರಮಕ್ಕೆ ಬಂದ್ದಿದ್ದ ಮಂಗಳೂರಿನ ಜನತೆಯ ಮುಂದೆ ತೋಡಿಕೊಂಡರು.
 ಶಿಸ್ತಿನ ಸಿಪಾಯಿ ಮೇಯರ್ ಕವಿತಾ ಸನಿಲ್ ಕಣ್ಣೀರು!
ದಕ್ಷಿಣ ಕನ್ನಡ ಹುತಾತ್ಮ ಯೋಧರಿಗೆ ನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಂಗಳೂರು ಮೇಯರ್ ಕವಿತಾ ಸನಿಲ್ ಹುತಾತ್ಮ ಯೋದರ ಬಗ್ಗೆ ಮಾತನಾಡುತ್ತಾ ಬಾವುಕರಾದರು. ಶಿಸ್ತಿನ ಸಿಪಾಯಿ ಮೇಯರ್ ಕವಿತಾ ಸನಿಲ್ ಮಾತನಾಡುತ್ತಾ ಸೈನಿಕರ ಕೊಡುಗೆ ಈ ದೇಶಕ್ಕೆ ಅಪಾರ ಎಂದು ಬಾವುಕರಾದ ಕ್ಷಣ ಪುರಭವನ ದಲ್ಲಿದ್ದವರನ್ನು ಕೂಡ ದುಃಖ ತೃಪ್ತರಾಗಿಸಿತು.
 ದಕ್ಷಿಣ ಕನ್ನಡ ಜಿಲ್ಲೆಯ ಹುತಾತ್ಮಯೋಧರಿಗೆ ನಮನ.
ಟೀಮ್ ಬ್ಲ್ಯಾಕ್ ಅಂಡ್ ವೈಟ್ ಆಯೋಜಿಸಿದ್ದ ಅಮರ್ ಜವಾನ ಕಾರ್ಯಕ್ರಮ ಮಂಗಳೂರಿನ ಪುರಭವನದಲ್ಲಿ ನೆರೆದಿದ್ದವರ ಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಲಾಯಿತು. ಹುತಾತ್ಮ ಯೋಧರ ಕುಟುಂಬಕ್ಕೆ ಗೌರವವನ್ನು ಸೂಚಿಸಲಾಯಿತು. ಭಾರತೀಯ ಸೇನೆಯಲ್ಲಿ ಸೇವೆಯಲ್ಲಿ ಇದ್ದಾಗ ವೀರ ಮರಣವನ್ನಪ್ಪಿದ ಹುತಾತ್ಮರಾದ ಲ್ಯಾನ್ಸ್ ನಾಯಕ್ ವಿಶ್ವಾಂಬರ್ ಎಚ್ ಪಿ, ಹವಲ್ದಾರ್ ಪರಮೇಶ್ವರ್ ಕೆ, ಹವಲ್ದಾರ್ ಗಿರೀಶ್ ಕುಮಾರ್, ಸುಭೇದಾರ್ ಕೆ ಏಕನಾಥ್ ಶೆಟ್ಟಿ ಮತ್ತು ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಕುಟುಂಬಸ್ಥರನ್ನ ಸನ್ಮಾನಿಸುವುದರ ಮೂಲಕ ಗೌರವಿಸಲಾಯಿತು.
ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ವೇದವ್ಯಾಸ್ ಕಾಮತ್, ಮೇಯರ್ ಕವಿತಾ ಸನಿಲ್, ಹರಿಕೃಷ್ಣ ಪುನರೂರು, ಡಾ. ಆಶಾ ಜ್ಯೋತಿ ರೈ, ಲೈಯನ್ ರೊನಾಲ್ಡ್ ಗೋಮ್ಸ್, ಕಾರ್ನೆಲ್ ಶರತ್ ಭಂಡಾರಿ, ಪ್ರೊಫೆಸರ್ ವಿನಿತಾ ರೈ, ಸೈಮನ್ ಲೋಬೊ, ಮದನ್, ಲೈಯನ್ ಚಂದ್ರಹಾಸ್ ಶೆಟ್ಟಿ, ಅರೆಹೊಳೆ ಸದಾಶಿವ ರಾವ್, ಸಿ ಎ ಶಾಂತಾರಾಮ ಶೆಟ್ಟಿ, ರೌಫ್ ಪುತ್ತಿಗೆ, ಕ್ಯಾಪ್ಟನ್ ಬ್ರಿಜೇಶ್ ಚೌಟ, ವರದರಾಜ್ ಪೈ, ಸ್ವರ್ಣ ಸುಂದರ್, ಡಾ. ಅಣ್ಣಯ್ಯ ಕುಲಾಲ್, ರೊನಾಲ್ಡ್ ಪಾಯಸ್, ಪ್ರಕಾಶ್ ರಾವ್, ಎಮ್ ಜಿ ಹೆಗ್ಡೆ ಮತ್ತು ಹಲವಾರು ಗಣ್ಯರು ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
 ನಂದಗೋಕುಲ ತಂಡದ ಕಲಾವಿದರು ಪ್ರದರ್ಶಿಸಿದ ದೇಶ ಪ್ರೇಮ ಸಾರುವ ನೃತ್ಯ ಎಲ್ಲರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಹಾಡಿನ ಮೂಲಕ ಮೈಮ್ ರಾಮ್‌ದಾಸ್ ರವರ ತಂಡ ದೇಶ ಭಕ್ತಿಯ ಕಂಪನ್ನು ಪಸರಿಸಿದರು. ಕುದ್ರೋಳಿ ಗಣೇಶ್ ಅವರು ಕಾರ್ಯಕ್ರಮವನ್ನು ನಿರೂಪಿಸಿ ಅಭಿಷೇಕ್ ಶೆಟ್ಟಿ ವಂದಿಸಿದರು. ಟೀಮ್ ಬ್ಲ್ಯಾಕ್ ಅಂಡ್ ವೈಟ್ನ ಕಿರಣ್ ದೊಂಡೋಲೆ , ಪ್ರೀತಮ್ ಉಪಸ್ಥಿತರಿದ್ದರು.
0
Shares
  • Share On Facebook
  • Tweet It




Trending Now
ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
Tulunadu News April 7, 2026
ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
Tulunadu News April 7, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
  • Popular Posts

    • 1
      ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • 2
      ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • 3
      ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ

  • Privacy Policy
  • Contact
© Tulunadu Infomedia.

Press enter/return to begin your search