ಮಂಗಳೂರಿನಲ್ಲಿ ರಾಜಕಾರಣಿಗಳ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ಮಹಾದೇವಿ!
Posted On August 21, 2017
ಮಂಗಳೂರಿನಲ್ಲಿ ರಾಜಕಾರಣಿಗಳ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ್ ಪತ್ನಿ ಮಹಾದೇವಿ!
ಜಾತಿ ಬಗ್ಗೆ ಮಾತಾಡುವ ನಮ್ಮ ರಾಜಕಾರಣಿಗಳು ಗಡಿ ಪ್ರದೇಶದಲ್ಲಿ ಐದು ನಿಮಿಷ ಇದ್ದು ಬನ್ನಿ ಎಂದು ಗುಡುಗಿದ ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ್ ಅವರ ಪತ್ನಿ ಮಹಾದೇವಿ ಈ ದೇಶದ ಜನಪ್ರತಿನಿಧಿಗಳ ಬಗ್ಗೆ ಇರುವ ಕೋಪವನ್ನು ಹೊರ ಹಾಕಿದರು.
ಮಂಗಳೂರಿನ ಪುರಭವನದಲ್ಲಿ ನಡೆದ ಅಮರ್ ಜವಾನ್ ಕಾರ್ಯಕ್ರಮದಲ್ಲಿ ಮಾತನಾಡಿದ ಮಹಾದೇವಿ ಈ ದೇಶದಲ್ಲಿರುವ ರಾಜಕಾರಣಿಗಳು ಜಾತಿ ಜಾತಿ ಎಂದು ಹೇಳುವ ಬದಲು ಗಡಿಯಲ್ಲಿ ಐದು ನಿಮಿಷ ಇದ್ದು ಬಂದರೆ ಸೈನಿಕರ ಪರಿಸ್ಥಿತಿ ಗೊತ್ತಾಗುತ್ತದೆ ಎಂದು ಅವರ ಮೇಲಿನ ಬೇಸರವನ್ನು ವ್ಯಕ್ತ ಪಡಿಸಿದ್ದಾರೆ. ಸಿಯಾಚಿನ್‌ನ ಹಿಮಪಾತದಲ್ಲಿ ಸಿಲುಕಿ ಬದುಕುಳಿದು ಬಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ವೀರ ಯೋದ ಹನುಮಂತಪ್ಪ ಕೊಪ್ಪದ್ ರವರ ಪತ್ನಿ ಮಹಾದೇವಿ ಮಾತಾನಾಡುತ್ತಾ ರಾಜಕಾರಣಿಗಳ ಬಗ್ಗೆ ಸಾಕಷ್ಟು ಬೇಸರವನ್ನು ಕಾರ್ಯಕ್ರಮಕ್ಕೆ ಬಂದ್ದಿದ್ದ ಮಂಗಳೂರಿನ ಜನತೆಯ ಮುಂದೆ ತೋಡಿಕೊಂಡರು.
ಶಿಸ್ತಿನ ಸಿಪಾಯಿ ಮೇಯರ್ ಕವಿತಾ ಸನಿಲ್ ಕಣ್ಣೀರು!
ದಕ್ಷಿಣ ಕನ್ನಡ ಹುತಾತ್ಮ ಯೋಧರಿಗೆ ನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಂಗಳೂರು ಮೇಯರ್ ಕವಿತಾ ಸನಿಲ್ ಹುತಾತ್ಮ ಯೋದರ ಬಗ್ಗೆ ಮಾತನಾಡುತ್ತಾ ಬಾವುಕರಾದರು. ಶಿಸ್ತಿನ ಸಿಪಾಯಿ ಮೇಯರ್ ಕವಿತಾ ಸನಿಲ್ ಮಾತನಾಡುತ್ತಾ ಸೈನಿಕರ ಕೊಡುಗೆ ಈ ದೇಶಕ್ಕೆ ಅಪಾರ ಎಂದು ಬಾವುಕರಾದ ಕ್ಷಣ ಪುರಭವನ ದಲ್ಲಿದ್ದವರನ್ನು ಕೂಡ ದುಃಖ ತೃಪ್ತರಾಗಿಸಿತು.
ದಕ್ಷಿಣ ಕನ್ನಡ ಜಿಲ್ಲೆಯ ಹುತಾತ್ಮಯೋಧರಿಗೆ ನಮನ.
ಟೀಮ್ ಬ್ಲ್ಯಾಕ್ ಅಂಡ್ ವೈಟ್ ಆಯೋಜಿಸಿದ್ದ ಅಮರ್ ಜವಾನ ಕಾರ್ಯಕ್ರಮ ಮಂಗಳೂರಿನ ಪುರಭವನದಲ್ಲಿ ನೆರೆದಿದ್ದವರ ಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಲಾಯಿತು. ಹುತಾತ್ಮ ಯೋಧರ ಕುಟುಂಬಕ್ಕೆ ಗೌರವವನ್ನು ಸೂಚಿಸಲಾಯಿತು. ಭಾರತೀಯ ಸೇನೆಯಲ್ಲಿ ಸೇವೆಯಲ್ಲಿ ಇದ್ದಾಗ ವೀರ ಮರಣವನ್ನಪ್ಪಿದ ಹುತಾತ್ಮರಾದ ಲ್ಯಾನ್ಸ್ ನಾಯಕ್ ವಿಶ್ವಾಂಬರ್ ಎಚ್ ಪಿ, ಹವಲ್ದಾರ್ ಪರಮೇಶ್ವರ್ ಕೆ, ಹವಲ್ದಾರ್ ಗಿರೀಶ್ ಕುಮಾರ್, ಸುಭೇದಾರ್ ಕೆ ಏಕನಾಥ್ ಶೆಟ್ಟಿ ಮತ್ತು ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಕುಟುಂಬಸ್ಥರನ್ನ ಸನ್ಮಾನಿಸುವುದರ ಮೂಲಕ ಗೌರವಿಸಲಾಯಿತು.
ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ವೇದವ್ಯಾಸ್ ಕಾಮತ್, ಮೇಯರ್ ಕವಿತಾ ಸನಿಲ್, ಹರಿಕೃಷ್ಣ ಪುನರೂರು, ಡಾ. ಆಶಾ ಜ್ಯೋತಿ ರೈ, ಲೈಯನ್ ರೊನಾಲ್ಡ್ ಗೋಮ್ಸ್, ಕಾರ್ನೆಲ್ ಶರತ್ ಭಂಡಾರಿ, ಪ್ರೊಫೆಸರ್ ವಿನಿತಾ ರೈ, ಸೈಮನ್ ಲೋಬೊ, ಮದನ್, ಲೈಯನ್ ಚಂದ್ರಹಾಸ್ ಶೆಟ್ಟಿ, ಅರೆಹೊಳೆ ಸದಾಶಿವ ರಾವ್, ಸಿ ಎ ಶಾಂತಾರಾಮ ಶೆಟ್ಟಿ, ರೌಫ್ ಪುತ್ತಿಗೆ, ಕ್ಯಾಪ್ಟನ್ ಬ್ರಿಜೇಶ್ ಚೌಟ, ವರದರಾಜ್ ಪೈ, ಸ್ವರ್ಣ ಸುಂದರ್, ಡಾ. ಅಣ್ಣಯ್ಯ ಕುಲಾಲ್, ರೊನಾಲ್ಡ್ ಪಾಯಸ್, ಪ್ರಕಾಶ್ ರಾವ್, ಎಮ್ ಜಿ ಹೆಗ್ಡೆ ಮತ್ತು ಹಲವಾರು ಗಣ್ಯರು ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನಂದಗೋಕುಲ ತಂಡದ ಕಲಾವಿದರು ಪ್ರದರ್ಶಿಸಿದ ದೇಶ ಪ್ರೇಮ ಸಾರುವ ನೃತ್ಯ ಎಲ್ಲರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಹಾಡಿನ ಮೂಲಕ ಮೈಮ್ ರಾಮ್‌ದಾಸ್ ರವರ ತಂಡ ದೇಶ ಭಕ್ತಿಯ ಕಂಪನ್ನು ಪಸರಿಸಿದರು. ಕುದ್ರೋಳಿ ಗಣೇಶ್ ಅವರು ಕಾರ್ಯಕ್ರಮವನ್ನು ನಿರೂಪಿಸಿ ಅಭಿಷೇಕ್ ಶೆಟ್ಟಿ ವಂದಿಸಿದರು. ಟೀಮ್ ಬ್ಲ್ಯಾಕ್ ಅಂಡ್ ವೈಟ್ನ ಕಿರಣ್ ದೊಂಡೋಲೆ , ಪ್ರೀತಮ್ ಉಪಸ್ಥಿತರಿದ್ದರು.
- Advertisement -
Leave A Reply