• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಕೋಟ ಬಳಿ ಕೋಟಿ ಇಲ್ಲ, ಕೋಟಿ ಇದ್ದ ಕೆಜಿಎಫ್ ಬಾಬು ಗೆದ್ದಿಲ್ಲ!!

Hanumantha Kamath Posted On December 15, 2021
0


0
Shares
  • Share On Facebook
  • Tweet It

ರಾಜಕಾರಣದಲ್ಲಿ ಇಳಿಯುವವರ ಬಳಿ ಎಷ್ಟು ಕೋಟಿ ಹಣ ಇರುತ್ತದೋ ಅಷ್ಟು ಸುಲಭವಾಗಿ ಮೇಲಕ್ಕೆ ಬರಬಹುದು ಎನ್ನುವ ಜನಪದ ಮಾತಿದೆ. ಅವನಿಗೇನು ಕಣೋ, ಕೋಟಿಗಟ್ಟಲೆ ಇದೆ. ಯಾಕೆ ಶಾಸಕ ಆಗಲ್ಲ, ಆರಾಮವಾಗಿ ಗೆಲ್ಲುತ್ತಾನೆ, ನಾಳೆ ಮಂತ್ರಿಯೂ ಆಗುತ್ತಾನೆ ಎನ್ನುವ ಮಾತುಗಳನ್ನು ನೀವು ಕೇಳಿರಬಹುದು. ಅದು ಅಲ್ಲೊಂದು ಇಲ್ಲೊಂದು ಕಡೆ ಹೌದು ಎನ್ನುವಂತೆ ಕಾಣಲೂಬಹುದು. ಆದರೆ ಅದು ಸಾವರ್ತಿಕ ಅಲ್ಲ ಎನ್ನುವುದು ಮತ್ತೆ ಮತ್ತೆ ಸಾಬೀತಾಗಿದೆ. ನಾವು ಅಷ್ಟಾಗಿ ಅದನ್ನು ಗಮನಿಸದೇ ಇರುವುದರಿಂದ ನಮಗೆ ಸುಳ್ಳೆ ಮನಸ್ಸಿನೊಳಗೆ ಕುಳಿತುಕೊಂಡಿದೆ. ಮಂಗಳವಾರ ಹೊರಬಂದ ವಿಧಾನಪರಿಷತ್ ಚುನಾವಣಾ ಫಲಿತಾಂಶ ವಾಸ್ತವವನ್ನು ನಮ್ಮ ಮುಂದೆ ಇಟ್ಟಿದೆ. ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಗಳೂರಿಗೆ ಒಬ್ಬ ಕೋಟಿವೀರನನ್ನು ಕಣಕ್ಕೆ ಇಳಿಸಿತ್ತು. ಆ ವ್ಯಕ್ತಿಯ ಬಳಿ ಕನಿಷ್ಟ 1700 ಕೋಟಿ ರೂಪಾಯಿ ಇದೆ ಎಂದು ಮಾಧ್ಯಮಗಳಲ್ಲಿ ಮಾಹಿತಿ ಬಂತು. ಇನ್ನು ಬಿಡಿ, ಆ ಮನುಷ್ಯ ಗ್ಯಾರಂಟಿ ವಿಧಾನಪರಿಷತ್ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದು ಎಷ್ಟೋ ಜನ ಮನಸ್ಸಿನಲ್ಲಿಯೇ ಷರಾ ಬರೆದುಬಿಟ್ಟರು. ಯಾಕೆಂದರೆ ವಿಧಾನಪರಿಷತ್ ಚುನಾವಣೆಯಲ್ಲಿ ಗೆಲ್ಲಲು ಒಂದು ಅಂದಾಜಿನ ಪ್ರಕಾರ ವಿಧಾನಸಭಾ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಗೆ ಬೇಕಾಗುವ ಹಣಕ್ಕಿಂತ ಜಾಸ್ತಿ ಹಣ ಬೇಕಾಗುತ್ತದೆ ಎನ್ನುವ ಅಂದಾಜು ಕೂಡ ಇದೆ. ಯಾಕೆಂದರೆ ಇಲ್ಲಿ ಮತದಾರರು ಕಡಿಮೆ ಇದ್ದರೂ ಒಬ್ಬೊಬ್ಬರ ಮತಗಳು ಕೂಡ ಬಹಳ ಅಮೂಲ್ಯ. ಒಂದಿಷ್ಟು ನಿರ್ಲಕ್ಷ್ಯ ಮತ್ತು ಬಂದೇ ಬರುತ್ತೆ ಬಿಡಿ, ನಮಗಲ್ಲದೆ ಯಾರಿಗೆ ಓಟ್ ಕೊಡುತ್ತಾರೆ ಎಂದು ಹೇಳುವಂತಿಲ್ಲ. ಒಂದು ರೀತಿಯಲ್ಲಿ ವಿಐಪಿ ಮತದಾರರು. ಆದ್ದರಿಂದ ಅವರಿಗೆ ಸಂತೃಪ್ತಿಗೊಳಿಸಿ ಮತ ಪಡೆಯುವುದು ಸುಲಭದ ಮಾತಲ್ಲ ಎನ್ನುವ ಮಾತು ಕೂಡ ಚಾಲ್ತಿಯಲ್ಲಿದೆ.

ಹೀಗಿರುವಾಗ ಅನಿವಾರ್ಯವಾಗಿ ಪಕ್ಷಗಳು ಕೋಟಿವೀರರನ್ನೇ ಕಣಕ್ಕೆ ಇಳಿಸುತ್ತವೆ. ಹಾಗೆ ಕೆಜಿಎಫ್ ಬಾಬು ಕೂಡ ಕಣಕ್ಕೆ ಇಳಿದಿದ್ದರು. ಅವರ ಬಳಿ ಇರುವ ಅಸಂಖ್ಯಾತ ಕೋಟಿ ರೂಪಾಯಿ ಹಣ ಅವರನ್ನು ಕಣ್ಣುಮುಚ್ಚಿ ಚುನಾವಣೆಯಲ್ಲಿ ಗೆಲ್ಲಿಸಬೇಕಿತ್ತು. ಆದರೆ ಆಯಿತಾ, ನೋ ಚಾನ್ಸ್. ನೀವು ಸಾಮಾಜಿಕ ಜಾಲತಾಣಗಳಲ್ಲಿ ಕೆಜಿಎಫ್ ಬಾಬು ಮತಕೇಂದ್ರದಿಂದ ಸಪ್ಪೆಮೋರೆ ಹಾಕಿ ಹೊರಗೆ ಬಂದು ಆಟೋದಲ್ಲಿ ಹೋಗುವ ದೃಶ್ಯ ನೋಡಿರುತ್ತೀರಿ. ಬರುವಾಗ ಆಡಿ ಕಾರು, ಹೋಗುವಾಗ ಆಟೋ ಎಂದು ಹಲವರು ಕುಹಕವಾಡುತ್ತಿದ್ದಾರೆ. ಅದರ ಅರ್ಥ ಏನು? ಬಾಬು ಸೋತಿದ್ದಾರೆ. ಅವರು ಚೆಲ್ಲಿರಬಹುದಾದ ಕೋಟಿ ಏನೂ ಉಪಯೋಗವಾಗಿಲ್ಲ.
ಅದೇ ಇನ್ನೊಂದು ಕಡೆ ದಕ್ಷಿಣ ಕನ್ನಡ-ಉಡುಪಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರು ತಾವೇ ಹೇಳಿದ ಹಾಗೆ ಏನೂ ಖರ್ಚು ಮಾಡದೇ ನಾಲ್ಕನೇ ಬಾರಿ ಗೆದ್ದಿದ್ದಾರೆ. ಹಾಗೆ ನೋಡಲು ಹೋದರೆ ಕೋಟ ಅವರ ಬಳಿ ಚುನಾವಣೆಗೆ ಖರ್ಚು ಮಾಡಲು ಕೋಟಿ ಇಲ್ಲ. ಅವರು ಚುನಾವಣೆಯಲ್ಲಿ ನಿಂತರೆ ಯಾವ ಮತದಾರ ಕೂಡ ಐದು ಪೈಸೆ ಕೇಳಲ್ಲ. ಇವರು ಕೂಡ ಅಧಿಕಾರದಲ್ಲಿ ಇದ್ದಾಗ ಯಾರಿಂದಲೂ ಲಂಚ ಪಡೆಯುವುದಿಲ್ಲ. ಆದರೂ ಇವತ್ತಿನ ಕಾಲದಲ್ಲಿ ಗೆಲ್ಲುತ್ತಿದ್ದಾರೆ. ಇದರ ಅರ್ಥ ಏನು? ನೀಡುವವ ಇದ್ದರೆ ಮಾತ್ರ ಕೇಳುವವರು ಕೇಳುತ್ತಾರೆ.

ನೀವು ಪ್ರಾಮಾಣಿಕರಾಗಿ ನಡೆ, ನುಡಿ ಮತ್ತು ಬದುಕಿನಲ್ಲಿ ಜನಸಾಮಾನ್ಯರಂತೆ ಜೀವಿಸಿದರೆ ನಿಮಗೆ ಮತ ಹಾಕಲು ಹಣ, ಹೆಂಡ, ಕುಕ್ಕರ್, ಸೀರೆ, ಮಿಕ್ಸಿ ಯಾವ ಬೇಡಿಕೆಯನ್ನು ಕೂಡ ಮತದಾರ ಮಾಡುವುದಿಲ್ಲ. ಹಾಗಾದರೆ ರಾಜಕಾರಣ ಹಾಳಾಗಿರುವುದು ಎಲ್ಲಿ? ಕೊಡುವವರ ತಪ್ಪೋ, ಕೇಳುವವರ ತಪ್ಪೋ. ಕೊಡುತ್ತಾರೆ ಎಂದು ಗೊತ್ತಿದ್ದಾಗ ಕೇಳುವವರು ಕೇಳದೇ ಇರುತ್ತಾರಾ? ಕೇಳುವವರು ಕೇಳುವ ಮೊದಲೇ ಕೈ ಎತ್ತಿ ಕೊಡುವವರು ಇರುವುದರಿಂದ ಕೇಳುವವರ ಸಂಖ್ಯೆ ಹೆಚ್ಚಾಗುತ್ತಾ? ಅವರು ಹಣ ಮಾಡಬಹುದು, ನಾವು ಕೇಳುವುದು ತಪ್ಪಾ ಎಂದು ವಾತಾವರಣ ಸೃಷ್ಟಿಯಾಗಲು ಯಾರು ಕಾರಣ? ಆದರೆ ಒಂದಂತೂ ನಿಜ. ಹಣ ಇದ್ರೆ ಮಾತ್ರ ನೀವು ಗೆಲ್ಲಲ್ಲ ಎಂದು ವಿಜಯ ಮಲ್ಯರ ಸಮಯದಲ್ಲಿ ಸಾಬೀತಾಗಿದೆ. ಹಣವೇ ಮುಖ್ಯವಾಗಿದ್ದರೆ ವಿಜಯ ಮಲ್ಯ ಪಕ್ಷ ಕಟ್ಟಿದಾಗ ಅವರ ಬಳಿ ಇದ್ದ ಹಣದಿಂದ 224 ಸೀಟು ಕೂಡ ಗೆಲ್ಲಬಹುದಿತ್ತು. ಆದರೂ ಒಂದೇ ಒಂದು ಸೀಟು ಕೂಡ ಗೆಲ್ಲಲಾಗಲಿಲ್ಲ. ಅವರ ಹಣದಿಂದ ಕೆಲವರು ದುಂಡಗಾಗಿ ಅಭ್ಯರ್ಥಿಗಳಿಗೆ ಉಂಡೆನಾಮ ತಿಕ್ಕಿರಬಹುದು. ಹಾಗಾದರೆ ವಾಸ್ತವ ಸತ್ಯ ಏನು? ರಾಜಕೀಯದಲ್ಲಿ ಐದು ವಿಷಯ ಮುಖ್ಯವಾಗಿರುತ್ತದೆ. ಒಂದು ಪರಿಶ್ರಮ. ಇನ್ನೊಂದು ಅದೃಷ್ಟ. ಮೂರನೇಯದ್ದು ತಾಳ್ಮೆ. ನಾಲ್ಕನೇಯದ್ದು ನಿಷ್ಟೆ. ಐದನೇಯದ್ದು ಜಾಣ್ಮೆ. ಇದು ಸಾಮಾನ್ಯವಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಬೇಕಾಗುತ್ತದೆ. ಆದರೆ ಬೇರೆ ಕ್ಷೇತ್ರಗಳಲ್ಲಿ ಇದರಲ್ಲಿ ಎರಡು ಮೂರು ಇಲ್ಲದಿದ್ದರೂ ಜೀವನ ಸಾಗುತ್ತದೆ. ಆದರೆ ರಾಜಕೀಯದಲ್ಲಿ ಐದರಲ್ಲಿ ಎರಡ್ಮೂರು ಇಲ್ಲದಿದ್ದರೆ ನೀವು ಒಂದೋ ಆರಂಭದಲ್ಲಿ ಎಲ್ಲಿದ್ರೋ ಕೊನೆ ತನಕ ಅಲ್ಲಿಯೇ ಇರುತ್ತೀರಿ ಅಥವಾ ನಿರಾಸೆ ಹೊಂದಿ ಬಂಡಾಯರಾಗುತ್ತಿರಿ. ಆಯ್ಕೆ ಅವರವರದ್ದು!

0
Shares
  • Share On Facebook
  • Tweet It




Trending Now
7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
Hanumantha Kamath July 12, 2025
ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
Hanumantha Kamath July 12, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • 7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!
    • ಜನಸಾಮಾನ್ಯರ ಕೈಗೆಟಕುತ್ತಿಲ್ಲ ತೆಂಗಿನಕಾಯಿ ದರ... ಪುತ್ತೂರಿನಲ್ಲಿ ಹೆಚ್ಚಿದ ಕಳವು!
    • ವಿಎಚ್ ಪಿ ಶರಣ್, ನವೀನ್ ಗೆ ರಿಲೀಫ್: ಅರುಣ್ ಶ್ಯಾಮ್ ವಾದ
    • ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
  • Popular Posts

    • 1
      7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • 2
      ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • 3
      ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • 4
      ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • 5
      ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!

  • Privacy Policy
  • Contact
© Tulunadu Infomedia.

Press enter/return to begin your search