• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ನಾರಾಯಣಗುರುಗಳನ್ನು ಬಳಸಿ ಪಿಣರಾಯಿ ಕಟ್ಟಿದ ಕಥೆಗೆ ಕಾಂಗ್ರೆಸ್ಸಿಗರದ್ದೇ ನಿರ್ದೇಶನ!!

Hanumantha Kamath Posted On January 18, 2022


  • Share On Facebook
  • Tweet It

ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರವೊಂದರ ವಿವಾದವನ್ನು ಹಿಡಿದು ತಲೆಬಾಲ ಗೊತ್ತಿಲ್ಲದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ಸಿಗರು ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ಅಲ್ಲಿ ರಾಷ್ಟ್ರಪತಿಗಳಿಗೆ ಮನವಿಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಕಳುಹಿಸಿಕೊಟ್ಟರು. ಕೇರಳ ಸರಕಾರ ತನ್ನ ಉಡಾಫೆ, ನಿರ್ಲಕ್ಷ್ಯ ಮತ್ತು ಕೇಂದ್ರವನ್ನು ಇಕ್ಕಟ್ಟಿಗೆ ಸಿಲುಕಿಸುವ ಚಾಳಿಯನ್ನು ಮುಂದುವರೆಸಿಕೊಂಡು ಹೋಗುವ ಹಂತದಲ್ಲಿ ಕರ್ನಾಟಕದ ಕಾಂಗ್ರೆಸ್ಸು ಪಕ್ಷಕ್ಕೂ ಒಂದಿಷ್ಟು ಆಕ್ಸಿಜನ್ ತರಹದ್ದು ನೀಡಿದ್ದು ಮಾತ್ರ ಅವುಗಳ ಮಧ್ಯದಲ್ಲಿರುವ ಕಜಿನ್ ಸಂಬಂಧವನ್ನು ನೆನಪಿಸುತ್ತದೆ. ಅಷ್ಟಕ್ಕೂ ಇದು ವಿವಾದ ಹೇಗಾಯ್ತು ಎನ್ನುವುದರ ಕುರಿತು ಮೊದಲು ನೋಡೋಣ.
ನಮ್ಮ ದೇಶದಲ್ಲಿ ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡು ಒಟ್ಟು 36 ರಾಜ್ಯಗಳು ಇವೆ ಎಂದೇ ಲೆಕ್ಕ ಇಟ್ಟುಕೊಳ್ಳೋಣ. ಪ್ರತಿ ವರ್ಷ ಒಂದೊಂದು ರಾಜ್ಯ ತನ್ನ ರಾಜ್ಯದ ಸಂಸ್ಕೃತಿ, ಆಚಾರ, ವಿಚಾರ, ಸಂಪ್ರದಾಯ, ಮಹಾನ್ ನಾಯಕರ ಸ್ತಬ್ಧಚಿತ್ರದ ಪ್ರಪೋಸಲನ್ನು ಕೇಂದ್ರಕ್ಕೆ ಕಳುಹಿಸಿ ಅಲ್ಲಿಂದ ಒಪ್ಪಿಗೆ ಸಿಕ್ಕಿದ ನಂತರ ಅದರ ಟ್ಯಾಬ್ಲೋ ನಿರ್ಮಿಸಿ ನಂತರ ಅದನ್ನು ದೆಹಲಿಯ ರಾಜಬೀದಿಯಲ್ಲಿ ಪ್ರದರ್ಶಿಸಿ ವಿಶ್ವ ಮಟ್ಟಕ್ಕೂ ಮುಟ್ಟಿಸುವ ಪ್ರಯತ್ನ ಮಾಡುತ್ತದೆ. ಹಾಗಂತ ಪ್ರತಿ ಬಾರಿ ಈ 36 ರಾಜ್ಯಗಳಿಂದಲೂ ಒಂದೊಂದು ಟ್ಯಾಬ್ಲೋ ಕಳುಹಿಸಿಕೊಡಿ ಎಂದು ಕೇಂದ್ರದಿಂದ ಸುತ್ತೋಲೆ ಬರಲ್ಲ. ದೆಹಲಿಯಲ್ಲಿ ನಡೆಯುವ ಪ್ರಜಾಪ್ರಭುತ್ವದ ಪೇರೆಡಿಗೆ ಗರಿಷ್ಟ ಅವಕಾಶ ಇರುವುದು 12 ಟ್ಯಾಬ್ಲೋಗಳಿಗೆ ಮಾತ್ರ. ನೀವು ದಮ್ಮಯ್ಯ ಎಂದು ರಾಷ್ಟ್ರಪತಿಗಳ ಕಾಲು ಹಿಡಿದು ಬೇಡಿದರೂ ಅದರ ಮೇಲೆ ಇನ್ನೊಂದು ಟ್ಯಾಬ್ಲೋ ಸೇರಿಸಲು ಅವಕಾಶ ಇಲ್ಲ. ಆದ್ದರಿಂದ ಯಾವುದೇ ರಾಜ್ಯಗಳಿಗೆ ಅನ್ಯಾಯವಾಗಬಾರದು ಎನ್ನುವುದಕ್ಕಾಗಿ ಕೇಂದ್ರ ಒಂದು ರೋಟೇಶನ್ ಪದ್ಧತಿಯನ್ನು ಜಾರಿಗೆ ತಂದಿದೆ. ತಲಾ ಮೂರು ವರ್ಷಗಳಿಗೊಮ್ಮೆ ಒಂದೊಂದು ರಾಜ್ಯಕ್ಕೆ ಈ ಅವಕಾಶ ಸಿಗುತ್ತಾ ಹೋಗುತ್ತದೆ. ಈ ಬಾರಿ ಕರ್ನಾಟಕಕ್ಕೆ ಅವಕಾಶ ಸಿಕ್ಕಿದೆ. ಹಾಗಂತ ಮುಂದಿನ ಬಾರಿಯೂ ಇಲ್ಲಿ ಭಾರತೀಯ ಜನತಾ ಪಾರ್ಟಿಯ ಸರಕಾರ ಇರುವುದೆಂದು ಅವರಿಗೆ ಇನ್ನೊಂದು ಅವಕಾಶ ಕೊಡಿ ಎಂದು ಮೋದಿ ಹೇಳಲು ಆಗುವುದಿಲ್ಲ. ಅದೇ ರೀತಿಯಲ್ಲಿ ಈ ವರ್ಷ ಸಿಕ್ಕಿದ ಬಳಿಕ ನಂತರ ಮೂರು ವರ್ಷಗಳ ಬಳಿಕ ಸಿಗುವ ಅವಕಾಶವನ್ನು ಯಾರೂ ಕೂಡ ತಪ್ಪಿಸಲು ಆಗುವುದಿಲ್ಲ.
ಯಾವ ರಾಜ್ಯದಲ್ಲಿ ಯಾವ ಪಕ್ಷದ ಸರಕಾರ ಬೇಕಾದರೆ ಇರಲಿ, ಇಲ್ಲಿ ಶಿಫಾರಸ್ಸು, ಪಕ್ಷಪಾತ ನಡೆಯಲು ಅವಕಾಶ ಇಲ್ಲ. ಈಗ ಈ ವಿವಾದವನ್ನು ಎಬ್ಬಿಸಿರುವ ಕೇರಳ ರಾಜ್ಯಕ್ಕೆ 2021 ರಲ್ಲಿ ಅಂದರೆ ಕಳೆದ ವರ್ಷ ಅವಕಾಶ ನೀಡಲಾಗಿತ್ತು. ಹಾಗಾದರೆ ಈ ವರ್ಷ ಅವಕಾಶ ಕೊಡಲು ಆಗುತ್ತಾ? ಇಲ್ಲ. ಅದು ಕೇರಳಕ್ಕೂ ಗೊತ್ತಿದೆ. ಹಾಗಂತ ಸುಮ್ಮನೆ ಕುಳಿತರೆ ಮೋದಿಯನ್ನು ಕಟಕಟೆಗೆ ನಿಲ್ಲಿಸುವುದು ಹೇಗೆ? ಆದ್ದರಿಂದ ಉಪಾಯ ಮಾಡಿ ಈ ಬಾರಿ ತಾವು ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಕಳುಹಿಸುವುದಾಗಿ ಪ್ರಪೋಸಲ್ ಕಳುಹಿಸಿಕೊಟ್ಟಿದೆ. ಕೇಂದ್ರದಲ್ಲಿ ಈ ಹೊಣೆ ಹೊತ್ತುಕೊಂಡಿರುವ ಅಧಿಕಾರಿಗಳು ಕೇರಳದ ಲಕೋಟೆಯನ್ನು ಒಡೆದು ನೋಡಿದ್ದಾರೆ. “ಏನ್ರೀ, ಕೇರಳದವರು ಹೀಗೆಕೆ ಆಡ್ತಾರೆ, ಕಳೆದ ಬಾರಿ ಅವಕಾಶ ಸಿಕ್ಕಿದೆಯಲ್ಲ, ಮತ್ತೆ ಈ ಬಾರಿ ಅದೇಗೆ ಅವಕಾಶ ಕೊಡೋಕೆ ಆಗುತ್ತೆ, ರೂಲ್ಸ್ ನ ಗಂಧಗಾಳಿಯೂ ಗೊತ್ತಿಲ್ವಾ” ಎಂದು ತಮ್ಮೊಳಗೆ ಮಾತನಾಡಿ ನಿಮ್ಮ ಮನವಿಯನ್ನು ರಿಜೆಕ್ಟ್ ಮಾಡಲಾಗಿದೆ ಎಂದು ಲಿಖಿತವಾಗಿ ತಿಳಿಸಿದ್ದಾರೆ. ಇದನ್ನೇ ಕಾಯುತ್ತಿದ್ದ ಪಿಣರಾಯಿ ಸರಕಾರ ತಟ್ಟನೆ ಮಹಿಷಾಸುರ ಗೆಟಪ್ಪಿನಲ್ಲಿ ಪಕ್ಕದ ಕರ್ನಾಟಕ ರಾಜ್ಯದ ಚೆಂಡಮುಂಡರನ್ನು ಸೇರಿಸಿಕೊಂಡು ಕೇಂದ್ರಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಮೇಲೆ ಗೌರವ ಇಲ್ಲ ಎಂದು ಅಬ್ಬರಿಸಲು ಶುರುಮಾಡಿದೆ. ನಾರಾಯಣ ಗುರುಗಳಿಗೆ ಅವಮಾನ ಎಂದು ಸಿದ್ದು ಮತ್ತು ಕುಮ್ಮಿ ರಾತ್ರಿ ನಿದ್ರೆಯಿಂದ ಎದ್ದು ಪಟಾರನೆ ಕಿರುಚಲು ಶುರುಮಾಡಿದ್ದಾರೆ. ಇವರ ಭಾವಾವೇಶ ನೋಡಿ ರಾಜ್ಯದ ಬಿಜೆಪಿಗರಿಗೂ ಏನು ಆಗಿದೆ ಎಂದೇ ಗೊತ್ತಾಗಿಲ್ಲ. ಎಲ್ಲರೂ ತಲೆಕೆರೆದುಕೊಂಡು ಯಾಕೆ ಹೀಗಾಯ್ತು, ಮೋದಿಜಿ ಬಚಾವ್ ಎಂದು ಅಳಲು ಶುರುಮಾಡಿದ್ದಾರೆ. ಏಕೆಂದರೆ ಇದು ಸಣ್ಣ ವಿಷಯ ಅಲ್ಲವೇ ಅಲ್ಲ.
ನಾರಾಯಣ ಗುರುಗಳು ಶತಮಾನದ ಮಹಾನ್ ಸಂತ. ಅವರನ್ನು ಬಿಲ್ಲವರು ತಮ್ಮ ದೇವರೆಂದು ಪೂಜಿಸುತ್ತಿದ್ದರೂ ಬ್ರಹ್ಮಶ್ರೀಗಳನ್ನು ಜಾತಿ, ಮತ ಭೇದವಿಲ್ಲದೆ ಎಲ್ಲರೂ ಕರಾವಳಿಯಲ್ಲಿ ಆರಾಧಿಸಿಕೊಂಡು ಬರುತ್ತಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ಎಲ್ಲಿ ರಿಜೆಕ್ಟ್ ಮಾಡಿದರೂ ಅದರ ಬಿಸಿ ಕರಾವಳಿಯ ಉದ್ದಗಲಕ್ಕೆ ತಗಲುತ್ತದೆ. ಬಿಲ್ಲವರನ್ನೇ ತೆಗೆದುಕೊಂಡರೂ ಕರಾವಳಿಯ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಅವರು ನಿರ್ಣಾಯಕರು. ಆದ್ದರಿಂದ ತಮ್ಮ ಕಾಲ ಮೇಲೆ ಚಪ್ಪಡಿ ಕಲ್ಲು ಬಿತ್ತು ಎಂದೇ ಬಿಜೆಪಿಗರು ಅಂದುಕೊಂಡಿದ್ದರು. ಆದರೆ ಈಗ ಸತ್ಯ ವಿಷಯ ಗೊತ್ತಾದ ಬಳಿಕ ಎಲ್ಲರಲ್ಲಿಯೂ ಧೈರ್ಯ ಬಂದಿದೆ. ಕಮ್ಯೂನಿಸ್ಟರು ಮತ್ತು ಕಾಂಗ್ರೆಸ್ಸಿಗರು ವಾಸ್ತವವನ್ನು ತಿರುಚಿ ಗುಲ್ಲೆಬ್ಬೆಸಿದ್ದು ಪ್ರತಿಯೊಬ್ಬರಿಗೂ ಆ ಪಕ್ಷಗಳ ಮೇಲೆ ಅಸಹ್ಯ ಮೂಡಿದೆ.ರಾಜಕೀಯ ಪಕ್ಷಗಳು ರಾಜಕೀಯ ಮಾಡಬಾರದು ಎಂದು ನಾನು ಹೇಳುವುದಿಲ್ಲ. ಆದರೆ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಷಯದಲ್ಲಿ ತೀರಾ ಈ ರೀತಿ ಕಮ್ಯೂನಿಸ್ಟರು ವರ್ತಿಸಿದ್ದು ಮಾತ್ರ ಅಕ್ಷಮ್ಯ ಅಪರಾಧ. ಹಿಂದೆ ಒಂದು ಬಾರಿ ಇದೇ ಕಮ್ಯೂನಿಸ್ಟರು ಒಂದು ಟ್ಯಾಬ್ಲೋದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ಮೊಳೆ ಹೊಡೆದ ದೃಶ್ಯ ಇನ್ನು ಹಲವರ ಸ್ಮತಿಪಟಲದಲ್ಲಿ ಇದೆ. ಹೀಗಿರುವಾಗ ಕೇರಳದಲ್ಲಿ ಹಿಂದೂ ವಿರೋಧಿ ಸರಕಾರದ ಎಡಬಿಡಂಗಿತನಕ್ಕೆ ಕರ್ನಾಟಕದ ಅದರಲ್ಲಿಯೂ ಕರಾವಳಿಯ ಕಾಂಗ್ರೆಸ್ಸಿಗರು ಟೋಪಿ ಧರಿಸಿ ರಂಗ ಹತ್ತಿದ್ದು ಮಾತ್ರ ಅಸಹ್ಯಕರ!!
  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search