• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಮಂಗಳೂರಿನ ರಸ್ತೆಗಳನ್ನು ಕಂಡರೆ ಹೊಟ್ಟೆ ಉರಿಯುತ್ತೆ ಎನ್ನಲು ಸಚಿವರೇ ಬರಬೇಕಾ?

Hanumantha Kamath Posted On February 5, 2022
0


0
Shares
  • Share On Facebook
  • Tweet It

ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರು ಮೊನ್ನೆ ಮಂಗಳೂರಿಗೆ ಬಂದಿದ್ದಾಗ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೂ ಬಿಸಿ ಮುಟ್ಟಿಸಿದ್ದಾರೆ. ಇದು ಸಹಜವಾಗಿ ಯಾವಾಗಲೋ ಆಗಬೇಕಿತ್ತು. ಆದರೆ ಯಾರದ್ದೂ ಹೆದರಿಕೆ ಇಲ್ಲದ ಸ್ಮಾರ್ಟ್ ಸಿಟಿ ಅಧಿಕಾರಿಗಳು ಬೇಕಾಬಿಟ್ಟಿ ಕೆಲಸ ಮಾಡುತ್ತಿರುವುದನ್ನು ನೋಡುವಾಗ ಯಾರಿಗಾದರೂ ಪಿತ್ಥ ನೆತ್ತಿಗೇರುತ್ತದೆ. ಮಂಗಳೂರಿನಲ್ಲಿ ಕಾಂಕ್ರೀಟ್ ರಸ್ತೆಗಳನ್ನು ಅಗೆದಿರುವುದು ನೋಡುವಾಗ ಹೊಟ್ಟೆ ಉರಿಯುತ್ತದೆ ಎಂದು ಸಚಿವರು ಹೇಳುತ್ತಿದ್ದಾರೆ. ಅಪರೂಪಕ್ಕೆ ಮಂಗಳೂರಿಗೆ ಬಂದಿರುವ ಅವರಿಗೆ ಹೊಟ್ಟೆ ಉರಿಯಬೇಕಾದರೆ ನಿತ್ಯ ನೋಡುತ್ತಿರುವ ನಮಗೆ ಏನಾಗಬೇಡಾ? ಮಂಗಳೂರಿನಲ್ಲಿ ಯಾವುದೇ ಸ್ಮಾರ್ಟ್ ಸಿಟಿ ಕಾಮಗಾರಿ ಮಳೆಗಾಲದ ಮೊದಲು ಪೂರ್ತಿಯಾಗುವ ಲಕ್ಷಣ ಕಾಣುವುದಿಲ್ಲ.

ಒಂದು ಕಾಲಮಿತಿ ಹಾಕಿ ಯಾರೂ ಕೆಲಸ ಮಾಡುತ್ತಿಲ್ಲ. ಸಿಕ್ಕಿದ ಕಡೆ ಅಗೆದು ಹಾಕಿದ್ದಾರೆ. ಚೆನ್ನಾಗಿರುವ ಕಾಂಕ್ರೀಟ್ ರಸ್ತೆಗಳನ್ನು ಕೂಡ ಅಗೆಯುತ್ತಿದ್ದಾರೆ. ಬೇಕಾದರೆ ಕ್ಲಾಕ್ ಟವರ್ ನಿಂದ ಆರ್ ಟಿಒ ವೃತ್ತದವರೆಗಿನ ರಸ್ತೆಯನ್ನೇ ನೋಡಿ. ಅದನ್ನು ಅಗೆದಿದ್ದಾರೆ. ಅಲ್ಲಿ ಫುಟ್ ಪಾತ್ ಅಗಲಮಾಡಿದ್ದಾರೆ. ಏಕಮುಖ ರಸ್ತೆಯನ್ನಾಗಿ ಮಾಡಿದ್ದಾರೆ. ಇತ್ತ ಗೋವಿಂದ ಪೈ ವೃತ್ತ ಇದೆಯಲ್ಲ, ಕೊಡಿಯಾಲ್ ಬೈಲ್ ನಲ್ಲಿ, ಅಲ್ಲಿ ಕೂಡ ಅಗೆದು ಹಾಕಿದ್ದಾರೆ. ಇವರು ಮತ್ತೆ ಮತ್ತೆ ಚೆನ್ನಾಗಿರುವ ರಸ್ತೆಗಳನ್ನೇ ಅಗೆದುಹಾಕುವ ಬದಲಿಗೆ ಬೇರೆ ರಸ್ತೆಗಳನ್ನು ಸರಿ ಮಾಡಬಹುದಲ್ಲ. ಕೆಲವು ರಸ್ತೆಗಳಿಗೆ 2-3 ವರ್ಷಗಳಿಗೊಮ್ಮೆ ಡಾಂಬರು ಹಾಕಬೇಕಾಗುತ್ತದೆ, ಅನೇಕ ರಸ್ತೆಗಳಿಗೆ ಆಗಾಗ ಪ್ಯಾಚ್ ಅಪ್ ಕೆಲಸ ಮಾಡಬೇಕಾಗುತ್ತದೆ. ಮ್ಯಾನ್ ಹೋಲ್ ಸರಿ ಮಾಡಬೇಕಾಗುತ್ತದೆ. ಆದ್ದರಿಂದ ಅಂತಹ ರಸ್ತೆಗಳನ್ನು ಪಟ್ಟಿ ಮಾಡಿ ಸರಿ ಮಾಡಬಹುದಲ್ಲ. ಈಗ ಉತ್ತಮ ರಸ್ತೆ ಅಗೆದು ಅಲ್ಲಿ ಫುಟ್ ಪಾತ್ ಅಗಲ ಮಾಡಿದರೆ ಏನೂ ಪ್ರಯೋಜನ? ಫುಟ್ ಪಾತ್ ಮೇಲೆ ವಾಹನಗಳನ್ನು ಪಾರ್ಕ್ ಮಾಡಲಾಗುತ್ತದೆ. ಇನ್ನು ಫುಟ್ ಪಾತ್ ಅಗಲವಿರುವುದು ವಿದೇಶಗಳಲ್ಲಿ ಇರಬಹುದು. ಇಲ್ಲಿ ಅಗಲ ಇದ್ದರೆ ಜನ ಅದರ ಮೇಲೆ ವಾಹನ ನಿಲ್ಲಿಸಿ ಹೋಗುತ್ತಾರೆ. ಇದಕ್ಕೆ ನಗರದ ಒಳಗೆ ಒಂದು ಉದಾಹರಣೆ ಕೊಡುತ್ತೇನೆ. ಭಾರತೀಯ ಜನತಾ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರ ಕಚೇರಿಯ ಎದುರುಗಡೆ ಫುಟ್ ಪಾತ್ ಇದೆ. ಅದರ ಮೇಲೆ ವಾಹನಗಳನ್ನು ಪಾರ್ಕ್ ಮಾಡಿ ಹೋಗಿರುತ್ತಾರೆ. ಇನ್ನು ಏನು ಉಳಿದಿದೆ. ಹೀಗೆ ಯಾವುದಕ್ಕೆ ಖರ್ಚು ಮಾಡಬೇಕು ಎಂದು ಗೊತ್ತಿಲ್ಲದೆ ಕೋಟಿ ಕೋಟಿ ಕೊಟ್ಟರೆ ಹೀಗೆ ಆಗುವುದು. ಇತ್ತ ರಸ್ತೆಗಳನ್ನು ಅಗೆಯುತ್ತಾ ಇದೇ ಸ್ಮಾರ್ಟ್ ಸಿಟಿ ಎಂದು ಜನರನ್ನು ನಂಬಿಸುವ ಕೆಲಸ ಆಗುತ್ತಿದ್ದರೆ ಇನ್ನೊಂದು ಕಡೆ ಮಂಗಳೂರಿಗೆ ಬೇಕಾದ ಸುಸಜ್ಜಿತ ಬಸ್ ನಿಲ್ದಾಣವೇ ಇನ್ನು ಕೂಡ ಗಗನಕುಸುಮವಾಗುತ್ತಿದೆ.

ಭೈರತಿ ಬಸವರಾಜು ಅವರನ್ನು ಕೇಳಿದರೆ 440 ಕೋಟಿ ರೂಪಾಯಿಯ ಪಿಪಿಪಿ ಯೋಜನೆ ಅಲ್ವಾ? ಅಷ್ಟು ದೊಡ್ಡ ಯೋಜನೆಗೆ ಟೆಂಡರ್ ಹಾಕಲು ಯಾರೂ ಮುಂದೆ ಬರುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಇವರ ಪ್ಲಾನುಗಳು ಹೇಗಿವೆ ಎಂದರೆ ಅಂಗೈಯಲ್ಲಿ ಅರಮನೆ ತೋರಿಸುವುದು. ಅಲ್ಲಿ ಮಲ್ಟಿಫ್ಲೆಕ್ಸ್ ಮಾಡುತ್ತೇವೆ, ಫೈವ್ ಸ್ಟಾರ್ ಹೋಟೇಲ್ ಮಾಡುತ್ತೇವೆ ಎನ್ನುವುದೇ ಇರುವುದು. ಅದರ ಬದಲು ಒಂದು ಸುಸಜ್ಜಿತ ಬಸ್ ನಿಲ್ದಾಣ ಎಂದರೆ ಉದಾಹರಣೆಗೆ ಬಸ್ ತಂಗಲು ಉತ್ತಮ ವ್ಯವಸ್ಥೆ, ಒಂದು ಕ್ಲಾಕ್ ರೂಂ, ಒಂದು ಅಂತಸ್ತಿನಲ್ಲಿ ಸಿಬ್ಬಂದಿಗಳಿಗೆ ವಿರಮಿಸಲು ಸಭಾಂಗಣದಂತಹ ವ್ಯವಸ್ಥೆ ಮತ್ತು ಬೆಡ್ ಗಳು, ಇನ್ನೊಂದು ಉತ್ತಮ ಕ್ಯಾಂಟೀನ್, ಒಂದೆರಡು ಪತ್ರಿಕೆಗಳ ಸ್ಟಾಲ್ಸ್, ಒಂದೆರಡು ಬೇಕರಿಗಳು, ಒಂದು ಉತ್ತಮ ಆಧುನಿಕ ಶೌಚಾಲಯದ ಕಾಂಪ್ಲೆಕ್ಸ್ ಇಷ್ಟು ಸಾಕಲ್ಲವೇ? ಇಷ್ಟು ಮಾಡಲು ಏನು ಬೇಕು, ಅದನ್ನು ಮಾಡುವುದು ಬಿಟ್ಟು ಹಾಸನದಲ್ಲಿ ಗೌಡ್ರ ಕುಟುಂಬದವರು ಮಾಡಿದಂತಹ ಸರಕಾರಿ ಬಸ್ ನಿಲ್ದಾಣವನ್ನು ಮಾಡಲು ಹೋದರೆ ಇನ್ನು ದಶಕವಾದರೂ ಆಗಲಿಕ್ಕಿಲ್ಲ. ಹಾಸನದಲ್ಲಿ ದೇವೆಗೌಡರು, ರೇವಣ್ಣ, ಶಿವಮೊಗ್ಗದಲ್ಲಿ ಬಿಎಸ್ ವೈ ಉತ್ತಮ ಬಸ್ ನಿಲ್ದಾಣವನ್ನು ಮಾಡಿದ್ದಾರೆ. ಆದರೆ ನಮ್ಮಲ್ಲಿ ಸ್ಮಾರ್ಟ್ ಸಿಟಿಗೆ ಒಬ್ಬ ಐಎಎಸ್ ಎಂಡಿಯನ್ನು ತರಲು ನಮಗೆ ಆಗಲಿಲ್ಲ. ಇನ್ನು ಇವರು ಬಸ್ ಸ್ಟ್ಯಾಂಡ್ ಮಾಡುವುದು ಹೌದಾ? ಸಚಿವರು ಕೇಳಿದರೆ ಮಂಗಳೂರಿನ ನಾಲ್ಕು ಕಡೆ ಬಸ್ ಸ್ಟ್ಯಾಂಡ್ಸ್ ಮಾಡುತ್ತೇವೆ ಎನ್ನುತ್ತಾರೆ. ಇದನ್ನು ಮಾಡಲು ಮೊದಲು ಹೊರಟ್ಟಿದ್ದು 1996 ರಲ್ಲಿ ಜಿಲ್ಲಾಧಿಕಾರಿಯಾಗಿ ಮಂಗಳೂರಿಗೆ ಬಂದಿದ್ದ ಭರತ್ ಲಾಲ್ ಮೀನಾ. ಅವರು ಅದೇ ಉದ್ದೇಶ ಇಟ್ಟು ಹಂಪನಕಟ್ಟೆ ಬಸ್ ನಿಲ್ದಾಣವನ್ನು ತಾತ್ಕಾಲಿಕ ನೆಲೆಯಲ್ಲಿ ಸ್ಟೇಟ್ ಬ್ಯಾಂಕಿನ ಹಾಕಿ ಗ್ರೌಂಡಿಗೆ ಸ್ಥಳಾಂತರಿಸಿದರು. ನಾಲ್ಕು ಬಸ್ ನಿಲ್ದಾಣಗಳ ರೂಪುರೇಶೆ ಹಾಕಿ ಇಟ್ಟರು. ನಂತರ ಟ್ರಾನ್ಸಫರ್ ಆದರು. ಆ ನಾಲ್ಕು ಬಸ್ ನಿಲ್ದಾಣಗಳಿಗೆ ಇಟ್ಟ ಜಾಗದಲ್ಲಿ ಈಗ ಏನೇನೋ ಆಗಿದೆ. ಬಸ್ ನಿಲ್ದಾಣ ಮಾತ್ರ ಆಗಿಲ್ಲ. ಆವತ್ತಿನಿಂದ ಪ್ರತಿ ಸಚಿವರೂ ಪಂಪವೆಲ್ ತೋರಿಸುತ್ತಾರೆ. ಅಲ್ಲಿ ಆಗಲ್ಲ ಎಂದು ಅನಿಸಿದ ಕೂಡಲೇ ನಾಲ್ಕು ಬಸ್ ನಿಲ್ದಾಣ ಮಾಡುತ್ತೇವೆ ಎಂದು ಹೇಳುತ್ತಾರೆ. 25 ವರ್ಷಗಳಿಂದ ಇದನ್ನು ಕೇಳಿ ಕೇಳಿ ಸಾಕಾಗಿ ಹೋಯ್ತು. ಇವರು ಅದನ್ನೂ ಮಾಡುವುದಿಲ್ಲ, ಸರಿಯಾಗಿ ರಸ್ತೆ ಕೂಡ ಮಾಡಲ್ಲ, ನಮ್ಮ ಗ್ರಹಚಾರ!

0
Shares
  • Share On Facebook
  • Tweet It




Trending Now
ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
Hanumantha Kamath December 27, 2025
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
Hanumantha Kamath December 23, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
  • Popular Posts

    • 1
      ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search