• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ನಮ್ಮ ಪೂರ್ವಜರ ತಪ್ಪು ಒಪ್ಪಿಕೊಳ್ಳೋಣ ಎನ್ನುತ್ತಿದ್ದಾರೆ ಕೆಲವು ಪ್ರಜ್ಞಾವಂತ ಮುಸ್ಲಿಂ ಯುವಕರು!!

Hanumantha Kamath Posted On March 21, 2022


  • Share On Facebook
  • Tweet It

ಒಂದು ಉರ್ದು ವಾಹಿನಿಯಲ್ಲಿ ಕಾಶ್ಮೀರದ ಇವತ್ತಿನ ಪೀಳಿಗೆಯ ಯುವಕನೊಬ್ಬ 30 ವರ್ಷಗಳ ಹಿಂದೆ ಮತ್ತು 1997 ರಲ್ಲಿಯೂ ಆದ ಪಂಡಿತರ ಕ್ರೂರ ಹತ್ಯೆಯನ್ನು ನಾವು ಒಪ್ಪಿಕೊಳ್ಳಲೇಬೇಕು ಮತ್ತು ನಮ್ಮ ಹಿಂದಿನ ತಲೆಮಾರಿನವರು ಮಾಡಿದ ಪಾಪವನ್ನು ಕಾಶ್ಮಿರಿ ಪಂಡಿತರ ಬಳಿ ಕ್ಷಮಾಪಣೆ ಕೇಳಿ ಪರಿಹರಿಸಿಕೊಳ್ಳೋಣ ಎಂದು ಕೈಹಿಡಿದು ಅಂಗಲಾಚುತ್ತಿದ್ದಾನೆ. ಹೌದು, ಇವತ್ತು 40-50 ವರ್ಷ ವಯಸ್ಸಿನ ಯುವಕರು ಆವತ್ತು ತಮ್ಮ ಕಣ್ಣ ಮುಂದೆ ತಮ್ಮದೇ ಜನ ತಮ್ಮದೇ ಹಿಂದೂ ಸೋದರರನ್ನು ಹತ್ಯೆಗೈದದನ್ನು ಕಣ್ಣಾರೆ ನೋಡಿದ್ದಾರೆ. ಜಿಹಾದಿಗಳು ಹಿಂದೂ ಪಂಡಿತರ ಮನೆಗೆ ನುಗ್ಗಿ ಹಿಂದೂ ಪಂಡಿತರನ್ನು ಹುಡುಕಿ ಸಿಗದೇ ಇದ್ದಾಗ ಆ ಕುಟುಂಬದ ಸದಸ್ಯ ಎಲ್ಲಿ ಅಡಗಿದ್ದಾನೆ ಎಂದು ಪಕ್ಕದ ಮುಸ್ಲಿಂ ಕುಟುಂಬ ಹೇಳಿ ನಂತರ ಅಕ್ಕಿಯ ಡ್ರಮ್ ಗೆ ಶೂಟ್ ಮಾಡಿ ಆ ಅಕ್ಕಿಯಿಂದಲೇ ಅನ್ನ ಮಾಡಿಸಿ ಅವನ ಹೆಂಡತಿಗೆ ತಿನ್ನಿಸಿದ ಘಟನೆ ನಿಜ ಎಂದು ನೋಡಿದವರು ಇದ್ದಾರೆ. ಕುರಾನ್ ನಲ್ಲಿ ಹೇಳಿರುವಂತೆ ನಮ್ಮ ಪಕ್ಕದ ಮನೆಯವರು ಯಾರೇ ಆಗಿರಲಿ, ಅವರು ಕಷ್ಟದಲ್ಲಿದ್ದಾಗ ಅವರ ಪ್ರಾಣ, ಮಾನ, ಆಸ್ತಿ, ಹಣ ಉಳಿಸುವುದು ನಮ್ಮ ಜವಾಬ್ದಾರಿ ಎಂದು ಹೇಳಿರುವಾಗ ನಾವು ಆವತ್ತು ವರ್ತಿಸಿರುವುದು ಸರಿಯಿರಲಿಲ್ಲ ಎಂದು ಈ ಮುಸ್ಲಿಂ ಯುವಕ ಒತ್ತಿ ಒತ್ತಿ ಹೇಳಿದ್ದಾನೆ. ಅಷ್ಟೇ ಅಲ್ಲದೇ ಕಾಶ್ಮೀರಿ ಪಂಡಿತರನ್ನು ನಮ್ಮವರು ಕೊಲ್ಲುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ್ದಾನೆ. ಅವರೇನೂ ನಮಗೆ ಶತ್ರುಗಳಾಗಿರಲಿಲ್ಲ, ನಮ್ಮ ವಾಸಕ್ಕೆ, ಜೀವನಕ್ಕೆ ಅವರು ಅಡ್ಡಿ ಮಾಡಿರಲಿಲ್ಲ, ನಾವು ನಮ್ಮ ಪಾಡಿಗೆ ಅವರು ಅವರ ಪಾಡಿಗೆ ಇದ್ದರು, ಹಾಗಿದ್ದ ಮೇಲೆಯೂ ನಾವು ಪಂಡಿತರನ್ನು ಕೊಂದದ್ದು, ಚಿತ್ರಹಿಂಸೆ ನೀಡಿದ್ದು, ಅತ್ಯಾಚಾರ ಮಾಡಿದ್ದು, ಓಡಿಸಿದ್ದು ಎಲ್ಲವೂ ಸರಿಯಾ ಎಂದು ಆತ ಪ್ರಶ್ನಿಸಿದ್ದಾನೆ. ಇನ್ನು ಸಂಘರ್ಷ ಯಾವಾಗಲೂ ಸಮಬಲರ ನಡುವೆ ಆಗಬೇಕಾಗಿತ್ತು. ಆದರೆ ಆಟೋಮೆಟಿಕ್ ಗನ್ ಹಿಡಿದು ಕೈಯಲ್ಲಿ ಶಸ್ತ್ರಗಳೇ ಇಲ್ಲದೆ ನಿರಾಯುಧ ಹಿಂದೂಗಳ ಮೇಲೆ ಗುಂಡುಗಳ ಸುರಿಮಳೆಗೆರೆದು ಕೊಂದದ್ದು ಯಾವ ಪುರುಷಾರ್ಥ ಎಂದು ಅವನೇ ಪ್ರಶ್ನಿಸಿದ್ದಾನೆ. ಕೊನೆಯದಾಗಿ ಅವನು ಹೇಳಿದ ಒಂದು ಮಾನವೀಯ ವಾಕ್ಯ ಯಾರ ಅಂತಕರಣ:ವನ್ನಾದರೂ ಒಮ್ಮೆ ಕದಕಿಬಿಡುತ್ತದೆ. ಈ ಭೂಮಿಯಲ್ಲಿ ಹುಲಿ ಹುಲಿಯನ್ನು ತಿನ್ನುವುದಿಲ್ಲ, ನಾಯಿ ನಾಯಿಯನ್ನು ಕಚ್ಚುವುದಿಲ್ಲ. ಆದರೆ ಮನುಷ್ಯರು ಮಾತ್ರ ತಮ್ಮದೇ ನೆಲದಲ್ಲಿ ಅಕ್ಕಪಕ್ಕದಲ್ಲಿ ವಾಸಿಸುವ ಜನರನ್ನು ಕೊಂದುಬಿಡುತ್ತಾನೆ. ನಾವು ಪ್ರಾಣಿಗಳಿಗಿಂತಲೂ ಕೀಳು ಎಂದು ಅವನು ಒತ್ತಿ ಒತ್ತಿ ಹೇಳುತ್ತಾನೆ. ನಮ್ಮ ಪೂರ್ವಜರು ಮಾಡಿದ ತಪ್ಪನ್ನು ನಾವು ಏನೂ ಆಗೇ ಇಲ್ಲ ಎನ್ನುವಂತೆ ಸಾಧಿಸುವುದು ಬೇಡಾ. ಹಿಂದೂ ಪಂಡಿತರ ಭೂಮಿಯನ್ನು ಅವರಿಗೆ ಹಿಂತಿರುಗಿಸೋಣ. ಅವರ ಗೌರವವನ್ನು ಅವರಿಗೆ ನೀಡೋಣ. ಇದರಿಂದ ಭಗವಂತ ನಮ್ಮನ್ನು ಕ್ಷಮಿಸಿದರೂ ಕ್ಷಮಿಸಿಯಾನು ಎಂದು ಹೇಳಿದ್ದಾರೆ.

ಕರುಣಾಮಯಿಗಳಾದ ಹಿಂದೂ ಪಂಡಿತರು ಬಯಸುವುದು ಕೂಡ ಇದನ್ನೇ. ಆವತ್ತು ಅವರು ಬಯಸಿದ್ದು ಕೂಡ ಇದೇ. ಆವತ್ತು ಹೆಚ್ಚಿನ ಸಂಖ್ಯೆಯಲ್ಲಿದ್ದ ಹಿಂದೂಗಳ ಮತ್ತು ಜಿಹಾದಿ ಮನಸ್ಥಿತಿಯನ್ನು ಪಡೆದುಕೊಂಡವರ ನಡುವೆ ಯಾವುದೇ ಕೋಪ, ದ್ವೇಷ ಇರಲಿಲ್ಲ. ಆದರೂ ಕಾಶ್ಮೀರವನ್ನು ಪ್ರತ್ಯೇಕವಾಗಿಸಿಕೊಳ್ಳಬೇಕೆಂಬ ಪಾಕಿಸ್ತಾನದ ಬ್ರೇನ್ ವಾಶ್ ಅವರನ್ನು ಹಿಂದೂ ಪಂಡಿತರ ಮೇಲೆ ಮುಗಿಬೀಳುವಂತೆ ಮಾಡಿತ್ತು. ಇವತ್ತು ಪಾಕಿಸ್ತಾನದ ಜನ ತಾವು ದರಿದ್ರ ರಾಷ್ಟ್ರದಲ್ಲಿ ಬದುಕುತ್ತಿರುವುದಕ್ಕೆ ತಲೆ ಚಚ್ಚಿಕೊಳ್ಳುತ್ತಿದ್ದಾರೆ. ಅಲ್ಲಿನ ಹಣದುಬ್ಬರ ಮತ್ತು ಉಗ್ರಗಾಮಿ ಚಟುವಟಿಕೆಗಳು ಪಾಕಿಸ್ತಾನವನ್ನು ಹುರಿದು ಮುಕ್ಕಿಬಿಟ್ಟಿವೆ. ಪಾಕ್ ಆಕ್ರಮಿತ ಕಾಶ್ಮೀರದ ಜನ ನಾವು ಯಾವಾಗ ಭಾರತದೊಂದಿಗೆ ವಿಲೀನಗೊಳ್ಳುತ್ತೇವೆ ಎಂದು ಕಾದುಕುಳಿತುಬಿಟ್ಟಿದ್ದಾರೆ. ಒಂದು ಕಡೆ ಭಾರತದ ವರ್ಚಸ್ಸು ವಿದೇಶದಲ್ಲಿ ಹೆಚ್ಚಾಗುತ್ತಿದ್ದರೆ ಪಾಕಿಸ್ತಾನ ಪಾಶ್ಚಿಮಾತ್ಯ ರಾಷ್ಟ್ರಗಳ ಎದುರು ಮಂಡಿಯೂರಿಬಿಟ್ಟಿದೆ. ತಮ್ಮದೇ ರಾಷ್ಟ್ರದ ಜನರಿಗೆ ನೆಮ್ಮದಿ ಕೊಡಲಾರದ ಅಲ್ಲಿನ ಆಡಳಿತ ಭಯೋತ್ಪಾದಕರ ಕೈಯಲ್ಲಿ ನಲುಗಿ ಹೋಗುತ್ತಿದ್ದರೆ ಇದನ್ನೆಲ್ಲ ನೋಡುತ್ತಿರುವ ಕೆಲವು ಪ್ರಜ್ಞಾವಂತ ಮುಸ್ಲಿಂ ಯುವಕರಿಗೆ ತಮ್ಮ ಭವಿಷ್ಯ ಭಾರತ ಮಾತ್ರ ಎನ್ನುವುದು ಪಕ್ಕಾ ಆಗಿದೆ. ಆದ್ದರಿಂದ ನಾವು ತಪ್ಪು ಒಪ್ಪಿಕೊಳ್ಳೋಣ ಎಂದು ಹೇಳುತ್ತಿದ್ದಾರೆ. ಆದರೆ ಇದನ್ನೆಲ್ಲ ಒಪ್ಪಿಬಿಡುವ ಮನಸ್ಸು ಕಾಶ್ಮೀರದಲ್ಲಿ ದಶಕಗಳಿಂದ ತಮ್ಮದೇ ಹಿಡಿತ ಸಾಧಿಸಿ ಕುಳಿತಿರುವ ಉಮರ್ ಫಾರೂಕ್, ಮುಫ್ತಿ ಕುಟುಂಬಗಳಿಗೆ ಇಲ್ಲ. ಯಾವುದೇ ಮಾರಣಹೋಮ ಆಗಿಲ್ಲ, ಅದೆಲ್ಲ ಕಟ್ಟುಕಥೆ ಎಂದು ಸತ್ಯದ ತಲೆಯ ಮೇಲೆ ಹೊಡೆದಂತೆ ಹೇಳುತ್ತಿವೆ. ಇನ್ನು ಭಾರತದಲ್ಲಿ ದ್ವೇಷ ಹೆಚ್ಚಾಗುತ್ತಿದೆ ಎಂದು ರಾಹುಲ್ ಎನ್ನುವ ಕಾಂಗ್ರೆಸ್ಸಿನ ಭವಿಷ್ಯದ ಅಧ್ಯಕ್ಷ ಹೇಳುತ್ತಿದ್ದಾರೆ. ಅಷ್ಟಕ್ಕೂ ದ್ವೇಷ ಕಾರುತ್ತಿರುವವರು ಯಾರು? ಹಿಂದೂಗಳಾ ಅಥವಾ ಜಿಹಾದಿಗಳಾ? ನೀವು ಕೂಡ ನಿಮ್ಮ ವಂಶಸ್ಥರನ್ನು ಕಾಶ್ಮೀರ ಪಂಡಿತರಲ್ಲಿ ನೋಡಿದರೆ ನಿಮ್ಮ ರಕ್ತ ಹೆಪ್ಪುಗಟ್ಟುತ್ತಿತ್ತು. ಆದರೆ ಚುನಾವಣೆ ಬಂದಾಗ ಮಾತ್ರ ಜನಿವಾರ ಧರಿಸಿ, ವಿಭೂತಿ ಬಳಿದು, ಪಂಚೆ ಉಟ್ಟು ಥೇಟ್ ಫ್ಯಾನಿಡ್ರೆಸ್ ಧರಿಸಿ ಬರುವ ನೀವು ಯಾವಾಗ ಹಿಂದೂ ಮುಸ್ಲಿಮರ ನಡುವೆ ಪ್ರೀತಿ ಬೆಳೆಸಿದ್ದೀರಿ ಎಂದು ಯಾರೂ ಕೇಳಲ್ವಾ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search