• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಆತ್ಮಿಕಾ ಸಾವು ಹಿಂದೂ ಹೆಣ್ಣುಮಕ್ಕಳಿಗೆ ಪಾಠವಾಗುತ್ತಾ?

Hanumantha Kamath Posted On May 7, 2022


  • Share On Facebook
  • Tweet It

ಕಾಮ ಮತ್ತು ಲವ್ ಜಿಹಾದ್ ಎರಡೂ ಜೊತೆ ಜೊತೆಯಲ್ಲಿಯೇ ಸಾಗುತ್ತವೆ. ಕಾಮದ ಮನೋಭಾವನೆ ಇಲ್ಲದೆ ಬೇರೆ ಏನೂ ಸಾಧ್ಯವಿಲ್ಲ. ನೀವು ಹಿಂದೂ ಹುಡುಗಿಯರನ್ನು ಕಾಮಿಸು ಎಂದು ಎಲ್ಲಿ ಕೂಡ ಲಿಖಿತವಾಗಿ ಬರೆಯದಿದ್ದರೂ ಅವರು ಸುಲಭವಾಗಿ ಸಿಗುತ್ತಾರೆ ಎನ್ನುವ ಕಾರಣಕ್ಕೆ ಅವರನ್ನು ಪ್ರೀತಿಯ ಜಾಲದಲ್ಲಿ ಸೆಳೆಯುವ ಮತ್ತು ಅವರನ್ನು ಅಲ್ಲಿ ಕಾಮಬಲೆಯಲ್ಲಿ ಬಿಳಿಸುವ ಪ್ರಯತ್ನ ಆಗಾಗ ಆಗುತ್ತಿರುತ್ತದೆ. ಗ್ರಾಮಾಂತರ ಪ್ರದೇಶದಲ್ಲಿ ಮತ್ತು ನಗರ ಪ್ರದೇಶದಲ್ಲಿ ಜಾಲ ಬೀಸುವ ಶೈಲಿ ಬೇರೆ ಬೇರೆಯಾಗಿದ್ದರೂ ಕೊನೆಯಲ್ಲಿ ಫಲಿತಾಂಶ ಒಂದೇ. ಅದು ಹಿಂದೂ ಹುಡುಗಿಯ ಸಾವು. ಅವಳು ಅದಕ್ಕೆ ತಯಾರಾಗಿಯೇ ಮತಾಂಧರನ್ನು ಪ್ರೀತಿಸುವುದು ಒಳ್ಳೆಯದು. ಅದು ಬಿಟ್ಟು ಚೆನ್ನಾಗಿ ಬಾಳಿಸುತ್ತಾನೆ, ಉತ್ತಮ ಭವಿಷ್ಯ ಸಿಗುತ್ತದೆ ಎಂದು ಆತನ ಹಿಂದೆ ಹೋದರೆ ಮುಂದೊಂದು ದಿನ ಇದು ಸಾವಿನಲ್ಲಿ ಅಂತ್ಯವಾಗುವುದರಲ್ಲಿ ಯಾವ ಸಂಶಯವಿಲ್ಲ. ಬಂಟ್ವಾಳದ ವಿಟ್ಲ ಸಮೀಪದ ಕನ್ಯಾನದ ಹುಡುಗಿ ಆತ್ಮಿಕಾಳ ಬಾಳಿನಲ್ಲಿಯೂ ಆದದ್ದು ಅದೇ. ಈ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಯುವತಿಯರಿಗೆ ಹೊರ ಪ್ರಪಂಚದ ಅರಿವು ಅಷ್ಟು ಕಡಿಮೆ. ಈ ಚಾಲೂ ಎನ್ನುತ್ತಾರಲ್ಲ, ಹಾಗೆ ಇರುವ ಸಾಧ್ಯತೆ ಕಡಿಮೆ. ಅವರಿಗೆ ಸ್ವಲ್ಪ ಪ್ರೀತಿ ತೋರಿಸಿದರೂ ಅದನ್ನೇ ನಿಜವೆಂದು ನಂಬುತ್ತಾರೆ. ಅದರಲ್ಲಿಯೂ ತಂದೆಯ ಪರಿಚಯಸ್ಥ ಮತ್ತು ಅದೇ ಪರಿಸರದವನು ಎಂದ ಕೂಡಲೇ ಕಣ್ಣು ಮುಚ್ಚಿ ನಂಬಿ ಬಿಡುತ್ತಾರೆ. ಹಾಗೇ 30 ವರ್ಷದ ಸಾಹುಲ್ ಹಮೀದ್ ತನ್ನೊಂದಿಗೆ ಕೂಲಿ ಕೆಲಸಕ್ಕೆ ಬರುವ ಸಂಜೀವ ಎನ್ನುವವರ ಮಗಳನ್ನು ಪುಸಲಾಯಿಸಿ ಒಲಿಸಿಕೊಳ್ಳುವ ಪ್ರಯತ್ನ ಮಾಡಿದ್ದಾನೆ. ಅದಕ್ಕೆ ಆಕೆಯ ಮನೆಯವರು ವಿರೋಧ ವ್ಯಕ್ತಪಡಿಸಿದ್ದಾರೆ. ಯಾಕೆಂದರೆ ಆತ್ಮಿಕಾಳಿಗೆ ಇನ್ನೂ 14 ವರ್ಷ. ಇವನಿಗೆ 30 ವರ್ಷ.

ಅವಳು ಮದುವೆಯಾಗಲು ಇನ್ನು ಕನಿಷ್ಟ 4-5 ವರ್ಷವಾದರೂ ಬೇಕಾಗುತ್ತದೆ. ಹಾಗಂತ ಸಾಹುಲ್ ಹಮೀದ್ ಏನೂ ಮದುವೆಯಾಗಲು ಅವಳ ಹಿಂದೆ ಬಿದ್ದದ್ದಲ್ಲ. ಅವನದ್ದೇನಿದ್ದರೂ ಬಳಸಿ ಬಿಸಾಡುವ ಸ್ವಭಾವ ಎಂದು ಆಸುಪಾಸಿನವರಿಗೆ ಗೊತ್ತಿರುತ್ತದೆ. ಸಂಜೀವ ಹಾಗೂ ಗೀತಾ ದಂಪತಿ ಎರಡು ವರ್ಷಗಳ ಹಿಂದೆ ಆ ಪರಿಸರದಲ್ಲಿ ವಾಸಿಸಲು ಬಂದದ್ದಾದರೂ ಅವರಿಗೆ ಹಮೀದ್ ಬಗ್ಗೆ ಸ್ಥಳೀಯರಿಂದ ಮಾಹಿತಿ ಸಿಕ್ಕಿರುತ್ತದೆ. ಅವರು ಮಗಳನ್ನು ಹಮೀದ್ ನಿಂದ ಆದಷ್ಟು ದೂರ ಇಡಲು ಪ್ರಯತ್ನಿಸಿದ್ದಾರೆ. ಇವನು ಅವಳಿಗೆ ಫೋನ್ ಮಾಡಿ ಸಂಬಂಧ ಇಟ್ಟುಕೊಳ್ಳಲು ನೋಡಿದರೂ ಇದು ತಾಯಿ ಗೀತಾ ಅವರ ಗಮನಕ್ಕೆ ಬಂದಾಗ ಅವರು ಮೊಬೈಲ್ ಕೂಡ ಅವಳಿಂದ ದೂರ ಇಟ್ಟರು. ಆಗ ಹಮೀದ್ ಏನು ಮಾಡಿದ್ದಾನೆ ಎಂದರೆ ಆತ್ಮಿಕಾಳ ತಲೆಕೂದಲು ತೆಗೆದುಕೊಂಡು ಹೋಗಿ ಅದೇನೋ ಪ್ರಸಾದ ಎಂದು ತಂದು ಅವಳಿಗೆ ತಿನ್ನಿಸಿದ್ದಾನೆ. ನಂತರ ಕೆಲವು ದಿನಗಳ ಬಳಿಕ ಆತ್ಮಿಕಾ ತನ್ನದೇ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಹೆಣ ನೆಲಕ್ಕೆ ಕಾಲೂರಿದ ಸ್ಥಿತಿಯಲ್ಲಿ ಪತ್ತೆಯಾದ ಕಾರಣ ಅದನ್ನು ಆತ್ಮಹತ್ಯೆ ಎನ್ನಲು ಮನೆಯವರು ತಯಾರಿಲ್ಲ. ಇದು ಕೊಲೆ ಎನ್ನುವುದು ಅವರ ಅಭಿಪ್ರಾಯ. ಹಿಂದೂ ಸಂಘಟನೆಗಳು ಅಲ್ಲಿಗೆ ಭೇಟಿ ನೀಡಿ ಇದು ನಿಶ್ಚಯವಾಗಿಯೂ ಲವ್ ಜಿಹಾದ್ ಎಂದು ಆರೋಪಿಸಿವೆ. ಅದೇ ಕೆಲವು ಮುಸ್ಲಿಂ ಸಂಘಟನೆಗಳು ಜಿಲ್ಲೆಯಲ್ಲಿ ಅದೆಷ್ಟೋ ಹೆಣ್ಣುಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅಲ್ಲೆಲ್ಲ ಇವರು ಭೇಟಿ ನೀಡುತ್ತಾರಾ? ಯಾವುದೋ ಆತ್ಮಹತ್ಯೆಯನ್ನು ಲವ್ ಜಿಹಾದ್ ಎಂದು ಕರೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಇದು ಲವ್ ಜಿಹಾದೋ ಅಥವಾ ಕಾಮ ಜಿಹಾದೋ ಎನ್ನುವುದಕ್ಕಿಂತ ಓರ್ವ ಅಮಾಯಕ ಹೆಣ್ಣುಮಗಳು ಸತ್ತಿರುವುದು ನಿಜ. ಅದು ಯಾಕಾಯಿತು ಎಂದು ನೋಡುವುದರ ಜೊತೆಗೆ ಸತ್ಯ ಹೊರಗೆ ಬಂದು ಅದು ಬೇರೆ ಹೆಣ್ಣುಮಕ್ಕಳಿಗೆ ಪಾಠವಾಗಬೇಕು. ಆಗ ಮಾತ್ರ ಆತ್ಮಿಕಾ ಆತ್ಮಕ್ಕೆ ಶಾಂತಿ ಸಿಗುತ್ತದೆ.

ಆದರೆ ನಮ್ಮಲ್ಲಿ ಈ ಸಾವಿನಿಂದ ಎಷ್ಟು ಹೆಣ್ಣುಮಕ್ಕಳು ಪಾಠ ಕಲಿಯುತ್ತಾರೆ. ಉನ್ನತ ವರ್ಗದ ಮುಸ್ಲಿಮ್ ಸಮುದಾಯದಲ್ಲಿ ಮದುವೆಯಾಗಿ ಹಲವು ವರ್ಷ ಏನೂ ತೊಂದರೆಯಾಗದೇ ಬಾಳುತ್ತಿರುವ ಬೆರಳೆಣಿಕೆಯ ಹಿಂದೂ ಹೆಣ್ಣುಮಕ್ಕಳು ಇರಬಹುದು. ಆದರೆ ನೂರಕ್ಕೆ ತೊಂಭತ್ತರಷ್ಟು ಲವ್ ಜಿಹಾದಿಗೆ ಒಳಗಾದ ಹೆಣ್ಣುಮಕ್ಕಳು ಏನೂ ವಾರಂಟಿಯಿಲ್ಲದೆ ಅವಧಿಪೂರ್ವ ಮೂಲೆ ಸೇರಿದ್ದಾರೆ. ಕೆಲವರನ್ನು ಹತ್ಯೆ ಮಾಡಿದ್ದರೆ, ಹಲವರನ್ನು ಹಿಂಸಿಸಿ ವಿಕೃತ ಆನಂದ ಪಡೆಯಲಾಗಿದೆ. ಕೆಲವರು ವಿದೇಶಕ್ಕೆ ಮಾರಲ್ಪಟ್ಟಿದ್ದರೆ ಇನ್ನು ಹಲವರು ತಾವೇ ಜೀವನ ಅಂತ್ಯಗೊಳಿಸಿದ್ದಾರೆ. ಇದು ಹಿಂದೂ ಹೆಣ್ಣುಮಕ್ಕಳಿಗೆ ಪಾಠವಾಗಬೇಕು. ಆದರೆ ಆಗುತ್ತಾ? ಆಗಲ್ಲ. ಸೆಂಟ್, ಬೈಕ್ ಮತ್ತು ಆಕರ್ಷಕ ಹೇರ್ ಸ್ಟೈಲ್, ರಂಗುರಂಗಿನ ಡ್ರೆಸ್ ಮಾಯೆಯಲ್ಲಿ ನಮ್ಮ ಹೆಣ್ಣುಮಕ್ಕಳು ಪ್ರಪಾತಕ್ಕೆ ಬೀಳುತ್ತಾರೆ. ಇನ್ನು ಕೆಲವು ಹಿಂದೂ ಹೆಣ್ಣುಮಕ್ಕಳು ನೇರ ಮುಸ್ಲಿಂ ಯುವಕರ ಸಂಗದಲ್ಲಿ ಬೀಳದೇ ಇದ್ದರೂ ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ಗೆಳೆತನವನ್ನು ದುರುಪಯೋಗಪಡಿಸಿ ಹಿಂದೂ ವಿದ್ಯಾರ್ಥಿನಿಯರನ್ನು ಮೋಸದ ಜಾಲಕ್ಕೆ ಬೀಳಿಸಿದ ಪ್ರಕರಣಗಳು ನಡೆದಿವೆ. ಶಾರುಖ್ ಖಾನ್- ಗೌರಿ ಖಾನ್ ಸಂಸಾರ ಚೆನ್ನಾಗಿಲ್ವ ಎನ್ನುವ ಮೊಂಡುವಾದವನ್ನು ಪಕ್ಕಕ್ಕೆ ಇಟ್ಟು ಅಮೀರ್ ಖಾನ್ ಸಂಸಾರವನ್ನು ಎದುರಿಗಿಟ್ಟು ನೋಡಿದರೂ ಸಾಕು. ಎಲ್ಲಕ್ಕಿಂತ ಹೆಚ್ಚಾಗಿ ಬಚ್ಚಲು ಮನೆಯ ನೀರು ಮತ್ತು ಬಾವಿಯ ನೀರಿನ ವ್ಯತ್ಯಾಸ ನಮ್ಮ ಹೆಣ್ಣುಮಕ್ಕಳಿಗೆ ಯಾವಾಗ ಗೊತ್ತಾಗುತ್ತೋ ಆಗ ಇವರು ಮೇಲೆ ಬೀಳುತ್ತಾರೆ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search