• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಮುಸ್ಲಿಮರ ಓಲೈಕೆಗೆ 1991 ರಲ್ಲಿ “ಮಸೀದಿ ಉಳಿಸುವ” ಕಾಯ್ದೆ ಕಾಂಗ್ರೆಸ್ ತಂದಿತ್ತು!!

Hanumantha Kamath Posted On May 17, 2022
0


0
Shares
  • Share On Facebook
  • Tweet It

ದೇಶದಲ್ಲಿರುವ ಕನಿಷ್ಟ 36000 ಮಸೀದಿಗಳ ಹಿನ್ನಲೆ ಪರಿಶೀಲಿಸಿದರೂ ಅಲ್ಲಿ ಯಾವತ್ತೋ ಕೆಡವಿದ ದೇವಾಲಯಗಳ ಕುರುಹು ಸಿಗುತ್ತವೆ ಎನ್ನುವುದು ಒಂದು ನಂಬಿಕೆ. ಒಂದು ಕಾಲದಲ್ಲಿ ಭಾರತದಲ್ಲಿ ಸನಾತನ ಧರ್ಮದ ಭದ್ರ ತಳಹದಿಯಲ್ಲಿ ಇಲ್ಲಿ ಅಸಂಖ್ಯಾತ ದೇವಾಲಯಗಳು ಇದ್ದವು ಎನ್ನುವುದು ಚರಿತ್ರಕಾರರ ಸಂಶೋಧನೆ. ಭಾರತದ ಮೇಲೆ ಮೊಗಲರು ದಾಳಿ ಮಾಡಿದ ನಂತರ ಮುಸಲ್ಮಾನ ದಾಳಿಕೋರರು ಭಾರತವನ್ನು ಆಳಲು ಶುರು ಮಾಡಿದ ನಂತರ ಇಲ್ಲಿರುವ ಸುಮಾರು 36 ಸಾವಿರ ದೇವಾಲಯಗಳನ್ನು ನಾಶ ಮಾಡಿ ಅದರ ಮೇಲೆ ಮಸೀದಿಗಳನ್ನು ಕಟ್ಟಿಸಿದರು ಎಂದು ಇತಿಹಾಸ ಹೇಳುತ್ತದೆ. ಆದ್ದರಿಂದ ಒಂದು ವಿಷಯ ಏನೆಂದರೆ ಆ ಮಸೀದಿಗಳನ್ನು ಭಾರತೀಯರು ಕಟ್ಟಿದ್ದಲ್ಲ. ನಮ್ಮ ಮೇಲೆ ದಾಳಿ ಮಾಡಿದವರು ನಮ್ಮ ದೇವಾಲಯಗಳನ್ನು ಕೆಡವಿ ಕಟ್ಟಿದ್ದು. ಈಗ ಆ ಮಸೀದಿಗಳ ಸರ್ವೇ ಮಾಡಿ ಅಲ್ಲಿ ಒಂದು ವೇಳೆ ಹಿಂದೆ ದೇವಾಲಯ ಇದ್ದಿದ್ರೆ ಆ ದೇವಾಲಯಗಳನ್ನು ಅಲ್ಲಿ ಮತ್ತೆ ಸ್ಥಾಪಿಸಿದರೆ ಒಳ್ಳೆಯದು ಎನ್ನುವುದು ಆಸ್ತಿಕರ ಅಸ್ಮಿತೆ. ಇದಕ್ಕೆ ಯಾವುದೇ ಭಾರತೀಯ ಮುಸ್ಲಿಮರು ವಿರೋಧ ಮಾಡಬಾರದು. ಯಾಕೆಂದರೆ ಅದು ಅವರು ಕಟ್ಟಿದ ಮಸೀದಿಗಳಲ್ಲ. ಎಲ್ಲೆಲ್ಲಿ ಭಾರತೀಯ ಮುಸ್ಲಿಮರು ತಮ್ಮ ಆರಾಧನಾ ಕೇಂದ್ರವನ್ನು ಕಟ್ಟಿದ್ದಾರೋ ಅದನ್ನು ಯಾರೂ ಪ್ರಶ್ನಿಸುತ್ತಿಲ್ಲ. ಈಗ ಈ ಹಂತದಲ್ಲಿ ಸರ್ವೆ ನಡೆಯುತ್ತಿರುವುದು ಕಾಶೀ ವಿಶ್ವನಾಥ ದೇವಾಲಯಕ್ಕೆ ತಾಗಿ ಇರುವ ಜ್ಞಾನವಾಪಿ ಮಸೀದಿ. ಅದನ್ನು ಉತ್ತರ ಭಾರತದಲ್ಲಿ ಗ್ಯಾನವಾಪಿ ಮಸೀದಿ ಎನ್ನುತ್ತಾರೆ. ಎರಡೂ ಒಂದೇ. ಈ ಮಸೀದಿಯ ಗೋಡೆಗಳಲ್ಲಿ ಹಿಂದೂ ದೇವತೆಗಳ ಮೂರ್ತಿಗಳು ಯಾವಾಗ ಕಂಡುಬಂದಿತೋ ಆಗ ಐದು ಮಂದಿ ಹಿಂದೂ ಮಹಿಳೆಯರು ಅಲ್ಲಿ ಹಿಂದೂ ದೇವರನ್ನು ಪೂಜಿಸಲು ಅವಕಾಶ ಮಾಡಿಕೊಡಲು ವಿನಂತಿಸಿ ನ್ಯಾಯಾಲಯಕ್ಕೆ ಮನವಿ ಮಾಡಿದರು. ಕೊನೆಗೂ ಅನೇಕ ಬಾರಿ ವಿಚಾರಣೆ ಎಲ್ಲಾ ಮುಗಿದು ಸರ್ವೇ ನಡೆದು ಈಗ ಆ ಮಸಿದಿಯ ಕೊಳದಲ್ಲಿ ಶಿವಲಿಂಗವೊಂದು ಪತ್ತೆಯಾಗಿದೆ. ಆ ಕೊಳವನ್ನು ಸರ್ವೆ ಮಾಡಬಾರದು ಎಂದು ಆರಂಭದಲ್ಲಿ ಮಸೀದಿಯವರು ಆಕ್ಷೇಪ ಸಲ್ಲಿಸಿದ್ದರು. ಆದರೆ ಅದನ್ನು ಕೋರ್ಟ್ ಪುರಸ್ಕರಿಸಲಿಲ್ಲ. ಆದ್ದರಿಂದ ಕೊಳವನ್ನು ಸರಿಯಾಗಿ ಪರಿಶೀಲಿಸಿದಾಗ ಅದರೊಳಗೆ 12.8 ಡಯಾಮೀಟರ್ ಅಗಲದ ಶಿವನ ಲಿಂಗ ಸಿಕ್ಕಿದೆ. ಆದರೆ ವಿಷಯ ಏನೆಂದರೆ ಮಸೀದಿಯ ಒಳಗೆ ಸರ್ವೇ ನಡೆದಾಗ ಅಲ್ಲಿ ಏನು ಆದರೂ ಅದನ್ನು ಹೊರಗೆ ಬಂದು ಹೇಳಬಾರದು ಎನ್ನುವುದು ನ್ಯಾಯಾಲಯ ಕೊಟ್ಟಿರುವ ಸೂಚನೆ. ಸರ್ವೇ ನಡೆಯುವಾಗ ಮಸೀದಿಯೊಳಗೆ ಐದು ಹಿಂದೂ ವಕೀಲರು, ಐದು ಮುಸ್ಲಿಂ ವಕೀಲರು, ಉನ್ನತ ಪೊಲೀಸ್ ಅಧಿಕಾರಿ, ವಿಡಿಯೋಗ್ರಾಫರ್, ಫೋಟೊಗ್ರಾಫರ್, ಸೆಕ್ಯೂರಿಟಿ ಇರುತ್ತಾರೆ. ಅವರು ಯಾರೂ ಕೂಡ ಒಳಗೆ ಪತ್ತೆಯಾಗುವ ರಹಸ್ಯಗಳನ್ನು ಹೊರಗೆ ಹೇಳುವಂತಿಲ್ಲ. ಏನಿದ್ದರೂ ಮುಚ್ಚಿದ ಲಕೋಟೆಯೊಳಗೆ ವಿವರ ಸಲ್ಲಿಸಬೇಕು.

ಆದರೆ ಯಾವಾಗ ಶಿವಲಿಂಗ ಸಿಕ್ಕಿತೋ ವಿಷಯ ವೈರಲ್ ಅಗಲು ತುಂಬಾ ಹೊತ್ತು ಹಿಡಿಯಲಿಲ್ಲ. ಒಬ್ಬ ಹಿಂದೂ ವಕೀಲರು ಖುಷಿಯಿಂದ ಹೊರಗೆ ಬಂದು 350 ವರ್ಷಗಳಿಂದ ನಂದಿ ಶಿವನನ್ನು ಕಾಣಲು ಕಾತರಿಸುತ್ತಾ ಇತ್ತು. ಈಗ ಅದು ಫಲಪ್ರದವಾಗಿದೆ ಎಂದು ಹೇಳಿದ್ರು. ಅಲ್ಲಿಗೆ ಅವರು ಅಡ್ಡಗೋಡೆಯ ದೀಪ ಇಟ್ಟಂತೆ ಮಾತನಾಡಿದ್ರೂ ಹೊರಜಗತ್ತಿಗೆ ಗೊತ್ತಾಗಿತ್ತು. ಅದರೊಂದಿಗೆ ಕೆಲವು ಭಕ್ತರು ಶಿವಲಿಂಗವೊಂದನ್ನು ಹಿಡಿದು ಹೊರಬರುವ ದೃಶ್ಯ ಕೂಡ ವೈರಲ್ ಆಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮಸೀದಿಯೊಳಗಿನ ಕೊಳವನ್ನು ಸೀಝ್ ಮಾಡಬೇಕು ಎಂದು ಹಿಂದೂ ವಕೀಲರು ವಾರಣಾಸಿ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದಾರೆ. ಅದರೊಂದಿಗೆ ಅದಕ್ಕೆ ಸೂಕ್ತ ರಕ್ಷಣೆ ನೀಡಬೇಕು ಎಂದು ವಿನಂತಿಸಿದ್ದಾರೆ. ನ್ಯಾಯಾಲಯ ಎರಡು ಮನವಿಯನ್ನು ಪುರಸ್ಕರಿಸಿ ಸೂಕ್ತ ಬಂದೋಬಸ್ತ್ ಮಾಡಿದೆ. ಆದರೆ ಈ ಸರ್ವೆಯನ್ನು ನಡೆಸಬಾರದು ಎಂದು ಕೋರಿ ಮುಸ್ಲಿಂ ಮುಖಂಡರು ಅರ್ಜಿ ಕೂಡ ಸಲ್ಲಿಸಿದ್ದರು. ಅದನ್ನು ಸುಪ್ರೀಂ ಕೋರ್ಟ್ ಪರಿಶೀಲನೆ ಮಾಡಿದೆ. ಸರ್ವೇ ಆಗುವಾಗ ಮಸೀದಿಯಲ್ಲಿ ತುಂಬಾ ಜನ ನಮಾಜ್ ಮಾಡಲು ಅವಕಾಶ ನೀಡಬಾರದು ಎಂದು ಕೂಡ ವಿನಂತಿಸಲಾಗಿತ್ತು. ನಾನು ಹೇಳುವುದೇನೆಂದರೆ ಮಸೀದಿಯನ್ನು ಸರ್ವೇ ಮಾಡಿದರೆ ಮುಸ್ಲಿಂ ಸಂಘಟನೆಗಳಿಗೆ ಯಾಕೆ ಆತಂಕ.

ಭಾರತದಲ್ಲಿ ಮೊಗಲರು ಕಟ್ಟಿರುವ ಯಾವುದೇ ಮಸೀದಿಯನ್ನು ತೆಗೆದುಕೊಳ್ಳಿ, ಅದರ ಹಿಂದೆ ದೇವಾಲಯ ಇದ್ದ ಕುರುಹುಗಳು ಪತ್ತೆಯಾಗುತ್ತವೆ. ಅದಕ್ಕೆ 1991 ರಲ್ಲಿ ಆಗಿನ ಕಾಂಗ್ರೆಸ್ ಸರಕಾರ ಒಂದು ಕಾಯ್ದೆಯನ್ನು ಜಾರಿಗೆ ತಂದಿತ್ತು. ಯಾವಾಗ ಅಯೋಧ್ಯೆಯಲ್ಲಿ ವಿವಾದಿತ ಕಟ್ಟಡದ ವಿಷಯ ತಾರಕಕ್ಕೆ ಏರಿತೋ ಪ್ರಧಾನಿ ಪಿವಿ ನರಸಿಂಹ ರಾವ್ ಅವರು ಒಂದು ಕಾಯ್ದೆ ಜಾರಿಗೆ ತಂದರು. ಅದರಲ್ಲಿ 1947 ರಲ್ಲಿ ಅಗಸ್ಟ್ 15 ರಂದು ಈ ದೇಶದಲ್ಲಿ ಧಾರ್ಮಿಕ ಕೇಂದ್ರಗಳು ಹೇಗಿದ್ದವೋ ಅದೇ ಸ್ಥಿತಿ ಮುಂದುವರೆಯಬೇಕು ಎನ್ನುವ ಆಶಯವಾಗಿತ್ತು. ಯಾಕೆಂದರೆ ಸತ್ಯ ಪರಿಶೀಲಿಸಲು ಹೋದರೆ ಅದರಿಂದ ಸಮುದಾಯಗಳ ನಡುವೆ ಕಂದಕ ಹೆಚ್ಚಾಗಿ ಕಾನೂನು, ಸುವ್ಯವಸ್ಥೆಗೆ ಅದು ತೊಂದರೆ ತಂದೀತು ಎನ್ನುವುದೇ ಕಾಂಗ್ರೆಸ್ಸಿನ “ದೂರದೃಷ್ಟಿ” ಯಾಗಿತ್ತು ಎನ್ನುವುದಕ್ಕಿಂತ ಮುಸ್ಲಿಂ ವೋಟ್ ಬ್ಯಾಂಕ್ ಅನ್ನು ಖುಷಿಪಡಿಸಲು ಆ ಕಾಯ್ದೆ ಮಾಡಲಾಗಿತ್ತು. ಯಾಕೆಂದರೆ ಈಗ 2022 ರಲ್ಲಿ ಜ್ಞಾನವಾಪಿ ಮಸೀದಿಯ ಬಗ್ಗೆ ಇವತ್ತಿನ ಪೀಳಿಗೆ ಕೇಳುತ್ತಿರಬಹುದು. ಆದರೆ ಈ ವಿಷಯ 0991 ರಲ್ಲಿಯೇ ಚರ್ಚೆಯಲ್ಲಿತ್ತು. ಯಾವಾಗ ಅಯೋಧ್ಯೆಯ ಗಲಾಟೆ ಚರ್ಚೆಯಾಗುತ್ತಿತ್ತೋ ಆಗ ನಮ್ಮ ಮುಂದಿನ ಗುರಿ ಮಥುರಾ ಮತ್ತು ಕಾಶಿ ಎಂದು ಹಿಂದೂ ಪರ ಸಂಘಟನೆಗಳು ಘೋಷಿಸಿಯಾಗಿತ್ತು!!

0
Shares
  • Share On Facebook
  • Tweet It




Trending Now
ಗ್ಯಾರಂಟಿ ಅಥವಾ ಅಭಿವೃದ್ಧಿ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಜನರ ಮುಂದೆ ಆಯ್ಕೆ ಇಟ್ರಾ?
Hanumantha Kamath July 7, 2025
20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
Hanumantha Kamath July 5, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಗ್ಯಾರಂಟಿ ಅಥವಾ ಅಭಿವೃದ್ಧಿ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಜನರ ಮುಂದೆ ಆಯ್ಕೆ ಇಟ್ರಾ?
    • 20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
    • 20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
    • ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಮೇಲೆ ರಾಹುಲ್ ಗಾಂಧಿ ಫೋಟೋಗೆ ಜೆಡಿಯು-ಬಿಜೆಪಿ ವ್ಯಂಗ್ಯ!
    • ಪರಸ್ಪರ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆ ನಂತರ ರೇಪ್ ಎನ್ನಲಾಗುವುದಿಲ್ಲ - ಕೇರಳ ಹೈಕೋರ್ಟ್ ಆದೇಶ
    • ಭಾರತದ ಇತಿಹಾಸದಲ್ಲಿ 2025ರ ಹಜ್ ಯಾತ್ರಾ ಆಯೋಜನೆ ಅತ್ಯಂತ ಯಶಸ್ವಿ - ಕೇಂದ್ರ ಸಚಿವ ಕಿರಣ್ ರಿಜ್ಜು
    • ಈ ಬಾರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಮಹಿಳೆಗೆ ಪಟ್ಟ?
    • ರೇಪ್ ಕೇಸಿನಲ್ಲಿ ಕಾಂಪ್ರಮೈಸ್ ಆದರೆ ಸಂತ್ರಸ್ತೆಯ ವಿರುದ್ಧವೇ ದೂರು ದಾಖಲು - ಬಾಂಬೆ ಹೈಕೋರ್ಟ್ ಪೀಠ!
    • ದೆಹಲಿಯಲ್ಲಿ 10 ವರ್ಷ ದಾಟಿದ ಕಾರುಗಳು ಕಡಿಮೆ ದರದಲ್ಲಿ ಸಿಗಲಿವೆ! ಯಾಕ್ ಗೊತ್ತಾ?
    • ಟಾಯ್ಲೆಟಲ್ಲಿ ಮಹಿಳಾ ಉದ್ಯೋಗಿಗಳ ವಿಡಿಯೋ ರೆಕಾರ್ಡ್... ಇನ್ಫೋಸಿಸ್ ಉದ್ಯೋಗಿ ಬಂಧನ!
  • Popular Posts

    • 1
      ಗ್ಯಾರಂಟಿ ಅಥವಾ ಅಭಿವೃದ್ಧಿ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಜನರ ಮುಂದೆ ಆಯ್ಕೆ ಇಟ್ರಾ?
    • 2
      20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
    • 3
      20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
    • 4
      ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಮೇಲೆ ರಾಹುಲ್ ಗಾಂಧಿ ಫೋಟೋಗೆ ಜೆಡಿಯು-ಬಿಜೆಪಿ ವ್ಯಂಗ್ಯ!
    • 5
      ಪರಸ್ಪರ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆ ನಂತರ ರೇಪ್ ಎನ್ನಲಾಗುವುದಿಲ್ಲ - ಕೇರಳ ಹೈಕೋರ್ಟ್ ಆದೇಶ

  • Privacy Policy
  • Contact
© Tulunadu Infomedia.

Press enter/return to begin your search