• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಬಾಲಕೃಷ್ಣ ಗೌಡರು ಇಲ್ಲಿಯೇ ಮುಂದುವರೆಯುತ್ತಾರೆ ಎನ್ನುವುದೇ ಅಧ್ಯಯನ ವಿಷಯ!!

Hanumantha Kamath Posted On May 25, 2022


  • Share On Facebook
  • Tweet It

ಭ್ರಷ್ಟ ಅಧಿಕಾರಿಗಳಿಗೆ ಮಂಗಳೂರು ಎಂದರೆ ತವರು ಮನೆ ಇದ್ದ ಹಾಗೆ. ಇಲ್ಲಿ ಒಮ್ಮೆ ಯಾವುದೇ ಇಲಾಖೆ ಅಥವಾ ಪಾಲಿಕೆಯ ಯಾವುದೇ ಆಯಕಟ್ಟಿನ ಕಡೆ ಗೂಟ ಹೊಡೆದು ಕೂತರು ಎಂದರೆ ನಂತರ ಏಳಿಸಲು ಬ್ರಹ್ಮನಿಂದಲೂ ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿ ಇದೆ. ಅದರಲ್ಲಿಯೂ ಮಂಗಳೂರು ಮಹಾನಗರ ಪಾಲಿಕೆಯ ಒಂದೇ ವಿಭಾಗದಲ್ಲಿ ಮೂರು ದಶಕಗಳಿಗೂ ಮಿಕ್ಕಿ “ಸ್ವಸೇವೆ” ಮಾಡುತ್ತಾ ದಿನದೂಡುವವರು ಇದ್ದಾರೆ. ನಮ್ಮ ಪಾಲಿಕೆಯಲ್ಲಿ ನಗರ ಯೋಜನಾ ವಿಭಾಗ ಎಂದರೆ ಅದೊಂದು ರೀತಿಯ ಕುಬೇರರ ಖಜಾನೆ ಇದ್ದ ಹಾಗೆ. ಅಲ್ಲಿ ಹಣ ಕಾಲ ಬುಡಕ್ಕೆ ಬಂದು ಬೀಳುತ್ತದೆ. ಅಲ್ಲಿ ನಗರ ಯೋಜನಾ ಅಧಿಕಾರಿಯಾಗಿದ್ದರಂತೂ ಹಣದ ವಾಸನೆ ಒಂದು ಕಿಲೋ ಮೀಟರ್ ದೂರದಿಂದ ಬರುವಾಗಲೇ ಗೊತ್ತಾಗುವಷ್ಟು ಚಾಣಾಕ್ಷರು ಅಲ್ಲಿದ್ದಾರೆ. ಅವರನ್ನು ಭ್ರಷ್ಟರು ಎನ್ನುವುದು ಆ ಶಬ್ದಕ್ಕೆ ಮಾಡುವ ಅಪಮಾನ. ಕಡು ಭ್ರಷ್ಟರು ಎಂದರೇ ಶಬ್ದ ಚಿಕ್ಕದಾದೀತು. ಬಹುಶ: ಕನ್ನಡ ಶಬ್ದಕೋಶದಲ್ಲಿ ಈ ಪ್ರಮಾಣದ ಭ್ರಷ್ಟರು ಹುಟ್ಟಿಕೊಳ್ಳುತ್ತಾರೆ ಎನ್ನುವ ಐಡಿಯಾ ಆವತ್ತಿನ ಕನ್ನಡ ಪಂಡಿತರಿಗೆ ಇರಲಿಲ್ಲವೇನೋ, ಆದ್ದರಿಂದ ಅಷ್ಟು ದೊಡ್ಡ ಶಬ್ದ ಸಿಗುತ್ತಿಲ್ಲ. ಹೀಗಿರುವಾಗ ನಗರ ಯೋಜನಾ ಅಧಿಕಾರಿಯಾಗಿ, 33ವರ್ಷಗಳಿಂದ ಒಂದೇ ಕಡೆ ಇದ್ದು, ಕೊನೆಗೆ ಈಗಿನ ಆಡಳಿತ ತನ್ನ ಮಹಾನ್ ಸಾಧನೆ ಎನ್ನುವಂತೆ ವರ್ಗಾವಣೆ ಮಾಡಿದರೂ ಕೆಲವೇ ದಿನಗಳಲ್ಲಿ ಮತ್ತೆ ಅದೇ ಹುದ್ದೆಗೆ ಬಂದು ಕೂರಿರುವ ವ್ಯಕ್ತಿಯ ಸಾಧನೆ ಚಿಕ್ಕದಲ್ಲ. ಅವರು ಇದನ್ನು ಹೇಗೆ ಸಾಧ್ಯ ಮಾಡಿದರು ಎಂದು ಉಳಿದ ಅಧಿಕಾರಿಗಳು ಸ್ಟಡಿ ಮಾಡಿದರೆ ಅದೇ ಒಂದು ಕುತೂಹಲಕಾರಿ ಮಾರ್ಗದರ್ಶಿಯಾದೀತು.

ಬಾಲಕೃಷ್ಣ ಗೌಡ ಎನ್ನುವ ವ್ಯಕ್ತಿ ಮಂಗಳೂರು ಪಾಲಿಕೆಯಲ್ಲಿ ನಗರ ಯೋಜನಾ ಅಧಿಕಾರಿಯಾಗಿ 33 ವರ್ಷಗಳಿಂದ “ಸೇವೆ” ಯಲ್ಲಿದ್ದಾರೆ. ಪಾಲಿಕೆಯಲ್ಲಿ ಅಥವಾ ರಾಜ್ಯದಲ್ಲಿ ಯಾವುದೇ ಪಕ್ಷದ ಆಡಳಿತ ಬರಲಿ, ಇವರು ಇಲ್ಲಿಂದ ವರ್ಗಾವಣೆಯಾಗುವುದಿಲ್ಲ. ಇಷ್ಟೇ ವರ್ಷದ ಒಳಗೆ ವರ್ಗಾವಣೆಯಾಗಬೇಕು ಎಂದು ನಿಯಮ ಇದ್ದರೂ ಅದು ಇವರಿಗೆ ಅನ್ವಯವಾಗುವುದಿಲ್ಲ. ಇವರ ಬಗ್ಗೆ ರಾಜಕಾರಣದ ವಲಯದಲ್ಲಿ, ಅಧಿಕಾರಿ ವರ್ಗದಲ್ಲಿ ಎಂತಹ ಆರೋಪ, ಗುಸುಗುಸು ಇದ್ದರೂ ಇವರನ್ನು ಎತ್ತಂಗಡಿ ಮಾಡುವುದು ಬಿಡಿ, ಇವರ ಖುರ್ಚಿಯನ್ನು ಅಲ್ಲಾಡಿಸಲು ಕೂಡ ಇಲ್ಲಿಯ ತನಕ ಯಾರಿಗೂ ಆಗಿರಲಿಲ್ಲ. ಅಂತಹ ಬಾಲಕೃಷ್ಣ ಗೌಡರು ಇತ್ತೀಚೆಗೆ ವರ್ಗಾವಣೆ ಆದರು ಎನ್ನುವ ಸುದ್ದಿ ಹೊರಗೆ ಬಿದ್ದ ಕೂಡಲೇ ಪತ್ರಕರ್ತರು ನಾಲ್ಕೈದು ಸಲ ಖಚಿತಪಡಿಸಿಕೊಂಡೇ ಸುದ್ದಿ ಮಾಡಿದರು. ಪಾಲಿಕೆಯ ಕಂಬಗಳು ಕೂಡ ಒಮ್ಮೆ ಮೈಮುರಿದುಕೊಂಡವು. ಬೇರೆ ಅಧಿಕಾರಿಗಳು, ಪಾಲಿಕೆಯ ಹಳೆ ಸದಸ್ಯರುಗಳು, ಸಿಬ್ಬಂದಿಗಳು ತಮ್ಮೊಳಗೆ ಮಾತನಾಡಿಕೊಂಡು ಈ ಸುದ್ದಿಯನ್ನು ಜೀರ್ಣಿಸಿಕೊಳ್ಳಲಾಗದೇ ಒದ್ದಾಡಿದರು. ಆದರೆ ವಿಷಯ ನಿಜವಿತ್ತು. ಬಾಲಕೃಷ್ಣ ಗೌಡರ ಜಾಗಕ್ಕೆ ಶಂಕರ್ ಎನ್ನುವವರಿಗೆ ಅಧಿಕಾರ ಹಸ್ತಾಂತರ ಆಗಬೇಕಿತ್ತು. ಬಾಲಕೃಷ್ಣ ಗೌಡರನ್ನು ಯಾವುದೇ ನಿರ್ದಿಷ್ಟಜಾಗ ತೋರಿಸದೇ ವರ್ಗಾವಣೆ ಮಾಡಲಾಗಿತ್ತು. ಆದರೆ ಬಾಲಕೃಷ್ಣ ಗೌಡರಿಗೆ ಮಂಗಳೂರು ಸಾಕಾಗಿದ್ದರೆ ಅವರು ಖುಷಿಯಿಂದ ಎದ್ದು ಹೋಗುತ್ತಿದ್ದರು. ಆದರೆ ಸಮೃದ್ಧವಾದ ಕಾಡನ್ನು ಬಿಟ್ಟು ಹೊರಟು ಹೋದರೆ ಬೇಟೆಗಾರನಿಗೆ ಮರ್ಯಾದೆ ಉಂಟೆ? ಬಾಲಕೃಷ್ಣ ಗೌಡರು ಮಂಗಳೂರು ಪಾಲಿಕೆಯಿಂದ ಹೊರಗೆ ಹೋಗಲು ಸಿದ್ಧರಿರಲೇ ಇಲ್ಲ. ಅವರಿಗೆ ಎಲ್ಲಿಯೋ ಸ್ಕ್ರೂ ಲೂಸ್ ಆಗಿದೆ ಎಂದು ಅನಿಸಿತು. ಅದಕ್ಕೆ ಎಣ್ಣೆ ಹಾಕಿ ಟೈಟ್ ಮಾಡಿದರೆ ಇನ್ನೊಂದಿಷ್ಟು ವರ್ಷ ಹಳೆ ಫರ್ನಿಚರ್ ಬಾಳಿಕೆ ಬರುತ್ತದೆ ಎಂದು ಗೊತ್ತಿತ್ತು. ಅವರು ಆಡಳಿತ ಪಕ್ಷ, ವಿಪಕ್ಷ ಮುಖಂಡರನ್ನು ಹೋಗಿ ಭೇಟಿಯಾದರು. ಹೇಗೆ ಇಲ್ಲಿಯೇ ಉಳಿಯಬೇಕು ಎಂದು ಗೊತ್ತಿಲ್ಲದಷ್ಟು ಅಮಾಯಕರು ಅವರಲ್ಲ. ಏನು ಮಾಡಿದರೆ ಇಲ್ಲಿಯೇ ಉಳಿಯಬಹುದು ಎನ್ನುವುದನ್ನು ಅವರು 33 ವರ್ಷಗಳಲ್ಲಿ ಹಲವು ಸಲ ನೋಡಿದ್ದಾರೆ. ಅವರ ಪ್ರಯತ್ನ ಯಶಸ್ವಿಯಾಗಿತ್ತು. ಅವರು ಮತ್ತೆ ಬಂದು ಹಳೆ ಖುರ್ಚಿಯ ಮೇಲೆ ವಿರಾಜಮಾನರಾದರು.

ಇಲ್ಲಿ ಈಗ ಇರುವುದು ಒಂದು ಪ್ರಶ್ನೆ. ಮಂಗಳೂರಿಗೆ ಒಮ್ಮೆ ಪೋಸ್ಟಿಂಗ್ ಮಾಡಿಸಿಕೊಂಡ ಅಧಿಕಾರಿಗಳು ಇಲ್ಲಿಯೇ ನಿವೃತ್ತರಾಗುವ ತನಕ ಇರಲು ಯಾಕೆ ಬಯಸುತ್ತಾರೆ? ನಿವೃತ್ತರಾದ ನಂತರವೂ ಇಲ್ಲಿಯೇ ಹೇಗಾದರೂ ಮಾಡಿ ನುಸುಳಿ ಮುಂದುವರೆಯಲು ಯಾಕೆ ಇಷ್ಟ ಪಡುತ್ತಾರೆ? ಅದು ಪಾಲಿಕೆ ಮಾತ್ರವಲ್ಲ, ಪೊಲೀಸ್ ಇಲಾಖೆಯಿಂದ ಹಿಡಿದು ಬಹುತೇಕ ಸರಕಾರಿ ಕಚೇರಿಯಲ್ಲಿ ಇರುವವರಿಗೆ ಮಂಗಳೂರು ಯಾಕೆ ಇಷ್ಟ? ಇದು ಅಧ್ಯಯನ ವಿಷಯ. ಮಂಗಳೂರು ಈಗ ಅವೈಜ್ಞಾನಿಕವಾಗಿ ಬೆಳೆಯಲು ನಗರ ಯೋಜನಾ ವಿಭಾಗದ ದೊಡ್ಡ ಕೊಡುಗೆ ಇದೆ. ಈ ಟ್ರಾಫಿಕ್ ಜಾಮ್, ಪಾರ್ಕಿಂಗ್ ಅವ್ಯವಸ್ಥೆ, ಅಡ್ಡಾದಿಡ್ಡಿ ಕಟ್ಟಡಗಳ ಹಿಂದೆ ನಗರ ಯೋಜನಾ ವಿಭಾಗದ ದೊಡ್ಡ ಕೊಡುಗೆ ಇದೆ. ಆ ವಿಭಾಗದ ಅಧಿಕಾರಿಯಾಗಿದ್ದವರು ಬಾಲಕೃಷ್ಣ ಗೌಡ. ಅವರು ಮತ್ತೆ ಇಲ್ಲಿಯೇ ಮುಂದುವರೆಯಲು ಅವರಿಗೆ ಒಂದಿಷ್ಟು ಸೆಟಲ್ ಮೆಂಟಿಗೆ ಖರ್ಚಾಗಿರಬಹುದು. ಕೆಲವರೊಂದಿಗೆ ಡೀಲ್ ರಿನಿವಲ್ ಮಾಡಿರಬಹುದು. ಕೆಲವರೊಂದಿಗೆ ಸಂಬಂಧ ಹೊಸದಾಗಿ ಶುರು ಮಾಡಿಕೊಂಡಿರಬಹುದು. ಕೆಲವು ಕಡೆ ಕೈ ಬದಲಾಗಿರಬಹುದು. ಕೆಲವು ಕಡೆ ಕಮಲ ಅರಳಿರಬಹುದು!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search