• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!

Hanumantha Kamath Posted On June 24, 2022
0


0
Shares
  • Share On Facebook
  • Tweet It

ರೋಹಿತ್ ಚಕ್ರತೀರ್ಥ ದೇಶದ ಗತವೈಭವದ ಬಗ್ಗೆ ಮಾತನಾಡುತ್ತಾರೆ, ಆ ಬಗ್ಗೆ ಬರೆಯುತ್ತಾರೆ, ಹಿಂದೂ ಅರಸರ ಕೊಡುಗೆಗಳನ್ನು ನೆನಪಿಸುತ್ತಾರೆ ಎನ್ನುವ ಕಾರಣಕ್ಕೆ ಅವರನ್ನು ಬಲಪಂಥಿಯರ ಗುಂಪಿಗೆ ಸೇರಿಸಿ ಅವರಿಗೆ ಸನ್ಮಾನ ಮಾಡುವುದು ಎಷ್ಟು ಸರಿ ಎನ್ನುವುದು ಈಗ ಉದ್ಭವಿಸಿರುವ ಪ್ರಶ್ನೆ. ಮಂಗಳೂರಿನಲ್ಲಿ ಸಮಾನ ಮನಸ್ಕರು ಸೇರಿ ಚಿಂತನಾ ಗಂಗಾ ಅಡಿಯಲ್ಲಿ ರೋಹಿತ್ ಚಕ್ರತೀರ್ಥ ಅವರನ್ನು ಸನ್ಮಾನ ಮಾಡಿದರೆ ತಪ್ಪೇನು? ಅವರು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾಗಿ ಕೆಲಸ ಮಾಡಿದಾಗ ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ಹತ್ತನೇ ತರಗತಿಯ ಸಮಾಜ ವಿಜ್ಞಾನದಿಂದ ತೆಗೆದು ಕನ್ನಡ ಪಾಠದಲ್ಲಿ ಶಿಫ್ಟ್ ಮಾಡಿದ್ದಾರೆ ಎನ್ನುವುದು ಮಂಗಳೂರಿನಲ್ಲಿ ಕೆಲವರು ಮಾಡುತ್ತಿರುವ ವಾದ. ಬ್ರಹ್ಮಶ್ರೀಗಳು ಲೋಕ ಕಂಡ ಮಹಾನ್ ಸಂತರು. ಅವರು ಯಾವುದೇ ಒಂದು ಜಾತಿ, ಮತ, ಪಂಗಡಕ್ಕೆ ಸೀಮಿತರಾದವರಲ್ಲ. ಅವರ ಬಗ್ಗೆ ಅಧ್ಯಯನ ಪೀಠಗಳಿವೆ. ಅನೇಕ ಲೇಖಕರು ಪುಸ್ತಕಗಳನ್ನು ಬರೆದಿದ್ದಾರೆ. ಅವರನ್ನು ಒಂದು ಪಠ್ಯದಿಂದ ಇನ್ನೊಂದಕ್ಕೆ ಶಿಫ್ಟ್ ಮಾಡಿದರು ಎನ್ನುವುದನ್ನು ವಿವಾದ ಮಾಡಬೇಕೆನ್ನುವುದೇ ಮೊದಲ ಆದ್ಯತೆಯಾದರೆ ಬೇರೆ ಏನೂ ಹೇಳಬೇಕಾಗಿಲ್ಲ. ಯಾಕೆಂದರೆ ಈ ದೇಶದಲ್ಲಿ ಪ್ರತಿಯೊಂದನ್ನು ರಾಜಕೀಯ ದೃಷ್ಟಿಯಿಂದ ನೋಡಲಾಗುತ್ತೆ. ಅದಕ್ಕಾಗಿ ಇವರು ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಎಳೆದು ತರುತ್ತಾರೆ ಎನ್ನುವುದೇ ಗುರುಗಳ ಅಭಿಮಾನಿಗಳಿಗೆ ನೋವು ತರುವ ಸಂಗತಿ.
ಪಠ್ಯಪುಸ್ತಕ ಪರಿಷ್ಕರಣೆ ಮಾಡುವಾಗ ಆರೇಳು ತಪ್ಪುಗಳು ಆಗಿರಬಹುದು ಎನ್ನುವುದು ಓಕೆ. ಆದರೆ ಅದನ್ನೇ ಸರಕಾರ ಒಪ್ಪಿಕೊಂಡಿತು ಎಂದು ಹೇಳಿ ಅದಕ್ಕೆ ರೋಹಿತ್ ಚಕ್ರತೀರ್ಥ ಅವರನ್ನು ಗುರಿಯಾಗಿಸಿ ಪಠ್ಯಪುಸ್ತಕವನ್ನೇ ಹಿಂದೆಗೆದುಕೊಳ್ಳಬೇಕು ಎನ್ನುವುದು ಅಸಂಬದ್ಧ ಬೇಡಿಕೆ. ಹಾಗೇ ನೋಡಿದರೆ ಬರಗೂರು ಅವರು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಕಕ್ಷರಾಗಿದ್ದಾಗ ನೂರಾರು ತಪ್ಪುಗಳಾಗಿವೆ. ಹಾಗಂತ ಆಗ ಯಾರೂ ವಿರೋಧ ವ್ಯಕ್ತಪಡಿಸಿರಲಿಲ್ಲ. ಯಾಕೆಂದರೆ ಬರಗೂರು ಎಡಪಂಥಿಯರ ಚಿಂತನೆಗಳಾಗಿರುವುದನ್ನೇ ಪಠ್ಯಪುಸ್ತಕದಲ್ಲಿ ಅಳವಡಿಸಿದ್ದರು. ಮೊಗಲರನ್ನು, ಟಿಪ್ಪು ಸಹಿತ ಅನೇಕ ದಾಳಿಕೋರ ರಾಜರುಗಳನ್ನು ವೈಭವಿಕರಿಸಿದ ಪಠ್ಯ ಇವರಿಗೆ ನಡೆಯುತ್ತೆ. ಅದೇ ಕರ್ನಾಟಕದ ಅರಸರ ಬಗ್ಗೆ ಒಂದಿಷ್ಟು ವಾಕ್ಯಗಳು ಹೆಚ್ಚಾದರೆ ಇವರಿಗೆ ತಲೆಬಿಸಿಯಾಗುತ್ತದೆ. ಇನ್ನು ನಮ್ಮಲ್ಲಿ ವಾಸ್ತವ ಹೇಳಿದರೆ ತುಂಬಾ ಜನರಿಗೆ ಅದು ಕಹಿಯಾಗುತ್ತದೆ. ಇನ್ನು ಬ್ರಹ್ಮಶ್ರೀ ನಾರಾಯಣ ಗುರುಗಳ ಬಗ್ಗೆ ವಿವಾದ ಮಾಡುತ್ತಿರುವವರು ಯಾರು ಎಂದರೆ ಗುರುಗಳ ಬಗ್ಗೆ ಪ್ರೀತಿಯಿಂದಲ್ಲ, ಇದು ಕೇವಲ ರಾಜಕೀಯ ಮಾತ್ರ. ಇದರಿಂದ ತಮ್ಮ ರಾಜಕೀಯ ಬೇಳೆ ಬೇಯಬಹುದು ಎನ್ನುವ ಆಸೆ ಮಾತ್ರ ಇವರಲ್ಲಿ ಜೀವಂತವಾಗಿದೆ. ಯಾರು ಬ್ರಹ್ಮಶ್ರೀ ನಾರಾಯಣ ಗುರುಗಳ ಬಗ್ಗೆ ನಿಜವಾದ ಗೌರವವನ್ನು ಹೊಂದಿದ್ದಾರೋ ಅವರು ಇದಕ್ಕೆಲ್ಲ ಪ್ರತಿಭಟಿಸಬೇಕೆಂಬ ಮನಸ್ಥಿತಿಯನ್ನು ಹೊಂದಿಲ್ಲ. ಯಾಕೆಂದರೆ ಅವರಿಗೆಲ್ಲ ಗುರುಗಳು ಹೃದಯದಲ್ಲಿದ್ದಾರೆ. ಆದರೆ ಯಾರಿಗೆ ಗುರುಗಳಿಂದ ರಾಜಕೀಯ ಲಾಭ ಬೇಕೋ ಅವರಿಗೆ ಇದೆಲ್ಲ ಅಗತ್ಯ.
ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯ ಒಂದು ಪಠ್ಯದಿಂದ ಇನ್ನೊಂದಕ್ಕೆ ಶಿಫ್ಟ್ ಆದ ಕೂಡಲೇ ಅವರು ಚಿಕ್ಕವರೂ ಆಗುವುದಿಲ್ಲ. ಯಾಕೆಂದರೆ ಇದನ್ನೆಲ್ಲ ಮೀರಿ ಗುರುಗಳ ಶಕ್ತಿ ಇದೆ. ಅವರು ಮನುಷ್ಯ ಕುಲಕ್ಕೆ ಯಾವಾಗಲೂ ಪೂಜ್ಯರು. ಅವರನ್ನು ನಿತ್ಯ ಸ್ಮರಿಸುವ, ಪೂಜಿಸುವ ಜನರು ಈ ಹೋರಾಟದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಯಾಕೆಂದರೆ ಅವರು ಪಠ್ಯದಲ್ಲಿ ಬರುವ ಕೆಲವೇ ಸಾಲುಗಳಿಂದಲೇ ಮಕ್ಕಳಿಗೆ ಗುರುಗಳ ಬಗ್ಗೆ ಎಲ್ಲಾ ತಿಳಿಯುತ್ತೆ ಎಂಬ ಭ್ರಮೆಯಲ್ಲಿ ಇಲ್ಲ. ಅವರು ಮಕ್ಕಳಿಗೆ ಶಾಲೆಯಿಂದ ಮನೆಗೆ ಬಂದ ಬಳಿಕ ಇನ್ನಷ್ಟು ಜ್ಞಾನ ಈ ಬಗ್ಗೆ ನೀಡುತ್ತಾರೆ. ಗುರುಗಳಿಗೆ ಬಾಲ್ಯದಲ್ಲಿಯೇ ಪೂಜಿಸಲು ಕಲಿಸುತ್ತಾರೆ. ಇದ್ಯಾವುದೂ ಮಾಡದೇ ಸುದ್ದಿಗೋಷ್ಟಿ ಮಾಡಿ, ಪ್ರತಿಭಟಿಸಿ ಗುರುಗಳ ಬಗ್ಗೆ ವಿವಾದ ಮಾಡುವ ಅಗತ್ಯ ಅವರಿಗೆ ಇರುವುದಿಲ್ಲ. ಆದರೂ ಮಾಡುತ್ತಿದ್ದಾರೆ. ಯಾಕೆಂದರೆ ಚುನಾವಣೆಗೆ ಹೆಚ್ಚೆಂದರೆ 10 ತಿಂಗಳು ಮಾತ್ರ ಇರುವುದು. ಈ ಸಮಯದಲ್ಲಿ ಗುರುಗಳನ್ನು ನೆನಪಿಸಿದೇ ಇದ್ದರೆ ಲಾಭ ಪಡೆಯುವುದು ಹೇಗೆ?
ಇನ್ನು ರೋಹಿತ್ ಚಕ್ರತೀರ್ಥ ಅವರನ್ನು ಸನ್ಮಾನಿಸುವ ಬದಲಿಗೆ ಬಂಧಿಸಬೇಕು ಎಂದು ಕೆಲವರು ಹೇಳುತ್ತಿದ್ದಾರೆ. ಅವರನ್ನು ಬಂಧಿಸುವಂತಹ ತಪ್ಪು ಅವರು ಏನು ಮಾಡಿದ್ದಾರೆ? ಅವರು ಸಾರ್ವಜನಿಕ ಸ್ವತ್ತುಗಳಿಗೆ ಕಲ್ಲು ಹೊಡೆದಿದ್ದಾರಾ? ಬೆಂಕಿ ಕೊಟ್ಟಿದ್ದಾರಾ? ಅದ್ಯಾವುದೂ ಮಾಡಲಿಲ್ಲ. ಹಾಗಿರುವಾಗ ಬಂಧಿಸುವ ಅಗತ್ಯ ಏನು? ಇನ್ನು ಅವರು ದೇಶದ್ರೋಹಿಗಳ ಜೊತೆ ಕೈಜೋಡಿಸಿದ್ದಾರಾ? ಅವರು ಉಗ್ರರಾ? ಇದ್ಯಾವುದೂ ಅಲ್ಲದೇ, ಒಂದು ಪಠ್ಯಪುಸ್ತಕವನ್ನು ಪರಿಷ್ಕರಣೆ ಮಾಡಿದ್ದಕ್ಕಾಗಿ ಬಂಧಿಸುವ ಅಗತ್ಯ ಏನಿದೆ?ಇನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಸುಬ್ರಹ್ಮಣ್ಯ ಯಡಿಪತ್ತಾಯ ಅವರು ಮೊದಲು ಒಪ್ಪಿ ಆಮಂತ್ರಣ ಪತ್ರ ಬಿಡುಗಡೆಯಾದ ನಂತರ ಬರಲು ನಿರಾಕರಿಸಿದ್ದಾರೆ. ಅವರಿಗೆ ಅದ್ಯಾವ ಒತ್ತಡ ಇದೆಯೋ? ಕೆಲವರು ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಇದೆಲ್ಲವೂ ಏನನ್ನು ಸೂಚಿಸುತ್ತದೆ. ಒಟ್ಟಿನಲ್ಲಿ ಒಂದು ಕಾರ್ಯಕ್ರಮಕ್ಕೆ ಈ ರೀತಿಯಲ್ಲಿ ಪ್ರಚಾರ ಕೊಡುವ ಮೂಲಕ ಎಡಪಂಥಿಯರು ತಮ್ಮ ಬೆನ್ನನ್ನು ತಾವು ತಟ್ಟಿಕೊಳ್ಳುತ್ತಿದ್ದಾರೆ!
0
Shares
  • Share On Facebook
  • Tweet It




Trending Now
ಬಸ್ ನಲ್ಲಿ 200 ಕೆಜಿ ಸ್ಫೋಟಕ ಪತ್ತೆ! ತಪ್ಪಿದ ದೊಡ್ಡ ಸಂಚು..
Hanumantha Kamath August 26, 2025
ತಿಮರೋಡಿ ಮನೆಯಲ್ಲಿತ್ತು ಮಾಸ್ಕ್ ಮ್ಯಾನ್ ಮೊಬೈಲ್, ತಂಗುತ್ತಿದ್ದ ಕೋಣೆಯ ಸಿಸಿಟಿವಿ ಫೂಟೇಜ್ ವಶಕ್ಕೆ!
Hanumantha Kamath August 26, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಬಸ್ ನಲ್ಲಿ 200 ಕೆಜಿ ಸ್ಫೋಟಕ ಪತ್ತೆ! ತಪ್ಪಿದ ದೊಡ್ಡ ಸಂಚು..
    • ತಿಮರೋಡಿ ಮನೆಯಲ್ಲಿತ್ತು ಮಾಸ್ಕ್ ಮ್ಯಾನ್ ಮೊಬೈಲ್, ತಂಗುತ್ತಿದ್ದ ಕೋಣೆಯ ಸಿಸಿಟಿವಿ ಫೂಟೇಜ್ ವಶಕ್ಕೆ!
    • ಧರ್ಮ ಜಾಗೃತಿ ಯಾತ್ರೆ:  ದೇವರ ಅನುಗ್ರಹದಿಂದ ಸತ್ಯದ ಅನಾವರಣ - ಡಾ. ಹೆಗ್ಗಡೆ 
    • ರಾಜ್ಯ ಬೊಕ್ಕಸ ಖಾಲಿ, ಗ್ಯಾರಂಟಿಗೂ ದುಡ್ಡಿಲ್ಲ - ಸಿಎಂ ರೇವಂತ್ ರೆಡ್ಡಿ
    • ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡುವ ಬಗ್ಗೆ ಪರ - ವಿರೋಧ ಚರ್ಚೆ!
    • ತಿಮರೋಡಿ ಮನೆ ಮೇಲೆ ಬೆಳ್ಳಂಬೆಳಗ್ಗೆ SIT ದಾಳಿ.. ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಆಶ್ರಯ ನೀಡಿದ ಆರೋಪ!
    • ಬೀದಿನಾಯಿಗಳ ದಾಳಿ! ವಿದ್ಯಾರ್ಥಿನಿಯ ಮುಖಕ್ಕೆ 17 ಹೊಲಿಗೆ
    • 'ಕುಡ್ಲದ ಪಿಲಿ ಪರ್ಬ-ಸೀಸನ್ 4' ಆಮಂತ್ರಣ ಪತ್ರಿಕೆ ಬಿಡುಗಡೆ
    • ರಸ್ತೆಗೆ ಅಡ್ಡಬಂದ ನಾಯಿ- ತಪ್ಪಿಸಲು ಹೋಗಿ ಕಾರು ಪಲ್ಟಿ -ಖ್ಯಾತ ಡಿಜೆ ಮಾರ್ಮಿನ್ ಮೆಂಡೋನ್ಸಾ ನಿಧನ
    • ಮಹೇಶ್ ಶೆಟ್ಟಿ ತಿಮರೋಡಿ ವಶಕ್ಕೆ ಪಡೆಯುವ ವೇಳೆ ಪೊಲೀಸ್ ಕಾರಿಗೆ ಗುದ್ದಿದ ಮೂವರು ಅರೆಸ್ಟ್
  • Popular Posts

    • 1
      ಬಸ್ ನಲ್ಲಿ 200 ಕೆಜಿ ಸ್ಫೋಟಕ ಪತ್ತೆ! ತಪ್ಪಿದ ದೊಡ್ಡ ಸಂಚು..
    • 2
      ತಿಮರೋಡಿ ಮನೆಯಲ್ಲಿತ್ತು ಮಾಸ್ಕ್ ಮ್ಯಾನ್ ಮೊಬೈಲ್, ತಂಗುತ್ತಿದ್ದ ಕೋಣೆಯ ಸಿಸಿಟಿವಿ ಫೂಟೇಜ್ ವಶಕ್ಕೆ!
    • 3
      ಧರ್ಮ ಜಾಗೃತಿ ಯಾತ್ರೆ:  ದೇವರ ಅನುಗ್ರಹದಿಂದ ಸತ್ಯದ ಅನಾವರಣ - ಡಾ. ಹೆಗ್ಗಡೆ 
    • 4
      ರಾಜ್ಯ ಬೊಕ್ಕಸ ಖಾಲಿ, ಗ್ಯಾರಂಟಿಗೂ ದುಡ್ಡಿಲ್ಲ - ಸಿಎಂ ರೇವಂತ್ ರೆಡ್ಡಿ
    • 5
      ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡುವ ಬಗ್ಗೆ ಪರ - ವಿರೋಧ ಚರ್ಚೆ!

  • Privacy Policy
  • Contact
© Tulunadu Infomedia.

Press enter/return to begin your search