• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?

Hanumantha Kamath Posted On June 25, 2022


  • Share On Facebook
  • Tweet It

ಒಂದು ಕಾರ್ಯಕ್ರಮ ತಮಗೆ ಇಷ್ಟವಾಗದಿದ್ದರೆ ಅದರ ವಿರುದ್ಧ ಅಸಮಾಧಾನದ ಅಂಗವಾಗಿ ಕೆಲವರು ಪ್ರತಿಭಟನೆ ಮಾಡುತ್ತಾರೆ. ಕೆಲವರಿಗೆ ಜೀವನಕ್ಕೆ ಅದೇ ಆಧಾರ ಕೂಡ ಆಗಿರುತ್ತದೆ. ಆದರೆ ಪ್ರತಿಭಟನೆಯ ಹಿಂದೆ ಸತ್ಯ ವಿಚಾರ ಇರಬೇಕು. ರಾಷ್ಟ್ರೀಯವಾದಿ ಲೇಖಕ ರೋಹಿತ್ ಚಕ್ರತೀರ್ಥ ನಾಗರಿಕ ಸನ್ಮಾನದ ವಿರುದ್ಧ ಬೆರಳೆಣಿಕೆಯ ಎಡಪಂಥಿಯರು ಕೆಲವು ಬಿಲ್ಲವ ನಾಯಕರೆನಿಸಿಕೊಂಡು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಾ ಶಾಸಕರಾಗುವ ಆಸೆಯನ್ನು ತುಂಬುಕಣ್ಣಿನಿಂದ ಕಾಣುತ್ತಿರುವವರನ್ನು ಸೇರಿಸಿಕೊಂಡು ಪ್ರತಿಭಟನೆ ಮಾಡಲು ಹೊರಡುವ ಮೊದಲು ಒಮ್ಮೆ ತಮ್ಮ ಉದ್ದೇಶದ ಬಗ್ಗೆ ಖಚಿತತೆ ಇಟ್ಟುಕೊಳ್ಳಬೇಕಿತ್ತು. ಅದೇನೆಂದರೆ ತಾವು ಎಷ್ಟು ಸಚ್ಚಾರಿತ್ರ್ಯ ಹೊಂದಿರುವವರು ಎಂದು ನೋಡಬೇಕು. ಕೇರಳದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಶಿಲುಬೆಗೆ ಏರಿಸಿದ್ದ ಟ್ಯಾಬ್ಲೋವನ್ನು ಕರಾವಳಿಯ ಬಿಲ್ಲವರು ನೋಡಿದ್ದಾರೆ. ಇದರಿಂದ ಕಮ್ಯೂನಿಸ್ಟರಿಗೆ ಗುರುಗಳ ಬಗ್ಗೆ ಎಷ್ಟು ಗೌರವ ಇದೆ ಎಂದು ಗೊತ್ತಾಗುತ್ತದೆ. ಆದರೆ ಇಲ್ಲಿ ಮಾತ್ರ ಅಂತವರು ಬ್ರಹ್ಮಶ್ರೀ ನಾರಾಯಣ ಗುರುಗಳ ಮಹಾನ್ ಹಿಂಬಾಲಕರಂತೆ ಫೋಸ್ ಕೊಡುತ್ತಿರುವುದರಿಂದ ಎಡಪಂಥಿಯರ ಜೊತೆ ಬೆರಳೆಣಿಕೆಯ ಬಿಲ್ಲವರು ಬಿಟ್ಟರೆ ಬೇರೆ ಯಾರೂ ಇಲ್ಲ. ಬ್ರಹ್ಮಶ್ರೀ ನಾರಾಯಣ ಗುರುಗಳು ಬಿಲ್ಲವರಿಗೆ ಮಾತ್ರ ಪೂಜ್ಯರು ಎಂದು ತಪ್ಪು ಕಲ್ಪನೆ ಯಾರಿಗೂ ಬೇಡಾ. ಅವರು ಎಲ್ಲಾ ಸಮುದಾಯಗಳಿಂದಲೂ ಆರಾಧಿಸಲ್ಪಡುವವರು. ಅವರನ್ನು ಸಮಾಜ ವಿಜ್ಞಾನದಿಂದ ಕನ್ನಡ ಪಾಠಕ್ಕೆ ತಂದ ಬಗ್ಗೆ ಅಸಮಾಧಾನ ಇದ್ದರೆ ಅದು ರೋಹಿತ್ ಚಕ್ರತೀರ್ಥ ಅವರ ಕಾರ್ಯಕ್ರಮಕ್ಕೆ ತಾವು ಬಹಿಷ್ಕರಿಸುತ್ತೇವೆ ಎಂದು ಹೇಳಬಹುದು. ಆದರೆ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಮುತ್ತಿಗೆ ಹಾಕುವುದಾಗಿ ಕರೆ ಕೊಡುವುದು, ಅದಕ್ಕೆ ಕೆಲವರು ಮುಖಕ್ಕೆ ಮಸಿ ಬಳಿಯಬೇಕು ಎಂದು ಒಗ್ಗರಣೆ ಹಾಕುವುದು, ಇನ್ನು ಕೆಲವರು ಇದೇ ಸಮಯದಲ್ಲಿ ದುರ್ಲಾಭ ಪಡೆದು ಹಲ್ಲೆಗೆ ಸ್ಕೆಚ್ ಹಾಕುವುದು ಎಷ್ಟರ ಮಟ್ಟಿಗೆ ಪ್ರಜ್ಞಾವಂತರ ನಾಡಿನಲ್ಲಿ ಒಪ್ಪತಕ್ಕದ್ದು ಎಂದು ಪ್ರತಿಭಟನಾಕಾರರಿಗೆ ಗೊತ್ತು. ಕೇರಳದಲ್ಲಿ ಅವರದ್ದೇ ಸರಕಾರ ಇರುವುದರಿಂದ ಬಹುಶ: ಹೀಗೆ ಮಾಡುತ್ತಾರೇನೋ? ಆದರೆ ಇಲ್ಲಿ ಸರಿನಾ? ಬೆಂಗಳೂರಿನಲ್ಲಿ ಟಿಕಾಯತ್ ಮುಖಕ್ಕೆ ಮಸಿ ಬಳಿದವರು ಬಂಧಿತರಾದ ನಂತರ ತಾವು ಪ್ರಚಾರಕ್ಕಾಗಿ ಹಾಗೆ ಮಾಡಿದ್ದು ಎಂದಿದ್ದರು. ಇಲ್ಲಿ ಕೂಡ ಹೀಗೆ ಪ್ರಸಿದ್ಧರಾಗಲು ಸಂಚು ನಡೆದಿತ್ತಾ ಎನ್ನುವುದನ್ನು ಪೊಲೀಸ್ ಅಧಿಕಾರಿಗಳು ಗಮನಿಸಿದ್ದಾರೆ.

ಇನ್ನು ಪ್ರತಿಭಟನಾಕಾರರ ಮುಖ್ಯ ಟಾರ್ಗೆಟ್ ಇದ್ದದ್ದು ರೋಹಿತ್ ಚಕ್ರತೀರ್ಥ ಎನ್ನುವುದಕ್ಕಿಂತ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಎನ್ನುವುದು ಹೋರಾಟಗಾರರೆನಿಸಿಕೊಂಡವರ ರಣತಂತ್ರದಿಂದಲೇ ಸ್ಪಷ್ಟವಾಗಿತ್ತು. ಪ್ರತಿಯೊಬ್ಬರು ಸೋಶಿಯಲ್ ಮೀಡಿಯಾಗಳಲ್ಲಿ, ಎಡಪಂಥಿಯ ವಾಹಿನಿಗಳಲ್ಲಿ ಮಾತನಾಡುವಾಗ ಸ್ಪಷ್ಟ ಗುರಿ ಇಟ್ಟು ಕಲ್ಲು ಹೊಡೆದದ್ದು ವೇದವ್ಯಾಸ ಕಾಮತ್ ಅವರಿಗೆ. ಇದರ ಅರ್ಥ ಏನೆಂದು ಎಲ್ಲರಿಗೂ ಗೊತ್ತಾಗುತ್ತದೆ. ಅಷ್ಟಕ್ಕೂ ರೋಹಿತ್ ಅವರೇನೂ ಸಮಾಜದಿಂದ ಬಹಿಷ್ಕಾರಕ್ಕೆ ಗುರಿಯಾದವರಲ್ಲ. ಅವರಿಗೆ ದೇಶದಿಂದ ಗಡಿಪಾರಿನ ಶಿಕ್ಷೆ ಏನೂ ಆಗಿಲ್ಲ. ಅವರು ರಾಜ್ಯ ಸರಕಾರವೇ ನೇಮಿಸಿದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾಗಿ ಇದ್ದವರು. ಅವರು ಮೊಗಲರ, ಟಿಪ್ಪುವಿನ ಪಠ್ಯ ಕಡಿತಗೊಳಿಸಿದ್ದನ್ನು ಸಹಿಸಲಾರದೇ ಅವರ ಮೇಲೆ ಇಲ್ಲಸಲ್ಲದ ಆರೋಪ ಹಾಕುತ್ತಿರುವ ಸಿದ್ದು ಜೊತೆಗೆ ಸೇರಿರುವ ಎಡಪಂಥಿಯರು ರೋಹಿತ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಈಗ ಚಕ್ರತೀರ್ಥ ಸಮಿತಿಯಿಂದ ಆದ ಬೆರಳೆಣಿಕೆಯ ತಪ್ಪಿಗೂ, ಬರಗೂರು ಸಮಿತಿಯಿಂದ ಆದ 107 ತಪ್ಪುಗಳನ್ನು ತುಲನೆ ಮಾಡಿದರೆ ಬರಗೂರು ಉಸಿರಾಡುವುದು ಕೂಡ ತಪ್ಪಾಗುತ್ತದೆ. ಹಾಗಿರುವಾಗ ಅದ್ಯಾವುದೂ ಮಾತನಾಡದೇ ಕೇವಲ ರೋಹಿತ್ ಬಗ್ಗೆ ಮಾತ್ರ ಬೆಂಕಿ ಕಾರುವುದು ಆಶ್ಚರ್ಯವಾಗಿದೆ. ಮಂಗಳೂರಿನಲ್ಲಂತೂ ರೋಹಿತ್ ಹೆಗಲ ಮೇಲೆ ಬಂದೂಕು ಇಟ್ಟು ಶಾಸಕ ಕಾಮತ್ ಅವರನ್ನು ಶೂಟ್ ಮಾಡಿದಂತೆ ಕಾಣುತ್ತಿತ್ತು.

ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ (ರಿ) ಒಂದು ಖಾಸಗಿ ಸಂಸ್ಥೆ. ಅದು ಬಡವರಿಗೆ, ನಿರ್ಗತಿಕರಿಗೆ, ಅಸಹಾಯಕರಿಗೆ ಔಷಧ ಪಿಂಚಣಿ, ಫೀಸ್, ಮನೆ ಸಹಿತ ವಿವಿಧ ಸಹಾಯಗಳನ್ನು ಮಾಡುತ್ತಾ ಬರುತ್ತಿದೆ. ಕೊರೊನಾ ಅವಧಿಯಲ್ಲಿ ಅದರ ನಿತ್ಯ ಸೇವಾ ಚಟುವಟಿಕೆ ಬಗ್ಗೆ ಹೇಳಿದರೆ ಅದೇ ಒಂದು ಪುಟವಾದಿತು. ಈ ಟ್ರಸ್ಟ್ ಈ ಹಿಂದೆ ಸುಬ್ರಹ್ಮಣ್ಯಂ ಸ್ವಾಮಿಯವರನ್ನು ಮಂಗಳೂರಿಗೆ ಕರೆಸಿ ಸಂವಾದ ಏರ್ಪಡಿಸಿತ್ತು. ಈ ಟ್ರಸ್ಟಿಗೆ ಎರಡು ದಶಕಗಳ ಸೇವಾ ಅನುಭವವಿದೆ. ವೇದವ್ಯಾಸ ಕಾಮತ್ ಆರಂಭದಿಂದಲೂ ಇದರ ಅಧ್ಯಕ್ಷರು, ಈಗಲೂ ಅಧ್ಯಕ್ಷರು, ಮುಂದೆಯೂ ಅಧ್ಯಕ್ಷರಾಗಿ ಮುಂದುವರೆಯಬಹುದು. ಅದರಲ್ಲಿ ತಪ್ಪಿಲ್ಲ. ತಮ್ಮ ಆದಾಯದ ಪಾಲನ್ನು ಜನಸೇವೆಗೆ ಅವರು ವಿನಿಯೋಗಿಸುತ್ತಿದ್ದಾರೆ. ಎರಡು ದಶಕಗಳ ಹಿಂದಿನಿಂದಲೂ ಯಾವುದೇ ಫಲಾಪೇಕ್ಷೆ ಇಲ್ಲದೆ ದುಡಿದಿದ್ದಾರೆ. ಈಗ ಅವರು ಜನರ ಆರ್ಶೀವಾದ, ಪಕ್ಷದ ಬೆಂಬಲ, ಪಕ್ಷದ ಮುಖಂಡರ ಸಹಕಾರದಿಂದ ಶಾಸಕರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಹೆಸರು ಕೆಡಿಸಿಕೊಳ್ಳುವಂತಹ ಯಾವುದೇ ಕೆಲಸ ಅವರು ನಾಲ್ಕು ವರ್ಷಗಳಲ್ಲಿ ಮಾಡಿಲ್ಲ. ಅವರ ಮೊದಲ ಅವಧಿ ಶುದ್ಧ ಪ್ರಾಮಾಣಿಕ ನೆಲೆಯಲ್ಲಿ ಹೋಗುತ್ತಿರುವುದರಿಂದ ಪಕ್ಷ ಮತ್ತು ಜನರು ಬಯಸಿದರೆ ಅವರು ಎರಡನೇ ಅವಧಿಗೂ ಶಾಸಕರಾಗಿ ಮುಂದುವರೆಯುವುದು ಅಸಾಧ್ಯವೇನಲ್ಲ. ಆದ್ದರಿಂದ ಹೇಗಾದರೂ ಮಾಡಿ ಒಂದು ಸಣ್ಣ ಕೂದಲು ಸಿಕ್ಕಿದರೂ ಅದನ್ನೇ ಜಟೆ ಎಂದು ಸಾಬೀತು ಪಡಿಸಲು ಹೆಣಗುತ್ತಿರುವ ಪಡೆ ತಯಾರಾಗಿ ನಿಂತಿದೆ. ಅದರ ಒಂದು ಸ್ಯಾಂಪಲ್ ರೋಹಿತ್ ಕೋಪದಲ್ಲಿ ಕಾಮತ್ ಹೆಸರು ಕೆಡಿಸಲು ನೋಡಿದ್ದು ಬಿಟ್ಟರೆ ಬೇರೆ ಏನೂ ಇಲ್ಲ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search