ಮುಸ್ಲಿಮರು ಹೆಚ್ಚಿರುವ ಕಡೆ ಸಾವರ್ಕರ್ ಫೋಟೋ ಹಾಕಿದ್ದೇ ತಪ್ಪು ಎಂದ ಸಿದ್ದು!
ವಿನಾಯಕ ದಾಮೋದರ್ ಸಾವರ್ಕರ್ ರಿಗೆ ಆವತ್ತು ಬ್ರಿಟಿಷರು ಹೆದರುತ್ತಿದ್ದರು ಎನ್ನುವುದು ಇಡೀ ಜಗತ್ತಿಗೆ ಗೊತ್ತಿತ್ತು. ಒಬ್ಬ ಲೇಖಕರಾಗಿ ಸಾವರ್ಕರ್ ಅಂತಹ ಗುರುತರವಾದ ಛಾಪನ್ನು ಒತ್ತಿದ್ದರು. ಸ್ವಾತಂತ್ರ್ಯದ ಇತಿಹಾಸದಲ್ಲಿ ಒಬ್ಬ ಹೋರಾಟಗಾರನಿಗೆ ಎರಡು ಬಾರಿ ಕಾಲಿಪಾನಿಯಂತಹ ಕಠಿಣ ಶಿಕ್ಷೆ ವಿಧಿಸಿರುವುದು ಚರಿತ್ರೆಯಲ್ಲಿ ಇಲ್ಲ. ಇನ್ನು ಸಾವರ್ಕರ್ ಅವರಿಗೆ ಎಷ್ಟು ಕಷ್ಟದ ಶಿಕ್ಷೆ ನೀಡಲಾಗುತ್ತಿತ್ತು ಎಂದರೆ ಅದನ್ನು ಬೇರೆ ಯಾರಾದರೂ ಅನುಭವಿಸಿದ್ದರೆ ಹೋರಾಟವೂ ಬೇಡಾ, ಏನೂ ಬೇಡಾ ಎಂದು ತಮ್ಮ ಜೀವನ ನೋಡಿ ಸುಮ್ಮನಾಗುತ್ತಿದ್ದರು. ಆದರೆ ಸಾವರ್ಕರ್ ಹಾಗೆ ಯಾವತ್ತೂ ಯೋಚಿಸಿಲ್ಲ. ಗಾಣಕ್ಕೆ ಅವರನ್ನು ಕಟ್ಟಿ ಎಣ್ಣೆ ತೆಗೆಯುವ ಮನುಷ್ಯರಿಗೆ ಕಷ್ಟಸಾಧ್ಯವಾಗಿರುವ ಕೆಲಸಕ್ಕೆ ಬಳಸಲಾಗುತ್ತಿತ್ತು. ಅದನ್ನು ಎದುರಿಸಿ, ಸೆಲ್ಯೂಲರ್ ಜೈಲಿನಲ್ಲಿ ಇದ್ದಷ್ಟು ವರ್ಷ ಪ್ರತಿದಿನವೂ ಸಾವಿನ ಬಾಗಿಲಿನ ತನಕ ಹೋಗಿ ಬರುವುದಿದೆಯಲ್ಲ, ಅದನ್ನು ಸಾವರ್ಕರ್ ಎಂಬ ಸಾವರ್ಕರ್ ಮಾತ್ರ ಅನುಭವಿಸಲು ಸಾಧ್ಯ. ಅವರ ಇಡೀ ಕುಟುಂಬ ಸ್ವಾತಂತ್ರ್ಯ ಹೋರಾಟದಲ್ಲಿ ಇತ್ತು. ಅವರ ಅತ್ತಿಗೆ ಒಮ್ಮೆ ಇವರನ್ನು ಜೈಲಿನಲ್ಲಿ ನೋಡಲು ಬಂದಾಗ ನಮ್ಮ ಕುಟುಂಬದಲ್ಲಿ ಇನ್ನಷ್ಟು ಸಹೋದರರು ಇದ್ದರೂ ಅವರು ಕೂಡ ಸ್ವಾತಂತ್ರ್ಯ ಚಳುವಳಿಯಲ್ಲಿಯೇ ಧುಮುಕುತ್ತಿದ್ದರು ಎಂದು ಸಾವರ್ಕರ್ ಹೇಳಿದ್ದರು. ಇವರನ್ನು ಮಹಾತ್ಮ ಗಾಂಧಿಜಿಯವರ ಹತ್ಯಾ ಕೇಸಿನಲ್ಲಿ ಸಿಲುಕಿಸಲು ಎಷ್ಟೇ ಪ್ರಯತ್ನವನ್ನು ಆಗಿನ ಕಾಂಗ್ರೆಸ್ ಮಾಡಿದ್ದರೂ ಯಶಸ್ವಿಯಾಗಲಿಲ್ಲ. ಒಬ್ಬ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರೂ ಸ್ವತಂತ್ರ ಭಾರತದಲ್ಲಿ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಇವರನ್ನು ಚೆನ್ನಾಗಿ ನಡೆಸಿಕೊಳ್ಳಲಿಲ್ಲ. ಸ್ವತಂತ್ರ ಭಾರತದಲ್ಲಿಯೂ ಸಾವರ್ಕರ್ ಅವರನ್ನು ಕಾಂಗ್ರೆಸ್ ಎರಡು ಬಾರಿ ಬಂಧಿಸಿತ್ತು ಎಂದರೆ ನೀವು ಲೆಕ್ಕ ಹಾಕಿ.
ಪ್ರಧಾನಿಯಾಗಿದ್ದ ನೆಹರೂ ಅವರಿಗೆ ಸಾವರ್ಕರ್ ಅವರ ಮೇಲೆ ಎಂತಹ ರೋಷ ಇತ್ತು ಎನ್ನುವುದು ಗೊತ್ತಾಗುತ್ತದೆ. ವಿಷಯ ಇಷ್ಟೇ, ಸಾವರ್ಕರ್ ರಾಷ್ಟ್ರೀಯತೆ ಮತ್ತು ಹಿಂದೂತ್ವದ ವಿಷಯದಲ್ಲಿ ಎಂದೂ ರಾಜೀ ಮಾಡಿಕೊಳ್ಳಲಿಲ್ಲ. ಯಾರು ಎಂತಹ ರಾಜಿ ಒಪ್ಪಂದವನ್ನು ಬ್ರಿಟಿಷರೊಂದಿಗೆ ಮಾಡಿಕೊಂಡರೂ ಅಖಂಡ ಭಾರತಕ್ಕಾಗಿ ಸಾವರ್ಕರ್ ನಿಲುವು ಅಚಲವಾಗಿತ್ತು. ಹಿಂದೂಸ್ತಾನ ನಮ್ಮದು ಎಂದು ಅವರು ಕಡೆ ತನಕ ಪ್ರತಿಪಾದಿಸುತ್ತಲೇ ಬರುತ್ತಿದ್ದರು. ಅವರಿಗೆ ಸನಾತನ ಶಕ್ತಿಯ ಮೇಲೆ ನಂಬಿಕೆ ಇತ್ತು. ಆದರೆ ಕೆಲವು ತಥಾಕಥಿತ ಘೋಷಿತ ಹೋರಾಟಗಾರರೆನಿಸಿಕೊಂಡವರಿಗೆ ಸಾವರ್ಕರ್ ಅವರ ಯಾವುದಕ್ಕೆ ಬಾಗದ ನಿಲುವು ಒಪ್ಪಿತವಾಗಿರಲಿಲ್ಲ. ಅವರು ಕಟ್ಟರ್ ಹಿಂದೂತ್ವವಾದಿಯಾಗಿ ಇರುವುದು ಈಗಿನ ಜಾತ್ಯಾತೀತ ಎಂಬ ಪೊಳ್ಳು ನಾಟಕ ಆಡುವವರಿಗಂತೂ ಇಷ್ಟವೇ ಆಗುವುದಿಲ್ಲ. ಆದ್ದರಿಂದ ವೀರ ಸಾವರ್ಕರ್ ಆಗಾಗ ಸುಳ್ಳು ಜಾತ್ಯಾತೀತವಾದಿಗಳ ಗಂಟಲಲ್ಲಿ ಸಿಲುಕಿ ನುಂಗಲು ಕಷ್ಟಪಡುವಂತಾಗುತ್ತದೆ. ಒಂದು ಕಡೆ ಪ್ರಬಲ ಹಿಂದೂತ್ವವಾದಿ ಎನ್ನುವ ಕೋಪ ಕೆಲವರಿಗೆ ಇದ್ದರೆ ಅದನ್ನು ಹೇಳಿಕೊಳ್ಳಲಾಗದ ಕೆಲವರಿಗೆ ಅವರು ಬ್ರಿಟಿಷರಿಂದ ಮಾಫಿ ಕೇಳಿದವರು ಎನ್ನುವ ಸಬೂಬು. ಅವರು ಮಾಫಿ ಕೇಳಿದ್ದು ಯಾವ ಕಾರಣ, ಆಗ ಅವರ ಮುಂದಿದ್ದ ಪರಿಸ್ಥಿತಿಯ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ತಾವು ವರ್ಷಗಟ್ಟಲೆ ಜೈಲಿನಲ್ಲಿ ಇದ್ದು ಏನೂ ಹೋರಾಟ ಮಾಡಲಾಗದೇ ಇರುವುದಕ್ಕಿಂತ ಒಮ್ಮೆ ಹೊರಗೆ ಬಂದು ಭೂಗತನಾಗಿ ಇನ್ನಷ್ಟು ಹೋರಾಟವನ್ನು ಸಂಘಟಿಸುವುದು ಉತ್ತಮ ಎನ್ನುವ ಕಾರಣದಿಂದ ಅವರು ಹಾಗೆ ಮಾಡಿದ್ದರು. ಇನ್ನು ಮಾಫಿ ಸಿಕ್ಕಿದ ಮೇಲೆ ಅವರೇನು ಮನೆಯಲ್ಲಿ ಊಟ ಮಾಡಿ ಮಲಗಿರಲಿಲ್ಲ. ತಮ್ಮ ಗುರಿಯಂತೆ ಬ್ರಿಟಿಷರಿಗೆ ಚಳ್ಳೆಹಣ್ಣು ತಿನ್ನಿಸಿ ಹೋರಾಟವನ್ನು ಹೊರಗಿದ್ದು ಇನ್ನಷ್ಟು ಪರಿಣಾಮಕಾರಿಯಾಗಿ ಸಂಘಟಿಸಿದ್ದರು.
ಇದೆಲ್ಲಾ ಏನೂ ಗೊತ್ತಿಲ್ಲದ ಎಸ್ ಡಿಪಿಐ ಎಂಬ ಮತಾಂಧ ಸಂಘಟನೆಯ ರಾಜಕೀಯ ಮುಖದವರು ಸಾವರ್ಕರ್ ಒಬ್ಬ ಕಟ್ಟರ್ ಹಿಂದೂ ಎನ್ನುವ ಕಾರಣಕ್ಕೆ ಪ್ರಬಲವಾಗಿ ವಿರೋಧ ಮಾಡುತ್ತಾ ಬರುತ್ತಿದೆ. ನೇರವಾಗಿ ಸಾವರ್ಕರ್ ಅವರನ್ನು ಎದುರು ಹಾಕಿಕೊಂಡರೆ ತಮ್ಮ ಪಕ್ಷದಲ್ಲಿರುವ ಹಿಂದೂ ಮುಖಂಡರು, ಕಾರ್ಯಕರ್ತರು ಹಾಗೂ ತಮ್ಮ ಹಿಂದೂ ಮತದಾರರು ಮುನಿಸಿಕೊಂಡಾರು ಎನ್ನುವ ಕಾರಣಕ್ಕೆ ಸಿದ್ದು ತರದವರು ಹಿಂದಿನ ಬಾಗಿಲಿನಿಂದ ಮೂಲಭೂತವಾದಿ ಮುಸ್ಲಿಂ ಸಂಘಟನೆಗಳನ್ನು ಬೆಂಬಲಿಸುತ್ತಾ ಬರುತ್ತಿದ್ದಾರೆ. ಶಿವಮೊಗ್ಗದ ಮಾಲ್ ಒಂದರಲ್ಲಿ ಸಾವರ್ಕರ್ ಭಾವಚಿತ್ರ ಬೇರೆ ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿ ಹಾಕಲಾಗಿತ್ತು ಎನ್ನುವ ಕಾರಣಕ್ಕೆ ಎಸ್ ಡಿಪಿಐ ಬೆಂಬಲಿತರು ಹಿಂದೂ ಕಾರ್ಯಕರ್ತರಿಬ್ಬರಿಗೆ ಚೂರಿ ಹಾಕಿದ್ದಾರೆ. ಅಷ್ಟೇ ಅಲ್ಲ, ತಮ್ಮನ್ನು ಹಿಡಿಯಲು ಬಂದ ಪೊಲೀಸರಿಗೂ ಚಾಕು ತೋರಿಸಿದ್ದಾರೆ. ಈ ಹೊತ್ತಿನಲ್ಲಿ ಸ್ವರಕ್ಷಣೆಗೆ ಪೊಲೀಸರು ಗೋಲಿಬಾರ್ ನಡೆಸಿದಾಗ ಒಬ್ಬನ ಕಾಲಿಗೆ ಗುಂಡು ಹೊಕ್ಕಿದೆ. ಇನ್ನು ಇಂತಹ ಘಟನೆ ಶಿವಮೊಗ್ಗದಲ್ಲಿ ಮಾತ್ರವಲ್ಲ ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರ ಗ್ರಾಮ ಪಂಚಾಯತ್ ಅಂಗಳದಲ್ಲಿಯೂ ನಡೆದಿದೆ. ಅಲ್ಲಿ ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲಿ ಪರಿಸರದ ಶಾಲೆಯೊಂದರ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನೀಡುವಾಗ ಸ್ವಾತಂತ್ರ್ಯ ಹೋರಾಟಗಾರರ ಫೋಟೋಗಳ ನಡುವೆ ಸಾವರ್ಕರ್ ಫೋಟೋ ಕೂಡ ಒಂದು ಮಗು ಹಿಡಿದಿದ್ದನ್ನು ಎಸ್ ಡಿಪಿಐ ವಿವಾದ ಮಾಡಿದೆ. ಯಾಕೆಂದರೆ ಗುರುಪುರ ಗ್ರಾಮ ಪಂಚಾಯತ್ ನಲ್ಲಿ ಕಾಂಗ್ರೆಸ್-ಎಸ್ ಡಿಪಿಐ ಬೆಂಬಲಿತ ಸದಸ್ಯರು ಮೈತ್ರಿ ಆಡಳಿತ ಮಾಡುತ್ತಿದ್ದಾರೆ. ಇದು ಇಷ್ಟೇ ಆಗಿದಿದ್ದರೆ ಅವರ ತೆವಳುತನ ಎನ್ನಬಹುದಿತ್ತು. ಆದರೆ ಸಿದ್ದು ಹೀಗೆ ವಿರೋಧಿಸುವವರ ಬೆಂಬಲಕ್ಕೆ ಹೇಗೆ ನಿಂತರು ಎಂದರೆ ಮುಸ್ಲಿಂ ಬಹುಸಂಖ್ಯಾತರಾಗಿರುವ ಏರಿಯಾದಲ್ಲಿ ಸಾವರ್ಕರ್ ಫೋಟೋ ಯಾಕೆ ಹಾಕಿದ್ದು ಎಂದು ಹೇಳಿದ್ದಾರೆ. ಈ ಒಂದು ಮಾತು ಸಾಕು, ಎಸ್ ಡಿಪಿಐ ಭವಿಷ್ಯದಲ್ಲಿ ಎಷ್ಟರಮಟ್ಟಿಗೆ ಈ ದೇಶಕ್ಕೆ ರಿಸ್ಕ್ ಎಂದು ಗೊತ್ತಾಗುತ್ತದೆ. ಅದರೊಂದಿಗೆ ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂಗಳ ಕಥೆ ಏನಾಗಬಹುದು ಎನ್ನುವ ಮುನ್ಸೂಚನೆಯೂ ಸಿಗುತ್ತಿದೆ!
Leave A Reply