ವಕ್ಫ್ ಆಸ್ತಿಯನ್ನು ಬೆಳೆಯಲು ಬಿಟ್ಟು ಹಿಂದೂಗಳ ರಕ್ಷಣೆ ಎನ್ನುವ ನಾಟಕ ಯಾಕೆ?
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರದಿಂದ ನರಸಿಂಹ ರಾವ್ ಅವರ ತನಕ ಆಳಿದವರು ಮುಸ್ಲಿಮರನ್ನು ಎಷ್ಟು ಪ್ರೀತಿಸಿದರು ಎಂದರೆ ಈ ದೇಶವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಲು ಮೊಗಲರಿಗೆ ಅಥವಾ ಟಿಪ್ಪುವಿಗಿಂತ ಈ ಕಾಂಗ್ರೆಸ್ಸಿನವರಿಗೆನೆ ಹೆಚ್ಚು ಆಸಕ್ತಿ ಇದ್ದಂತೆ ಕಾಣುತ್ತಿತ್ತು. ಮೊದಲನೇಯದಾಗಿ ಈ ದೇಶ ವಿಭಜನೆಯಾದಾಗ ಅಲ್ಲಿಂದ ಇಲ್ಲಿಗೆ ಬಂದ ಅಸಂಖ್ಯಾತ ಹಿಂದೂಗಳ ಅಲ್ಲಿದ್ದ ಭೂಮಿಯನ್ನು ಪಾಕ್ ಸರಕಾರ ತನ್ನ ಸುಪರ್ದಿಗೆ ತೆಗೆದುಕೊಂಡು ಮುಸ್ಲಿಮರಿಗೆ ಹಂಚಿತ್ತು. ಅದೇ ಇಲ್ಲಿಂದ ಅಲ್ಲಿಗೆ ಹೋದ ಲಕ್ಷಾಂತರ ಮುಸ್ಲಿಮರ ಇಲ್ಲಿದ್ದ ಭೂಮಿಯನ್ನು ನೆಹರೂ ಯಾವ ಹಿಂದೂ ಕೂಡ ಮುಟ್ಟಬಾರದು ಎಂದು ಹೇಳಿದರು. ಎಲ್ಲಾ ಭೂಮಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸಿದರು. ಇವತ್ತು ದೇಶದ ಕೇಂದ್ರಿಯ ವಕ್ಫ್ ಬೋರ್ಡ್ ಬಳಿ ಸುಮಾರು 12 ಲಕ್ಷ ಕೋಟಿ ಮೌಲ್ಯದ ಜಾಗಗಳಿವೆ. ದೇಶದ ಭೂಮಿಯಲ್ಲಿ ಮೂರನೇ ಅತೀ ದೊಡ್ಡ ಶಕ್ತಿಯಾಗಿ ವಕ್ಫ್ ಬೋರ್ಡ್ ಬೆಳೆದಿದೆ. ಈ ಭೂಮಿಯನ್ನು ಬಾಡಿಗೆಗೆ ನೀಡುವ ಮೂಲಕ ದೇಶ ಮತ್ತು ರಾಜ್ಯದ ವಕ್ಫ್ ಬೋರ್ಡ್ ಗಳು ತಿಂಗಳಿಗೆ, ವರ್ಷಕ್ಕೆ ಕೋಟಿಗಟ್ಟಲೆ ರೂಪಾಯಿ ಆದಾಯವನ್ನು ಗಳಿಸುತ್ತವೆ. ಇದನ್ನು ತಮ್ಮ ಸಮುದಾಯದ ಮಕ್ಕಳ, ಮಹಿಳೆಯರ, ವ್ಯಾಪಾರಿಗಳ ಕಲ್ಯಾಣ ಕಾರ್ಯಕ್ರಮಕ್ಕೆ ಬಳಸಿಕೊಳ್ಳುತ್ತವೆ. ಈ ಮೂಲಕ ಸಮುದಾಯ ಮತ್ತಷ್ಟು ಗಟ್ಟಿಯಾಗುವಂತೆ ಮಾಡುತ್ತಿವೆ. ಅದೇ ಹಿಂದೂ ದೇವಾಲಯಗಳಲ್ಲಿ ನಾವು ಹಾಕಿದ ಕಾಣಿಕೆಗಳಿಂದ ವರ್ಷಕ್ಕೆ ಕೋಟ್ಯಾಂತರ ರೂಪಾಯಿ ಆದಾಯ ಇದ್ದರೂ ಸರಕಾರ ಹಿಂದು ದೇವಾಲಯಗಳನ್ನು ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ತಂದಿರುವುದರಿಂದ ದೇವಸ್ಥಾನಗಳ ಡಬ್ಬಿಗಳ ಹಣವನ್ನು ಹಿಂದೂಯೇತರರ ಅಭಿವೃದ್ಧಿ ಕಾರ್ಯಗಳಿಗೂ ಬಳಸಲು ಹಿಂಜರಿಯುವುದಿಲ್ಲ. ಇದರಿಂದ ಮತ್ತೆ ಹಿಂದೂಗಳಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಯಾವ ಆಯಾಮದಲ್ಲಿ ನೋಡಿದರೂ ಹಿಂದೂಗಳಿಗೆ ಅನ್ಯಾಯವೇ ಆಗುತ್ತಿದೆ. ಇನ್ನು ಪ್ರತಿ ವಕ್ಫ್ ಬೋರ್ಡಿಗೆ ಒಬ್ಬರು ಸರ್ವೇಯರ್ ಇದ್ದು, ವಕ್ಫ್ ಕಾನೂನಿನ ನಾಲ್ಕನೇ ಪಾಯಿಂಟ್ ಪ್ರಕಾರ ಅವರಿಗೆ ಅನಿಯಮಿತ ಸ್ವಾತಂತ್ರ್ಯವನ್ನು ನೀಡಲಾಗಿದೆ. ಅವರಿಗೆ ಒಂದು ಭೂಮಿ ವಕ್ಫ್ ಆಸ್ತಿ ಎನ್ನುವ ಸಂಶಯ ಬಂದರೆ ಅವರು ಅದರ ಮಾಲೀಕರಿಗೆ ತಕ್ಷಣ ನೋಟಿಸು ನೀಡಬಹುದು. ಇಂತಹ ಅನೇಕ ಉದಾಹರಣೆಗಳು ರಾಷ್ಟ್ರ ಮತ್ತು ರಾಜ್ಯದಲ್ಲಿದೆ.
ಇತ್ತೀಚೆಗೆ ವಿಜಯಪುರ ಜಿಲ್ಲೆಯಲ್ಲಿ ಪೊಲೀಸ್ ಹೆಡ್ ಕ್ವಾಟ್ರಸ್ ಇರುವ ಭೂಮಿ ವಕ್ಫ್ ಆಸ್ತಿ ಎಂದು ಪೊಲೀಸ್ ವರಿಷ್ಟಾಧಿಕಾರಿಗಳಿಗೆ ನೋಟಿಸು ಕೊಟ್ಟಿರುವಂತಹ ಪ್ರಕರಣ ಕೂಡ ನಡೆದಿರುತ್ತದೆ. ಇನ್ನು ಹಿಂದೂ ದೇವಾಲಯವೊಂದು ಇರುವ ಭೂಮಿಯಲ್ಲಿ ಮುಸ್ಲಿಮರ ಯಾವುದೋ ಹಳೆ ಪಳೆಯುಳಿಕೆಯೊಂದು ಪತ್ತೆಯಾಯಿತು ಎನ್ನುವ ಕಾರಣಕ್ಕೆ ಇಡೀ ದೇವಸ್ಥಾನದ ಸುತ್ತಮುತ್ತಲಿನ ಇರುವ ಎಷ್ಟೋ ಎಕರೆ ಭೂಮಿ ವಕ್ಫ್ ಮಂಡಳಿಗೆ ಸೇರಿದ್ದು ಎಂದು ನೋಟಿಸು ನೀಡಲಾಗಿದೆ. ಹೀಗೆ ಯಾವ ದೃಷ್ಟಿಯಲ್ಲಿ ನೋಡಿದರೂ ಇಲ್ಲಿಯೂ ಹಿಂದೂಗಳ ಭಾವನೆಗಳಿಗೆ ದಕ್ಕೆ ತರುವ ಕೆಲಸ ನಡೆದಿದೆ. ಹಾಗಂತ ನೀವು ನಮ್ಮ ಭೂಮಿಯನ್ನು ಹೇಗೆ ಕೇಳಿದ್ದಿರಿ ಎಂದು ವಕ್ಫ್ ಬೋರ್ಡ್ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಹತ್ತುವಂತಿಲ್ಲ. ಯಾಕೆಂದರೆ ಇಂತಹ ಪ್ರಕರಣಗಳನ್ನು ವಕ್ಫ್ ಟ್ರಿಬ್ಯುನಲ್ ನಲ್ಲಿಯೇ ಪರಿಹರಿಸಿಕೊಳ್ಳಬೇಕು. ಇನ್ನು ಈ ಟ್ರಿಬ್ಯುನಲ್ ನಲ್ಲಿ ಇರುವವರು ಯಾರು? ಅದೇ ಸಮುದಾಯದ ಹಿರಿಯರು. ಸರ್ವೇಯರ್ ಒಂದು ಜಾಗ ವಕ್ಫ್ ಬೋರ್ಡಿನದ್ದು ಎಂದು ನೋಟಿಸು ಕೊಟ್ಟ ಮೇಲೆ ಟ್ರಿಬ್ಯುನಲ್ ಅಲ್ಲ ಎಂದು ಹೇಳಿ ಅದನ್ನು ಹಿಂದೂ ಮಾಲೀಕರಿಗೆ ಕೊಡುವುದನ್ನು ಎಷ್ಟು ಶೇಕಡಾ ನಂಬಬಹುದು. ಇನ್ನು ಈ ಟ್ರಿಬ್ಯುನಲ್ ಒಂದು ಕೇಂದ್ರ ಸ್ಥಾನ ಅಂದರೆ ದೆಹಲಿಯಲ್ಲಿ ಇದ್ದರೆ ಉಳಿದ ರಾಜ್ಯದ ಟ್ರಿಬ್ಯುನಲ್ ಗಳು ರಾಜ್ಯದ ರಾಜಧಾನಿಗಳಲ್ಲಿವೆ. ನೀವು ಈ ಬಗ್ಗೆ ಹೋರಾಟ ಮಾಡಬೇಕಾದರೆ ರಾಜಧಾನಿಗೆ ಹೋಗಿ ಬರುವ ತಂಗುವ ಖರ್ಚು, ಸಮಯ, ಶ್ರಮ ಎಲ್ಲವನ್ನು ಕೊಡುವವರು ಯಾರು? ಹೀಗೆ ವಕ್ಫ್ ಬೋರ್ಡ್ ಎನ್ನುವುದು ಈ ದೇಶದ ಬಹುಸಂಖ್ಯಾತರಿಗೆ ವಿರುದ್ಧವಾಗಿದ್ದರೂ ಇದರ ವಿರುದ್ಧ ಯಾವ ಸರಕಾರಗಳು ಕೂಡ ಕ್ರಮ ತೆಗೆದುಕೊಂಡಿಲ್ಲ. ಆದರೆ ಭಾರತೀಯ ಜನತಾ ಪಾರ್ಟಿ ವಿಪಕ್ಷದಲ್ಲಿದ್ದಾಗ ವಕ್ಫ್ ಆಸ್ತಿಯನ್ನು ಕಾಂಗ್ರೆಸ್ ಮುಖಂಡರು ನುಂಗಿದ್ದಾರೆ. ನಾವು ಅಧಿಕಾರಕ್ಕೆ ಬಂದ ಬಳಿಕ ಅದನ್ನು ತನಿಖೆ ಮಾಡುತ್ತೇವೆ ಎಂದು ಹೋರಾಟ ಆರಂಭಿಸಿತು. ಅವರದ್ದೇ ಪಕ್ಷದ ಮುಖಂಡರಾದ ಅನ್ವರ್ ಮಾಣಿಪ್ಪಾಡಿಯವರು ತಿಂಗಳುಗಟ್ಟಲೆ ಸಂಶೋಧನೆ ಮಾಡಿ ವರದಿಯನ್ನು ತಯಾರಿಸಿದರು. ಸಾಕಷ್ಟು ಬೆದರಿಕೆಗಳು ಬಂದರೂ ಅವರು ಕುಗ್ಗದೆ ಈ ಬಿಜೆಪಿಯವರನ್ನು ನಂಬಿ ಕೆಲಸ ಮಾಡಿದರು. ಆದರೆ ಅಧಿಕಾರಕ್ಕೆ ಬಂದ ನಂತರ ಈ ಮಾಣಿಪ್ಪಾಡಿ ವರದಿಯನ್ನು ಬಿಜೆಪಿ ಕಸದ ಬುಟ್ಟಿಗೆ ಬಿಸಾಡಿತು. ನಿಮಗೆ ಎಷ್ಟು ಕೋಟಿ ಬೇಕು ಎಂದು ಮಾಜಿ ಸಿಎಂ ಒಬ್ಬರ ಸುಪುತ್ರ ಕೇಳಿದ್ದ ಎಂದು ಇದೇ ಮಾಣಿಪ್ಪಾಡಿ ಬಹಿರಂಗವಾಗಿ ಹೇಳಿದ ಘಟನೆ ಕೂಡ ನಡೆಯಿತು. ಈಗ ತಮ್ಮ ಅಧಿಕಾರಾವಧಿಯ ಕೊನೆಯ ಅಧಿವೇಶನದಲ್ಲಿ ನಾನು ಚಿವುಟಿದಂತೆ ಮಾಡುತ್ತೇನೆ, ನೀನು ಅತ್ತಂತೆ ಮಾಡು ಎಂದು ಬಿಜೆಪಿ ಸರಕಾರ ವಿಪಕ್ಷದ ಎದುರು ನಾಟಕ ಮಾಡಿದ್ದು ಬಿಟ್ಟರೆ ಮತ್ತೆ ಏನೂ ಆಗಿಲ್ಲ. ಹಿಂದೂಗಳಿಗೆ ಅನ್ಯಾಯವಾಗುವಂತಹ, ಮುಸ್ಲಿಮರಲ್ಲಿಯೂ ಕೆಲವು ರಾಜಕಾರಣಿಗಳು ಮಾತ್ರ ಬೆಳೆಯಲು ಅವಕಾಶ ಇರುವಂತಹ ಈ ವಕ್ಫ್ ಬೋರ್ಡಿಗೆ ಒಂದು ಗತಿ ಕಾಣಿಸಲು ಕಾಂಗ್ರೆಸ್ ಯಾವತ್ತೂ ಮುಂದಾಗಲ್ಲ. ಬಿಜೆಪಿ ಸರಕಾರವೂ ಇಷ್ಟೆನಾ ಎಂದು ಎಲ್ಲಾ ಕಡೆ ಅನಿಸಲು ಶುರುವಾಗಿದೆ.
Leave A Reply