ದೇವಸ್ಥಾನಗಳಲ್ಲಿ ಬಾಂಬ್ ಸ್ಫೋಟದ ಸಂಚಿನ ಹಿಂದೆ!!
ಭಯೋತ್ಪಾದನೆಗೆ ಧರ್ಮವಿಲ್ಲ. ಆದರೆ ಭಯೋತ್ಪಾದಕರು ಒಂದೇ ಧರ್ಮದವರನ್ನು ಗುರಿಯಾಗಿ ಕೊಲ್ಲುತ್ತಿದ್ದಾರಲ್ಲ. ಅದನ್ನು ಏನು ಹೇಳುವುದು. ಹಿಂದೂಗಳೇ ಹೆಚ್ಚಿರುವ ಪ್ರದೇಶದಲ್ಲಿ ಬಾಂಬ್ ಗಳನ್ನು ಇಟ್ಟು ಸಿಡಿಸುವ ಉದ್ದೇಶದಿಂದ ಕೊಯಮುತ್ತೂರಿಗೆ ಬಂದಿದ್ವಿ ಎಂದು ಸೆರೆಸಿಕ್ಕ ಭಯೋತ್ಪಾದಕ ಜಮೇಶಾ ಮುಬೀನ್ ನನ್ನು ತೀವ್ರ ತನಿಖೆಗೆ ಒಳಪಡಿಸಿದಾಗ ಅವನು ಬಾಯಿಬಿಟ್ಟಿದ್ದಾನೆ. ಆರು ದೇವಸ್ಥಾನಗಳಲ್ಲಿ ಬಾಂಬ್ ಇಟ್ಟು ಹಿಂದೂಗಳ ಪ್ರಾಣ ತೆಗೆಯಲು ಸಂಚು ಹೂಡಿರುವ ಬಗ್ಗೆ ಅವನು ಹೇಳಿದ್ದಾನೆ. ಇನ್ನು ಅವನ ಅಡಗುತಾಣವನ್ನು ಶೋಧಿಸಿದಾಗ ಅಲ್ಲಿ ಕಾಫೀರರನ್ನು ಯಾವುದೇ ಕಾರಣಕ್ಕೂ ಬಿಡಬೇಡಿ ಎನ್ನುವ ಅರ್ಥದ ಸಂದೇಶಗಳು ಸಿಕ್ಕಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಹಾಗಾದರೆ ಭಾರತದಲ್ಲಿ ಆಗುತ್ತಿರುವುದು ಏನು? ಅಷ್ಟಕ್ಕೂ ಅಲ್ಲಿನ ಮುಖ್ಯಮಂತ್ರಿ ಸ್ಟಾಲಿನ್ ಈ ಕುರಿತು ಉನ್ನತ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಹೇಳಿ ಕೇಳಿ ತಮಿಳುನಾಡು ಅಪ್ಪಟ ದ್ರಾವಿಡ ನೆಲ. ಅಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬರುವುದು ಕಷ್ಟವಿದ್ದರೂ ದೇವರ ವಿಷಯದಲ್ಲಿ ತಮಿಳರು ಅಪಾರ ಶ್ರದ್ಧೆಯನ್ನು ಹೊಂದಿದ್ದಾರೆ. ಇಂತಹ ಸ್ಥಳಗಳಲ್ಲಿ ಭಯೋತ್ಪಾದಕರು ದಾಳಿಗೆ ಷಡ್ಯಂತ್ರ ಹೂಡುವ ಮೂಲಕ ದೇಶದಲ್ಲಿ ಆಂತರಿಕ ಭದ್ರತೆಗೆ ದಕ್ಕೆ ತರುವ ಕೆಲಸ ಮಾಡಲು ಸಂಚು ಹೂಡಿದ್ದಾರೆ. ಈಗ ಒಂದು ವೇಳೆ ತಮಿಳುನಾಡಿನಲ್ಲಿ ಬಾಂಬ್ ಗಳು ಯದ್ವಾತದ್ವಾ ಸಿಡಿದು ಹಿಂದೂಗಳ ಮಾರಣ ಹೋಮ ನಡೆದರೆ ಏನಾಗುತ್ತದೆ? ಅಲ್ಲಿನ ಸರಕಾರ ಒಂದು ನಿಮಿಷವೂ ತಡ ಮಾಡದೇ ಇದಕ್ಕೆ ಕೇಂದ್ರಿಯ ಗುಪ್ತಚರ ವಿಭಾಗ ವೈಫಲ್ಯವಾಗಿದೆ ಎನ್ನುತ್ತವೆ. ನಮ್ಮ ರಾಜ್ಯದಲ್ಲಿ ಹೀಗೆ ಬಾಂಬ್ ದಾಳಿಯಾಗಲು ಕೇಂದ್ರದ ವೈಫಲ್ಯವೇ ಕಾರಣ ಎಂದು ಬೊಬ್ಬೆ ಹೊಡೆಯುತ್ತವೆ. ತಮಿಳುನಾಡು ಸರಕಾರಕ್ಕೆ ಈ ವಿಷಯದಲ್ಲಿ ಕೇರಳ, ತೆಲಂಗಾಣ, ಪಶ್ಚಿಮ ಬಂಗಾಲ, ದೆಹಲಿ, ಪಂಜಾಬ್, ಚತ್ತೀಸಗಡ್ ಸಹಿತ ಕೆಲವು ಪಕ್ಷಗಳ ಸರಕಾರ ಇರುವ ರಾಜ್ಯಗಳು ಬೆಂಬಲಕ್ಕೆ ಬರುತ್ತವೆ. ನೆನಪಿಡಿ, ಕೇರಳದಲ್ಲಿ ಪಿಣರಾಯಿ ವಿಜಯನ್, ಪಶ್ಚಿಮ ಬಂಗಾಲದಲ್ಲಿ ಮಮತಾ ಬ್ಯಾನರ್ಜಿ, ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್, ಪಂಜಾಬ್ ನಲ್ಲಿ ಭಗವಂತ ಮಾನ್, ಚತ್ತೀಸ್ ಗಡದಲ್ಲಿ ಭೂಪೇಶ್ ಬಾಗೆಲ್, ಜಾರ್ಖಂಡ್ ನಲ್ಲಿ ಹೇಮಂತ್ ಸೋರೇನ್ ಎಲ್ಲರೂ ಹಿಂದೂಗಳು. ಅವರು ಕೂಡ ಈ ಭಯೋತ್ಪಾದಕರ ವಿರುದ್ಧವಾಗಿ ಮಾತನಾಡುವುದಕ್ಕಿಂತ ಹೆಚ್ಚಾಗಿ ಕೇಂದ್ರದ ಮೋದಿ ಸರಕಾರದ ವಿರುದ್ಧ ಮಾತನಾಡುತ್ತಾರೆ. ಇದರಿಂದ ಎಲ್ಲಿಯೋ ಒಂದು ಸಲ ನಮಗೆ ಬರುವ ಸಂಶಯ ಏನೆಂದರೆ ಮೋದಿಯೇ ಬಾಂಬ್ ಇಟ್ಟಂತೆ ಇವರೆಲ್ಲಾ ಯಾಕೆ ಮಾತನಾಡುತ್ತಾರೆ?
ಯಾಕೆಂದರೆ ಭಯೋತ್ಪಾದಕರಿಗೆ ಬೈದರೆ ಮುಸ್ಲಿಮರಿಗೆ ಬೈದಂತೆ ಆಗುತ್ತದೆ ಎಂದು ಇವರೆಲ್ಲ ಅಂದುಕೊಂಡಿದ್ದಾರೆ. ಭಯೋತ್ಪಾದಕರಿಗೆ ಧರ್ಮ ಇಲ್ಲ ಎಂದು ಯಾರು ಎಷ್ಟೇ ಹೇಳಿದರೂ ಅವರು ಕೊಲ್ಲುತ್ತಿರುವುದು ಹಿಂದೂಗಳನ್ನಲ್ವಾ? ಹಾಗಾದರೆ ಯಾವ ಕಾರಣಕ್ಕೆ ನಮ್ಮನ್ನು ಕೊಲ್ಲುತ್ತಿದ್ದಾರೆ. ಕಾರಣ ಈ ಪ್ರಪಂಚದಲ್ಲಿ ಇಸ್ಲಾಂ ಮಾತ್ರ ಇರಬೇಕು ಎನ್ನುವ ಧೋರಣೆ. ನಾವೆಲ್ಲ ಒಂದೋ ಮುಸ್ಲಿಂ ಆಗಬೇಕು ಅಥವಾ ನಾವು ಸಾಯಬೇಕು. ಇದು ಮಾತ್ರ ನಮ್ಮ ಮುಂದಿರುವ ಸವಾಲು. ಆದರೆ ನಾವು ಈ ಕುರಿತು ಗಂಭೀರವಾಗಿ ಪಕ್ಷ ರಾಜಕೀಯದಲ್ಲಿ ತೊಡಗಿದ್ದೇವೆ. ನಾವು ಬದುಕಿ ಉಳಿದರೆ ಮಾತ್ರ ಪಕ್ಷ, ಅಧಿಕಾರ ಅಲ್ಲವೇ? ಇಲ್ಲದಿದ್ದರೆ ಖಬರಸ್ತಾನದಲ್ಲಿ ಮಲಗುವ ಅವಕಾಶ ಸಿಗುವುದು. ಇದನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುವುದು ಯಾವಾಗ? ಇದನ್ನು ಹೀಗೆ ನಿರ್ಲಕ್ಷ್ಯ ಮಾಡಿದರೆ ದೇಶದ ದೇವಸ್ಥಾನಗಳಲ್ಲಿ ಜಾತ್ರೆಗಳು ಸೇರುವಾಗ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಯಾಕೆಂದರೆ ಭಯೋತ್ಪಾದಕರು ಒಂದು ದೇವಸ್ಥಾನದಲ್ಲಿ ಬಾಂಬ್ ಇಟ್ಟು ಸ್ಫೋಟಿಸುವುದರಲ್ಲಿ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ದೇವಸ್ಥಾನದ ಜಾತ್ರೆಗಳಲ್ಲಿ ಜನ ಸೇರುವುದು ಕಡಿಮೆಯಾಗುತ್ತದೆ. ಯಾವಾಗ ದೇವಸ್ಥಾನಗಳಲ್ಲಿ ಜನ ಸೇರುವುದು ಕಡಿಮೆಯಾಗುತ್ತೋ ಅಲ್ಲಿ ಆರ್ಥಿಕ ವ್ಯವಹಾರಗಳು ಕ್ಷೀಣಿಸುತ್ತಾ ಹೋಗುತ್ತದೆ. ಇದನ್ನೇ ಭಯೋತ್ಪಾದಕರು ಬಯಸುತ್ತಿದ್ದಾರೆ. ಅವರಿಗೆ ಇದಕ್ಕಾಗಿ ಫಂಡ್ ಬರುತ್ತದೆ. ಈಗ ಕೇಂದ್ರದಲ್ಲಿ ನರೇಂದ್ರ ಮೋದಿಯವರ ಸರಕಾರ ಇರುವುದರಿಂದ ಭಯೋತ್ಪಾದಕರು ಬಾಲ ಬಿಚ್ಚಲು ಹೆದರುತ್ತಾರೆ. ಅದೇ ಸರಕಾರಗಳು ಬೇರೆ ಇದ್ದಿದ್ದರೆ, ಭಯೋತ್ಪಾದಕರು ಸಿಕ್ಕಿಬಿದ್ದರೆ ಅವರು ನಮ್ಮ ಬ್ರದರ್ ಗಳು ಎಂದು ಹೇಳುವ ರಾಜಕೀಯ ಪಕ್ಷಗಳ ಮುಖಂಡರು ನಮ್ಮ ರಾಜ್ಯದಲ್ಲಿದ್ದಾರೆ!
Leave A Reply