ಉಗ್ರ ಇದ್ದರೂ ಲಕ್ಷ, ಸತ್ತರೂ ಲಕ್ಷ!!
ಈ ಮೊಹಮ್ಮದ್ ಶಾರೀಕ್ ಈಗ ಆಸ್ಪತ್ರೆಯಲ್ಲಿದ್ದಾನೆ. ಗುಣಮುಖನಾದ ನಂತರ ಜೈಲು ಸೇರುತ್ತಾನೆ. ಅಲ್ಲಿ ಅವನೊಂದಿಗೆ ಅನೇಕ ಶಂಕಿತ ಉಗ್ರರು, ಬೇರೆ ಬೇರೆ ಬಾಂಬ್ ಸ್ಫೋಟಗಳಲ್ಲಿ ಸಿಲುಕಿಬಿದ್ದಂತಹ ಉಗ್ರಗಾಮಿಗಳು ಇರುತ್ತಾರೆ. ಇವನು ಅವರ ಗ್ರೂಪಿನಲ್ಲಿ ಸೇರಿಕೊಳ್ಳುತ್ತಾನೆ. ಆ ಮೂಲಕ ಭಾರತ ದೇಶವನ್ನು ಇಸ್ಲಾಂ ಮಾಡಬೇಕೆನ್ನುವ ಕೆಲವು ಮೂಲಭೂತವಾದಿಗಳ ತಂಡದಲ್ಲಿ ಸ್ಥಾನ ಪಡೆದುಕೊಳ್ಳುತ್ತಾನೆ. ಅಲ್ಲಿಗೆ ಅವನ ಲೆವೆಲ್ ಮುಂದಿನ ಹಂತಕ್ಕೆ ಹೋಗುತ್ತಾನೆ. ಜೈಲಿನ ಒಳಗೆ ಅವನಿಗೆ ತಾನು ದೇಶದ್ರೋಹ ಚಟುವಟಿಕೆಯಲ್ಲಿ ಸಿಕ್ಕಿಬಿದ್ದಿರುವ ಉಗ್ರ ಎನ್ನುವುದು ಮರೆತು ಹೋಗಿರುತ್ತದೆ. ಯಾಕೆಂದರೆ ಅವನಿಗೆ ಅಲ್ಲಿ ಒಳಗೆ ಅಷ್ಟು ವ್ಯವಸ್ಥೆಗಳು ಇರುತ್ತವೆ. ಉಗ್ರರು ತಮ್ಮ ಅಡುಗೆಯನ್ನು ತಾವೇ ಮಾಡಿಕೊಳ್ಳುವ ಮಟ್ಟಿಗೆ ಬೆಳೆದಿದ್ದಾರೆ. ರುಚಿರುಚಿಯಾದ ಅಡುಗೆಯನ್ನು ಮಾಡುತ್ತಾರೆ. ಇನ್ನು ಒಳಗೆ ಫ್ರಿಡ್ಜ್ ಕೂಡ ತಂದಿಟ್ಟುಕೊಂಡಿದ್ದಾರೆ. ಅದರಲ್ಲಿ ತಮಗೆ ಬೇಕಾದ ತಿಂಡಿ, ತಿನಿಸುಗಳನ್ನು ಶೇಖರಿಸಿಟ್ಟುಕೊಂಡಿದ್ದಾರೆ. ಇನ್ನು ಹೊಟ್ಟೆ ತುಂಬಿದ ನಂತರ ನೆನಪಾಗುವುದು ಧರ್ಮ. ಜೈಲಿನೊಳಗೆ ಒಂದು ಪುಟ್ಟ ಮಸೀದಿಯನ್ನು ಕೂಡ ಕಟ್ಟಿಸಿಕೊಂಡಿದ್ದಾರೆ. ಆ ಮಸೀದಿಯೊಳಗೆ ಕಾಲಕಾಲಕ್ಕೆ ನಮಾಜು ಕೂಡ ಮಾಡಿಕೊಳ್ಳುತ್ತಾರೆ. ಊಟ, ಪ್ರಾರ್ಥನೆಯ ನಂತರ ಮನುಷ್ಯ ಬಯಸುವುದು ಕುಟುಂಬದವರೊಂದಿಗೆ ಮಾತನಾಡೋಣ ಎಂದು ತಾನೆ? ಅದಕ್ಕೂ ಜೈಲಿನೊಳಗೆ ವ್ಯವಸ್ಥೆ ಇದೆ. ಅಲ್ಲಿ ಫೋನ್ ಕೂಡ ಸರಬರಾಜು ಮಾಡಲಾಗುತ್ತದೆ. ಇದರಿಂದ ಉಗ್ರಗಾಮಿಗಳಿಗೆ ಮನೆಯವರಿಂದ ದೂರ ಇದ್ದೇನೆ ಎನ್ನುವ ಭಾವನೆಯೂ ಬರುವುದಿಲ್ಲ. ಇದರೊಂದಿಗೆ ಜೈಲಿನ ಹೊರಗೆ ಇರುವ ಉಗ್ರಗಾಮಿಗಳ ಮನೆಯವರು ಕೂಡ ಖುಷಿ ಖುಷಿಯಾಗಿರುತ್ತಾರೆ. ಯಾಕೆಂದರೆ ಅವರ ಬ್ಯಾಂಕ್ ಅಕೌಂಟಿಗೆ ಲಕ್ಷಾಂತರ ರೂಪಾಯಿ ಹರಿದು ಬರುತ್ತದೆ. ಅದು ಶಾರೀಕ್ ಪ್ರಕರಣದಲ್ಲಿಯೂ ಆಗಿದೆ. ಶಾರೀಕ್ ತಂಗಿಯಂದಿರ ಅಕೌಂಟಿಗೆ ಹಣ ಸಾಕಷ್ಟು ಜಮೆಯಾಗಿದೆ. ಆದರೆ ಶಾರೀಕ್ ಎಷ್ಟು ದಿನ ಒಳಗಿರಲಿ, ಬಿಡಲಿ ಅವರಿಗೇನು ಬಿದ್ದು ಹೋಗುವುದಿಲ್ಲ. ಆತ ಒಂದು ರೀತಿಯಲ್ಲಿ ಹರಕೆಯ ಕುರಿ ಇದ್ದ ಹಾಗೆ. ಇಂತಹ ಎಷ್ಟೋ ಯುವಕರು ಯಾರದ್ದೋ ಮೈಂಡ್ ವಾಶಿಗೆ ಒಳಗಾಗಿ ಭಾರತವನ್ನು ಇಸ್ಲಾಂ ರಾಷ್ಟ್ರಮಾಡಲು ಹೊರಟುಬಿಡುತ್ತಾರೆ. ಅದರಿಂದ ಅವರು ತಮ್ಮ ಧರ್ಮಕ್ಕೂ ಒಳ್ಳೆಯದು ಮಾಡಲು ಸಾಧ್ಯವಿಲ್ಲ. ಅದೇ ರೀತಿಯಲ್ಲಿ ಬೇರೆ ಧರ್ಮಕ್ಕೂ ಹಾನಿ ಮಾಡಲು ಆಗುವುದಿಲ್ಲ. ಇದ್ಯಾವುದೂ ಅವರ ತಲೆಗೆ ಹೋಗಲ್ಲ. ಅವರ ಎದುರಿಗಿರುವ ಗುರಿ ಒಂದೇ. ಇಸ್ಲಾಂ ಮತವನ್ನು ಬೆಳೆಸುವುದು ಮತ್ತು ಹಿಂದೂ ಧರ್ಮವನ್ನು ತುಳಿಯುವುದು ಮತ್ತು ಭಾರತವನ್ನು ಇಸ್ಲಾಮೀಕರಣ ಮಾಡುವುದು.
ಹಾಗಾದರೆ ಇದನ್ನು ತಡೆಯುವುದು ಹೇಗೆ? ಮೊದಲನೇಯದಾಗಿ ಭಾರತದ ಜೈಲುಗಳಲ್ಲಿ ಅವರಿಗೆ ಜೈಲಿನ ಭಾವನೆ ಬರುವಂತೆ ಟ್ರೀಟ್ ಮಾಡಬೇಕು. ಅವರನ್ನು ಉಗ್ರಗಾಮಿಗಳ ರೂಪದಲ್ಲಿಯೇ ನೋಡಬೇಕು. ಈ ದೇಶದಲ್ಲಿ ವಿಧ್ವಂಸಕ ಕೃತ್ಯ ಮಾಡಲು ಬಂದಿರುವ ದೇಶದ್ರೋಹಿಗಳ ರೀತಿಯಲ್ಲಿಯೇ ಅವರಿಗೆ ಪೊಲೀಸರು ತಮ್ಮದೇ ಶೈಲಿಯ ಚಿಕಿತ್ಸೆ ನೀಡಬೇಕು. ದೇಶದ್ರೋಹದ ವಿಷಯದಲ್ಲಿ ಯಾವುದೇ ದಾಕ್ಷಿಣ್ಯ ತೋರಬಾರದು. ಭಾರತವನ್ನು ತುಂಡರಿಸುತ್ತೇನೆ, ಮನುವಾದಿಗಳನ್ನು ಕೊಲ್ಲುತ್ತೇನೆ ಎನ್ನುವ ಅರ್ಥದ ಬರಹಗಳನ್ನು ಆತ ಗೋಡೆಯಲ್ಲಿ ಬರೆದ ಎಂದರೆ ಅದರ ಹಿಂದೆ ಅವನಿಗೆ ಏನೋ ಬ್ರೇನ್ ವಾಶ್ ಆಗಿದೆ ಎನ್ನುವುದು ಸ್ಪಷ್ಟ. ಅವನಿಗೆ ಇಂತಹ ವಿಷಯದಲ್ಲಿ ಹೇಗೆ ಜಾಮೀನು ಸಿಗುತ್ತದೆ. ಜಾಮೀನು ಕೊಡುವುದು ಎಂದರೆ ಅವನಿಗೆ ಇನ್ನಷ್ಟು ದುಷ್ಕತ್ಯ ಮಾಡಲು ಪ್ರೇರಣೆ ನೀಡಿದಂತೆ ಆಯಿತ್ತಲ್ಲವೇ? ಹೊರಗೆ ಬಂದವನು ಗೋಡೆಯಲ್ಲಿ ಇವರ ವಿರುದ್ಧವೇ ಬರೆದರೂ ಏನೂ ಆಗಿಲ್ಲ. ಇವರ ಊರಿನಲ್ಲಿ ಬಾಂಬ್ ಇಟ್ಟರೂ ಏನೂ ಮಾಡಿಲ್ಲ. ಜೈಲಿನ ಒಳಗೆ ಇದ್ದರೂ ಗಮ್ಮತ್ತು. ಹೊರಗೆ ಬಂದರೂ ಎಂಜಾಯ್ ಎಂದು ಅಂದುಕೊಳ್ಳುತ್ತಾನೆ. ಹೀಗಿರುವಾಗ ಯಾವ ಉಗ್ರ ತಾನೆ ಹೆದರಿಕೊಳ್ಳುತ್ತಾನೆ. ಏನೋ ಶಾರೀಕ್ ಟೆಕ್ನಿಕಲ್ ಸೈಡ್ ಸ್ವಲ್ಪ ವೀಕ್ ಇದ್ದ ಕಾರಣ ಆ ಬಾಂಬ್ ಅಷ್ಟು ಪರಿಣಾಮಕಾರಿಯಾಗಲಿಲ್ಲ. ಮುಂದೆ ಯಾವತ್ತೂ ಹೊರಗೆ ಬಂದವನು ಇನ್ನಷ್ಟು ಪ್ರಬಲ ಬಾಂಬ್ ತಯಾರಿಸಿ ಮತ್ತೆ ಮಂಗಳೂರಿಗೆ ಬಂದು ಇಡಲು ಹೊರಟುಬಿಟ್ಟರೂ ಬಿಡಬಹುದು. ಯಾಕೆಂದರೆ ಅವನಿಗೆ ಅದೊಂದು ಉದ್ಯೋಗ. ಜೀವಬಿಟ್ಟರೂ ಲಕ್ಷ, ಇದ್ದರೂ ಲಕ್ಷ. ಇವನು ಇಟ್ಟ ಬಾಂಬಿಗೆ ಸತ್ತರೆ ಅದು ಪಾಪದವರ ಕರ್ಮ!
Leave A Reply