• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಮಾಜಿ ಪ್ರಧಾನಿಯ ಮಗಳು ದೇಶದ್ರೋಹಿಯ ಜೊತೆಗಾ!!

Tulunadu News Posted On February 22, 2023
0


0
Shares
  • Share On Facebook
  • Tweet It

ಜಾರ್ಜ್ ಸೋರೋಸ್ ಎಂಬ ಹೆಸರನ್ನು ಇತ್ತೀಚಿನ ದಿನಗಳಲ್ಲಿ ನಾವು ಕೇಳುತ್ತಾ ಬರುತ್ತಿದ್ದೇವೆ. ಒಂದು ದೇಶವನ್ನು ನಡೆಸುವಾಗ ಅಲ್ಲಿ ಅಭಿವೃದ್ಧಿ ಎಂಬ ಶಬ್ದ ಮಾತ್ರ ಮುಖ್ಯವಾಗಿರುವುದಿಲ್ಲ. ಒಬ್ಬ ಗ್ರಾಮ ಪಂಚಾಯತ್ ಸದಸ್ಯನಿಂದ ಹಿಡಿದು ದೇಶದ ಪ್ರಧಾನಿಯ ತನಕ ಪ್ರತಿಯೊಬ್ಬರಿಗೂ ಬೇರೆ ಬೇರೆ ರೀತಿಯ ಸವಾಲುಗಳು ಇದ್ದೇ ಇರುತ್ತವೆ. ಶತ್ರುಗಳು ಇದ್ದೇ ಇರುತ್ತಾರೆ. ಇವರನ್ನು ಇಳಿಸುವುದು ಹೇಗೆ ಎಂದು ಷಡ್ಯಂತ್ರ ಮಾಡುವ ವರ್ಗವೇ ಇರುತ್ತದೆ. ಕೆಳಮಟ್ಟದಲ್ಲಿರುವ ಜನಪ್ರತಿನಿಧಿಗಳಿಗಿರುವ ಇರುವ ಶತ್ರುಗಳು ಕಣ್ಣ ಮುಂದೆ ಕಾಣುತ್ತಾ ಇದ್ದರೆ ಪ್ರಧಾನಿಯವರಿಗೆ ಇರುವ ಶತ್ರುಗಳು ಯಾರಿಗೂ ಇದೇ ದೇಶದಲ್ಲಿ ಇರಬೇಕೆಂದೇನಿಲ್ಲ. ಒಂದು ಕಡೆ ಮೋದಿಯವರು ಕಾಂಗ್ರೆಸ್ ಮತ್ತು ಅದರ ಒರಗೆಯ ವಿಪಕ್ಷಗಳೊಂದಿಗೆ ಹೋರಾಡುತ್ತಿದ್ದರೆ ತಾನು ವಿರೋಧ ಪಕ್ಷದ ಭತ್ತಳಿಕೆಯಲ್ಲಿರುವ ಒಂದು ಪ್ರಬಲ ಅಸ್ತ್ರ ಎಂದು ತೋರಿಸಿದವನೇ ಜಾರ್ಜ್ ಸೋರೋಸ್.

2014 ರಲ್ಲಿ ಫೋಬ್ಸ್ ಬಿಡುಗಡೆ ಮಾಡಿದ ಶ್ರೀಮಂತರ ಪಟ್ಟಿಯಲ್ಲಿ 84 ರ ಸ್ಥಾನದಲ್ಲಿದ್ದ ಸೋರೋಸ್ ನಂತರ ಇನ್ನಷ್ಟು ಮೇಲೆ ಬರುತ್ತಾ ಇದ್ದಾನೆ. ಲಂಡನ್ ನ ಬ್ಯಾಂಕ್ ಒಂದರಲ್ಲಿ ಸಾಮಾನ್ಯ ಕಾರಕೂನನ ಕೆಲಸದಿಂದ ಆರಂಭವಾದ ಸೋರೋಸ್ ಕೆಲಸದ ಜೀವನ ಈಗ ಜಗತ್ತಿನ ಅನೇಕ ರಾಷ್ಟ್ರಗಳ ಆರ್ಥಿಕ ವ್ಯವಹಾರಗಳನ್ನು ಮುಳುಗಿಸುವ ಲೆವೆಲ್ಲಿಗೆ ಬಂದಿದೆ. ಇವನು ಹುಟ್ಟಿದ ಹಂಗೇರಿ ಎನ್ನುವ ಪುಟ್ಟ ದೇಶವೇ ಇವನನ್ನು ನಿಷೇಧಕ್ಕೆ ಒಳಪಡಿಸಿದೆ ಎಂದರೆ ಇವನ ಕುತಂತ್ರದ ಸಾಮರ್ತ್ಯ ಗೊತ್ತಾಗದೇ ಇರುವುದಿಲ್ಲ. ಮಲೇಶಿಯಾದಿಂದ ಹಿಡಿದು ರಷ್ಯಾದ ತನಕ ಬೇರೆ ಬೇರೆ ದೇಶಗಳು ಇವನ ಷಡ್ಯಂತ್ರದಿಂದ ಆರ್ಥಿಕವಾಗಿ ಸಂಕಷ್ಟವನ್ನು ಅನುಭವಿಸುತ್ತಿವೆ. ಇವನ ಬಳಿ ಲೆಕ್ಕಕ್ಕಿಂತ ಹೆಚ್ಚು ಹಣ ಇರುವುದರಿಂದ ಮತ್ತು ಅದನ್ನು ಏನು ಮಾಡಬೇಕು ಎಂದು ಗೊತ್ತಾಗದೇ ಆತ ಹುಚ್ಚನಂತೆ ಆಗಿದ್ದಾನೆ. ಅದಕ್ಕಾಗಿ ಏನು ಮಾಡುತ್ತಾ ಇರುತ್ತಾನೆ ಎಂದರೆ ಯಾವ ದೇಶದ ಮೇಲೆ ಇವನ ಕಣ್ಣು ಬೀಳುತ್ತೋ ಆ ದೇಶದಲ್ಲಿ ವಾಮಮಾರ್ಗದಲ್ಲಿ ಹಣ ಹೂಡುತ್ತಾನೆ. ಅಲ್ಲಿ ಸರಕಾರರೇತರ ಸಂಸ್ಥೆಗಳನ್ನು ಸ್ಥಾಪಿಸುತ್ತಾನೆ. ಅಂತಹ ಸಂಸ್ಥೆಯ ಹೆಸರು ಓಪನ್ ಸೊಸೈಟಿ ಫೌಂಡೇಶನ್. ಈ ಸಂಸ್ಥೆಗೆ ಫಂಡ್ ಧಾರಾಳವಾಗಿ ಹರಿದುಬರುತ್ತದೆ. ಅದರಿಂದ ಸರಕಾರದ ವಿರುದ್ಧ ಪ್ರತಿಭಟನೆ, ರೈತರಿಂದ ಪ್ರತಿಭಟನೆ, ಜಾತಿ ಸಂಘರ್ಷ, ಸರಕಾರದ ನೀತಿಗಳ ವಿರುದ್ಧ ಹೋರಾಟ, ಸಿಎಎ, ಎನ್ ಆರ್ ಸಿ ಸಹಿತ ಹಲವು ಹೋರಾಟಗಳಲ್ಲಿ ಹಣದ ಹರಿವು ಬಂದದ್ದೇ ಈ ಸೋರೋಸ್ ನಿಂದ. ಹೀಗೆ ಸೋರೋಸ್ ಭಾರತದಲ್ಲಿ ಹಲವು ಘರ್ಷಣೆಗಳನ್ನು ಮಾಡುತ್ತಾ ತಾನು ಮಾತ್ರ ಅಮೇರಿಕಾದ ಯಾವುದೋ ಮೂಲೆಯಲ್ಲಿ ಕುಳಿತು ಚೆಂದ ನೋಡುತ್ತಾನೆ. ಇವನ ಹಣ ಭಾರತದ ಕೆಲವು ಮಾಧ್ಯಮ ಸಂಸ್ಥೆಗಳಲ್ಲಿ, ಪ್ರಭಾವಿ ಪತ್ರಕರ್ತರಿಗೆ ಬಟವಾಡೆಯಾಗುತ್ತದೆ. ಅವರು ಸರಕಾರದ ವಿರುದ್ಧ ಲೇಖನಗಳನ್ನು ಬರೆಯಲು ಈ ಹಣ ಅವರಿಗೆ ಪ್ರೇರಣೆಯಾಗುತ್ತದೆ. ಭಾರತದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಿರಲಿ, ಡ್ಯಾಂ ಕಟ್ಟುವುದರಿರಲಿ, ರೈತರಿಗೆ ಅನುಕೂಲವಾಗುವ ಹೊಸ ಕಾನೂನು ಇರಲಿ ಸೋರೋಸ್ ಇಲ್ಲಿ ಕಡ್ಡಿ ಅಲ್ಲಾಡಿಸಲು ಹೊರಡುತ್ತಾನೆ. ಅಂತಹ ಸೋರೋಸ್ ಈಗ ಹೊಸ ಘೋಷಣೆ ಮಾಡಿದ್ದಾನೆ. ಅದೇ ಮುಂದಿನ ಬಾರಿ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬರಬಾರದು.

ಸೋರೋಸ್ ಭಾರತದ ಮುಂಬೈ ಸ್ಟಾಕ್ ಮಾರುಕಟ್ಟೆಯಲ್ಲಿ 5 ಕೋಟಿ ಡಾಲರ್ ಹಣವನ್ನು ಹೂಡಿದ್ದಾನೆ. ಮೂಲತ: ಇವನು ಯಹೂದಿ. ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿದಾಗ ಬಹಿರಂಗವಾಗಿ ಧ್ವನಿ ಎತ್ತಿದ್ದ. ಸಿಎಎ ವಿಷಯದಲ್ಲಿಯೂ ಅಪಸ್ವರ ಹೊರಹಾಕಿದ್ದ. ಅಂತಹ ಮನುಷ್ಯ ಈಗ ಮೋದಿಯನ್ನು ಇಳಿಸುತ್ತೇನೆ ಎಂದು ಬೊಬ್ಬೆ ಹೊಡೆಯುತ್ತಿದ್ದಾನೆ. ಅದಕ್ಕಾಗಿ 1.1 ಬಿಲಿಯನ್ ಹೂಡಿಕೆ ಮಾಡಲು ತಯಾರಿದ್ದೇನೆ ಎಂದು ಆಫರ್ ನೀಡಿದ್ದಾನೆ. ಈತನ ಓಪನ್ ಸೊಸೈಟಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮಗಳು ಅಮೃತಾ ಸಿಂಗ್ ಕೆಲಸ ಮಾಡುತ್ತಿದ್ದಾರೆ.

ಇತ್ತೀಚೆಗೆ ಅದಾನಿಯವರ ಕಂಪೆನಿಗಳ ಶೇರುಗಳ ಬಗ್ಗೆ ವಿವಾದಗಳು ಉಂಟಾಗಿತ್ತಲ್ಲ, ಆಗಲೂ ಅನೇಕರು ಸೋರೋಸ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಪ್ರಪಂಚದ ಅನೇಕ ಮಾಧ್ಯಮ ಸಂಸ್ಥೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ 48 ಬಿಲಿಯನ್ ಡಾಲರ್ ಹಣ ಹೂಡಿರುವ ಸೋರೋಸ್ ಅಲ್ಲಿಂದಲೇ ತನಗೆ ಯಾರ ವಿರುದ್ಧ ದ್ವೇಷ ಕಾರಲು ಆಸಕ್ತಿ ಉಂಟಾಗುತ್ತೋ ಅವರ ವಿರುದ್ಧ ಬಾಣ ಬಿಡುತ್ತಾನೆ. ಇತ್ತೀಚೆಗೆ ರಾಜೀವ್ ಗಾಂಧಿ ಫೌಂಡೇಶನ್ ಗೆ ಚೀನಾ ಮೂಲದ ಸಂಸ್ಥೆಯೊಂದು ಒಂದು ಕೋಟಿ ರೂಪಾಯಿ ಫಂಡ್ ನೀಡಿದ್ದು ಮತ್ತು ರಾಹುಲ್ ಗಾಂಧಿ ಭಾರತ್ ಜೋಡೋದಲ್ಲಿ ಸೋರೋಸ್ ನ ಒಪನ್ ಸೊಸೈಟಿಯ ಭಾರತದ ಪ್ರಮುಖರು ಭಾಗವಹಿಸಿದ್ದನ್ನು ನೆನಪಿಸಬಹುದು. ದೇಶ ಇಂತಹ ಒಂದು ಸವಾಲು ಎದುರಿಸುವಾಗ ಕಾಂಗ್ರೆಸ್ ಈ ದೇಶದ ಸಾರ್ವಭೌಮತೆಯನ್ನು ಉಳಿಸಲು ಕೈ ಜೋಡಿಸಬೇಕು. ಹಿಂದೆ ಭಾರತದ ಪ್ರಧಾನಿ ಬಾಂಗ್ಲಾ ದೇಶಕ್ಕೆ ಬುದ್ಧಿ ಕಲಿಸಲು ಹೊರಟಾಗ ಅಟಲ್ ಬಿಹಾರಿ ವಾಜಪೇಯಿ ಆಗಿನ ಕೇಂದ್ರ ಸರಕಾರಕ್ಕೆ ಬೆಂಬಲಿಸಿದ್ದರು. ಈಗ ಸೋರೊಸ್ ಭಾರತದ ಮೇಲೆ ಪರೋಕ್ಷ ಯುದ್ಧ ಸಾರಿರುವಾಗ ಕಾಂಗ್ರೆಸ್ ಮತ್ತು ಎಲ್ಲಾ ವಿಪಕ್ಷಗಳು ಸರಕಾರದ ಜೊತೆ ನಿಲ್ಲಬೇಕು. ಯಾಕೆಂದರೆ ಇವತ್ತು ಮೋದಿ ಮೇಲೆ ಕ್ಷಿಪಣಿ ಬಿಡಲು ಹೊರಟವನು ನಾಳೆ ರಾಹುಲ್ ಬುಡಕ್ಕೆ ರಾಕೆಟ್ ಇಡಲ್ಲಾ ಎನ್ನುವ ಗ್ಯಾರಂಟಿ ಇಲ್ಲ. ಯಾಕೆಂದರೆ ಸೋರೋಸ್ ರಕ್ತದಲ್ಲಿಯೇ ವಿಕೃತಿ ಇದೆ!

0
Shares
  • Share On Facebook
  • Tweet It




Trending Now
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Tulunadu News November 1, 2025
ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
Tulunadu News October 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
  • Popular Posts

    • 1
      ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!

  • Privacy Policy
  • Contact
© Tulunadu Infomedia.

Press enter/return to begin your search