• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಚುನಾವಣಾ ಪೂರ್ವದ ಕೊನೆಯ ನಾಟಕಕ್ಕೆ ಕಾಂಗ್ರೆಸ್ ರೆಡಿ!!

Hanumantha Kamath Posted On March 16, 2023
0


0
Shares
  • Share On Facebook
  • Tweet It

ನಾನು ಆವತ್ತೆ ಈ ಬಗ್ಗೆ ಮಾತನಾಡಿದ್ದೆ. ಇದೇ ವಿಷಯದಲ್ಲಿ ಆಗಿನ ನಗರಾಭಿವೃದ್ಧಿ ಸಚಿವರಾದ ಡಿಕೆ ಶಿವಕುಮಾರ್ ಹಾಗೂ ನನ್ನ ಮಧ್ಯೆ ಅಕ್ಷರಶ: ಜಗಳ ನಡೆದುಬಿಟ್ಟಿತ್ತು. ಇವರನ್ನು ಸಭೆಯಿಂದ ಹೊರಗೆ ಹಾಕಿ ಎಂದು ಡಿಕೆಶಿ ಅಬ್ಬರಿಸಿಬಿಟ್ಟಿದ್ದರು. ನೀವು ಅಸಾಧ್ಯವಾಗಿರುವುದನ್ನು ಸುಳ್ಳು ಹೇಳಿ ಜನರನ್ನು ನಂಬಿಸುವ ಸುಳ್ಳು ಪ್ರಯತ್ನ ಮಾಡುತ್ತಿದ್ದೀರಿ ಎಂದು ಬಹಿರಂಗವಾಗಿ ಅವರಿಗೆ ಸವಾಲು ಹಾಕಿದ್ದೆ. ಅದು ಡಿಕೆಶಿ ಕೋಪಕ್ಕೆ ಕಾರಣವಾಗಿತ್ತು. ಅದು ಚುನಾವಣಾ ಸಮಯ. ಮಂಗಳೂರು ಮಹಾನಗರ ಪಾಲಿಕೆಯನ್ನು ಗೆದ್ದುಕೊಳ್ಳಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದ ಕಾಂಗ್ರೆಸ್ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಇಲ್ಲಿ ಜಾರಿಗೆ ತರಲು ಬಿಡುವುದಿಲ್ಲ ಎಂದು ಹೇಳಿ ಜನರ ಒಲವು ಗಿಟ್ಟಿಸುವ ಪ್ರಯತ್ನ ಮಾಡುತ್ತಿತ್ತು. ಆವತ್ತಿನ ಕಾಂಗ್ರೆಸ್ಸಿನ ಹೈಕಮಾಂಡ್ ಆಗಿದ್ದ ಜನಾರ್ಧನ ಪೂಜಾರಿಯವರು ಕೂಡ ಭಾರತೀಯ ಜನತಾ ಪಾರ್ಟಿ ತುಳಸಿಗಿಡಕ್ಕೂ ತೆರಿಗೆ ಹಾಕುತ್ತಿದೆ. ಅದಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದು ಘೋಷಿಸಿದ್ದರು. ಜನರ ಮನಸ್ಥಿತಿಯನ್ನು ಎನ್ ಕ್ಯಾಶ್ ಮಾಡಿಕೊಳ್ಳಲು ಕಾಂಗ್ರೆಸ್ ಸಕಲ ಯತ್ನ ಮಾಡುವಾಗಲೇ ಮಂಗಳೂರಿಗೆ ಬಂದಿದ್ದ ಡಿಕೆಶಿಗೆ ನಾನು ಇದನ್ನು ತಾಂತ್ರಿಕವಾಗಿ ನೀವು ಅಂದುಕೊಂಡಂತೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದೆ.

ಒಂದು ಕಾನೂನು ರಾಜ್ಯದಲ್ಲಿ ಪಾಸಾಗಿ ಅದು ರಾಜ್ಯಪಾಲರಿಂದ ಅಂಕಿತಕ್ಕೆ ಒಳಪಟ್ಟ ಬಳಿಕ ಅದನ್ನು ಯಾವುದಾದರೂ ಒಂದು ಭಾಗದಲ್ಲಿ ಜಾರಿಗೆ ತರಲು ಬಿಡಲ್ಲ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಕೊನೆಗೆ ಪಾಲಿಕೆ ಚುನಾವಣೆ ನಡೆಯಿತು. ಸ್ವಯಂ ಘೋಷಿತ ಆಸ್ತಿ ತೆರಿಗೆ ಜಾರಿಗೆ ಬಂತು. ಅದೆಲ್ಲವೂ ಈಗ ಇತಿಹಾಸ. ಈಗ ಇರುವ ವಿಷಯ ಏನೆಂದರೆ ಪ್ರತಿ ಮೂರು ವರ್ಷಗಳಿಗೊಮ್ಮೆ ಕನಿಷ್ಟ 15 ಶೇಕಡಾ ತೆರಿಗೆ ಹೆಚ್ಚಳ ಮಾಡಬೇಕು ಎನ್ನುವುದು ಅದರಲ್ಲಿ ಇರುವ ಅಂಶಗಳಲ್ಲಿ ಒಂದು. ಹೀಗೆ ಹೆಚ್ಚಳ ಆಗುವಾಗ ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ವಾದ, ವಿವಾದ, ಆರೋಪ, ಪ್ರತ್ಯಾರೋಪಗಳು ನಡೆಯುವುದು ಸಾಮಾನ್ಯ. ಈಗಲೂ ಹಾಗೆ ಆಗಿದೆ. ವಿಷಯ ಏನೆಂದರೆ ಈ ಬಾರಿ ವಿಷಯ ಒಂದಿಷ್ಟು ಭಿನ್ನವಾಗಿದೆ. ಹಿಂದೆ ಹೇಗಿತ್ತು ಎಂದರೆ ಮನೆಯ ವಿಸ್ತ್ರೀರ್ಣದ ಆಧಾರದ ಮೇಲೆ ನಿಮ್ಮ ಆಸ್ತಿ ತೆರಿಗೆ ನಿರ್ಧಾರವಾಗುತ್ತಿತ್ತು. ಆದರೆ ಈ ಬಾರಿ ಕಾನೂನಿನಲ್ಲಿ ಒಂದಿಷ್ಟು ಬದಲಾವಣೆ ಆಗಿದೆ. ಅದೇನೆಂದರೆ ನೀವು ವಾಸಿಸುವ ಏರಿಯಾದ ಭೂಮೌಲ್ಯಕ್ಕೆ ಅನುಗುಣವಾಗಿ ತೆರಿಗೆ ಹೆಚ್ಚಳವಾಗುತ್ತಿದೆ. ಇದರಿಂದ ಏನಾಗುತ್ತದೆ ಎಂದರೆ ಒಬ್ಬ ವ್ಯಕ್ತಿ ಮಂಗಳೂರಿನ ಹಂಪನಕಟ್ಟೆಯಲ್ಲಿ ವಾಸಿಸುವುದಿದ್ದರೆ ಇಲ್ಲಿಯ ತನಕ ಅವನು ಉದಾಹರಣೆಗೆ 1800 ರೂ ತೆರಿಗೆ ಪ್ರತಿ ವರ್ಷ ಕಟ್ಟುತ್ತಿದ್ದರೆ ಅದೀಗ 3000 ರೂ ಆಗುವ ಸಾಧ್ಯತೆ ಇದೆ. ಅದೇ ಒಬ್ಬ ವ್ಯಕ್ತಿ ಕಾವೂರಿನಲ್ಲಿ ಮನೆ ಮಾಡಿಕೊಂಡಿದ್ದರೆ ಆತನ ತೆರಿಗೆ ಪ್ರತಿ ವರ್ಷ 1800 ಇದ್ದರೆ ಇನ್ನು ಮುಂದೆ ಅದು 2400 ರೂ ಆಗುವ ಸಾಧ್ಯತೆ ನಿಚ್ಚಳವಾಗಿದೆ. ಇದರಿಂದ ಪ್ರತಿಯೊಬ್ಬ ನಾಗರಿಕ ಕಟ್ಟುವ ಆಸ್ತಿ ತೆರಿಗೆ ಬೇರೆ ಬೇರೆಯಾಗಿರುತ್ತದೆ. ಇದನ್ನೇ ಕಾಂಗ್ರೆಸ್ಸಿಗರು ಈಗ ಪಾಲಿಕೆಯಲ್ಲಿ ವಿರೋಧಿಸುತ್ತಾ ಇದ್ದಾರೆ. ಅದಕ್ಕಾಗಿ ಆರೋಪಗಳು ಈಗ ಎಲ್ಲೆಡೆ ಮಾಡುತ್ತಿದ್ದಾರೆ. ಇದೊಂದು ಅವೈಜ್ಞಾನಿಕವಾಗಿರುವ ನಿಯಮವಾಗಿದ್ದು, ಇದನ್ನು ಹೇರುವ ಮೂಲಕ ರಾಜ್ಯ ಸರಕಾರ ಜನವಿರೋಧಿ ನೀತಿ ಜಾರಿಗೆ ತಂದಿದೆ ಎಂದು ಆರೋಪಿಸುತ್ತಿದ್ದಾರೆ. ಆದರೆ ಪಾಲಿಕೆಯಲ್ಲಿ ಬಿಜೆಪಿ ಮುಖಂಡರು ಇಂತಹ ಒಂದು ನಿಯಮದ ಬಗ್ಗೆ ಚರ್ಚೆಯಾಗುವಾಗ ಕಾಂಗ್ರೆಸ್ಸಿಗರು ಮಾತನಾಡಲೇ ಇಲ್ಲ ಎಂದು ಹೇಳುತ್ತಿದ್ದಾರೆ. ಇದನ್ನು ಚುನಾವಣಾ ವಿಷಯವನ್ನಾಗಿಸಲು ಕಾಂಗ್ರೆಸ್ ಪ್ರಯತ್ನಪಡುತ್ತಿದೆ. ಅದಕ್ಕಾಗಿ ಪದೇ ಪದೇ ಬಿಜೆಪಿ ವಿರುದ್ಧ ಜನರನ್ನು ಎತ್ತಿಕಟ್ಟುವ ಕೆಲಸ ನಡೆಯುತ್ತಿದೆ. ಇದೊಂದು ಅಪ್ಪಟ ರಾಜಕೀಯ ಆಟ. ಇದರಲ್ಲಿ ರಾಜಕೀಯ ಮಾಡುವ ಬದಲಿಗೆ ಏನು ಮಾಡಬಹುದು ಎಂದರೆ ಎರಡೂ ರಾಜಕೀಯ ಪಕ್ಷದವರು ಒಂದು ಸಭೆ ಮಾಡಿ ಒಗ್ಗಟ್ಟಾಗಿ ರಾಜ್ಯ ಸರಕಾರಕ್ಕೆ ಮನವಿ ಮಾಡಿ ಇದನ್ನು ತಡೆಹಿಡಿಯುವ ಕೆಲಸ ಮಾಡಬೇಕು. ಅದು ಬಿಟ್ಟು ಟಿವಿ ಕ್ಯಾಮೆರಾದ ಎದುರು ರೋಷವನ್ನು ಪ್ರದರ್ಶಿಸಿ ನಾವು ಜನಪರ ಎಂದು ತೋರಿಸಿಕೊಳ್ಳುವ ಹುಂಬತನ ಸರಿಯಲ್ಲ. ಆವತ್ತು ಕೂಡ ಡಿಕೆಶಿ ಹೀಗೆ ಮಾಡಿದ್ರು.

ಯಾವುದೇ ಒಂದು ಪಾಲಿಕೆಗೆ ಎಷ್ಟು ಆದಾಯ ಇದೆ ಎನ್ನುವುದನ್ನು ಅಳತೆಗೋಲು ಮಾಡಿಕೊಂಡು ಸರಕಾರಗಳು ಅದಕ್ಕೆ ಸರಿಯಾಗಿ ಅನುದಾನವನ್ನು ಬಿಡುಗಡೆ ಮಾಡುತ್ತದೆ. ಪಾಲಿಕೆಗೆ ಆದಾಯವೇ ಕಡಿಮೆ ಇದ್ದರೆ ಅದಕ್ಕೆ ಬರುವ ಅನುದಾನ ಕೂಡ ಕಡಿಮೆಯಾಗುತ್ತಾ ಹೋಗುತ್ತದೆ. ಇದರಿಂದ ಅಭಿವೃದ್ಧಿ ಕೂಡ ಕುಂಠಿತವಾಗುತ್ತಾ ಹೋಗುತ್ತದೆ. ಈಗ ಜನರಿಗೆ ಅವೈಜ್ಞಾನಿಕವಾಗಿ ತೆರಿಗೆ ಏರಿಸಿದ್ದಾರೆ ಎಂದು ಬೊಬ್ಬೆ ಹಾಕುವ ಕಾಂಗ್ರೆಸ್ಸಿಗರು ತಾವು ಸ್ವಯಂಘೋಷಿತ ಆಸ್ತಿ ತೆರಿಗೆ ಹಾಕಲ್ಲ ಎಂದು ಸುಳ್ಳು ಹೇಳಿ ಚುನಾವಣೆಯ ನಂತರ ಹಾಕಲಿಲ್ಲವಾ? ಈಗ ಇವರು ಸುಳ್ಳು ಹೋರಾಟ ಮಾಡುವುದನ್ನು ಪಕ್ಕಕ್ಕೆ ಇಟ್ಟು ಪಾಲಿಕೆಗೆ ಸೋರುತ್ತಿರುವ ಆದಾಯವನ್ನು ನಿಲ್ಲಿಸಿ ಆದಾಯವನ್ನು ಹೆಚ್ಚಳ ಮಾಡುವುದು ಹೇಗೆ ಎಂದು ಯೋಚಿಸಬೇಕು. ಅದು ನಿಜವಾಗಿಯೂ ನಡೆಯಬೇಕಾಗಿರುವುದು. ಪಾಲಿಕೆಗೆ ಹೋರ್ಡಿಂಗ್ಸ್, ನೀರಿನ ಬಿಲ್, ಕಟ್ಟಡಗಳ ಬಾಡಿಗೆ ಸಹಿತ ವಿವಿಧ ರೀತಿಯಲ್ಲಿ ಬರುವ ಆದಾಯ ಕೋಟಿಗಟ್ಟಲೆ ಸೋರಿಕೆ ಆಗುತ್ತಿದೆ. ಆ ಬಗ್ಗೆ ವಿಪಕ್ಷದವರು ಬಾಯಿ ತೆರೆಯುತ್ತಿಲ್ಲ. ಯಾಕೆಂದರೆ ಅದರಿಂದ ಅವರ ಜನರಿಗೆ ಹೊಡೆತ ಬೀಳುತ್ತದೆ. ಬರುವ ಆದಾಯ ಸೋರಿಕೆ, ತೆರಿಗೆ ಹೆಚ್ಚಳಕ್ಕೆ ವಿರೋಧ ಕೊನೆಗೆ ಪಾಲಿಕೆಗೆ ವಿಪಕ್ಷದ ಚೊಂಬು!!.

0
Shares
  • Share On Facebook
  • Tweet It




Trending Now
ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
Hanumantha Kamath September 16, 2025
ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
Hanumantha Kamath September 16, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
  • Popular Posts

    • 1
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 2
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 3
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • 4
      ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • 5
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search