• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!

Hanumantha Kamath Posted On March 24, 2023
0


0
Shares
  • Share On Facebook
  • Tweet It

ರಾಹುಲ್ ಗಾಂಧಿ(?) ಕಳೆದ ಲೋಕಸಭಾ ಚುನಾವಣೆಯ ಪ್ರಚಾರದ ಸಮಯದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಚೌಕಿದಾರ್ ಚೋರ್ ಎಂದು ಮೂದಲಿಸಿದ್ದರು. ಅದರಿಂದ ಅನೇಕರಿಗೆ ಮನಸ್ಸಿಗೆ ಬೇಸರವಾಗಿತ್ತು. ಅದರೊಂದಿಗೆ ಮೋದಿ ಸರ್ ನೇಮ್ ಇರುವವರು ಎಲ್ಲರೂ ಕಳ್ಳರು ಎಂದು ರಾಹುಲ್ ಹೇಳುವ ಮೂಲಕ ಇನ್ನಷ್ಟು ಟೀಕೆ ಮಾಡುತ್ತಾ ಹೋದರು. ಮೋದಿ ಹೆಸರಿನ ಎಲ್ಲರೂ ಕಳ್ಳರು ಎಂದು ಹೇಳುತ್ತಾ ಲಲಿತ್ ಮೋದಿ, ನೀರವ್ ಮೋದಿ ಸಹಿತ ನರೇಂದ್ರ ಮೋದಿ ಹೆಸರನ್ನು ಸೇರಿಸುತ್ತಾ ಬಂದರು. ಈ ಹೇಳಿಕೆ ಈಗ ರಾಹುಲ್ ಅವರನ್ನು ಜೈಲಿನ ಬಾಗಿಲಿನ ಹತ್ತಿರ ತಂದು ನಿಲ್ಲಿಸಿದೆ. ಲಲಿತ್ ಮೋದಿ, ನೀರವ್ ಮೋದಿ ದೇಶದಲ್ಲಿ ಆರ್ಥಿಕ ಅರಾಜಕತೆಯನ್ನು ಸೃಷ್ಟಿಸಲು, ಹಣ ಕೊಳ್ಳೆ ಹೊಡೆದು ಬೇರೆ ದೇಶಕ್ಕೆ ಓಡಿ ಹೋಗಲು ಪ್ರಯತ್ನಿಸಿರಬಹುದು. ಹಾಗಂತ ಅವರ ಆ ಕೃತ್ಯದಿಂದ ಇಡೀ ಮೋದಿಯವರ ಜಾತಿಯ ತಪ್ಪು ಏನೂ ಇರುವುದಿಲ್ಲ. ಹೇಗೆ ಮಹಾತ್ಮಾ ಗಾಂಧಿ ಎಂದ ತಕ್ಷಣ ಅವರಷ್ಟೇ ಒಳ್ಳೆಯವರು ಅವರ ಜಾತಿಯಲ್ಲಿ ಎಲ್ಲರೂ ಇರುವುದಿಲ್ಲವೋ ಹಾಗೆ ಮೋದಿ ಸರ್ ನೇಮ್ ಇರುವವರು ಎಲ್ಲರೂ ಒಳ್ಳೆಯವರಾಗಬೇಕು ಎಂದೇನಿಲ್ಲ. ಮಹಾತ್ಮಾ ಗಾಂಧಿ ಸರಳ ಜೀವನ, ಸರಳ ಆಹಾರ, ಸರಳ ವ್ಯಕ್ತಿತ್ವದಿಂದ ಬಾಳಿದರು. ಹಾಗೆಂದು ಅದೇ ಸರ್ ನೇಮ್ ಇರುವ ರಾಹುಲ್ ಗಾಂಧಿ ಮಹಾತ್ಮಾ ಗಾಂಧಿಯವರಂತೆ ಇದ್ದಾರಾ? ಇಲ್ಲ, ಹಾಗಿದ್ದ ಮೇಲೆ ರಾಹುಲ್ ಅವರಿಗೆ ಯಾರನ್ನೋ ಟೀಕಿಸಲು ಶಬ್ದಭಂಡಾರ ಇಲ್ಲದಷ್ಟು ಬೌದ್ಧಿಕ ಸಾಮರ್ತ್ಯ ಕಡಿಮೆಯಾಗಿದೆಯಾ? ಹಿಂದೊಮ್ಮೆ ಹೀಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಟೀಕಿಸುವ ಮೂಲಕ ನ್ಯಾಯಾಲಯದ ಛೀಮಾರಿಗೆ ರಾಹುಲ್ ಗುರಿಯಾಗಿದ್ದರು. ಈಗ ಅದು ಪುನರಾವರ್ತನೆ ಆಗಿದೆ. ನನಗೆ ಈ ದೇಶದಲ್ಲಿ ಮಾತನಾಡಲು ಸ್ವಾತಂತ್ರ್ಯ ಇಲ್ಲ ಎಂದು ಬೇರೆ ದೇಶಕ್ಕೆ ಹೋಗಿ ಅಲ್ಲಿ ನಮ್ಮನ್ನು ದೂಷಿಸುತ್ತಾರೆ. ಇಂತಹ ಸಂಪ್ರದಾಯ ಈಗ ಆರಂಭಿಸಿದ್ದಾರೆ.
ಸೂರತ್ ನ್ಯಾಯಾಲಯದಲ್ಲಿ ಪ್ರಾಣೇಶ್ ಮೋದಿ ಎಂಬುವವರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆಯನ್ನು ವಯನಾಡು ಸಂಸದರಿಗೆ ನೀಡಿ ಆದೇಶ ನೀಡಿದೆ. ಸದ್ಯ ಈ ಪ್ರಕರಣದಲ್ಲಿ ಬೇಲ್ ದೊರೆತರೂ ಆಗಿರುವ ಅಪಮಾನ ಸಣ್ಣದಲ್ಲ. ಕಾಂಗ್ರೆಸ್ಸಿನ ರಾಷ್ಟ್ರೀಯ ನಾಯಕರೊಬ್ಬರ ಇಂತಹ ಹೇಳಿಕೆಗಾಗಿ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸುವ ಮೂಲಕ ರಾಜಕಾರಣಿಗಳು ಮಾತನಾಡುವಾಗ ಎಷ್ಟು ಎಚ್ಚರಿಕೆಯಿಂದ ಇರಬೇಕು ಎನ್ನುವುದನ್ನು ತೋರಿಸಿದೆ.
ರಾಹುಲ್ ಅವರಿಗೆ ಭಾಷಣವನ್ನು ಯಾರು ಬರೆದುಕೊಡುತ್ತಾರೋ ಗೊತ್ತಿಲ್ಲ, ಆದರೆ ಬರೆದುಕೊಡುವವರು ಮಾತ್ರ ಶುದ್ಧ ಮಾನಸಿಕ ದಿವಾಳಿತನವನ್ನು ಅನುಭವಿಸುತ್ತಿದ್ದಾರೆ ಎನ್ನುವುದು ನಿಜ. ನರೇಂದ್ರ ಮೋದಿಯವರದ್ದು ಗುಜರಾತಿನಲ್ಲಿಯೇ ಅತ್ಯಂತ ಸಣ್ಣಜಾತಿ. ಈ ಕಡೆ ಅದನ್ನು ಗಾಣಿಗ ಎಂದು ಕರೆಯುತ್ತಾರೆ. ಬಹಳ ಶ್ರಮಜೀವಿಗಳು. ಕಷ್ಟಸಹಿಷ್ಣುತೆಯನ್ನು ಮೈಗೂಡಿಸಿಕೊಂಡವರು. ಅವರಲ್ಲಿ ಕೆಲವರು ಶ್ರೀಮಂತಿಕೆಯನ್ನು ನೋಡಿರಬಹುದು. ಕೆಲವರು ಕ್ರಿಮಿನಲ್ ಗಳು ಇದ್ದಿರಬಹುದು. ಲಲಿತ್ ಮೋದಿ, ನೀರವ್ ಮೋದಿ ಕೂಡ ಇದೇ ಜಾತಿಯಲ್ಲಿ ಹುಟ್ಟಿರಬಹುದು. ಅವರು ತಮ್ಮ ಕೃತ್ಯದಿಂದ ತಮ್ಮ ಹೆಸರಿಗೆ ಕಳಂಕ ತಂದುಕೊಂಡಿರಬಹುದು. ಹಾಗಂತ ಅವರಿಂದ ಜಾತಿಗೆ ಏನೂ ನಷ್ಟವಾಗಿಲ್ಲ. ಆದರೆ ಮೋದಿ ಹೆಸರಿನ ಎಲ್ಲರೂ ಕಳ್ಳರು ಎಂದು ಹೇಳುವ ಮೂಲಕ ರಾಹುಲ್ ಇಡೀ ಜಾತಿಗೆ ಕೆಟ್ಟ ಹೆಸರು ತಂದಿದ್ದಾರೆ. ರಾಹುಲ್ ಹೇಳಿಕೆಯಿಂದ ಮೋದಿಯವರ ವರ್ಚಸ್ಸಿಗೆ ಏನೂ ದಕ್ಕೆಯಾಗುವುದಿಲ್ಲ. ಆದರೆ ಒಬ್ಬ ಪ್ರಧಾನಿಯನ್ನು ಅವಹೇಳನ ಮಾಡುವ ಭರದಿಂದ ಅವರ ಜಾತಿಯನ್ನು ದೂಷಿಸುವುದು ಎಷ್ಟು ಸರಿ? ರಾಹುಲ್ ಅವರಿಗೆ ರೈಮಿಂಗ್ ಶಬ್ದಗಳು ಬೇಕು ಎನ್ನುವ ಕಾರಣಕ್ಕೆ ಅವರು ಹಾಗೆ ಹೇಳಿರಬಹುದು. ಅದಕ್ಕೆ ಅವರ ಪಕ್ಷದ ನಾಲ್ಕು ಚಪ್ಪಾಳೆ, ಸಿಳ್ಳೆಗಳು ಸಿಕ್ಕಿರಬಹುದು. ಆದರೆ ಅದರಿಂದ ಮೋದಿ ಅವರ ಜಾತಿಯ ಅಸಂಖ್ಯಾತ ನಾಗರಿಕರಿಗೆ ಆದ ವೇದನೆಯನ್ನು ರಾಹುಲ್ ತುಂಬಿಸಿಕೊಡಲು ಸಾಧ್ಯವಾಗುವುದಿಲ್ಲ.
ನ್ಯಾಯಾಲಯದ ಈ ತೀರ್ಪಿನಿಂದ ರಾಜಕಾರಣಿಗಳು ಕಲಿಯುವಂತದ್ದು ತುಂಬಾ ಇದೆ. ವೈಯಕ್ತಿಕ ಟೀಕೆ, ಕೀಳು ಮಟ್ಟದ ಆರೋಪ, ಅಶ್ಲೀಲ ದೋಷಾರೋಪಣೆ ಸಹಿತ ಸತ್ವಭರಿತವಿಲ್ಲದ ವ್ಯಂಗ್ಯಗಳನ್ನು ಜನ ಸ್ವೀಕರಿಸುವುದಿಲ್ಲ. ಈಗ ಕಾಂಗ್ರೆಸ್ಸಿನವರು ತಮ್ಮ ಸಿದ್ಧಾಂತದ ಸಾಮಾಜಿಕ ಚಿಂತಕರನ್ನು, ಒರಗೆಯವರನ್ನು, ಬರಹಗಾರರನನ್ನು ಬಳಸಿ ಅವರಿಂದ ಬರಹಗಳನ್ನು, ಫೇಸ್ ಬುಕ್ ಲೇಖನಗಳನ್ನು ಮಾಡಿಸುತ್ತಿದ್ದಾರೆ. ನೇರವಾಗಿ ತಮ್ಮ ಪಕ್ಷದವರು ಲೇಖನ ಬರೆದರೆ ಅದನ್ನು ಜನ ಅದನ್ನು ಓನ್ ಸೈಡ್ ಆಗಿ ನೋಡುತ್ತಾರೆ ಎನ್ನುವ ಕಾರಣಕ್ಕೆ ಸ್ವತಂತ್ರ ಎನಿಸಿಕೊಂಡವರಿಂದ ಬರೆಯಿಸಿ ಹಾಕುತ್ತಿದ್ದಾರೆ. ಅಂತವರು ಮಾಡುವ ಟೀಕೆ, ಟಿಪ್ಪಣಿಗಳಿಂದ ನ್ಯಾಯಾಲಯದಲ್ಲಿ ಕೇಸ್ ಆದರೆ ಅವರ ಬೆನ್ನಿಗೆ ಕಾಂಗ್ರೆಸ್ಸಿಗರು ನಿಲ್ಲುತ್ತಿದ್ದಾರೆ. ಒಟ್ಟಿನಲ್ಲಿ ಜನರನ್ನು ಆ ರೀತಿಯಿಂದ ಹಾದಿ ತಪ್ಪಿಸುವ ಕೆಲಸ ನಡೆಯುತ್ತಿದೆ.
ಈಗ ಮತದಾರನ ಜವಾಬ್ದಾರಿ ತುಂಬಾ ದೊಡ್ಡದಿದೆ. ಯಾರೇ ವೈಯಕ್ತಿಕ ಟೀಕೆ, ಕೆಳಮಟ್ಟದ ಆರೋಪ ಏನೇ ಮಾಡಿದರೂ ಅಭ್ಯರ್ಥಿಯನ್ನು ಸರಿಯಾಗಿ ತೂಗಿ ಈ ಮನುಷ್ಯ ಹಾಲಿ ಶಾಸಕನಾಗಿದ್ದರೆ ಆತ ಮಾಡಿರುವ ಅಭಿವೃದ್ಧಿ ಕಾರ್ಯಗಳು, ಜನಸ್ನೇಹಿ ಆಡಳಿತವನ್ನು ನೋಡಿ ಅಂತವರಿಗೆ ಮತ ನೀಡಬೇಕು. ಕೆಲವರು ತಮ್ಮ ವೈಯಕ್ತಿಕ ದ್ವೇಷಕ್ಕಾಗಿ ಸೋಲಿಸಲೇಂದೇ ಏನೇನೋ ಬರೆದು ಹಾಕಿರುತ್ತಾರೆ. ಅದನ್ನು ಓದಿ ನಿಜ ಎಂದು ಅಂದುಕೊಳ್ಳುವ ಮೊದಲ ಒಮ್ಮೆ ಕ್ರಾಸ್ ಚೆಕ್ ಮಾಡಿಕೊಳ್ಳಬೇಕು.

0
Shares
  • Share On Facebook
  • Tweet It




Trending Now
ಯೋಗಿ ದೇಶದ ನಂ 1 ಸಿಎಂ - ಇಂಡಿಯಾ ಟುಡೇ ಸಮೀಕ್ಷೆ
Hanumantha Kamath August 30, 2025
ಬೀದಿನಾಯಿಗಳಿಗೆ ಇನ್ನು ವಿಧಾನಸೌಧದಲ್ಲೇ ವಸತಿ ಕಲ್ಪಿಸಲು ಯೋಜನೆ!
Hanumantha Kamath August 30, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಯೋಗಿ ದೇಶದ ನಂ 1 ಸಿಎಂ - ಇಂಡಿಯಾ ಟುಡೇ ಸಮೀಕ್ಷೆ
    • ಬೀದಿನಾಯಿಗಳಿಗೆ ಇನ್ನು ವಿಧಾನಸೌಧದಲ್ಲೇ ವಸತಿ ಕಲ್ಪಿಸಲು ಯೋಜನೆ!
    • ಹುಬ್ಬಳ್ಳಿಯ ಈದ್ಗಾ ಮೈದಾನವನ್ನು ರಾಣಿ ಚೆನ್ನಮ್ಮ ಮೈದಾನ ಎಂದು ಪಾಲಿಕೆ ಅಧಿಕೃತ ಘೋಷಣೆ!
    • ಅನುಶ್ರೀ - ರೋಷನ್ ದಾಂಪತ್ಯ ಜೀವನಕ್ಕೆ ನಿಮ್ಮದೂ ಶುಭ ಹಾರೈಕೆ ಇರಲಿ!
    • ಬಸ್ ನಲ್ಲಿ 200 ಕೆಜಿ ಸ್ಫೋಟಕ ಪತ್ತೆ! ತಪ್ಪಿದ ದೊಡ್ಡ ಸಂಚು..
    • ತಿಮರೋಡಿ ಮನೆಯಲ್ಲಿತ್ತು ಮಾಸ್ಕ್ ಮ್ಯಾನ್ ಮೊಬೈಲ್, ತಂಗುತ್ತಿದ್ದ ಕೋಣೆಯ ಸಿಸಿಟಿವಿ ಫೂಟೇಜ್ ವಶಕ್ಕೆ!
    • ಧರ್ಮ ಜಾಗೃತಿ ಯಾತ್ರೆ:  ದೇವರ ಅನುಗ್ರಹದಿಂದ ಸತ್ಯದ ಅನಾವರಣ - ಡಾ. ಹೆಗ್ಗಡೆ 
    • ರಾಜ್ಯ ಬೊಕ್ಕಸ ಖಾಲಿ, ಗ್ಯಾರಂಟಿಗೂ ದುಡ್ಡಿಲ್ಲ - ಸಿಎಂ ರೇವಂತ್ ರೆಡ್ಡಿ
    • ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡುವ ಬಗ್ಗೆ ಪರ - ವಿರೋಧ ಚರ್ಚೆ!
    • ತಿಮರೋಡಿ ಮನೆ ಮೇಲೆ ಬೆಳ್ಳಂಬೆಳಗ್ಗೆ SIT ದಾಳಿ.. ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಆಶ್ರಯ ನೀಡಿದ ಆರೋಪ!
  • Popular Posts

    • 1
      ಯೋಗಿ ದೇಶದ ನಂ 1 ಸಿಎಂ - ಇಂಡಿಯಾ ಟುಡೇ ಸಮೀಕ್ಷೆ
    • 2
      ಬೀದಿನಾಯಿಗಳಿಗೆ ಇನ್ನು ವಿಧಾನಸೌಧದಲ್ಲೇ ವಸತಿ ಕಲ್ಪಿಸಲು ಯೋಜನೆ!
    • 3
      ಹುಬ್ಬಳ್ಳಿಯ ಈದ್ಗಾ ಮೈದಾನವನ್ನು ರಾಣಿ ಚೆನ್ನಮ್ಮ ಮೈದಾನ ಎಂದು ಪಾಲಿಕೆ ಅಧಿಕೃತ ಘೋಷಣೆ!
    • 4
      ಅನುಶ್ರೀ - ರೋಷನ್ ದಾಂಪತ್ಯ ಜೀವನಕ್ಕೆ ನಿಮ್ಮದೂ ಶುಭ ಹಾರೈಕೆ ಇರಲಿ!
    • 5
      ಬಸ್ ನಲ್ಲಿ 200 ಕೆಜಿ ಸ್ಫೋಟಕ ಪತ್ತೆ! ತಪ್ಪಿದ ದೊಡ್ಡ ಸಂಚು..

  • Privacy Policy
  • Contact
© Tulunadu Infomedia.

Press enter/return to begin your search