ಬಕ್ರೀದ್ ಹಬ್ಬದ ದಿನ ಗೋ ಕಳ್ಳತನ ಸಾಧ್ಯತೆಯಿದೆ
ಸುರತ್ಕಲ್; ಬಕ್ರಿದ್ ಹಬ್ಬದ ಸಂದರ್ಭದಲ್ಲಿ ಕೆಲವೊಂದು ಸಮಾಜ ಘಾತುಕ ಶಕ್ತಿಗಳಿಂದ ಗೋವುಗಳ ಕಳ್ಳತನ ,ಸಾಗಾಟ, ಗೋ ಹತ್ಯೆ ಮಾಡಿ ಹಣ ಗಳಿಸಲು ದಂದೆಯಾಗಿ ಬದಲಾಗುವ ಸಾಧ್ಯತೆಯಿದೆ.
ಇದನ್ನು ತಡೆಯಲು ಬಿಜೆಪಿ ಸರಕಾರ ತಂದ ಆಸ್ತಿ ಮುಟ್ಟುಗೋಲು ಕಾನೂನು ಈಗಲೂ ಊರ್ಜಿತದಲ್ಲಿದ್ದು,ಈ ಕಾನೂನಿಂತೆ
ನಿಗಾ ವಹಿಸಬೇಕು. ಗೋಕಳ್ಳತನ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು.ವಿಫಲವಾದರೆ ಜನರೇ ಕಾನೂನು ಕೈಗೆತ್ತಿಕೊಳ್ಳುವ ಪ್ರಮೇಯ ಎದುರಾಗಿ ಕಾನೂನು ಸುವ್ಯವಸ್ಥೆಗೆ ತೊಡಕಾಗಬಹುದು ಎಂದು
ಮಂಗಳೂರು ನಗರ ಉತ್ತರ ಶಾಸಕ ಡಾ.ಭರತ್ ಶೆಟ್ಟಿ ವೈ ಸರಕಾರ ,ಪೊಲೀಸ್ ಇಲಾಖೆಯನ್ನು ಎಚ್ಚರಿಸಿದ್ದಾರೆ.
ಗೋಕಳ್ಳತನ, ಅಕ್ರನ ಗೋಹತ್ಯೆಯ ಮೂಲಕ ಸಮಾಜದಲ್ಲಿ ಶಾಂತಿ ಕದಡುವವರ ವಿರುದ್ಧ ಕ್ರಮ ಜರಗಿಸಬೇಕು. ಸಚಿವ ಪ್ರಿಯಾಂಕ ಖರ್ಗೆ ಗೋ ಹತ್ಯೆಗೆ ಪ್ರೋತ್ಸಾಹ ಕೊಡುವಂತೆ ಹೇಳಿಕೆ ನೀಡುತ್ತಾ ಬರುತ್ತಿದ್ದು, ಗೋ ಕಳ್ಳತನ,ಅನಧಿಕೃತ ಗೋ ಹತ್ಯೆ ಹೆಚ್ಚಾದ ಪ್ರಕರಣ ಆದಲ್ಲಿ ಸಚಿವರದ್ದೇ ಕುಮ್ಮಕ್ಕು ಎಂದು ಎಂದು ಕಿಡಿಕಾರಿದ್ದಾರೆ.
ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಅಕ್ರಮಗಳ ವಿರುದ್ದ ನನ್ನ ಕ್ಷೇತ್ರದಲ್ಲಿ ಆಸ್ತಿ ಮುಟ್ಟುಗೋಲು ಪ್ರಕರಣ ದಾಖಲಿಸಿದ್ದರಿಂದ ಬಹುತೇಕ ಅಕ್ರಮ ನಿಲ್ಲಿಸಲಾಗಿತ್ತು.
ಗೋವು ಹಿಂದು ಸಮಾಜ ಪೂಜನೀಯ ಭಾವನೆಯಿಂದ ನೋಡುತ್ತದೆ ಎಂಬ ಬಗ್ಗೆ ಕಾಂಗ್ರೆಸ್ ಅರ್ಥಮಾಡಿಕೊಳ್ಳಬೇಕು.
ದ.ಕ ಜಿಲ್ಲೆಯಲ್ಲಿ ಶಾಂತಿ ಕಾಪಾಡುವ ದೃಷ್ಟಿಯಿಂದ ಅಕ್ರಮ ಗೋವಧೆ, ಅಕ್ರಮ ಗೋಹತ್ಯೆ ತಡೆಯಲು
ಬಿಜೆಪಿ ತಂದ ಕಾನೂನನ್ನು ಈಗಿನ ಸರಕಾರ ಮುಂದುವರಿಸಬೇಕೆಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
Leave A Reply