ಮಂಗಳೂರು ಕಾಂಗ್ರೆಸ್ ಕಚೇರಿಗೆ ಭೂಮಿ ಕೊಟ್ಟಿದ್ದು ಯಾರು?
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜನಸೇವಾ ಟ್ರಸ್ಟಿಗೆ ಹಿಂದಿನ ಭಾರತೀಯ ಜನತಾ ಪಾರ್ಟಿಯ ರಾಜ್ಯ ಸರಕಾರ ಬೆಂಗಳೂರಿನ ತಾವರಕೆರೆ ಹೋಬಳಿಯಲ್ಲಿ ನೀಡಿರುವ 35 ಎಕರೆ 33 ಗುಂಟೆ ಜಾಗವನ್ನು ಈಗಿನ ಕಾಂಗ್ರೆಸ್ ಸರಕಾರ ಹಿಂದಕ್ಕೆ ಪಡೆದುಕೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಿದೆ. ಈ ಬಗ್ಗೆ ವಿಧಾನ ಮಂಡಲದ ಅಧಿವೇಶನದಲ್ಲಿ ಎರಡೂ ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯುತ್ತಿದೆ. ವಿಷಯ ಸಿಂಪಲ್. ಕಾಂಗ್ರೆಸ್ ಮೇಲೆ ಒತ್ತಡ ಇದೆ. ಕಾಂಗ್ರೆಸ್ಸನ್ನು ಈ ಬಾರಿ ಹೆಗಲ ಮೇಲೆ ಹೊತ್ತುಕೊಂಡು ವಿಧಾನಸೌಧದ ಒಳಗೆ ತಲುಪಿಸಿರುವ ಮುಸ್ಲಿಮರು ಕಾಂಗ್ರೆಸ್ಸಿನ ಪ್ರತಿ ಹೆಜ್ಜೆಯ ಮೇಲೆ ಕಣ್ಣಿಟ್ಟು ನೋಡುತ್ತಿದ್ದಾರೆ. ಅಲ್ಪಸಂಖ್ಯಾತರ ಈ ಋಣವನ್ನು ಕಾಂಗ್ರೆಸ್ ರಾಜ್ಯದಲ್ಲಿ ಏಳೇಳು ಜನ್ಮದ ತನಕ ಮರೆಯಲು ಸಾಧ್ಯವಿಲ್ಲ. ಬಿಜೆಪಿ ಹಿಂದೂತ್ವದ ಝಂಡಾ ಊರಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎನ್ನುವ ಕನಸು ಇಟ್ಟು ಅದರಂತೆ ನಡೆಯುತ್ತಿದ್ದಾಗ ಅತ್ತ ಹಿಂದೂತ್ವಕ್ಕೂ ವಾಲಲು ಆಗದೇ, ಇತ್ತ ಅಲ್ಪಸಂಖ್ಯಾತರನ್ನು ಕೂಡ ಕಂಕುಳಲ್ಲಿ ಇಟ್ಟುಕೊಂಡು ಮೆರೆಯಲು ಆಗದೇ ಕಾಂಗ್ರೆಸ್ ಅಕ್ಷರಶ: ಗೊಂದಲಕ್ಕೆ ಬಿದ್ದಿತ್ತು. ನಿಮ್ಮದು ಹಿಂದೂತ್ವದ ಬಗ್ಗೆಗಿನ ಮೃದು ಧೋರಣೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಮುಸ್ಲಿಂ ಮುಖಂಡರು ಬಹಿರಂಗ ಹೇಳಿಕೆ ನೀಡಲು ಶುರು ಮಾಡಿದರು. ಈ ಹಂತದಲ್ಲಿಯೇ ಜೆಡಿಎಸ್ ಚುರುಕಾಯಿತು. ಮುಸ್ಲಿಮರು ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಅದರಲ್ಲಿಯೂ ವಿಶೇಷವಾಗಿ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ತೆಕ್ಕೆಗೆ ವಾಲಿಯಾಗಿದ್ದರು. ದೇವೆಗೌಡರ ಮುಖ ನೋಡಿ ಅವರ ಜಾತ್ಯಾತೀತ ಮನೋಭಾವ ನೋಡಿ, ಬಿಜೆಪಿಯೊಂದಿಗೆ ಅವರು ಯಾವತ್ತೂ ಕೈಜೋಡಿಸಲ್ಲ ಎನ್ನುವ ಧೃಡ ನಿಲುವಿನಿಂದ ಜೆಡಿಎಸ್ ಗೆ ತಮ್ಮ ಬೆಂಬಲ ಘೋಷಿಸಿದ್ದರು. ಅತ್ತ ಹಿಂದೂಗಳ ಮತವನ್ನು ನೆಚ್ಚಿಕೊಳ್ಳಲು ಆಗದೇ, ಇತ್ತ ಮುಸ್ಲಿಮರನ್ನು ಹಿಡಿದಿಟ್ಟುಕೊಳ್ಳಲು ಆಗದೇ ಕಾಂಗ್ರೆಸ್ ಯುದ್ಧಭೂಮಿಯಲ್ಲಿ ಸಮರ ಶುರುವಾಗುವ ಮೊದಲೇ ಓಡಿಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಮುಸ್ಲಿಂ ಪ್ರೀತಿಗೆ ಮಕ್ಕಳ ಶಿಕ್ಷಣ ಬಲಿ!
ಕಾಂಗ್ರೆಸ್ ರಣತಂತ್ರಕಾರರು ಸಮರದ ಕೊನೆಯ ಒಂದೆರಡು ತಿಂಗಳು ಧರ್ಮದ ವಿಷಯ ತೆಗೆಯದೇ, ಕೇವಲ ಭ್ರಷ್ಟಾಚಾರ, ವಿಫಲ ಆಡಳಿತದ ವಿರುದ್ಧ ಟೀಕಾಪ್ರಹಾರ ನಡೆಸಲು ಸಲಹೆ ನೀಡಿದ್ದರು. ಅದರೊಂದಿಗೆ ಉಚಿತ ಘೋಷಣೆಗಳ ಗ್ಯಾರಂಟಿಗಳು ಕಾಂಗ್ರೆಸ್ಸಿಗೆ ವರದಾನವಾದವು. ಆಶ್ಚರ್ಯ ಎಂಬಂತೆ ಮುಸ್ಲಿಮರು ಈ ಬಾರಿ ಅತಂತ್ರ ಸರಕಾರ ಬರಬಾರದು ಎಂದು ನಿಶ್ಚಯಿಸಿಬಿಟ್ಟರು. ಒಂದು ವೇಳೆ ಅತಂತ್ರ ಬಂದರೆ ಜೆಡಿಎಸ್ ಈ ಸಲ ಬಿಜೆಪಿಗೆ ಬೆಂಬಲ ನೀಡಲಿದೆ. ಅದರಿಂದ ತಮಗೆ ಲಾಭ ಇಲ್ಲ ಎನ್ನುವ ಸಂದೇಶ ಮುಸ್ಲಿಂ ಪಾಳಯದಲ್ಲಿ ಪ್ರತಿಧ್ವನಿಸಿದವು. ಆದ್ದರಿಂದ ಏನೇ ಆಗಲಿ, ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಅದೇ ಚೌಚೌಬಾತ್ ಸರಕಾರ ಬರುವುದಕ್ಕಿಂತ ಕಾಂಗ್ರೆಸ್ ಪಕ್ಷಕ್ಕೆ ಒಂದು ಅವಕಾಶ ನೀಡೋಣ ಎಂದು ಅಲ್ಪಸಂಖ್ಯಾತ ಮುಖಂಡರು ಸಂದೇಶ ರವಾನಿಸಿದರು. ಕಾಂಗ್ರೆಸ್ಸಿನ ಮೂಗಿಗೆ ದಾರ ಹಾಕಿ ಕೆಲಸ ಮಾಡಿಸೋಣ ಎನ್ನುವ ತೀರ್ಮಾನವಾಯಿತು. ಹಾಗೆ ಮುಸ್ಲಿಮರ ಹಂಗಿನರಮನೆಯ ಸಿಂಹಾಸನದಲ್ಲಿ ವಿರಾಜಮಾನವಾಗಿರುವ ಕಾಂಗ್ರೆಸ್ಸಿಗೆ ಈಗ ಬೇರೆ ಗತಿ ಇಲ್ಲ. ಸಿದ್ದುವಿನ ಹೆಗಲ ಮೇಲೆ ಕುಳಿತು ಕಿವಿಯಲ್ಲಿ ಉಚ್ಚೆ ಉಯ್ಯುವ ತನಕ ಹೋಗಿರುವವರಿಗೆ ಇಳಿಸಲು ಆಗದೇ, ಅಲ್ಲಿಯೇ ಬಿಡಲು ಆಗದೇ ಒದ್ದಾಡುವ ಪರಿಸ್ಥಿತಿ ಸಿಎಂ ಅವರದ್ದು. ಈ ಹಂತದಲ್ಲಿ ಸ್ವಲ್ಪ ನಿರ್ಲಕ್ಷ್ಯ ಮಾಡಿದರೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಬುದ್ಧಿ ಕಲಿಸಲು ಅಲ್ಪಸಂಖ್ಯಾತರು ನಿರ್ಣಯಿಸಿಬಿಟ್ಟರೆ ಏನು ಮಾಡುವುದು ಎನ್ನುವ ಆತಂಕ ಕಾಂಗ್ರೆಸ್ ಮುಖಂಡರದ್ದು. ಆದ್ದರಿಂದ ಎಲ್ಲಿಯೂ ಒಂದು ಚೂರು ಗೊಂದಲವಾಗದಂತೆ ಪ್ರತಿ ದಿನವೂ ಅಲ್ಪಸಂಖ್ಯಾತರಿಗೆ ಖುಷಿಯಾಗುವ ಹಾಗೆ ನಿರ್ಣಯ ಮಾಡುವಂತಹ ಅನಿವಾರ್ಯತೆ ಕಾಂಗ್ರೆಸ್ ಮುಂದಿದೆ. ಅದರ ಅಂಗವಾಗಿ ಆರ್ ಎಸ್ ಎಸ್ ಸಂಘಟನೆಗೆ ಹಿಂದಿನ ಬಿಜೆಪಿ ಕೊಟ್ಟಿರುವ ಭೂಮಿ ವಾಪಾಸ್ ಪಡೆಯುವ ಕೆಲಸಕ್ಕೆ ಸಚಿವರುಗಳು ಚಾಲನೆ ನೀಡಿದ್ದಾರೆ.
ಮಂಗಳೂರು ಕಾಂಗ್ರೆಸ್ ಕಚೇರಿಗೆ ಭೂಮಿ ಕೊಟ್ಟಿದ್ದು ಯಾರು?
ಅಷ್ಟಕ್ಕೂ ಜನಸೇವಾ ಟ್ರಸ್ಟಿಗೆ ತಾವರಕೆರೆ ಹೋಬಳಿಯಲ್ಲಿ ನೀಡಿರುವ ಜಾಗ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಅಲ್ಲಿ ಹಿಂದುಳಿದ, ಶೋಷಿತರ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವ ದೂರದೃಷ್ಟಿಯ ಯೋಜನೆ ಇತ್ತು. ಆದರೆ ಕಾಂಗ್ರೆಸ್ ಪ್ರತಿದಿನವೂ ಮುಸ್ಲಿಮರನ್ನು ಖುಷಿಪಡಿಸುವ ಕೆಲಸಕ್ಕೆ ಕೈಹಾಕಿರುವುದರಿಂದ ಈಗಾಗಲೇ ಕೊಟ್ಟಿರುವ ಭೂಮಿಯನ್ನು ಹಿಂದಕ್ಕೆ ಪಡೆಯುತ್ತಿದೆ. ಹಾಗೇ ನೋಡಿದರೆ ಜನಸೇವಾ ಟ್ರಸ್ಟಿಗೆ ಈ ಭೂಮಿ ಹೋದರೆ ನಷ್ಟವಿಲ್ಲ. ನಷ್ಟವಾಗುವುದು ಅಸಂಖ್ಯಾತ ಪಾಪದ ಮಕ್ಕಳಿಗೆ. ಅವರಿಗೆ ಶಿಕ್ಷಣದ ಸೌಲಭ್ಯದಿಂದ ವಂಚಿಸಿದ ಪಾಪ ಕಾಂಗ್ರೆಸ್ಸಿಗೆ ತಟ್ಟಲಿದೆ. ಹಾಗೆ ನೋಡಿದರೆ ಮಂಗಳೂರಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯ ಭೂಮಿಯನ್ನು ಇಂದಿರಾ ಪ್ರಿಯದರ್ಶಿನಿ ಟ್ರಸ್ಟ್ ಎನ್ನುವ ಕಾಂಗ್ರೆಸ್ಸಿನ ಅಂಗಸಂಸ್ಥೆಗೆ ಕೊಟ್ಟಿದ್ದೇ ಬಿಜೆಪಿಯ ಅವಧಿಯಲ್ಲಿ ಸಿಎಂ ಆಗಿದ್ದ ಸದ್ದು ಗೌಡರು. ಅಲ್ಲಿ ಕಾಂಗ್ರೆಸ್ ಕಚೇರಿ ಕಟ್ಟಿ ಯಾವುದೋ ಬ್ಯಾಂಕಿಗೆ ಎಟಿಎಂ ಕೂಡ ಕೊಟ್ಟು ಕಾಂಗ್ರೆಸ್ ಹಣ ಮಾಡುತ್ತಿದೆ. ಆ ಭೂಮಿಯ ಬಗ್ಗೆ ಬಿಜೆಪಿ ಯಾಕೆ ಮಾತನಾಡುತ್ತಿಲ್ಲ. ಯಾಕೋ ಕಾಂಗ್ರೆಸ್ಸಿನವರ ಧೈರ್ಯ ಮೆಚ್ಚಬೇಕು. ಬಿಜೆಪಿಯ ಹೊಂದಾಣಿಕೆ ರಾಜಕೀಯ ಕೆಲವೊಮ್ಮೆ ಆ ಪಕ್ಷಕ್ಕೆ ದುಬಾರಿಯಾಗುತ್ತದೆ!!
Leave A Reply