ಚೀನಾ ಕುತಂತ್ರಕ್ಕೆ ಮಣಿಪುರದಲ್ಲಿ ಹೆಂಗಸರು ಬೆತ್ತಲಾಗುವ ಪರಿಸ್ಥಿತಿ ಬಂತು!!
ಮಣಿಪುರದಲ್ಲಿ ನಡೆಯುತ್ತಿರುವ ಸಂಘರ್ಷಗಳ ಬಗ್ಗೆ ಕೇಂದ್ರ ಸರಕಾರ ಚರ್ಚೆ ಮಾಡಲು ತಯಾರಿದೆ ಎಂದು ಗೃಹ ಸಚಿವ ಅಮಿತ್ ಶಾ ಅವರು ಹೇಳಿದರೂ ವಿಪಕ್ಷಗಳು ಕೇಳುವ ಸ್ಥಿತಿಯಲ್ಲಿ ಇಲ್ಲ. ಯಾಕೆಂದರೆ ಅಮಿತ್ ಶಾ ಅವರಿಗೆ ಲೋಕಸಭಾ ಅಧಿವೇಶನದಲ್ಲಿ ಮಣಿಪುರದ ವಿಷಯದಲ್ಲಿ ಮಾತನಾಡಲು ಬಿಟ್ಟರೆ ಮಣಿಪುರದ ಸತ್ಯ ಹೊರಗೆ ಬೀಳುತ್ತದೆ. ಹಾಗೇನಾದರೂ ಆದರೆ ಕಾಂಗ್ರೆಸ್ ಸಹಿತ ವಿಪಕ್ಷಗಳ ವಿರುದ್ಧ ಕ್ರೈಸ್ತ ಮಿಶನರಿಗಳು ತಿರುಗಿಬೀಳುತ್ತವೆ. ನಂತರ ರಾಹುಲ್ ಯಾವ ಮುಖ ಇಟ್ಟುಕೊಂಡು ರಾಷ್ಟ್ರದಲ್ಲಿ ಮತ ಕೇಳಲು ಸಾಧ್ಯ. ಕ್ರೈಸ್ತರು ಇವರನ್ನು ನಂಬುತ್ತಾರಾ? ಮಣಿಪುರದ ಹಿಂದುಳಿದ ಬುಡಕಟ್ಟು ಸ್ಥಳಗಳಲ್ಲಿ 2000 ಚರ್ಚುಗಳನ್ನು ಕಟ್ಟಿಸಿ ಎಗ್ಗಿಲ್ಲದ ಮತಾಂತರಗಳನ್ನು ನಡೆಸಿ ಈಗಾಗಲೇ ಮಣಿಪುರದ ಕುಕಿ ಸಮುದಾಯವನ್ನು ತಮ್ಮ ತೆಕ್ಕೆಗೆ ಸೆಳೆಯುವಲ್ಲಿ ಕ್ರೈಸ್ತ ಪಾದ್ರಿಗಳು ಬಹುತೇಕ ಯಶಸ್ವಿಯಾಗಿದ್ದಾರೆ. ಈಗ ಕಾಂಗ್ರೆಸ್ ಅಥವಾ ಬೇರೆ ವಿಪಕ್ಷಗಳು ಅವರ ವಿರುದ್ಧ ಹೋಗುವಂತಿಲ್ಲ. ಹಾಗಂತ ಮಣಿಪುರದ ಮೂಲನಿವಾಸಿಗಳಾದ ಸನಾತನ ಪರಂಪರೆಯನ್ನು ಅಲ್ಲಿ ಉಳಿಸಿ ಬೆಳೆಸುವಲ್ಲಿ ನಿರತರಾಗಿರುವ ಮೈತಿಗಳ ಪರ ವಿಪಕ್ಷಗಳಿಗೆ ಹೋಗಲು ಮನಸ್ಸಿಲ್ಲ.
ಇನ್ನು ಕುಕಿಗಳು ಬೆಳೆಸುವ ಅಫೀಮು ಸಾಮ್ರಾಜ್ಯ ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಬಂದ ಮೇಲೆ ಹಂತಹಂತವಾಗಿ ನಾಶಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ. ಕೇರಳ, ಕರ್ನಾಟಕ, ಉತ್ತರ ಪ್ರದೇಶ, ಅಸ್ಸಾಂ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಅಕ್ರಮವಾಗಿ ಬೇರೂರಿರುವ ಗಾಂಜಾ ಸರಬರಾಜಿನ ಮೂಲವೇ ಮಣಿಪುರ. ದೇಶ ಸಧೃಡವಾಗಿರಬೇಕಾದರೆ ಗಾಂಜಾ, ಅಫೀಮು ಸಂಪೂರ್ಣ ನಾಶವಾಗಬೇಕು. ಅದಕ್ಕೆ ಮಣಿಪುರದ ಸರಕಾರ ಬದ್ಧತೆಯನ್ನು ತೋರಿಸಿದೆ. ಕಳೆದ 5 ವರ್ಷಗಳಲ್ಲಿ 18000 ಎಕರೆ ಪ್ಲಾಂಟೇಶನ್ ನಲ್ಲಿ ಬೆಳೆಸಲಾಗುತ್ತಿದ್ದ ಅಫೀಮನನ್ನು ನಾಶಪಡಿಸಲಾಗಿದೆ. ಇದರಿಂದ ಕೆರಳಿದ ಕುಕಿಗಳು ಇದರ ವಿರುದ್ಧ ಸಿಡಿದೆದ್ದಿದ್ದಾರೆ. ಮೂಲನಿವಾಸಿಗಳಾದ ಮೈತಿಗಳನ್ನು ಅವರು ಹತ್ಯೆ ಮಾಡುತ್ತಿದ್ದಾರೆ. ಈಗ ಕುಕಿಗಳನ್ನು ನಿಯಂತ್ರಿಸಲು ಪೊಲೀಸರು ಪ್ರಯತ್ನಪಟ್ಟರೆ ಅವರ ಮೇಲೆ ಹಲ್ಲೆ ಮಾಡಲಾಗುತ್ತಿದೆ. ಎಲ್ಲಿಯ ತನಕ ಪರಿಸ್ಥಿತಿ ಇದೆ ಎಂದರೆ ಮೈತಿಗಳ ಮೇಲೆ ದಾಳಿ ಮಾಡಲು ಹೋಗುವ ಕುಕಿ ಮಹಿಳೆಯರು ತಾವು ಸಂಪೂರ್ಣ ಬೆತ್ತಲಾಗಿ ಕೈಯಲ್ಲಿ ಆಯುಧವನ್ನು ಹೋಗುತ್ತಾರೆ. ಪೊಲೀಸರು ತಡೆದರೆ ಬೆತ್ತಲು ಮಹಿಳೆಯರು ಪೊಲೀಸರ ಮೇಲೆ ಹಲ್ಲೆ ಮಾಡುತ್ತಾರೆ. ಇದರಿಂದ ಪೊಲೀಸರು ಏನೂ ಮಾಡುವ ಸ್ಥಿತಿಯಲ್ಲಿ ಇಲ್ಲ. ಒಂದು ವೇಳೆ ಪೊಲೀಸರು ಮುಟ್ಟಲು ಬಂದರೆ ಮಹಿಳೆಯ ಹಿಂದೆ ನಿಂತು ವಿಡಿಯೋ ಮಾಡುವ ಹುಡುಗರು ಬೆತ್ತಲೆ ಮಹಿಳೆಯ ಮೇಲೆ ಪೊಲೀಸರ ದೌರ್ಜನ್ಯ ಎಂದು ವಿಡಿಯೋ ವೈರಲ್ ಮಾಡುತ್ತಾರೆ. ಆದ್ದರಿಂದ ಪೊಲೀಸರು ಅಸಹಾಯಕರಾಗಿದ್ದಾರೆ. ಆದ್ದರಿಂದ ಇದನ್ನೆಲ್ಲ ನಿಯಂತ್ರಿಸಲು ಮಣಿಪುರದಲ್ಲಿ ಸೇನೆಯನ್ನು ಕೇಂದ್ರ ಕಳುಹಿಸಿಕೊಟ್ಟಿದೆ. ಕುಕಿಗಳ ಹೆಸರಿನಲ್ಲಿ ಅಡಗಿರುವ ರೋಹಿಂಗ್ಯಾ ಭಯೋತ್ಪಾದಕರನ್ನು ಕೊಲ್ಲಲಾಗಿದೆ. ಇದರಿಂದ ಚೀನಾ ಕೆರಳಿದೆ. ಅದು ವಿಪಕ್ಷಗಳಿಂದ ಇದು ಪ್ರಜಾಪ್ರಭುತ್ವದ ಕೊಲೆ ಎಂದು ಹೇಳಿಕೆ ಕೊಡಿಸಿ ಪ್ರಪಂಚಕ್ಕೆ ಬಿತ್ತರಿಸುತ್ತಿದೆ. ಈ ಮೂಲಕ ಭಾರತವನ್ನು ಇರಿಸುಮುರಿಸು ಮಾಡುವ ಪ್ರಯತ್ನ ನಡೆಯುತ್ತಿದೆ.
ಚೀನಾಕ್ಕೆ ಲಾಭ, ಬಲಿಪಶು ಮಣಿಪುರ!
ಅಷ್ಟಕ್ಕೂ ಮಣಿಪುರದಲ್ಲಿ ನಡೆಯಲಿರುವ ಈ ಘರ್ಷಣೆಯ ಲಾಭದ ನಿರೀಕ್ಷೆಯಲ್ಲಿ ಇರುವುದು ನೆರೆಯ ಚೀನಾ. ಮಣಿಪುರ ಚೀನಾದೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಮಣಿಪುರದ ಮೇಲೆ ಕಣ್ಣಿಟ್ಟ ಚೀನಾ ವಿರೋಧಿ ಪಕ್ಷಗಳನ್ನು ಬೆಂಬಲಿಸಲಾರಂಭಿಸಿತು. ಇತ್ತ ಪಾಕಿಸ್ತಾನ ಸಹ ರೋಹಿಂಗ್ಯಾ ಮುಸ್ಲಿಮರ ಮೂಲಕ ತನ್ನವರನ್ನು ಒಳಬಿಡಲಾರಂಭಿಸಿತು. ಇದರಿಂದ ಆಗಾಗ ಮೈತಿ ಮತ್ತು ಕುಕಿ ಹಾಗೂ ರೋಹಿಂಗ್ಯಾ ಮುಸ್ಲಿಮರ ನಡುವೆ 1981 ರಿಂದ ವ್ಯಾಪಕ ಹಿಂಸೆ ನಡೆಯುತ್ತಿದೆ. ಇಲ್ಲಿಯ ತನಕ ಸಾವಿರಾರು ಮೈತಿಗಳನ್ನು ಹತ್ಯೆ ಮಾಡಲಾಗಿದೆ. ಒಂದು ಕಾಲದಲ್ಲಿ ಇಲ್ಲಿ ಶಾಂತಿ ನೆಲೆಸಲು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಕೂಡ ಶಾಂತಿ ಮಾತುಕತೆ ನಡೆಸಿದ್ದಾರೆ. ಅದರಿಂದ ಕುಕಿಗಳು ಗುಡ್ಡಕಾಡಿನಲ್ಲಿ, ಮೈತಿಗಳು ಬಯಲು ಪ್ರದೇಶದಲ್ಲಿ ನೆಲೆಸುವ ಒಪ್ಪಂದವಾಯಿತು. ಕುಕಿಗಳು ಗುಡ್ಡಪ್ರದೇಶದಲ್ಲಿ ಅಫೀಮು ಬೆಳೆಯಲಾರಂಭಿಸಿದರು. ಅವರಿಗೆ ಹೇರಳವಾದ ಹಣ ಹರಿದು ಬಂತು. ಇನ್ನೊಂದೆಡೆ ಬಯಲು ಪ್ರದೇಶದಲ್ಲಿ ಅಂತಹ ಏನೂ ಉತ್ಪಾದನೆ ಇಲ್ಲದೆ ಮೈತಿಗಳು ಸಂಕಷ್ಟಕ್ಕೆ ಬಿದ್ದರು. ಡ್ರಗ್ ಮಾಫಿಯಾ ಮತ್ತು ಉಗ್ರವಾದ ಎಗ್ಗುಸಿಗ್ಗಿಲ್ಲದೇ ಕುಕಿಗಳು ಅಫೀಮು ಬೆಳೆಯಲಾರಂಭಿಸಿದರು.
ವಲಸೆ ಕುಕಿಗಳ ಆಟೋಪ ಕಡಿಮೆ ಮಾಡಲೇಬೇಕು!
ಒಂದು ಕಡೆ ಅಫೀಮು ನಾಶವಾಗುತ್ತಿರುವ ಕೋಪ ಇದ್ದರೆ ಮತ್ತೊಂದೆಡೆ ಮೀಸಲಾತಿ ವಿಷಯವೂ ಈ ಗಲಾಟೆಗೆ ಕಾರಣವಾಗಿದೆ. ಆದಿವಾಸಿ ಮೈತಿ ಜನಾಂಗದವರು ಮೊದಲು ಎಸ್ ಟಿಗೆ ಸೇರಿದ್ದರು. ಅವರನ್ನು ಹಿಂದಿನ ಕಾಂಗ್ರೆಸ್ ಸರಕಾರ ಮೀಸಲಾತಿಯಿಂದ ತೆಗೆದುಹಾಕಿ ಕುಕಿಗಳನ್ನು, ಮತಾಂತರಗೊಂಡಿದ್ದ ಕ್ರೈಸ್ತರನ್ನು ಎಸ್ ಟಿಗೆ ಸೇರಿಸಿತ್ತು. ಕುಪಿತಗೊಂಡ ಮೈತಿಗಳು ಆಗಾಗ ಗಲಾಟೆಗಳನ್ನು ಎಬ್ಬಿಸಿಲು ಶುರು ಮಾಡಿದರು. 2010 ರಲ್ಲಿ ಮೈತಿ ಜನಾಂಗದ ನಾಯಕರು ಆದಿವಾಸಿಗಳಾಗಿದ್ದ ತಮ್ಮನ್ನು ಎಸ್ ಟಿ ಕೆಟಗರಿಗೆ ಸೇರಿಸಬೇಕು ಎಂದು ಕೇಸ್ ಹಾಕಿದರು. 2023 ರಲ್ಲಿ ಹೈಕೋರ್ಟ್ ಅಸ್ತು ಅಂದಿತು. ಮೊದಲೇ ತಮ್ಮ ಹಣದ ಹರಿವಾಗಿದ್ದ ಅಫೀಮು ಬೆಳೆಯ ನಾಶಕ್ಕೆ ಕೈ ಹಾಕಿದ್ದ ಸರಕಾರದ ಕ್ರಮದಿಂದ ಕೋಪಗೊಂಡಿದ್ದ ಕುಕಿಗಳು ಈಗ ಮೀಸಲಾತಿಗೆ ಮೈತಿಗಳು ಸೇರಿದ್ದ ಕಾರಣ ಗಲಾಟೆಯನ್ನು ದೊಡ್ಡದಾಗಿಸಿದ್ದಾರೆ. ನೆರೆಯ ಬರ್ಮಾ (ಮ್ಯಾನ್ಮಾರ್) ದೇಶದಿಂದ ವಲಸೆ ಬಂದ ಕುಕಿ ಜನಾಂಗ ಈಗ ಇಲ್ಲಿ ಮಾಡುತ್ತಿರುವ ಕಿತಾಪತಿಯನ್ನು ನಾವು ಅರ್ಥ ಮಾಡಿಕೊಳ್ಳಬೇಕು!
Leave A Reply