ಸ್ವಇಚ್ಚೆಯ ದೀರ್ಘಕಾಲದ ಲೈಂಗಿಕ ಸಂಬಂಧ ಅತ್ಯಾಚಾರವಲ್ಲ

ಆರು ವರ್ಷಗಳ ಕಾಲ ಪರಸ್ಪರ ಸ್ವಇಚ್ಚೆಯಿಂದ ದೈಹಿಕ ಸಂಬಂಧದಲ್ಲಿದ್ದ ಯುವತಿ ನಂತರ ಲೈಂಗಿಕ ದೌರ್ಜನ್ಯದ ಆರೋಪವನ್ನು ಮಾಡಿದ್ದ ಎರಡು ಕ್ರಿಮಿನಲ್ ಮೊಕದ್ದಮೆಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಸಾಮಾಜಿಕ ಜಾಲತಾಣದ ಮೂಲಕ ಓರ್ವ ಯುವತಿಗೆ ಒಬ್ಬ ಯುವಕ ಪರಿಚಯವಾಗಿದ್ದ. ಆ ಯುವಕ ಅಡುಗೆ ಮಾಡುವುದರಲ್ಲಿ ಎತ್ತಿದ ಕೈ. ತನ್ನ ಮನೆಯಲ್ಲಿ ತಾನೇ ರುಚಿಯಾದ ಅಡುಗೆಯನ್ನು ತಯಾರಿಸುತ್ತಿದ್ದ. ಆ ಬಳಿಕ ಯುವತಿ ಅಲ್ಲಿಯೇ ಹತ್ತಿರದ ಮನೆಯೊಂದರಲ್ಲಿ ವಾಸಿಸುತ್ತಿದ್ದ ಕಾರಣ ಅವನು ಊಟಕ್ಕೆ ಆಹ್ವಾನ ನೀಡುತ್ತಿದ್ದ. ಅವನ ಕೈ ರುಚಿಗೆ ಮಾರು ಹೋಗಿದ್ದ ಆಕೆ ಆತನ ಮನೆಗೆ ಹೋಗಿ ಬರುತ್ತಿದ್ದಳು. ಅಲ್ಲಿ ಅವರು ಊಟದ ಮೊದಲು ಬಿಯರ್ ಕುಡಿದು ನಂತರ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದರು. ಇದು ಸುಮಾರು ಆರು ವರ್ಷಗಳ ಕಾಲ ನಡೆದಿದೆ.
ಈಗ ಆ ಯುವತಿ ಅವನು ತನ್ನನ್ನು ಮದುವೆಯಾಗಲು ಒಪ್ಪುತ್ತಿಲ್ಲ ಎಂದು ಹೈಕೋರ್ಟಿನಲ್ಲಿ ಮೊಕದ್ದಮೆ ಹೂಡಿದ್ದಾಳೆ. ಇಬ್ಬರೂ ಮೊದಲ ದಿನದಿಂದಲೇ ಒಮ್ಮತದ ಮೇರೆಗೆ ನಡೆಸಿದ ಕೃತ್ಯವೂ ಇದಾಗಿದ್ದು, ಅಂತಹ ಲೈಂಗಿಕ ಸಮಪರ್ಕವು ಅತ್ಯಾಚಾರಕ್ಕೆ ಅರ್ಹವಾಗುವುದಿಲ್ಲ. ಯಾಕೆಂದರೆ ಇದು ಆರು ವರ್ಷಗಳ ಸುದೀರ್ಘ ಸಂಬಂಧವಾಗಿದೆ. ಒಂದು ವೇಳೆ ನಾವು ಈ ಪ್ರಕರಣದಲ್ಲಿ ಮುಂದಿನ ವಿಚಾರಣೆಗೆ ಅನುಮತಿ ನೀಡಿದರೆ ಅದು ಸುಪ್ರೀಂ ಕೋರ್ಟಿನ ಹಲವಾರು ತೀರ್ಪುಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ವಿವರಣೆ ನೀಡಿ ಕರ್ನಾಟಕ ಹೈಕೋರ್ಟ್ ಪ್ರಕರಣವನ್ನು ವಜಾಗೊಳಿಸಿದೆ. ಯಾವುದೋ ಮಾಯೆಯಲ್ಲಿ ಬೀಳುವ ಹೆಣ್ಣುಮಕ್ಕಳು ನಂತರ ಅನ್ಯಾಯವಾಯಿತು ಎಂದು ಕೋರ್ಟ್ ಮೆಟ್ಟಲೇರಿದರೆ ಏನಾಗುತ್ತದೆ ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ.