ಪ್ರಕಾಚ ತಾನು ಬುದ್ಧಿವಂತ ಅಂದುಕೊಂಡಿದ್ದೇ ದೊಡ್ಡ ಜೋಕು!
ದ್ವೇಷದಿಂದ ದ್ವೇಷವನ್ನು ಕಾಣುತ್ತವೆ. ನಾನು ಜೋಕ್ ಮಾಡಿದ್ದೆ. ಆರ್ಮಸ್ಟ್ರಾಂಗ್ ಕಾಲದ ಜೋಕ್ ಹೇಳಿದ್ದೆ. ಆತ ನಮ್ಮ ಕೇರಳದ ಚಾಯಿವಾಲಾ. ನಿಮಗೆ ಜೋಕ್ ಅರ್ಥವಾಗದಿದ್ದರೆ ಜೋಕ್ ನಿಮ್ಮ ಮೇಲೆಯೇ ಆಗುತ್ತದೆ ಎಂದು ಅಂದುಕೊಳ್ಳಿ ಎನ್ನುವ ಅರ್ಥದ ಮಾತುಗಳನ್ನು ಪ್ರಕಾಶ್ ರೈ ತಮ್ಮ “ಎಕ್ಸ್” ನಲ್ಲಿ ಬರೆದುಕೊಂಡಿದ್ದಾರೆ. ಅಷ್ಟಕ್ಕೂ ದ್ವೇಷ ಶುರು ಮಾಡಿದವರು ಯಾರು? ಸಂಶಯವೇ ಇಲ್ಲ, ಪ್ರಕಾಶ್ ರೈ. ಯಾವಾಗ ನಮ್ಮ ಚಂದ್ರಯಾನ – 3 ಚಂದ್ರನಲ್ಲಿ ಇಳಿಯಲು ಕ್ಷಣಗಣನೆ ಆರಂಭ ಆಗಿರುವಾಗ ಒಬ್ಬ ವ್ಯಕ್ತಿ ಚಾಯ್ ವಾಲಾ ನ ಫೋಟೋ ಹಾಕಿ ಇಷ್ಟೇ ಮೇಲಿನಿಂದ ಕಾಣುವುದು ಎಂದು ಹೇಳುತ್ತಾರೆ ಎಂದಾದರೆ ಅದು ಭಾರತಕ್ಕೆ ಮಾಡಿದ ತಮಾಷೆ ಅಲ್ಲವೇ? ಈಗ ಎಲ್ಲಾ ಕಡೆ ಬಿಸಿ ಮುಟ್ಟಿದ ಬಳಿಕ ನಾನು ಹಾಕಿದ ಫೋಟೋ ಈಗಿನ ವಿಷಯಕ್ಕೆ ಸಂಬಂಧಪಟ್ಟಿದ್ದಲ್ಲ. ಅದು ಆರ್ಮ್ ಸ್ಟ್ರಾಂಗ್ ಚಂದ್ರನಲ್ಲಿ ಇಳಿದಾಗ ತಮಾಷೆ ಮಾಡಿದ ಫೋಟೋ ಎಂದು ಹೇಳಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೆ ಆಗುತ್ತಾ? ಅಷ್ಟೇ ಅಲ್ಲ, ಪ್ರಕಾಶ್ ರೈ ಬ್ರೇಕಿಂಗ್ ನ್ಯೂಸ್ ಎಂದು ಕೂಡ ಬರೆದಿದ್ದಾರೆ. ಈಗ ಅದು ಹಿಂದಿನ ಆರ್ಮಸ್ಟ್ರಾಂಗ್ ಕಾಲದ ಫೋಟೋ ಎಂದು ಹೇಳಿದರೆ ಆಗುತ್ತಾ? ಅದರೊಂದಿಗೆ ಫಸ್ಟ್ ಪಿಕ್ಚರ್ ಚಂದ್ರನಿಂದ, #ವಿಕ್ರಮ್ ಲ್ಯಾಡರ್ ಎಂದು ಕೂಡ ಬರೆದಿದ್ದಾರೆ. ಆರ್ಮಸ್ಟ್ರಾಂಗ್ ಸಮಯದಲ್ಲಿ ವಿಕ್ರಮ್ ಲ್ಯಾಡರ್ ಇತ್ತಾ? ಇಲ್ಲದಿದ್ದರೆ ನಾನು ಹೇಳಿದ್ದು ಆವತ್ತಿಗೆ, ಇವತ್ತಿಗೆ ಅಲ್ಲ, ಅದು ಬರೀ ಜೋಕು ಎಂದು ಹೇಳುವ ಮೂಲಕ ತಮ್ಮ ಅಸಲಿಯತ್ತನ್ನು ಪ್ರದರ್ಶಿಸಿದ್ದಾರೆ.
ಪ್ರಕಾಶ್ ಜೀವನ ಅಥವಾ ಸಿನೆಮಾ ಯಾವುದೂ ಮಾದರಿ ಅಲ್ಲ!
ನೋಡ್ರಿ, ಭಾರತದ ಒಬ್ಬ ಖ್ಯಾತ ನಟ ಅವರದ್ದೇ ದೇಶದ ಚಂದ್ರಯಾನವನ್ನು ಹೇಗೆ ತಮಾಷೆ ಮಾಡುತ್ತಿದ್ದಾನೆ ಎಂದು ವಿದೇಶದಲ್ಲಿ ಕುಳಿತುಕೊಂಡಿರುವ ಭಾರತದ ವೈರಿಗಳು ತಿಳಿದುಕೊಳ್ಳಲ್ವಾ? ಈ ಚಂದ್ರಯಾನದಿಂದ ಭಾರತದ ಹಿರಿಮೆ ವಿಶ್ವಾದ್ಯಂತ ಇನ್ನಷ್ಟು ಹೆಚ್ಚು ಪಸರಿಸಿದೆ. ನಾವು ಪ್ರಪಂಚದ ಮುಂದುವರೆದ ರಾಷ್ಟ್ರಗಳ ಸಾಲಿನಲ್ಲಿ ಈಗ ಹೆಮ್ಮೆಯಿಂದ ನಿಂತಿದ್ದೇವೆ. ಈ ಯೋಜನೆಯಿಂದ ಏನು ಲಾಭ ಸಿಗಲಿದೆ ಎಂದು ಪ್ರಕಾಶ್ ರೈ ಅಂತವರಿಗೆ ಗೊತ್ತಾಗದೇ ಇರಬಹುದು. ಇದು ಸಾಮಾನ್ಯ ಜನರ ತಲೆಗೆ ಹೋಗದಂತಹ ವಿಷಯ. ಆದರೆ ವಿಜ್ಞಾನಿಗಳು ಎಂದು ಯಾರು ಇರುತ್ತಾರಲ್ಲ, ಅವರಿಗೆ ಇದರಿಂದ ದೇಶದ ಉನ್ನತಿಗೆ ಏನು ಪ್ರಯೋಜನವಿದೆ ಎಂದು ಗೊತ್ತಿದೆ. ಹಾಗೆ ನೋಡಿದರೆ ಪ್ರಕಾಶ್ ರೈ ಸಿನೆಮಾ ನೋಡಿದವರಿಗೆ ಏನು ಸಿಗುತ್ತದೆ ಎಂದು ಕೇಳಿದರೆ ಏನು ಸಿಗುತ್ತದೆ? ಏನಿಲ್ಲ, ಆತನ ವಿಲನ್ ಪಾತ್ರದಿಂದ ಸಮಾಜದಲ್ಲಿ ಕೆಟ್ಟ ಸಂದೇಶ ಹೋಗುತ್ತದೆ ಬಿಟ್ಟರೆ ಏನೂ ಇಲ್ಲ. ಅದು ಬಿಡಿ, ಆತನ ಜೀವನವನ್ನು ನೋಡಿದರೆ ಏನು ಅನಿಸುತ್ತದೆ. ಅಲ್ಲಿಯೂ ಏನಿಲ್ಲ, ಎಷ್ಟು ಪತ್ನಿಯರು. ಅವನಿಗೆ ಮಾತ್ರ ಗೊತ್ತು. ದೇವರನ್ನು ನಂಬುವುದಿಲ್ಲ. ಹಾಗಂತ ಪತ್ನಿಗೆ ಮಕ್ಕಳಾಗಲು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕಳುಹಿಸುತ್ತಾನೆ. ಬೇರೆ ಕಡೆ ಜಸ್ಟ್ ಆಸ್ಕಿಂಗ್ ಎಂದು ನಮ್ಮ ನಂಬಿಕೆಗಳಿಗೆ ಘಾಸಿಗೊಳಿಸುತ್ತಾನೆ. ಅದೇ ಮನೆಯಲ್ಲಿ ಜಸ್ಟ್ ಆಸ್ಕಿಂಗ್ ಎಂದು ಪತ್ನಿಯ ನಂಬಿಕೆಗೆ ಪೆಟ್ಟು ನೀಡಿದರೆ ಆಕೆ ಬಿಟ್ಟು, ಎದ್ದು ಹೋಗುತ್ತಾಳೆ ಎಂಬ ಹೆದರಿಕೆ ಇರುತ್ತದೆ.
ಮೋದಿ ನಿಮಿತ್ತ ಮಾತ್ರ!
ಇನ್ನು ಪ್ರಕಾಶ್ ರೈ ಅಂತಹ ಕೆಲವರು ನಮ್ಮ ಇಸ್ರೋ ವಿಜ್ಞಾನಿಗಳು ಚಂದ್ರಯಾನ ಉಡಾವಣೆಯ ಹಿಂದಿನ ದಿನ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಭೇಟಿ ಕೊಟ್ಟಾಗ ಅದನ್ನು ಉಢಾಪೆಯಿಂದ ಹೀಗಳೆದಿದ್ದರು. ತಿಮ್ಮಪ್ಪನ ಪಾದಕ್ಕೆ ಚಂದ್ರಯಾನ ಎಂದು ಕಿಚಾಯಿಸಿದ್ದರು. ಆದರೆ ಕೋಟ್ಯಾಂತರ ಭಾರತೀಯರ ಪ್ರಾರ್ಥನೆ ಹುಸಿಯಾಗಲಿಲ್ಲ. ಅದು ಯಶಸ್ವಿಯಾಗಿ ಚಂದ್ರನಲ್ಲಿ ಇಳಿಯಲು ಕೆಲವೇ ಗಂಟೆಗಳು ಬಾಕಿ ಇವೆ. ಹಿಂದಿನ ಬಾರಿ ಚಂದ್ರಯಾನ 2 ವಿಫಲವಾದಾಗ ಇಸ್ರೋ ಅಧ್ಯಕ್ಷರು ಹೇಗೆ ಅತ್ತಿದ್ದರು ಎಂದು ಜಗತ್ತು ನೋಡಿದೆ. ಕೊನೆಗೆ ಪ್ರಧಾನಿಯೇ ಅವರನ್ನು ತಬ್ಬಿ ಸಂತೈಸಿದ್ದನ್ನು ಕೂಡ ನಾವು ನೋಡಿದ್ದೇವೆ. ಹೆಚ್ಚು ಜನರನ್ನು ಹೊಂದಿರುವ ದೇಶ ಎಂಬ ಮೂದಲಿಕೆಯಿಂದ ಅಸಾಧ್ಯವನ್ನು ಸಾಧಿಸುವ ದೇಶ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ದೇಶವಾಗಿ ಭಾರತ ಬದಲಾಗುತ್ತಿರುವುದು ನಮ್ಮ ಖುಷಿಯ ವಿಷಯ. ಅದು ಪ್ರಧಾನಿ ಮೋದಿಯವರ ಸೇವಾವಧಿಯಲ್ಲಿ ಸಾಧ್ಯವಾಗುತ್ತಿದೆ ಎಂದು ಯಾರಾದರೂ ಹೇಳಿಕೊಂಡರೆ ಅದು ಅವರ ಅಭಿಮಾನ ವಿನ: ಅದೊಂದೇ ಸತ್ಯವಲ್ಲ. ಯಾಕೆಂದರೆ ದೇಶದ ಚುಕ್ಕಾಣಿ ಸಮರ್ಥರ ಕೈಯಲ್ಲಿ ಇದ್ದಾಗ ಇದೆಲ್ಲವೂ ಸುಲಭ. ಯಾಕೋ ಕೆಲವರು ತಮ್ಮ ಇರುವಿಕೆಯನ್ನು ತೋರಿಸಲು ಕೆಸರಿನಲ್ಲಿಯೂ ಒದ್ದಾಡುತ್ತಾರಲ್ಲ, ಅದೇ ಅಸಹ್ಯ!
Leave A Reply