ಪುಂಗಾಣಿ ಊದುತ್ತಿರೋಣ ಬನ್ನಿ!
1986 ರಲ್ಲಿ ಧೀರೂಭಾಯಿ ಅಂಬಾನಿ ತನಗೆ Stroke ಆದ ನಂತರ ತನ್ನ ಇಡೀ Business ಸಾಮ್ರಾಜ್ಯದ ಹೊಣೆಗಾರಿಕೆಯನ್ನು ತನ್ನಿಬ್ಬರು ಮಕ್ಕಳಾದ ಮುಖೇಶ್ ಮತ್ತು ಅನಿಲ್ ಗೆ ಹೊರೆಸುತ್ತಾರೆ…
ತಂದೆಯ ಮರಣಾನಂತರ ಸಹೋದರರಿಬ್ಬರಲ್ಲೂ Differences Create ಆಗಿ Reliance ಸಾಮ್ರಾಜ್ಯ ಎರಡು ಹೋಳಾಗುತ್ತದೆ…..
ಒಂದು ಹೋಳಿಗೆ ಅನಿಲ್ ಅಂಬಾನಿ ಅಧಿಪತಿಯಾದರೆ ಮತ್ತೊಂದು ಹೋಳಿಗೆ ಮುಖೇಶ್ ಅಂಬಾನಿ ಒಡೆಯರಾಗುತ್ತಾರೆ…..
ಇದಾದ ನಂತರ Reliance Industries Limited ಮತ್ತು Reliance ADA Group ನ ನಡುವೆ Non Compete Clause Agreement ಏರ್ಪಡುತ್ತದೆ.
ಈ Agreement ನ ಪ್ರಕಾರ RIL ಮತ್ತು Reliance ADA Group ಒಂದರ ಜೊತೆ ಮತ್ತೊಂದು Compete ಮಾಡುವಂತೆ ಇರಲಿಲ್ಲ ( Same Line of Business LOB) ಗೆ ಬರುವಂತಿರಲಿಲ್ಲ….
ಇದು ಅನ್ಯಾಯ ಅಲ್ಲವಾ…. ಖಂಡಿತ ಅಲ್ಲ…. ಅದೇ Business…..
ನೀವು ಯಾವುದಾದರೂ ಪತ್ರಿಕೆಗೆ Article ಬರೆಯುತ್ತಿದ್ದರೆ ಆ ಪತ್ರಿಕೆಗಳು ತಮ್ಮಲ್ಲಿ ಪ್ರಕಟವಾಗುವ Article ಅನ್ನು ಅದೇ Article ನ ಲೇಖಕ ಮತ್ತೊಂದು ಪತ್ರಿಕೆ ಅಥವಾ Source ನೊಂದಿಗೆ ಹಂಚಿಕೊಳ್ಳುವುದನ್ನೂ ನಿರ್ಭಂಧಿಸುತ್ತದೆ…
ಇದು ಅನ್ಯಾಯ ಅಲ್ಲವಾ…. ಜಗತ್ತು ಇರುವುದೇ ಹೀಗೆ…..
ಈಗ ಮುಖ್ಯ ವಿಚಾರಕ್ಕೆ ಬರ್ತೀನಿ….
ದ್ರೋಣಾಚಾರ್ಯರು ಕುರು ರಾಜಕುಮಾರರ ಗುರುಗಳು ಅವರಿಗೆ ಕುರು ಸಾಮ್ರಾಜ್ಯ ಆಶ್ರಮ, ಸ್ಥಾನಮಾನ ಮತ್ತು ಉದ್ಯೋಗವನ್ನೂ ನೀಡಿತ್ತು…. ಮತ್ತು ದ್ರೋಣಾಚಾರ್ಯರನ್ನು ಕುರು ರಾಜಕುಮಾರರ ವಿಧ್ಯಾಭ್ಯಾಸಕ್ಕಾಗಿಯೇ ನೇಮಕ ಮಾಡಲಾಗಿತ್ತು……. ರಾಜಕುಮಾರರಿಗೆ ಕಲಿಸುವ ಗುರುಗಳು ಯಾರೋ ಸಾಮಾನ್ಯನಿಗೆ ವಿಧ್ಯೆ ಕಲಿಸುವುದಿಲ್ಲ… ಹೀಗಾಗಿ ದ್ರೋಣಾಚಾರ್ಯರು ಕೂಡ ಕುರು ರಾಜಕುಮಾರನಲ್ಲದ ಏಕಲವ್ಯ ನಿಗೆ ಕಲಿಸಲಿಲ್ಲ….
ಇದು ನಿಮಗೆ ಮತ್ತೆ ಅನ್ಯಾಯ ಮತ್ತು ಅಸಮಾನತೆಯಂತೆ ಕಾಣಬಹುದು….
ಈಗ ಸಮಾನತೆಯ ಪರ ಭಾಷಣ ಬಿಗಿಯುವ ಪ್ರಿಯಾಂಕ್ ಖರ್ಗೆ ಮತ್ತು ಮಹಾದೇವಪ್ಪ, ಅದ್ಯಾವುದೋ ತಮಿಳುನಾಡಿನ ತರಕಲಾಂಡಿ… ಇವರೆಲ್ಲರಂತೆ ಯಾಕೆ ಸಾಮಾನ್ಯ ದಲಿತ / ಹಿಂದುಳಿದವ ಬದುಕು ನಡೆಸುತ್ತಿಲ್ಲ….
ಇವರೆಲ್ಲರ ಬಳಿ ಇರುವ ಹಣ, ಅಧಿಕಾರ, ಅಂತಸ್ತು ಯಾಕೆ ಸಾಮಾನ್ಯ ದಲಿತನ/ಹಿಂದುಳಿದವನ ಬಳಿ ಇಲ್ಲ….
ಮಾತೆತ್ತಿದರೆ ಸಮಾನತೆಯ ಭಾಷಣ ಮಾಅಉವ ಇವರು ಚುನಾವಣೆ ಬಂತೆಂದರೆ ಮತ್ತೆ ತಮಗೇ Ticket ಬಯಸುತ್ತಾರೆಯೇ ಹೊರತು ತಮ್ಮ ಬದಲಿಗೆ ಯಾರೋ ಸಾಮಾನ್ಯ ಚುನಾವಣೆಗೆ ನಿಲ್ಲಲಿ…ಆತ ಕೂಡ ತಮ್ಮ ಸಮಾಜಕ್ಕೆ ಬೆಳೆಯಲಿ ಎಂದು ಬಯಸೋದಿಲ್ಲ…
ಸ್ವತಃ ಅಸಮಾನತೆಯನ್ನು ಪೋಷಿಸುವ ಇವರು ಅದ್ಯಾವ ಮುಖ ಹೊತ್ತು ಸಮಾನತೆಯ ಬಗ್ಗೆ ಭಾಷಣ ಮಾಡುತ್ತಾರೋ ಗೊತ್ತಿಲ್ಲ
Again back to the matter…. ಹಸ್ತಿನಾಪುರದ ಸಾಮ್ರಾಜ್ಯ ದ್ರೋಣರನ್ನು ಕೇವಲ ರಾಜಕುಮಾರರ ಗುರುವಾಗಿ ನೇಮಕ ಮಾಡಿಕೊಂಡಿತ್ತು…. ಹೀಗಾಗಿ ದ್ರೋಣರು ಏಕಲವ್ಯನಿಗೆ ಕಲಿಸಲಿಲ್ಲ….
ಇನ್ನು ಕರ್ಣ….. ಪರಶುರಾಮರು ಕೇವಲ ಬ್ರಾಹ್ಮಣರಿಗೆ ಕಲಿಸುವ ಶಪಥ ಮಾಡಿದ್ದರು… ಕರ್ಣ ತಾನು ಬ್ರಾಹ್ಮಣನೆಂದು ಸುಳ್ಳು ಹೇಳಿ ವಿಧ್ಯೆ ಕಲಿತ….
ಸುಳ್ಳಿಗೆ ಆಯಸ್ಸು ಕಡಿಮೆ… ಹೀಗಾಗಿ ಸತ್ಯ ಒಂದು ದಿನ ಹೊರಬಂತು ಅಷ್ಟೇ….
ತಾಕತ್ತು, ಆಸಕ್ತಿ ಇರುವವರಿಗೆ ಏನು ಬೇಕಾದರೂ ಸಾಧಿಸುವ ಮಾರ್ಗ ಕೂಡ ಸಿದ್ದಿಸುತ್ತದೆ ಎಂಬುದಕ್ಕೆ ಇದೇ ಏಕಲವ್ಯ ಮತ್ತು ಕರ್ಣ ಸಾಕ್ಷಿ……
ಏಕಲವ್ಯ ಕಲಿರುವ ಅಪಾರ ಆಸಕ್ತಿಯೊಂದಿಗೆ ತಾನೇ ಸ್ವತಃ ಕಲಿತ… ಕರ್ಣ ಎಷ್ಟೋ ಅಡೆತಡೆ ಬಂದರೂ ವಿಧ್ಯೆ ಕಲಿತು ಮಹಾರಥಿ, ಮಹಾಯೋಧ ಮತ್ತು ಜಗತ್ತಿನ ಶ್ರೇಷ್ಠ ಬಿಲ್ಲುಗಾರರಲ್ಲಿ ಒಬ್ಬ ಎನಿಸಿಕೊಂಡು…. ಹಾಗಾಗಿಯೇ ಹಿರಿಯರು ಮನಸ್ಸಿದ್ದರೆ ಮಾರ್ಗ ಉಂಟೆಂದು ಹೇಳಿರುವುದು.
ಇನ್ನು ಅಸಮಾನತೆ…. ಅದು ಎಲ್ಲಿಲ್ಲ ಹೇಳಿ…..
ನಮ್ಮ ಐದು ಬೆರಳುಗಳೇ ಒಂದು ಸಮ ಇಲ್ಲ….. ನಾವೆಲ್ಲರೂ ಮನುಷ್ಯರೇ ಆದರೂ ಎಲ್ಲರಿಗೂ ಒಂದೇ ಮಟ್ಟದ ದೈಹಿಕ ಶಕ್ತಿ ಇಲ್ಲ…. ಒಂದೇ ಸಮನಾದ ಬುದ್ಧಿಶಕ್ತಿ ಇಲ್ಲ….
ಇನ್ನು ಸಂಬಳ ಮತ್ತು ದುಡಿಮೆಯ ವಿಚಾರಕ್ಕೆ ಬಂದರೆ ಒಂದೇ ರೀತಿಯ ಕೆಲಸ ಮಾಡುವ ಇಬ್ಬರ ವ್ಯಕ್ತಿಗಳ ನಡುವೆ ಸಂಬಳದಲ್ಲಿ ವ್ಯತ್ಯಾಸ ಇರುವ ಎಷ್ಟೋ ಉದಾಹರಣೆಗಳು ನಮಗೆ ಸಿಗುತ್ತವೆ….
ಹಾಗಾಯೇ ಹಿಂದೂ ಧರ್ಮದಲ್ಲೂ ಒಂದಷ್ಟು ಕೆಟ್ಟ ಆಚರಣೆಗಳು ರೂಢಿಯಲ್ಲವೆ…..
ಆ ಆಚರಣೆಗಳು ಕೆಟ್ಟದ್ದೇ ಹೊರತು ಧರ್ಮ ಅಲ್ಲ… ನಾವು ನೀವೆಲ್ಲರೂ ಹೋರಾಡಬೇಕಿರುವುದು ಆ ಆಚರಣೆ ವಿರುದ್ದವೇ ಹೊರತು ಧರ್ಮದ ವಿರುದ್ದ ಅಲ್ಲ…..
ಹೀಗಾಗಿ ಜಗತ್ತಿನಲ್ಲಿ ಇರೋ ಕೆಟ್ಟದ್ದೆಲ್ಲವೂ ಸನಾತನ ಹಿಂದೂ ಧರ್ಮದಲ್ಲಿಯೇ ಇದೆ… ಹಿಂದೂ ಧರ್ಮ ಬೇರೆ, ಬ್ರಾಹ್ಮಣ ಧರ್ಮ ಬೇರೆ ಅಂತ ಪುಂಗಾಣಿ ಊದಿಕೊಂಡು ಬಿಸ್ಕತ್ ಹಾಕಿದ ಯಜಮಾನನಿಗೆ ನೀಯತ್ತು ತೋರಿಸುತ್ತಾ ಬಾಲ ಅಲ್ಲಾಡಿಸೋದು ಅವರಿಗೆ ಅನಿವಾರ್ಯ.
Leave A Reply