ಇನ್ನೊಬ್ಬ ಉಗ್ರ ಸಿದ್ದೀಕ್ ಅನಾಮಧೇಯ ಶೂಟರ್ ಗಳಿಂದ ಹತ್ಯೆ!
Posted On December 1, 2023
ಪಾಕಿಸ್ತಾನದ ಉಗ್ರಗಾಮಿ ಸಿದ್ಧೀಕ್ ಪಾಕಿಸ್ತಾನದ ಖೈಬರ್ ಫಾಖ್ತುನ್ಕಾವಾ ಎಂಬ ಪ್ರದೇಶದಲ್ಲಿ ಅನಾಮಧೇಯ ಶೂಟರ್ ಗಳಿಂದ ಹತ್ಯೆಗೀಡಾಗಿದ್ದಾನೆ. ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳಿಗೆ ಇದೊಂದು ದೊಡ್ಡ ನಷ್ಟವಾಗಿದ್ದು, ಇತನ ಹತ್ಯೆಯನ್ನು ಅರಗಿಸಿಕೊಳ್ಳಲಾಗದ ಸ್ಥಿತಿಯಲ್ಲಿ ಉಗ್ರಗಾಮಿ ಮುಖಂಡರುಗಳಿದ್ದಾರೆ.
ಈತ ಉಗ್ರಗಾಮಿ ಸಂಘಟನೆಗಳ ಕಾರ್ಯಕ್ಕೆ ಹಣ ಸಂಗ್ರಹ ಕಾರ್ಯದಲ್ಲಿ ನಿರತನಾಗಿದ್ದ. ಪಾಕಿಸ್ತಾನದ ಜನಸಾಮಾನ್ಯರಿಂದ ಹಣ ವಸೂಲಿ ಮಾಡಿ ಅದನ್ನು ಸಂಘಟನೆಯ ಕಾರ್ಯಕ್ಕೆ ಬಳಸುತ್ತಿದ್ದ. ಈಗ ಈತ ಕೂಡ ಸತ್ತಿರುವುದು ಭಯೋತ್ಪಾದಕ ಸಂಘಟನೆಗಳಿಗೆ ಹಣದ ಮೂಲ ಕೂಡ ನಿಂತು ಹೋದಂತೆ ಆಗಿದೆ.
ಅಷ್ಟೇ ಅಲ್ಲ, ಉಗ್ರಗಾಮಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು ಹೆದರುವಂತೆ ಆಗಿದೆ. ತಾವು ಯಾವಾಗ ಅನಾಮಧೇಯ ವ್ಯಕ್ತಿಗಳ ಗುಂಡಿಗೆ ಬಲಿಯಾಗುತ್ತೇವೆಯೋ ಎಂದು ಭಯೋತ್ಪಾದಕರು ಭಯಪಡುವಂತಾಗಿದೆ. ಇಲ್ಲಿಯ ತನಕ ಇಪ್ಪತ್ತಕ್ಕೂ ಹೆಚ್ಚು ಭಯೋತ್ಪಾದಕರು ಇಂತಹ ಅನಾಮಧೇಯ ಶೂಟರ್ ಗಳ ಗುಂಡಿಗೆ ಬಲಿಯಾಗಿದ್ದಾರೆ!
- Advertisement -
Trending Now
ರಾಜ್ಯ ಸರಕಾರ 350 ಕೋಟಿ ಬಾಕಿ ಹಿನ್ನಲೆ; ದಯಾಮರಣ ನೀಡಲು ಮನವಿ!
January 14, 2025
Leave A Reply