Target ಇಲಿಯಾಸ್ ಕೊಲೆ ಪ್ರಕರಣ: ಐವರು ಆರೋಪಿಗಳು ಖುಲಾಸೆ
ಕುಖ್ಯಾತ “ಟಾರ್ಗೆಟ್ ಗ್ಯಾಂಗ್” ನಾಯಕನಾಗಿದ್ದ ಟಾರ್ಗೆಟ್ ಇಲಿಯಾಸ್‌ನ ಕೊಲೆ ಪ್ರಕರಣದಲ್ಲಿ ಐದು ಮಂದಿ ಆರೋಪಿಗಳನ್ನು ಮಂಗಳೂರಿನ ನ್ಯಾಯಾಲಯ ದೋಷಮುಕ್ತಗೊಳಿಸಿದೆ. ಉಳ್ಳಾಲ ಧರ್ಮನಗರದ ದಾವೂದ್, ಮಹಮ್ಮದ್ ಶಮೀರ್ ಆಲಿಯಾಸ್ ಕಡಪರ ಶಮೀರ್. ರಿಯಾಜ್, ನಮೀರ್ ಹಂಝ, ಅಬ್ದುಲ್ ಖಾದರ್. ಆಲಿಯಾಸ್ ದೋಷಮುಕ್ತಗೊಂಡವರು. ಜಬ್ಬಾರ್
ಟಾರ್ಗೆಟ್ ಇಲಿಯಾಸ್‌ನನ್ನು 2018ರ ಜ. 13ರಂದು ನಗರದ ಜೆಪ್ಪು ಕುಡಾಡಿ ಬಳಿ ಇರುವ ಅಪಾರ್ಟ್ ಮೆಂಟ್‌ನಲ್ಲಿ ಚೂರಿ ಇರಿದು ಕೊಲೆ ಮಾಡಲಾಗಿತ್ತು. ದಾವೂದ್. ಮಹಮ್ಮದ್ ಶಮೀರ್ ಅಲಿಯಾಸ್ ಕಡಪರ ಶಮೀರ್, ಉಮ್ಮರ್ ನವಾಫ್, ನೌಶದ್, ಮೊಹಮ್ಮದ್ ನಾಸಿರ್, ರಿಯಾಜ್, ನಮೀರ್ ಹಂಝ, ಅಸYರ್ ಅಲಿ ಆಲಿಯಾಸ್ ಅಶ್ರಫ್, ಅಬ್ದುಲ್ ಖಾದರ್ ಆಲಿಯಾಸ್ ‘ಜಬ್ಬಾರ್ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸಂಧ್ಯಾ ಎಸ್. ಅವರು ಐವರು ಆರೋಪಿಗಳು ನಿರ್ದೋಷಿಗಳೆಂದು ಡಿ. 11ರಂದು ತೀರ್ಪು ನೀಡಿದ್ದಾರೆ. ಐವರು ಆರೋಪಿಗಳ ಪರವಾಗಿ ಬಿ. ಜಿನೇಂದ್ರ ಕುಮಾರ್, ಅರವಿಂದ ಕುಮಾರ್ ಕೆ., ಬಿ. ಅಭಿಜಿತ್ ಜೈನ್, ವಸುಧಾ ಬಿ. ಮತ್ತು ಅನುಶ್ರೀ ಹೆಗ್ಡೆ ಎಂ. ಅವರು ವಾದಿಸಿದ್ದರು. ಇತರ ಆರೋಪಿಗಳಾದ ಉಮ್ಮರ್ ನವಾಫ್, ನಾಶದ್, ಮೊಹಮ್ಮದ್ ನಾಸಿರ್, ಅಸYರ್ ಆಲಿ ಆಲಿಯಾಸ್ ಅಶ್ರಫ್ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದಾರೆ.
Leave A Reply