ಚುನಾವಣೆ: ರಕ್ಷಣೆ ಕೋರಿ ಉಗ್ರ ಹಫೀಜ್ ಸಯಿದ್ ಮನವಿ!
ಮುಂದಿನ ವರ್ಷ ಫೆಬ್ರವರಿಯಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಸಾವರ್ತಿಕ ಚುನಾವಣೆಯಲ್ಲಿ ತನ್ನ ಪಕ್ಷ ಪಾಕಿಸ್ತಾನ ಮರ್ಖಾಜಿ ಮುಸ್ಲಿಂ ಲೀಗ್ ಹೆಚ್ಚಿನ ಪ್ರಾಂತ್ರ್ಯಗಳಲ್ಲಿ ಸ್ಪರ್ಧಿಸಲಿದೆ ಎಂದು ಉಗ್ರ ಹಫೀಜ್ ಸಯೀದ್ ಘೋಷಿಸಿದ್ದಾನೆ. ತನ್ನ ಪುತ್ರ ತಾಲ್ಹಾ ಸಯೀದ್ ಲಾಹೋರ್ ನಿಂದ ಲೋಕಸಭೆಗೆ ಸ್ಪರ್ಧಿಸುವುದಾಗಿ ಹೇಳಿಕೆ ನೀಡಿರುವ ಹಫೀಜ್ ಪಿಎಂಎಂಎಲ್ ಕೇಂದ್ರೀಯ ಅಧ್ಯಕ್ಷ ಖಾಲೀದ್ ಮಸೂದ್ ಸಿಂಧೂ ಮಾಜಿ ಪ್ರಧಾನಿ, ಪಾಕಿಸ್ತಾನ ಮುಸ್ಲಿಂ ಲೀಗ್ ಅಧ್ಯಕ್ಷ ನವಾಜ್ ಶರೀಫ್ ವಿರುದ್ಧ ಕಣಕ್ಕೆ ಇಳಿಯಲಿದ್ದಾನೆ ಎಂದು ಹೇಳಿದ್ದಾನೆ. ಪಿಎಂಎಂಎಲ್ ಚಿನ್ನೆ ಕುರ್ಚಿ ಎಂದು ತಿಳಿಸಲಾಗಿದೆ.
ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಿಎಂಎಂಎಲ್ ಅಧ್ಯಕ್ಷ ಸಿಂಧೂ ” ನಾವು ಅಧಿಕಾರಕ್ಕೆ ಬರುವುದು ಭಷ್ಟ್ರಾಚಾರ ಮಾಡಲು ಅಲ್ಲ, ಪಾಕಿಸ್ತಾನದ ಜನರ ಉನ್ನತಿ ಮತ್ತು ಪಾಕಿಸ್ತಾನವನ್ನು ಇಸ್ಲಾಮಿಕ್ ವೆಲ್ಫೇರ್ ದೇಶವನ್ನಾಗಿ ಮಾಡುವುದೇ ಗುರಿ” ಎಂದಿದ್ದಾರೆ. ಇನ್ನು ಸಿಂಧೂ ತಮ್ಮ ಪಕ್ಷಕ್ಕೂ ಉಗ್ರ ಹಫೀಜ್ ಸಯೀದ್ ಸಂಘಟನೆಗೂ ಸಂಬಂಧವೇ ಇಲ್ಲ. ಆತ ನಮ್ಮ ಪಕ್ಷಕ್ಕೆ ನೆರವು ನೀಡಿಲ್ಲ ಎಂದು ಹೇಳಿದ್ದಾರೆ. ಹಫೀಜ್ ಸಯೀದ್ ಲಷ್ಕರ್ ಈ ತೈಬಾದ ಮುಖ್ಯಸ್ಥನಾಗಿದ್ದು, ಇತನ ತಲೆಗೆ ಯುನೈಟೆಡ್ ಸ್ಟೇಟ್ ಹತ್ತು ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದೆ.
ತಾವು ಚುನಾವಣೆಗೆ ಸ್ಪರ್ಧಿಸುತ್ತಿರುವುದರಿಂದ ತಮಗೆ ಪ್ರಚಾರದ ಸಮಯದಲ್ಲಿ ಸುರಕ್ಷತೆ ಅವಶ್ಯವಾಗಿದೆ. ಆದ್ದರಿಂದ ಪಾಕಿಸ್ತಾನ ಆಡಳಿತ ತನಗೆ ಮತ್ತು ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಆತ ಕೋರಿದ್ದಾನೆ. ಅವನು ಕೂಡ ಅನಾಮಧೇಯ ವ್ಯಕ್ತಿಗಳಿಂದ ಯಾವಾಗ ತನ್ನ ಸಾವು ಸಂಭವಿಸಬಹುದು ಎನ್ನುವ ಆತಂಕದಿಂದ ದಿನ ದೂಡುತ್ತಿದ್ದಾನೆ ಎಂದು ನಿಕಟವರ್ತಿಗಳು ಹೇಳಿದ್ದಾರೆ. ಹಫೀಜ್ ಮುಂಬೈ 26/11 ದಾಳಿಯ ಪ್ರಧಾನ ಸೂತ್ರಧಾರನಾಗಿದ್ದು, ಭಾರತದ ಟಾಪ್ ಉಗ್ರರ ಲಿಸ್ಟ್ ನಲ್ಲಿ ಅವರ ಹೆಸರಿದೆ.
Leave A Reply