ಕೋವಿಡ್ ಕಂಟ್ರೋಲಿಗೆ ಸರಕಾರದ ರೂಲ್ಸ್!

ರಾಜ್ಯದಲ್ಲಿ ಜೆಎನ್.1 ಸೋಂಕಿತರು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕೋವಿಡ್ ಸಚಿವ ಸಂಪುಟ ಉಪಸಮಿತಿ ಮಹತ್ವದ ಸಭೆ ನಡೆಸಿತು. ಸಭೆ ನಡೆಸಿದ ಬಳಿಕ ಸುದ್ದಿಗೋಷ್ಟಿ ನಡೆಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ “ನಾವು ಕಳಿಸಿದ 60 ಸ್ಯಾಂಪಲ್ ಗಳಲ್ಲಿ 34 ಪಾಸಿಟಿವ್ ಬಂದಿದೆ. ಆದರೆ ಭಯ ಪಡುವ ಅಗತ್ಯ ಇಲ್ಲ. ಭಯ ಬೇಡಾ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ” ಎಂದು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಕೋವಿಡ್ ಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಕೆಲವು ನಿಯಮಗಳನ್ನು ಜಾರಿಗೆ ತಂದಿದೆ.
1. ಎಲ್ಲರೂ ಮಾಸ್ಕ್ ಹಾಕಿಕೊಳ್ಳಿ. 2. ಬೇರೆ ಬೇರೆ ಕಾಯಿಲೆ ಇರುವವರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಿ. 3. ಶಾಲಾ ಮಕ್ಕಳಿಗೆ ಕಾಯಿಲೆಯ ಲಕ್ಷಣಗಳಿದ್ದರೆ ಶಾಲೆಗೆ ಕಳುಹಿಸಬೇಡಿ 4. ಹೊಸ ವರ್ಷಕ್ಕೆ ನಿರ್ಭಂದನೆ ಇಲ್ಲ. 5. ಹೆಚ್ಚು ಜನರು ಇರುವ ಪ್ರದೇಶಗಳಿಗೆ ಹೋಗಬೇಡಿ. 6. ಸೋಶಿಯಲ್ ಡಿಸ್ಟೆನ್ಸ್ ಇರಬೇಕು. 7. ಕೋವಿಡ್ ರೋಗಿಗಳು 7 ದಿನಗಳ ಕಡ್ಡಾಯ ಹೋಂ ಐಸೋಲೇಶನ್ 8. ಸೋಂಕಿತರಿಗೆ ಆಫೀಸ್ ಗಳಲ್ಲಿ ರಜೆ ನೀಡಬೇಕು.
400 ಜನರು ಹೋಂ ಐಸೋಲೇಶನ್ ನಲ್ಲಿ ಇದ್ದಾರೆ. 400 ಜನರನ್ನು ಕೂಡ ಟ್ರಾಕ್ ಮಾಡುತ್ತೇವೆ. ತಾಲೂಕು ಆರೋಗ್ಯಾಧಿಕಾರಿಗಳು ಹೋಗಿ ಖುದ್ದು ನೋಡಿಕೊಂಡು ಬರಬೇಕು, ಅವರ ಆರೋಗ್ಯ ಸ್ಥಿತಿ ಗಮನಿಸಬೇಕು ಎಂದು ಸೂಚಿಸಲಾಗಿದೆ. ಐಸಿಯು ಸ್ಥಿತಿಗತಿ ನೋಡಲಾಗುತ್ತಿದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.