ಹಿಂದೂ ಯುವತಿಯರ ಮತಾಂತರ, ಕೇರಳ ಇದರ ಆಗರ
ತಿರುವನಂತಪುರ: ಕೇರಳದಲ್ಲಿ ಇದುವರೆಗೂ ಹಿಂದೂ ಯುವತಿಯರನ್ನು ಮುಸ್ಲಿಂ ಯುವಕರು ಪ್ರೀತಿಯ ಹೆಸರಲ್ಲಿ (ಲವ್ ಜಿಹಾದ್) ಮತಾಂತರಗೊಳಿಸಲಾಗುತ್ತದೆ ಎಂಬ ಮಾತು ಆಗಾಗ ಕೇಳಿಬರುತ್ತಿದ್ದವು. ಆದರೆ ಈ ಮಾತಿಗೆ ಈಗ ಇನ್ನಷ್ಟು ಪುಷ್ಟಿ ಬಂದಿದ್ದು, ಇತ್ತೀಚೆಗೆ ಲವ್ ಜಿಹಾದ್ ಪ್ರಕರಣ ಜಾಸ್ತಿಯಾಗಿವೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯೇ ಮಾಹಿತಿ ನೀಡಿದೆ.
ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ದಾವಾ ಸ್ಕ್ವಾಡ್ (ಮತಾಂತರಗೊಳಿಸಲು ರಚಿಸಿರುವ ತಂಡ)ಗಳು ಕೇರಳದಲ್ಲಿ ಹೇರಳವಾಗಿ ಹಿಂದೂ ಯುವತಿಯರಿಗೆ ನಕಲಿ ಪ್ರೀತಿಯ ಬಲೆ ಹಾಕಿ ಮತಾಂತರಗೊಳಿಸಲಾಗುತ್ತಿದೆ ಎಂದು ಎನ್‌ಐಎ ಹಾಗೂ ಪೊಲೀಸ್ ದಾಖಲೆಗಳಿಂದ ತಿಳಿದುಬಂದಿದೆ.
ಎನ್‌ಐಎ ದಾಖಲೆಯ ಪ್ರಕಾರ ಒಂದು ವರ್ಷದಲ್ಲಿ 105 ಹಿಂದೂ ಯುವತಿಯರನ್ನು ಲವ್‌ಜಿಹಾದ್ ಹೆಸರಲ್ಲಿ ಬಲವಂತವಾಗಿ ಮತಾಂತರಗೊಳಿಸಲಾಗಿದೆ ಎಂದು ಎನ್‌ಐಎ ಸಂಸ್ಥೆ ತಿಳಿಸಿದೆ.
ಹಿಂದೂ ಬಡ ಯುವತಿಯರನ್ನು ಗುರಿಯಾಗಿಸಿಕೊಳ್ಳುವ ಈ ಮೂಲಭೂತವಾದಿಗಳು, ಆ ಯುವತಿಯರ ಜತೆ ಪ್ರೀತಿಯ ನಾಟಕವಾಡುತ್ತಾಾರೆ. ಅವರನ್ನು ವಿದೇಶಕ್ಕೆ ಕರೆದೊಯ್ದು ಲೈಂಗಿಕವಾಗಿ ಬಳಸಿಕೊಳ್ಳುತ್ತಾರೆ. ಬಳಿಕ ಅವರನ್ನು ತಾಯಿನಾಡಿಗೆ ಕರೆತಂದು ಬಲವಂತವಾಗಿ ಮತಾಂತರಗೊಳಿಸಲಾಗುತ್ತಿದೆ ಎಂದು ವರದಿಯಿಂದ ತಿಳಿದುಬಂದಿದೆ.
ಏನಿದು ದಾವಾ ಸ್ಕ್ವಾಡ್?
ದಾವಾ ಸ್ಕ್ವಾಡ್ ಒಂದು ಮುಸ್ಲಿಮರ ತಂಡವಾಗಿದ್ದು, ಹಿಂದೂ ಯುವತಿಯರಿಗೆ ಹಲವು ಆಮಿಷ ನೀಡಿ ಅವರನ್ನು ಮತಾಂತರಗೊಳಿಸುವುದೇ ಈ ತಂಡದ ಮೂಲ ಉದ್ದೇಶವಾಗಿದೆ. ಇದರಲ್ಲಿ ನೋಡಲು ಸುಂದರವಾಗಿರುವ, ನೌಕರಿ ಅಥವಾ ಪದವಿ ಹೊಂದಿರುವ ಯುವಕರು ಈ ಗುಂಪಿನಲ್ಲಿದ್ದು, ಯುವತಿಯರನ್ನು ಪ್ರೀತಿಯ ಬಲೆಯಲ್ಲಿ ಕೆಡವುವುದೇ ಇವರ ಕರ್ತವ್ಯ. ಮುಸ್ಲಿಂ ಮೂಲಭೂತವಾದಿಗಳೇ ಇವರಿಗೆ ಹಣ ಸಂದಾಯ ಮಾಡುತ್ತಾರೆ ಎಂದು ಎನ್‌ಐಎ ತಿಳಿಸಿದೆ.
ಯಾರು ಇವರ ಟಾರ್ಗೆಟ್?
18-25 ವಯಸ್ಸಿಿನ ಬಡ, ಪೋಷಕರಿಲ್ಲದ ಯುವತಿಯರೇ ಇವರ ಗುರಿ.
ಯಾವ ಸಂಘಟನೆ ಹಾಗೂ ಪಕ್ಷಗಳ ಬೆಂಬಲ?
ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)
ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)
139 ಯುವತಿಯರ ಮತಾಂತರ
ಒಂದು ವರದಿಯ ಪ್ರಕಾರ ಕೇರಳದ ಪಲಕ್ಕಾಡ್ ಒಂದರಲ್ಲೇ ಎರಡು ವರ್ಷಗಳಲ್ಲಿ ಇಷ್ಟು ಯುವತಿಯರನ್ನು ಮತಾಂತರಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
Leave A Reply