ಇದು ನವ ಭಾರತ ಹಾಗೂ ನಡೆಯಲಿರುವುದು ಮಹಾಭಾರತ!
ಅಯೋಗ್ಯನನ್ನು ಅಯೋಗ್ಯ ಎಂದಿದ್ದಕ್ಕೆ ಸಿಟ್ಟುಗೊಂಡು, ಅಯೋಗ್ಯ ಎಂದು ಹೇಳಿದವನನ್ನು ಹೇಗಾದರೂ ಜೈಲಿಗೆ ಹಾಕಿ, ತನ್ನ ಅಧಿಕಾರದ ಅಯೋಗ್ಯತನವನ್ನು ಹೀಗಾದರೂ ತೋರಿಸಿಕೊಡಬೇಕು ಎಂದಿದ್ದ ದುರ್ಯೋಧನ ಎನ್ನುವ ಅಯೋಗ್ಯನಿಗೆ ಈಗ ಕೈಗೆ ಸಿಗದ ದ್ರಾಕ್ಷಿ ಹುಳಿ ಎನ್ನುವ ನಾಯಿಯ ಪರಿಸ್ಥಿತಿ ಬಂದಿದೆ. ಕುರುಡನ ಮಗ ಕುರುಡ ಎಂದು ದ್ರೌಪದಿ ಹೇಳಿದ್ದಕ್ಕೆ ಸಿಟ್ಟುಗೊಂಡ ಪರಿಣಾಮವಲ್ಲವೇ ಮಹಾಭಾರತ ನಡೆದದ್ದು.
ಧರ್ಮಜ ರಾಮನ ನಡತೆಯನ್ನು ತನ್ನಲ್ಲಿ ರೂಡಿಸಿಕೊಂಡವ. ಸನಾತನ ಧರ್ಮ ತನ್ನ ಜೀವನದ ಆಧಾರ ಎಂದು ಬದುಕುತ್ತಿರುವವ. ಸಾಧನೆಯಿಂದ ಚಕ್ರವರ್ತಿಯಾಗುವ ಪೂರ್ತಿ ಯೋಗ್ಯತೆಯನ್ನು ಪಡೆದವ. ಚುನಾಯಿತ ಪ್ರತಿನಿಧಿಯಲ್ಲದಿದ್ದರೂ ಜನರ ಮಟ್ಟಿಗೆ ಆತ ಚಕ್ರವರ್ತಿಯೆ. ಆತ ಬಂದರೆ ಊರಿಗೆ ಊರೇ ಸೇರುತ್ತದೆ. ಯಾವುದೇ ರಾಜಲಾಂಛನದ ಗುರುತಿಲ್ಲ.ಮಾತಿಗೆ ನಿಂತರೆ ಮಳೆ ಬಂದರೂ ಕೂಡ ಜನ ಸರಿಯುವುದಿಲ್ಲ. ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬರುತ್ತಾನೆ. ಅಲ್ಲಿಂದ ಬಸ್ಸು ಹತ್ತಿ ಮತ್ತೊಂದು ಊರಿಗೆ ತೆರಳುತ್ತಾನೆ. ಯಾವುದೇ ಹಮ್ಮು ಬಿಮ್ಮುಗಳಿಲ್ಲದ ಜನರೇ ಗುರುತಿಸಿಕೊಂಡ ನಾಯಕ.
ಧರ್ಮರಾಜ ಇನ್ನೂ ಹಸ್ತಿನೆಯ ರಾಜಕೀಯಕ್ಕೆ ಬರಲಿಲ್ಲ.ಆದರೂ ಇಡೀ ರಾಜ್ಯದ ಮೂಲೆ ಮೂಲೆಯನ್ನು ಸುತ್ತುತ್ತಾನೆ. ಸಂಘಟನೆ ಹಾಗೂ ರಾಷ್ಟ್ರೀಯ ಚಿಂತನೆಗಳೊಂದಿಗೆ ಕಲ್ಯಾಣಿ ಸ್ವಚ್ಛತೆ ಇತ್ಯಾದಿ ಸಾಮಾಜಿಕ ಕೆಲಸಗಳನ್ನು ಮಾಡಿ ತನ್ನ ಸಾಧನೆಯನ್ನು ತೋರಿಸುತ್ತಿದ್ದಾನೆ. ಯುವ ಮನಗಳ ಈ ಚಕ್ರವರ್ತಿಯ ಯೋಗ್ಯತೆಗೆ ಇಷ್ಟು ಸಾಕಲ್ಲವೇ.ಇಂತಹ ಧರ್ಮಜನಿಗೆ ಪಾಂಡವರಲ್ಲದೆ ಕೃಷ್ಣನಂತಹ ಮಹಾದೇವನು ಕೂಡ ಬೆಂಬಲಕ್ಕೆ ನಿಂತಿದ್ದಾನೆ. ಅಷ್ಟು ಮಾತ್ರವಲ್ಲದೆ ಧಾರ್ಮಿಕ ಮನಸ್ಥಿತಿಯ ಕೌರವರಷ್ಟು ಅಲ್ಲದಿದ್ದರೂ ಏಳು ಅಕ್ಷೋಹಿಣಿ ಸೈನ್ಯದ ಬೆಂಬಲವಿದೆ. ಆತನ ಯೋಗ್ಯತೆಗೆ ಇಷ್ಟು ಸಾಕು.
ಮತ್ತೊಬ್ಬ ಕರ್ಣ, ಹೆಸರಿಗೆ ಅಂಗರಾಜ್ಯವಿದ್ದರೂ ಕೂಡ ದುರ್ಯೋಧನನ ಕಾಲು ನೆಕ್ಕಿಕೊಂಡು ಹಸ್ತಿನಾವತಿಯಲ್ಲಿಯೇ ಬಿದ್ದುಕೊಂಡಿದ್ದಾನೆ. ಅಂಗ ರಾಜ್ಯದಲ್ಲಿ ಪಟ್ಟಾಭಿಷೇಕಗೊಂಡರು ಕೂಡ ಇತಿಹಾಸದಲ್ಲಿ ಗುರುತಿಸಿಕೊಳ್ಳುವಂತಹ ಯಾವ ಬದಲಾವಣೆಯನ್ನು ಕೂಡ ಅಂಗ ರಾಜ್ಯದಲ್ಲಿ ತರದೆ ಇದ್ದದ್ದು ದಾಖಲಾದ ಇತಿಹಾಸ. ಯೋಗ್ಯತೆ ಇಲ್ಲದೆ ಕೊಟ್ಟ ಅಧಿಕಾರದ ಪರಿಣಾಮಕ್ಕೆ ಅಂಗರಾಜ್ಯವೇ ಸಾಕ್ಷಿ. ವ್ಯಾಸರೇ ಈ ಅಯೋಗ್ಯನನ್ನು ಬದಿಗಿಟ್ಟಾಗ ನಮಗೆ ಹೊಗಳಲು ಸಾಧ್ಯವಿಲ್ಲ. ಹೊಗಳುವವರು ಹೊಗಳಲಿ ಬಿಡಿ.
ಐವತ್ತು ವರ್ಷಕ್ಕಿಂತಲೂ ಮೇಲ್ಪಟ್ಟು ಸಾಮಾಜಿಕ ಜೀವನದಲ್ಲಿದ್ದರೂ ಕೂಡ ಆತನ ಕ್ಷೇತ್ರವನ್ನೇ ಸರಿಯಾಗಿ ಉದ್ಧಾರ ಮಾಡಲಾಗಲಿಲ್ಲ. ಕೊಡಲಿಗೆ ಆಧಾರವಾದ ಕಟ್ಟಿಗೆಯ ತುಂಡು ತನ್ನ ಮರದ್ದು ಎನ್ನುವ ಕಾರಣಕ್ಕಾಗಿ ಮರ ಸುಮ್ಮನೆ ಕೊಡಲಿಯ ಪೆಟ್ಟನ್ನು ತಿನ್ನುತ್ತಿತ್ತು. ಹಾಗೆಯೇ ಈ ಅಯೋಗ್ಯನಿಗೂ ಕೂಡ ತನ್ನವ ಎನ್ನುವ ಕಾರಣಕ್ಕಾಗಿ ಬೆಂಬಲ ಸಿಗುತ್ತಿತ್ತು. ಈಗಂತೂ ಮಹಾರಾಜನ ಕೃಪೆಯಿಂದ, ಸಾಮಂತನಾಗಿದ್ದರು ಕೂಡ ಚಕ್ರವರ್ತಿ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾನೆ.
ಮುಂದೊಂದು ದಿನ ಆ ಸ್ಥಾನದಿಂದ ಇಳಿದರೆ ಈ ಸಾಮಂತ ರಾಜನನ್ನು ಊರಿನ ನಾಯಿ ಕೂಡ ಮೂಸುವುದಿಲ್ಲ. ಆ ದಿನಕ್ಕೆ ಹೆಚ್ಚು ದೂರವಿಲ್ಲ. ಈಗಾಗಲೇ ಕುರುಡು ದೃತರಾಷ್ಟ್ರ ಮಹಾರಾಜರ ಕೃಪೆಯಿಂದ ಸ್ಥಾನ ಗಿಟ್ಟಿಸಿಕೊಂಡ ಅದೆಷ್ಟೋ ಭೀಷ್ಮದ್ರೋಣರಂತಹಾ ಯೋಗ್ಯತಾವಂತರೇ ಮೂಲೆಗುಂಪಾಗಿದ್ದಾರೆ. ಅಂತದ್ದರಲ್ಲಿ ಈ ಅಯೋಗ್ಯ ಮೂಲೆಗುಂಪಾಗುವುದರಲ್ಲಿ ಸಂಶಯವೇ ಇಲ್ಲ. ಕಾಡಿನಲ್ಲಿದ್ದು ಆಗಾಗ ಗೂಳಿಡುವ ಆಧುನಿಕ ವೀರಪ್ಪ ಎನ್ನುವ ಕಾಡುಗಳ್ಳನಂತೆ ಆಗಲಿದ್ದಾನೆ. ಆಗ ರಾಜ್ಯದ ಜನತೆಗೆ ಯಾರು ಯೋಗ್ಯರು ಯಾರು ಅಯೋಗ್ಯರು ಎಂದು ಸರಿಯಾಗಿ ಗೊತ್ತಾಗುತ್ತದೆ.
ಮಗದೊಬ್ಬ ದುರ್ಯೋಧನ ಎನ್ನುವ ಮೂರ್ಖ ಮಗ. ಚಕ್ರವರ್ತಿಯಾಗುವ ಆಸೆ ಇಟ್ಟುಕೊಂಡಿದ್ದಾನೆ. ಕೆಲಸ ಮಾಡಲು ದಾಡಿ ಬಿಡುವುದಿಲ್ಲ. ತಂದೆಯ ಅಧಿಕಾರವಲ್ಲವೇ. ಯೋಗ್ಯತೆಯಿಲ್ಲದಿದ್ದರೂ ಪಡೆಯುವ ಹಕ್ಕು ಇದೆ ಎನ್ನುವ ದೃಷ್ಟಿಯಲ್ಲಿ, ತಂದೆಯ ಹೆಸರಿನಿಂದಲೇ ಬದುಕುತ್ತಿದ್ದಾನೆ. ತಂದೆ ದೃತರಾಷ್ಟ್ರನಂತೆ ರಾಜನಾಗಿ ಅಧಿಕಾರದಲ್ಲಿದ್ದು ಹೇಳಿಕೊಳ್ಳುವ ಸಾಧನೆ ಏನು ಇಲ್ಲ. ಕೇವಲ ಬುರುಡೆ ಬಿಡುತ್ತಾ ಜನಗಳನ್ನು ಮಂಗ ಮಾಡುತ್ತಾ ಅಧಿಕಾರದಲ್ಲಿ ಮೆರೆಯುತ್ತಿದ್ದಾನೆ. ಇವರುಗಳಿಗೆ ತಮ್ಮ ಅಧಿಕಾರವನ್ನು ಕೆಲಸದ ಮೂಲಕವಾಗಿ ತೋರಿಸುವ ಯೋಗ್ಯತೆ ಇಲ್ಲ.
ಈ ತಂದೆ ಮಕ್ಕಳಿಗೆ ಇಲ್ಲಿ ಏನಾದರೂ ಸಮಾಜಕ್ಕೆ ಅನುಕೂಲ ಆಗುವ ಹಾಗೆ ಕೆಲಸ ಮಾಡೋಣವೆಂದರೆ ಬೊಕ್ಕಸದಲ್ಲಿ ಬಿಡಿ ಕಾಸಿಲ್ಲ. ತಮ್ಮ ಅಧಿಕಾರದ ಆಸೆಗಾಗಿ ಹಾಗೂ ಅದರ ಉಳಿಯುವಿಕೆಗಾಗಿ ಬೊಕ್ಕಸದ ಹಣವನ್ನು ನೀರಿನಂತೆ ಹಂಚುತ್ತಿದ್ದಾರೆ. ಹಾಗಾಗಿ ಯಾವುದೇ ಪ್ರಗತಿಯನ್ನು ಸಾಧಿಸಲು ಇವರಲ್ಲಿ ಆರ್ಥಿಕ ಬಲವಿಲ್ಲ.ಆದ್ದರಿಂದ ಕೆಲಸವಿಲ್ಲದವರು ಮಾಡುವ, ತಿರುಬೋಕಿ ಕೆಲಸಗಳನ್ನು ಮಾಡುತ್ತಿದ್ದಾರೆ. ಹೆದರಿಸುವುದು, ಜೈಲಿಗಟ್ಟುವುದು, ಧಾರ್ಮಿಕ ನಂಬಿಕೆಗಳನ್ನು ಅಪಹಸ್ಯ ಮಾಡುವುದು ಹೀಗೆ ಇದೇ ಇವರ ಅಧಿಕಾರದ ಸಾಧನೆಗಳು.
ದೃತರಾಷ್ಟ್ರ,ದುರ್ಯೋಧನ, ಶಕುನಿ, ಕರ್ಣ ಹಸ್ತಿನಾವತಿಯ ಅಧಿಕಾರದಲ್ಲಿದ್ದುಕೊಂಡು ಇಷ್ಟೇ ಮಾಡಿದ್ದು. ತಮಗೆ ಸರಿಯಾಗಿ ರಾಜ್ಯಭಾರ ಮಾಡಲು ಬರುವುದಿಲ್ಲ, ಹಾಗೂ ಒಳ್ಳೆಯವರಿಗೆ ಕೊಡುವುದಿಲ್ಲ ಎನ್ನುವ ನ್ಯಾಯ ಇವರದ್ದು. ಅಧಿಕಾರದಲ್ಲಿದ್ದು ಕೆಲಸವಿಲ್ಲದಿದ್ದರೆ ಇಂತಹ ಕೌರವ ಸಂತಾನವೇ ಹುಟ್ಟುವುದು.
ಎಲ್ಲರಿಗೂ ಹೆದರಿಸುವ ಪ್ರಯೋಗ ನಡೆಯುತ್ತದೆ ಎನ್ನುವ ಅಹಂಕಾರ ಇವತ್ತು ಸ್ವಲ್ಪ ಮಟ್ಟಿಗೆ ಇಳಿಯಿತು. ಎಲ್ಲರಿಗೂ ವಿಷ ಹಾಕಿದಂತಲ್ಲ ಭೀಮನಿಗೆ ವಿಷ ಹಾಕುವುದು. ಅರಗಿನ ಮನೆಯಿಂದ ಇವರನ್ನು ಜೀವಂತ ಸುಡುತ್ತೇನೆ ಎನ್ನಲು ಇವರು ಪಾಂಡವರು, ಅಷ್ಟು ಸುಲಭದಲ್ಲಿ ಸಾಯುವುದಿಲ್ಲ. ಇದು ನವ ಭಾರತ ಹಾಗೂ ನಡೆಯಲಿರುವುದು ಮಹಾಭಾರತ. ಕೌರವ ಸಂತಾನದ ಆಟ ಮುಗಿಯಲಿದೆ. ದೇವರ ಅವತಾರ ಕಾರ್ಯ ಶುರುವಾಗಿದೆ.
Leave A Reply