ಇಂಡಿಗೋದಿಂದ ಲಕ್ಷದ್ವೀಪಕ್ಕೆ ವಿಮಾನ ಆರಂಭ!
ಇಂಡಿಗೋ ವಿಮಾನಯಾನ ಸಂಸ್ಥೆ ಲಕ್ಷದ್ವೀಪದ ಅಗತ್ತಿಗೆ ಬೆಂಗಳೂರಿನಿಂದ ನೇರ ವಿಮಾನಯಾನವನ್ನು ಆರಂಭಿಸಲಿದೆ. ಮಾರ್ಚ್ 31 ರಿಂದ ಈ ವಿಮಾನ ಸಂಪರ್ಕ ಆರಂಭವಾಗಲಿದ್ದು, ಬೆಂಗಳೂರು ಸಹಿತ ಆಸುಪಾಸಿನ ನಾಗರಿಕರಿಗೆ ಇದರಿಂದ ಸಾಕಷ್ಟು ಪ್ರಯೋಜನವಾಗಲಿದೆ.
ಆಳ ಸಮುದ್ರದ ಮೀನುಗಾರಿಕೆ, ಸ್ಕೂಬಾ ಡೈವಿಂಗ್, ನೌಕಾಯಾನ, ಸ್ಕೀಯಿಂಗ್ ಮತ್ತು ಕಯಾಕಿಂಗ್ ಗಳನ್ನು ಬಯಸುವವರಿಗೆ ಅಗಟ್ಟಿ ಜನಪ್ರಿಯವಾಗಿದೆ. ಈ ದ್ವೀಪವು ಜನವಸತಿಯಿಲ್ಲದ ಮತ್ತು ಪ್ರಶಾಂತ ದ್ವೀಪಗಳಾದ ಬಂಗಾರಮ್, ಪಿಟ್ಟಿ, ತಿನ್ನಕರ, ಪರಲಿ ಒನ್ ಮತ್ತು ಪರಲಿ ಟೂ ಅನ್ವೇಷಿಸಲು ಸೂಕ್ತ ನೆಲೆಯಾಗಿ ಕಾರ್ಯನಿರ್ವಹಿಸಲಿದೆ.
ಪ್ರಸ್ತುತ ಅಲಯನ್ಸ್ ಏರ್ ಮಾತ್ರ ಅಗಟ್ಟಿಗೆ ವಿಮಾನ ಸೇವೆ ನೀಡುತ್ತಿದೆ. ಇದಕ್ಕೂ ಮೊದಲು ಲಕ್ಷದ್ವೀಪಕ್ಕೆ ಹೋಗಬೇಕಾದರೆ ಕೊಚ್ಚಿಯಲ್ಲಿ ಇಳಿದು ಮತ್ತೊಂದು ವಿಮಾನವನ್ನು ಕಾದು ನಂತರ ಅದರಲ್ಲಿ ಪ್ರಯಾಣಿಸಬೇಕಿತ್ತು. ಇದರಿಂದ ಟಿಕೆಟ್ ಬೆಲೆಯೂ 11 ಸಾವಿರದಿಂದ 15 ಸಾವಿರ ರೂಪಾಯಿ ಆಗುತ್ತಿತ್ತು. ಸಮಯ ಕೂಡ ವಿನಾಕಾರಣ ನಷ್ಟವಾಗುತ್ತಿತ್ತು. ಆದರೆ ಇಂಡಿಗೋ ವಿಮಾನ ಫ್ಲೈಟ್ ನ ಟಿಕೆಟ್ ಬೆಲೆ ಕೇವಲ 6,999 ರೂಪಾಯಿ ಮಾತ್ರ ಇರುವುದರಿಂದ ಪ್ರವಾಸಿಪ್ರಿಯರಿಗೂ ಇದು ತುಂಬಾ ಅನುಕೂಲವಾಗಲಿದೆ. ನೇರ ಸಂಪರ್ಕ ವಿಮಾನವಾಗಿರುವುದರಿಂದ ಸಮಯವೂ ಉಳಿತಾಯವಾಗಲಿದೆ.
Leave A Reply