ಪ್ರಜ್ವಲ್ ರೇವಣ್ಣ ಇನ್ನೂ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸಂಸದ ಎಂದ ಆರ್ ಅಶೋಕ್!
ಕಾನೂನಾತ್ಮಕವಾಗಿ ಈಗಲೂ ಪ್ರಜ್ವಲ್ ಕಾಂಗ್ರೆಸ್ – ಜೆಡಿಎಸ್ ಮೈತ್ರಿಯ ಸಂಸದ. 2019 ರಲ್ಲಿ ಬೀದಿ ಬೀದಿಗೆ ಹೋಗಿ ಪ್ರಜ್ವಲ್ ಪರ ಕಾಂಗ್ರೆಸ್ಸಿನವರು ಮತ ಕೇಳಿದ್ರು. ಪ್ರಜ್ವಲ್ 2024 ರಲ್ಲಿ ಮಾತ್ರ ಬಿಜೆಪಿ – ಜೆಡಿಎಸ್ ಮೈತ್ರಿ ಅಭ್ಯರ್ಥಿ. ಈ ಬಾರಿ ಗೆದ್ದಾಗ ಎನ್ ಡಿಎ ಸಂಸದ. ಆಗ ಭಾರತೀಯ ಜನತಾ ಪಾರ್ಟಿಗೆ ಮುಜುಗರ ಆಗುತ್ತೋ, ಇಲ್ವೋ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ ಎಂದು ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಅವರು ಡಿಕೆ ಶಿವಕುಮಾರ್ ಅವರ ಮಾತಿಗೆ ತಿರುಗೇಟು ನೀಡಿದ್ದಾರೆ.
ಪ್ರಜ್ವಲ್ ಪರಾರಿಗೆ ಕೇಂದ್ರ ಸರಕಾರ ಕಾರಣ ಅನ್ನುವ ಕಾಂಗ್ರೆಸ್ ಆರೋಪದ ಬಗ್ಗೆ ಮಾತನಾಡಿದ ಅಶೋಕ್ ” ಹಾಸನದಿಂದ ವಿಮಾನ ನಿಲ್ದಾಣಕ್ಕೆ ಬಿಟ್ಟವರು ಯಾರು? ಹಾಸನ ಪೊಲೀಸರು. ಆಗ ಜಿಲ್ಲಾಧಿಕಾರಿ ಏನು ಮಾಡುತ್ತಿದ್ದರು. ಹಾಸನ, ತುಮಕೂರು, ಬೆಂಗಳೂರು ಗ್ರಾಮಾಂತರ ದಾಟಿ ಬೆಂಗಳೂರಿಗೆ ಬಂದು ವಿಮಾನ ನಿಲ್ದಾಣಕ್ಕೆ ಬರುವ ತನಕ ಕಾಂಗ್ರೆಸ್ಸಿನವರು ಯಾಕೆ ಸುಮ್ಮನಿದ್ರು. ಇಷ್ಟು ಹೊಂದಾಣಿಕೆ ರಾಜಕೀಯ ಮಾಡುವ ನೀವು ಈಗ ಮೋದಿಯವರನ್ನು ಪ್ರಶ್ನೆ ಮಾಡುವುದು ಸರಿಯಾ” ಎಂದು ಅಶೋಕ್ ಕೇಳಿದ್ದಾರೆ.
ಸಿದ್ಧರಾಮಯ್ಯ ಅಧಿಕಾರದಿಂದ ಕೆಳಗಿಳಿದು ಬಿಜೆಪಿಗೆ ಅಧಿಕಾರ ನೀಡಿದರೆ 24 ಗಂಟೆಯಲ್ಲಿ ಪ್ರಜ್ವಲ್ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಅಶೋಕ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಆರ್ ಅಶೋಕ್, ಪ್ರಜ್ವಲ್ ರೇವಣ್ಣ ಪ್ರಕರಣವನ್ನು ನಾವು ಬೆಂಬಲಿಸುವುದಿಲ್ಲ. ಪ್ರಜ್ವಲ್ ರೇವಣ್ಣ ನಮ್ಮ ಸಂಸದರಲ್ಲ. ಇವರೇ ಜೋಡೆತ್ತು ಎಂದು ಬಿಂಬಿಸಿಕೊಂಡು 2019 ಎ ಚುನಾವಣೆಯಲ್ಲಿ ಗೆಲ್ಲಿಸಿದ್ದರು. ಇದಕ್ಕೆ ಕಾಂಗ್ರೆಸ್ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಮಧ್ಯೆ ರೇವಣ್ಣ ಅವರಿಗೆ ಎಸ್ ಐಟಿ ಎದುರು ಹಾಜರಾಗಲು ತಿಳಿಸಿದರೂ ಅವರು ಸಮಯ ಕೇಳಿದ್ದಾರೆ.
Leave A Reply