ಗೋಲ್ಡಿ ಬ್ರಾರ್ ಸಾವನ್ನಪ್ಪಿಲ್ಲ ಎಂದ ಅಮೇರಿಕಾ ಪತ್ರಿಕೆ!
ಅಮೇರಿಕಾದ ಕ್ಯಾಲಿಫೋನಿಯಾ ರಾಜ್ಯದ ಫ್ರೆಸ್ನೋ ನಗರದಲ್ಲಿ ಮೇ 1 ರಂದು ಗುಂಡಿನ ದಾಳಿ ನಡೆದಿತ್ತು. ಅದರಲ್ಲಿ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಕೆನಡಾ ಮೂಲದ ಭಯೋತ್ಪಾದಕ ಗೋಲ್ಡಿ ಬ್ರಾರ್ ಸಾವನ್ನಪ್ಪಿದ್ದಾರೆ ಎಂಬ ವರದಿಯನ್ನು ಅಮೇರಿಕಾದ ಪೊಲೀಸರು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
ಫೇರ್ ಮಾಂಟ್ ಮತ್ತು ಹಾಲ್ಟ್ ಅವೆನ್ಯೂಗಳಲ್ಲಿ ನಡೆದ ಶೂಟೌಟ್ ನಲ್ಲಿ ಅನಾಮಧೇಯ ಶೂಟರ್ ಗಳು ಶೂಟೌಟ್ ನಡೆಸಿದ್ದರು. ಅದರಲ್ಲಿ ಹತ್ಯೆಯಾದ ವ್ಯಕ್ತಿಯನ್ನು ಕ್ಸೇವಿಯರ್ ಗ್ಲಾಡ್ನಿ ಎಂದು ಫ್ರೆಸ್ನೋ ಪೊಲೀಸರು ಬುಧವಾರ ಗುರುತಿಸಿದ್ದಾರೆ. ಆತನ ವಯಸ್ಸು ಅಂದಾಜು 37 ಎಂದು ಹೇಳಲಾಗುತ್ತಿದೆ.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನ ಸಹವರ್ತಿ ಗೋಲ್ಡಿ ಬ್ರಾರ್ ನನ್ನು ಅಮೇರಿಕಾದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಬುಧವಾರ ಭಾರತದ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಭಾರತದಲ್ಲಿ ನಡೆದ ಸಿಧು ಮೂಸೆವಾಲಾ ಹತ್ಯೆಗೆ ಸಂಬಂಧಿಸಿದ ಪ್ರಕರಣಕ್ಕೂ ಈ ಘಟನೆಗೂ ಇದಕ್ಕೂ ಸಂಬಂಧವಿಲ್ಲ ಎಂದು ಫ್ರೆಸ್ನೋ ಬಿ ಪತ್ರಿಕೆ ವರದಿ ಮಾಡಿದೆ.
ಖ್ಯಾತ ಪಂಜಾಬಿ ಗಾಯಕ ಮತ್ತು ಕಾಂಗ್ರೆಸ್ ಮುಖಂಡ ಸಿಧು ಮೂಸೆವಾಲ್ ಅವರನ್ನು ಹಾಡುಹಗಲೇ ಶೂಟೌಟ್ ಮಾಡಿ ಕೊಲ್ಲಲಾಗಿತ್ತು. ಅದನ್ನು ಮಾಡಿದ್ದು ತನ್ನ ಗ್ಯಾಂಗ್ ಎಂದು ಗೋಲ್ಡಿ ಬ್ರಾರ್ ಎಂಬ ಕೆನಡಾ ಮೂಲಕ ಭಯೋತ್ಪಾದಕ ಹೇಳಿಕೊಂಡಿದ್ದ. ಅವನನ್ನು ಭಾರತೀಯ ಅನಾಮಧೇಯ ಶೂಟರ್ ಕೊಂದಿದ್ದಾರೆ ಎನ್ನುವುದು ಸಂಪೂರ್ಣ ಸುಳ್ಳು ಎಂದು ಅಮೇರಿಕಾ ಪೊಲೀಸರು ಹೇಳಿದ್ದಾರೆ.
Leave A Reply