ಟಿ20 ವಿಶ್ವಕಪ್ ಗೆದ್ದರೆ ಪಾಕ್ ಆಟಗಾರರಿಗೆ ಸಿಗುವ ಮೊತ್ತ ಕೇಳಿ ಪಾಕ್ ಶಾಕ್!
ನಮ್ಮಲ್ಲಿ ಚುನಾವಣೆ ಹತ್ತಿರ ಬರುವಾಗ ರಾಜಕೀಯ ಪಕ್ಷಗಳು ದೊಡ್ಡ ದೊಡ್ಡ ಭರವಸೆಗಳನ್ನು ನೀಡುವುದನ್ನು ನಾವು ಕಂಡಿದ್ದೇವೆ. ಅದರಲ್ಲಿ ಎಷ್ಟೋ ಭರವಸೆಗಳನ್ನು ಈಡೇರಿಸಲು ಸಾಧ್ಯವೇ ಇಲ್ಲ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಗೊತ್ತಾಗುತ್ತದೆ. ಆದರೂ ಅನೇಕ ಬಾರಿ ಜನರು ಅದಕ್ಕೆ ಮರಳಾಗುವುದು ಇದೆ. ಕೆಲವೊಮ್ಮೆ ಆ ಭರವಸೆಗಳನ್ನು ಕೊಟ್ಟು ಅಧಿಕಾರಕ್ಕೆ ಬಂದ ರಾಜಕೀಯ ಪಕ್ಷಗಳು ಅದನ್ನು ಈಡೇರಿಸಲಾಗದೇ ಜನರಿಂದ ಉಗಿಸಿಕೊಂಡಿರುವುದು ಕೂಡ ನಡೆದಿದೆ. ಆದರೂ ರಾಜಕೀಯ ಪಕ್ಷಗಳ ಆಮಿಷ ಕಡಿಮೆಯಾಗುವುದಿಲ್ಲ. ಈಗ ಪಾಕಿಸ್ತಾನದ ಕ್ರಿಕೆಟ್ ಮಂಡಳಿ ಕೂಡ ಈ ಆಮಿಷ ಕೊಡುವುದರಲ್ಲಿ ತಾನು ಹಿಂದಿಲ್ಲ ಎನ್ನುವುದನ್ನು ಸಾಬೀತುಪಡಿಸಿದೆ.
ಜೂನ್ ತಿಂಗಳಲ್ಲಿ ಅಮೇರಿಕಾದಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಗೆದ್ದರೆ ತಂಡದ ಪ್ರತಿ ಆಟಗಾರನಿಗೂ 1 ಲಕ್ಷ ಯುಎಸ್ ಡಾಲರ್ ಬಹುಮಾನ ನೀಡುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಘೋಷಣೆ ಮಾಡಿದೆ.
ಪಾಕಿಸ್ತಾನದ ಈ ಘೋಷಣೆ ಕೇಳಿ ಅಲ್ಲಿನ ನಾಗರಿಕರು ಅವಾಕ್ಕಾಗಿದ್ದಾರೆ. ಯಾಕೆಂದರೆ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಘೋಷಣೆ ಮಾಡಿದ ಮೊತ್ತ ಒಂದು ಲಕ್ಷ ಯುಎಸ್ ಡಾಲರ್ ಎಂದರೆ ಭಾರತದ ರೂಪಾಯಿ 83.44 ಲಕ್ಷ ರೂಪಾಯಿ ಆಗುತ್ತದೆ. ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಪಾಕಿಸ್ತಾನ ಈಗಾಗಲೇ ಪಾತಾಳ ತಲುಪಿದೆ. ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದೆ. 1 ಕಿಲೋ ಗೋಧಿ ಹಿಟ್ಟಿಗೆ 800 ಪಾಕಿಸ್ತಾನಿ ರೂಗಳು, 1 ರೊಟ್ಟಿಯ ಬೆಲೆ 25 ರೂ ಪಾಕಿಸ್ತಾನಿ ರೂ ತಲುಪಿದೆ. ಪೆಟ್ರೋಲ್ – ಡಿಸೀಲ್ ದರವಂತೂ ಹೇಳುವುದೇ ಬೇಡಾ. ಹೀಗಿರುವಾಗ ಇಷ್ಟು ದೊಡ್ಡ ಮೊತ್ತವನ್ನು ಪ್ರತಿ ಆಟಗಾರನಿಗೆ ಕೊಡುವ ಅವಶ್ಯಕತೆ ಇದೆಯಾ ಎನ್ನುವ ಪ್ರಶ್ನೆ ಮೂಡಿದೆ.
ಇದೇ ವೇಳೆ ಆಟಗಾರರಿಗೆ ಖಡಕ್ ಸೂಚನೆ ನೀಡಿದ ಪಿಸಿಬಿ ಮುಖ್ಯಸ್ಥ ” ವಿಶ್ವಕಪ್ ಗೆಲ್ಲುವುದು ದೊಡ್ಡ ವಿಷಯ. ಈ ಸಲ ಗೆಲ್ಲಲೇಬೇಕು ಎನ್ನುವುದು ದೇವರ ಇಚ್ಚೆ. ಖಚಿತವಾಗಿ ನಮ್ಮ ತಂಡ ಗೆಲುವು ಸಾಧಿಸುತ್ತದೆ. ಈ ದೇಶ ನಿಮ್ಮ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದೆ. ಅವುಗಳನ್ನು ಯಾವುದೇ ಕಾರಣಕ್ಕೂ ಹುಸಿಗೊಳಿಸಬಾರದು” ಎಂದು ಹೇಳಿದರು. ಗೆಲ್ಲುವುದಿಲ್ಲ ಎಂದು ಗೊತ್ತಿದ್ದೂ ಇಷ್ಟು ದೊಡ್ಡ ಮೊತ್ತದ ಆಸೆ ತೋರಿಸಲಾಗಿದೆಯಾ ಎನ್ನುವುದು ಈಗ ಇರುವ ಪ್ರಶ್ನೆ!
Leave A Reply