ಗೆದ್ದರೆ ನಟನೆ ಬಿಡುತ್ತೇನೆ ಎಂದಿದ್ದೇಕೆ ಬಾಲಿವುಡ್ ಚೆಲುವೆ!
ಖ್ಯಾತ ಬಾಲಿವುಡ್ ನಟಿ ಕಂಗನಾ ರಾಣಾವತ್ ನೀಡಿರುವ ಹೇಳಿಕೆಯಿಂದ ಬಾಲಿವುಡ್ ನಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ತಾನು ಸ್ಪರ್ಧಿಸುತ್ತಿರುವ ಲೋಕಸಭಾ ಕ್ಷೇತ್ರದಲ್ಲಿ ಗೆದ್ದರೆ ನಟನಾ ಕ್ಷೇತ್ರದಿಂದ ಹಿಂದಕ್ಕೆ ಸರಿಯುತ್ತೇನೆ ಎಂದು ಬಾಲಿವುಡ್ ತಾರೆ ಕಂಗನಾ ರಾಣಾವತ್ ನಿರ್ಧರಿಸಿರುವುದು ಸರಿಯಲ್ಲ ಎನ್ನುವುದು ನಿರ್ಮಾಪಕರ ಅನಿಸಿಕೆ.
ಉತ್ತಮ ಕಲಾವಿದೆಯೊಬ್ಬರು ರಾಜಕೀಯ ಕಾರಣಗಳಿಂದ ನೇಪಥ್ಯಕ್ಕೆ ಸರಿದರೆ ಅದರಿಂದ ಬಾಲಿವುಡ್ ನಷ್ಟ ಅನುಭವಿಸುತ್ತದೆ ಎನ್ನುವುದು ನಿರ್ಮಾಪಕರ ಅಭಿಪ್ರಾಯ.
ಕಂಗನಾ ಉತ್ತಮ ನಟಿಯಾಗಿರುವುದರಿಂದ ಮತ್ತು ಯಶಸ್ವಿ ಚಿತ್ರಗಳನ್ನು ನೀಡುತ್ತಿರುವುದರಿಂದ ಅಂತವರು ಚಿತ್ರರಂಗದಿಂದ ದೂರ ಸರಿದರೆ ಅದರಿಂದ ಚಿತ್ರರಂಗಕ್ಕೆ ಹೊಡೆತ ಬೀಳುತ್ತೆ ಎನ್ನುವ ಕಾರಣಕ್ಕೆ ಹಲವು ನಿರ್ಮಾಪಕರು ಕಂಗನಾ ಅವರಿಗೆ ತಮ್ಮ ನಿರ್ಧಾರವನ್ನು ಮರು ಪರಿಶೀಲಿಸಿ ಎಂದು ಹೇಳುತ್ತಿದ್ದಾರೆ.
ಆದರೆ ತಾವು ಗೆದ್ದಾಗ ತಮ್ಮ ಕ್ಷೇತ್ರದ ಜನಸಾಮಾನ್ಯರ ಕಷ್ಟಗಳನ್ನು ಪರಿಹರಿಸಲು ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ಸಮಯ ಮೀಸಲಿಡಬೇಕಾಗಿರುವುದರಿಂದ ಈ ನಿರ್ಧಾರ ಅನಿವಾರ್ಯ ಎಂದು ಕಂಗನಾ ಹೇಳಿದ್ದಾರೆ.
ದೇಶಕ್ಕಾಗಿ ಇಂತಹ ಹೆಜ್ಜೆಗಳನ್ನು ಇಡಲು ತಮಗೆ ಸಿನೆಮಾರಂಗದಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ಮಿಸ್ ರಾಣಾವತ್ ತಿಳಿಸಿದ್ದಾರೆ.
ಮಂಡಿ ಲೋಕಸಭಾ ಕ್ಷೇತ್ರವನ್ನು ಗೆಲ್ಲಲು ಸತತವಾಗಿ ಶ್ರಮ ಹಾಕುತ್ತಿರುವ ಕಂಗನಾ ಅಲ್ಲಿ ಈಗಾಗಲೇ ಎರಡು ತಿಂಗಳ ಪ್ರಚಾರ ಕಾರ್ಯ ಮುಗಿಸಿದ್ದಾರೆ. ಜೂನ್ 1 ರಂದು ಹಿಮಾಚಲ ಪ್ರದೇಶದ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
Leave A Reply