• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸಿನಿಮಾ ಸುದ್ದಿ 

ಅಮಿತಾಬ್ ಯಾರ ಕಾಲು ಮುಟ್ಟಿ ನಮಸ್ಕರಿಸಿದ್ದು – ಅಷ್ಟು ದೊಡ್ಡ ವ್ಯಕ್ತಿ ಯಾರದು?

Tulunadu News Posted On June 20, 2024
0


0
Shares
  • Share On Facebook
  • Tweet It

81 ವಯಸ್ಸಿನ ಅಮಿತಾಬ್ ಬಚ್ಚನ್ ಅವರು ಇವತ್ತಿಗೂ ಸಿನೆಮಾ, ಜಾಹೀರಾತು ಎಂದು ಬ್ಯುಸಿ ಇರುತ್ತಾರೆ. ಅವರ ಹೊಸ ಸಿನೆಮಾ ಕಲ್ಕಿ 2898 ಎಡಿ ಚಿತ್ರದ ಪ್ರೀ – ರಿಲೀಸ್ ಕಾರ್ಯಕ್ರಮದ ವೇದಿಕೆಯಲ್ಲಿ ಒಂದು ಆಶ್ಚರ್ಯಕರ ಸಂಗತಿ ನಡೆಯಿತು. ಸಾಮಾನ್ಯವಾಗಿ ಅಮಿತಾಬ್ ಬಚ್ಚನ್ ಎಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಂಡರೆ ಜನರು ಅವರ ಪಾದ ಮುಟ್ಟಿ ನಮಸ್ಕರಿಸುತ್ತಾರೆ. ಆದರೆ ಬಚ್ಚನ್ ಮುಂಬೈಯಲ್ಲಿ ಒಂದು ಸಿನೆಮಾ ಕಾರ್ಯಕ್ರಮದಲ್ಲಿ ಯಾರಾದಾದರೂ ಕಾಲು ಮುಟ್ಟಿ ಅದು ಕೂಡ ಬಹಿರಂಗವಾಗಿ ನಮಸ್ಕರಿಸುವುದೆಂದರೆ ಅಲ್ಲಿದ್ದ ಎಲ್ಲರಿಗೂ ಅವರ ಸಜ್ಜನಿಕೆ ಕಂಡು ಆಶ್ಚರ್ಯವಾಗುವುದು ಸಹಜ. ಅಷ್ಟಕ್ಕೂ ಅಮಿತಾಬ್ ಕಾಲು ಮುಟ್ಟಿ ನಮಸ್ಕರಿಸಲು ಹೋಗಿದ್ದು ಯಾರನ್ನ? ಅವರು ಬೇರೆ ಯಾರೂ ಅಲ್ಲ. ತೆಲುಗು ಚಿತ್ರರಂಗದ ನಿರ್ಮಾಪಕ ಅಶ್ವಿನಿ ದತ್.

ಅಶ್ವಿನಿ ದತ್ ಅವರ ವೈಜಯಂತಿ ಮೂವೀಸ್ ಬ್ಯಾನರ್ ತೆಲುಗು ಸಿನೆಮಾರಂಗದಲ್ಲಿ ಅತೀ ದೊಡ್ಡ ಹೆಸರು. ಈ ಸಂಸ್ಥೆಯ ಮಾಲೀಕರೇ ಅಶ್ವಿನಿದತ್. 1974 ರಲ್ಲಿ ” ವೈಜಯಂತಿ ಮೂವೀಸ್” ಆರಂಭವಾಯಿತು. ಎನ್ ಟಿಆರ್, ಎಎನ್ ಆರ್, ಕೃಷ್ಣ, ಚಿರಂಜೀವಿ, ವೆಂಕಟೇಶ್, ನಾಗಾರ್ಜುನ ಮುಂತಾದ ಸ್ಟಾರ್ ನಟರ ಸಿನೆಮಾಗಳಿಗೆ ಅಶ್ವಿನಿದತ್ ಬಂಡವಾಳ ಹೂಡಿದ್ದಾರೆ. ಇದೇ ಸಂಸ್ಥೆ ಈಗ ಕಲ್ಕಿ 2898 ಎಡಿ ಸಿನೆಮಾ ನಿರ್ಮಿಸಿದೆ.

ಇವರ ಬಗ್ಗೆ ಮಾತನಾಡಿದ ಸಿನಿಯರ್ ಬಚ್ಚನ್ ” ಇವರು ವೈಜಯಂತಿ ಮೂವೀಸ್ ನ ಮಾಲೀಕರು. ಇವರ ಇಬ್ಬರ ಮಕ್ಕಳಾದ ಸ್ವಪ್ನ ಹಾಗೂ ಪ್ರಿಯಾಂಕಾ ಕೂಡ ನಿರ್ಮಾಪಕರು. ಅಶ್ವಿನಿ ದತ್ ಅವರಿಗಿಂತ ಸರಳ ಮತ್ತು ವಿನಮ್ರ ವ್ಯಕ್ತಿಯನ್ನು ನಾನು ನೋಡಿಲ್ಲ. ಪ್ರತಿ ಬಾರಿಯೂ ಶೂಟಿಂಗ್ ಸೆಟ್ ಗೆ ಅವರೇ ಮೊದಲು ಬರುತ್ತಾರೆ. ವಿಮಾನ ನಿಲ್ದಾಣಕ್ಕೆ ಬಂದು ನಿಮ್ಮನ್ನು ಸ್ವಾಗತಿಸುತ್ತಾರೆ. ನಿಮ್ಮ ಸುರಕ್ಷತೆಯನ್ನು ನೋಡಿಕೊಳ್ಳುತ್ತಾರೆ. ಯಾರೂ ಕೂಡ ಅವರ ರೀತಿ ಆಲೋಚನೆ ಮಾಡುವುದಿಲ್ಲ” ಎಂದು ಹೇಳಿದ ಬಳಿಕ ಅಮಿತಾಬ್ ಅವರು ಅಶ್ವಿನಿ ದತ್ ಕಾಲಿಗೆ ನಮಸ್ಕರಿಸಿದರು.

ಅಮಿತಾಬ್ ಬಚ್ಚನ್ ಅವರ ಇಂತಹ ನಡೆಯಿಂದ ಸಿನೆಮಾ ನಟರು ಕಲಿಯುವುದು ಸಾಕಷ್ಟಿದೆ. ಒಂದು ಕಾಲದಲ್ಲಿ ಡಾ. ರಾಜಕುಮಾರ್ ಅವರು ನಿರ್ಮಾಪಕರನ್ನು ಅನ್ನದಾತರೆಂದು ಕರೆಯುತ್ತಿದ್ದರು. ಆದರೆ ಇತ್ತಿಚಿನ ತಲೆಮಾರಿನಲ್ಲಿ ಕೆಲವು ಸ್ಟಾರ್ ನಟರು ನಿರ್ಮಾಪಕರನ್ನು ಕೇವಲವಾಗಿ ಕರೆಯುವುದು, ಹೀಯಾಳಿಸುವುದನ್ನು ನೋಡಿದಾಗ ನಿಜಕ್ಕೂ ಚಿತ್ರರಂಗ ಎತ್ತ ಸಾಗುತ್ತಿದೆ ಎಂದು ಸಿನೆಮಾ ರಂಗದಲ್ಲಿ ಇರುವವರಿಗೆ ಆತಂಕವಾಗುತ್ತಿತ್ತು. ಆದರೆ ಅಮಿತಾಬ್ ಬಚ್ಚನ್ ಅವರು ತಾವು ಏರಿರುವ ಎತ್ತರವನ್ನು ಮರೆತು ಒಬ್ಬ ನಿರ್ಮಾಪಕರ ಕಾಲಿಗೆ ನಮಸ್ಕರಿಸಿರುವುದನ್ನು ನೋಡಿದಾಗ ಅಂದಿನ ಕಲಾವಿದರು ಹೇಗೆ ಬೆಳೆದರು ಎಂದು ತಿಳಿಯುತ್ತದೆ.
ಇನ್ನು ಕಲ್ಕಿ 2898 ಎಡಿ ಸಿನೆಮಾದಲ್ಲಿ ಬಚ್ಚನ್ ಅವರೊಂದಿಗೆ ಪ್ರಭಾಸ್, ದೀಪಿಕಾ ಪಡುಕೋಣೆ, ರಾಣಾ ದಗ್ಗುಬಾಟಿ, ಕಮಲ್ ಹಾಸನ್ ಸಹಿತ ಅನೇಕ ಕಲಾವಿದರ ದಂಡು ಇದೆ.

0
Shares
  • Share On Facebook
  • Tweet It




Trending Now
ಅಪ್ರಾಪ್ತ ವಯಸ್ಸಿನವರ ಮೇಲೆ ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ
Tulunadu News February 27, 2026
ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತಕ್ಕೆ ಒಂದು ವರ್ಷ , ಪಾಲಿಕೆಗೆ ಚುನಾವಣೆ ಸದ್ಯಕ್ಕೆ ಅನುಮಾನ!
Tulunadu News February 25, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಅಪ್ರಾಪ್ತ ವಯಸ್ಸಿನವರ ಮೇಲೆ ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ
    • ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತಕ್ಕೆ ಒಂದು ವರ್ಷ , ಪಾಲಿಕೆಗೆ ಚುನಾವಣೆ ಸದ್ಯಕ್ಕೆ ಅನುಮಾನ!
    • ಖಾಸಗಿ ವೀಡಿಯೋ ಮುಂದಿಟ್ಟು ಮಾಲೀಕನಿಗೆ ಬ್ಲ್ಯಾಕ್‌ಮೇಲ್: ಹೆಂಡತಿ ಅಕೌಂಟ್‌ಗೆ ಹಣ ಕೇಳಿದ್ದ ಅಭಿಷೇಕ್ ಸುರೇಂದ್ರ ಪೂಜಾರಿ!
    • ಕೇರಳ ಇನ್ನು ಮುಂದೆ ಕೇರಳಂ!
    • ಐರ್ಲೆಂಡ್‌ನಲ್ಲಿ ಕಡಬದ ಯುವಕ ನಿಗೂಢ ಸಾವು!
    • ಮೀಟರ್ ರೀಡಿಂಗಾಗಿ ಬಂದ ನೌಕರರ ಮೇಲೆ ಸಾಕು ನಾಯಿ ದಾಳಿ!
    • ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
    • ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
    • 'ವಂದೇ ಮಾತರಂ' ಅವಮಾನ ಮಾಡಿದವರಿಗೆ ಕಾದಿದೆ 3 ವರ್ಷಗಳ ಜೈಲು! ಕೇಂದ್ರ ಸರಕಾರದ ನೂತನ ನಿಯಮಾವಳಿ ಬಿಡುಗಡೆ
    • ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್
  • Popular Posts

    • 1
      ಅಪ್ರಾಪ್ತ ವಯಸ್ಸಿನವರ ಮೇಲೆ ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ
    • 2
      ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತಕ್ಕೆ ಒಂದು ವರ್ಷ , ಪಾಲಿಕೆಗೆ ಚುನಾವಣೆ ಸದ್ಯಕ್ಕೆ ಅನುಮಾನ!
    • 3
      ಖಾಸಗಿ ವೀಡಿಯೋ ಮುಂದಿಟ್ಟು ಮಾಲೀಕನಿಗೆ ಬ್ಲ್ಯಾಕ್‌ಮೇಲ್: ಹೆಂಡತಿ ಅಕೌಂಟ್‌ಗೆ ಹಣ ಕೇಳಿದ್ದ ಅಭಿಷೇಕ್ ಸುರೇಂದ್ರ ಪೂಜಾರಿ!
    • 4
      ಕೇರಳ ಇನ್ನು ಮುಂದೆ ಕೇರಳಂ!

  • Privacy Policy
  • Contact
© Tulunadu Infomedia.

Press enter/return to begin your search