• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಮತ್ತೊಮ್ಮೆ ಕಾಟಿಪಳ್ಳ ದೀಪಕ್ ರಾವ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿದಾರರನ್ನು ಬೆದರಿಸುವ ಯತ್ನ!?

Tulunadu News Posted On June 22, 2024
0


0
Shares
  • Share On Facebook
  • Tweet It

2018 ರಲ್ಲಿ ಸುರತ್ಕಲ್ ಕಾಟಿಪಳ್ಳದಲ್ಲಿ ಜಿಹಾದಿ ಮನಸ್ಥಿತಿಯ ಮತಾಂಧರಾದ ಪಿಂಕಿ ನವಾಜ್, ನೌಶದ್ ಉಲ್ಲಂಜೆ, ಮೊಹಮದ್ ರಿಜ್ವಾನ್, ಮಹಮದ್ ಇರ್ಶಾನ್ ಎಂಬವರಿಂದ ಭೀಕರವಾಗಿ ಹತ್ಯೆಯಾಗಿ ಹೋದ ಹಿಂದೂ ಕಾರ್ಯಕರ್ತ ದೀಪಕ್ ರಾವ್ ಪ್ರಕರಣ ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯ ದೇಶದಲ್ಲೆಡೆ ತೀವ್ರ ಸಂಚಲನವನ್ನುಂಟು ಮಾಡಿತ್ತು. ಇದೀಗ ಆ ಹತ್ಯೆಗೆ ಆರು ವರ್ಷಗಳೇ ಕಳೆದಿದ್ದರೂ ಕುಟುಂಬ ವರ್ಗಕ್ಕೆ ನ್ಯಾಯ ಮಾತ್ರ ಇನ್ನೂ ಮರೀಚಿಕೆಯಾಗಿದೆ. ಈ ನಡುವೆ ಹಂತಕರು ಮಾತ್ರ ತಮ್ಮದೇ ಗ್ಯಾಂಗ್ ಕಟ್ಟಿಕೊಂಡು ಹತ್ತಾರು ಕೇಸುಗಳನ್ನು ಹಾಕಿಕೊಂಡು ನಮ್ಮನ್ನು ಯಾರೂ ಏನು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬಂತೆ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ.

ಈಗ ದೀಪಕ್ ಹತ್ಯೆಯ ಪ್ರಮುಖ ಸಾಕ್ಷಿಯ ಬೈಕ್ ಗೆ ಬೆಂಕಿ!

ಮಂಗಳೂರಿನ ನ್ಯಾಯಾಲಯದಲ್ಲಿ 2-3 ದಿನಗಳ ಹಿಂದೆ ದೀಪಕ್ ರಾವ್ ಹತ್ಯೆ ಪ್ರಕರಣದ ಸಾಕ್ಷಿಗಳ ವಿಚಾರಣೆ ನಡೆಯಲಿದ್ದ ಹಿಂದಿನ ದಿನವೇ ಪ್ರಮುಖ ಸಾಕ್ಷಿಗಳಲ್ಲೊಬ್ಬರಾಗಿದ್ದ ಯತೀಶ್ ಎಂಬುವರ ಮನೆ ಮುಂದೆ ನಾಲ್ಕು ದಿನಗಳಿಂದ ಚಾಲನೆಯೇ ಮಾಡದೇ ನಿಲ್ಲಿಸಿದ್ದ ಬೈಕ್ ಗೆ ಮಧ್ಯರಾತ್ರಿ ಅನುಮಾನಾಸ್ಪದವಾಗಿ ಬೆಂಕಿ ಬಿದ್ದಿದ್ದು ತೀವ್ರ ಸಂಶಯಕ್ಕೆಡೆ ಮಾಡಿದೆ.

ಇದು ಖಂಡಿತವಾಗಿಯೂ ಶಾಟ್ ಸರ್ಕ್ಯೂಟ್ ನಿಂದ ಆದ ದುರ್ಘಟನೆ ಅಲ್ಲ ಎಂದ ಶೋ ರೂಮ್ ಸಿಬ್ಬಂದಿ

ನಾಲ್ಕು ದಿನಗಳಿಂದ ಸ್ಟಾರ್ಟ್ ಮಾಡಿಯೇ ಇಲ್ಲದ ಬೈಕ್ ನಲ್ಲಿ ಶಾರ್ಟ್ ಆಗಲು ಸಾಧ್ಯವೇ ಇಲ್ಲ. ಅದಲ್ಲದೇ ಬ್ಯಾಟರಿ ಸಂಪೂರ್ಣ ವೀಕ್ ಆಗಿ ಹಲವು ಸಮಯಗಳೇ ಕಳೆದಿದ್ದು ಸೆಲ್ಫ್ ಕೂಡ ಆಗುತ್ತಿಲ್ಲದ ಬೈಕ್ ನಿಂದ ಶಾರ್ಟ್ ಎನ್ನುವುದು ಅಸಾಧ್ಯದ ಮಾತು ಎನ್ನುವುದು ಶೋರೂಮ್ ನವರ ಹೇಳಿಕೆ.

ದೀಪಕ್ ರಾವ್ ಕೇಸಿನಲ್ಲಿ ಕೋರ್ಟ್ ಗೆ ಬಂದ ಎಲ್ಲಾ ಸಾಕ್ಷಿಗಳಿಗೂ ಹಂತಕರ ಬೆದರಿಕೆ

ತಮ್ಮ ಸ್ನೇಹಿತನ ಅಮಾನುಷ ಹತ್ಯೆ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲೇಬೇಕೆಂಬ ಹಠಕ್ಕೆ ಬಿದ್ದಿದ್ದ ದೀಪಕ್ ರಾವ್ ಸ್ನೇಹಿತರು ಪೊಲೀಸ್ ಇಲಾಖೆ ಹಾಗೂ ಸರ್ಕಾರಿ ವಕೀಲರ ಅತ್ಯುತ್ತಮ ಸಹಕಾರದಿಂದ ಹಂತಕರ ವಿರುದ್ಧ ನ್ಯಾಯಾಲಯದಲ್ಲಿ ಸಮರ್ಥವಾಗಿ ಸಾಕ್ಷಿ ನುಡಿದಿದ್ದರು.

ಸಾಕ್ಷಿಗಳು ನ್ಯಾಯಾಲಯಕ್ಕೆ ಹಾಜರಾಗುವ ಸಂದರ್ಭದಲ್ಲೆಲ್ಲಾ ಹಂತಕರ ಗ್ಯಾಂಗ್ ಕೋರ್ಟ್ ಆವರಣದಲ್ಲೇ “ಸಾಕ್ಷಿ ಹೇಳಿದರೆ ಕಾಟಿಪಳ್ಳದಲ್ಲಿ ನಿಮ್ಮನ್ನು ಬಿಡುವುದಿಲ್ಲ, ನೋಡಿಕೊಳ್ಳುತ್ತೇವೆ” ಎಂದು ಬೆದರಿಕೆ ಹಾಕುತ್ತಿದ್ದದ್ದು ಸಾಮಾನ್ಯವಾಗಿತ್ತು. ಒಂದು ಹಂತದಲ್ಲಿ ಇದನ್ನು ಪ್ರಶ್ನಿಸಿದ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದರು. ಇಲ್ಲಿ ಸಾಕ್ಷಿಗಳು ಭಯದಿಂದ ಕೋರ್ಟಿಗೆ ಬರಲೇಬಾರದು ಎಂಬುದು ಹಂತಕರ ಮುಖ್ಯ ಉದ್ದೇಶವಾಗಿತ್ತು.

ಹಂತಕರ ತಂಡ ಸಾಕ್ಷಿದಾರರನ್ನು ಟಾರ್ಗೆಟ್ ಮಾಡಿದ್ದ ಬಗ್ಗೆ ಸರ್ಕಾರಿ ಅಭಿಯೋಜಕರು ಕೂಡಲೇ ನ್ಯಾಯಾಧೀಶರ ಗಮನಕ್ಕೆ ತಂದು ಸಾಕ್ಷಿಗಳ ರಕ್ಷಣೆಗೆ ಮನವಿ ಮಾಡಿದ್ದರು. ನಂತರದಲ್ಲಿ ಈ ಪ್ರಕರಣದ ಪ್ರಮುಖ ಸಾಕ್ಷಿಗಳಿಗೆ ಕಿಂಚಿತ್ತು ತೊಂದರೆಯಾಗದಂತೆ ಸೂಕ್ತ ಪೊಲೀಸ್ ಭದ್ರತೆ ನೀಡುವಂತೆ ನ್ಯಾಯಾಲಯ ಸೂಚಿಸಿತ್ತು. ಆ ವೇಳೆಗಾಗಲೇ ಸುರತ್ಕಲ್ ಪೊಲೀಸರು ಠಾಣೆಯಲ್ಲಿ ಎಲ್ಲಾ ಸಾಕ್ಷಿದಾರರನ್ನು ಕರೆಯಿಸಿ ಧೈರ್ಯ ತುಂಬಿ ಅತ್ಯಂತ ಹೆಚ್ಚಿನ ಮುತುವರ್ಜಿಯಿಂದ ಕರ್ತವ್ಯ ನಿರ್ವಹಿಸಿದ್ದರು.

ಈ ಗ್ಯಾಂಗ್ ಬೆದರಿಕೆ ಹಾಕುವುದು ಇದೇ ಮೊದಲಲ್ಲ, ಬಿಜೆಪಿ ಕಾಪೋರೇಟರ್ ಗೂ ಕೊಲೆ ಬೆದರಿಕೆ

ದೀಪಕ್ ರಾವ್ ಹತ್ಯೆ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಿದ್ದ ಸ್ಥಳೀಯ ಬಿಜೆಪಿ ಕಾರ್ಪೊರೇಟರ್ ಗೂ ಇದೇ ತಂಡದ ಸದಸ್ಯರು ಬಹಿರಂಗವಾಗಿ ಹತ್ಯೆ ಮಾಡುವ ಬೆದರಿಕೆ ಹಾಕಿದ್ದ ವಾಟ್ಸಾಪ್ ಸ್ಕ್ರೀನ್ ಶಾಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಮೇಲೆ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪಿಂಕಿ ನವಾಜ್ ಎಂಬುವವನನ್ನು ಬಂಧಿಸಿ ಗೂಂಡಾ ಕಾಯ್ದೆ ಮೇಲೆ ಜೈಲಿಗಟ್ಟಿದ್ದರು.

ಹಂತಕರಿಂದ ದೊಡ್ಡ ಮಟ್ಟದ ಸ್ಕೆಚ್?

ಯಾವ ಬೆದರಿಕೆಗಳಿಗೂ ಜಗ್ಗದೇ ಸಾಕ್ಷಿಗಳು ನ್ಯಾಯಾಲಯದಲ್ಲಿ ಸಾಕ್ಷಿ ನುಡಿದ ಪರಿಣಾಮ ಹಂತಕರಿಗೆ ಬಹುತೇಕ ಜೀವಾವಧಿ ಶಿಕ್ಷೆಯಾಗುವ ಸಂಭವವಿದ್ದು ವಿಚಲಿತರಾಗಿರುವ ಹಂತಕರ ತಂಡ ಜೈಲು ಸೇರುವ ಮುನ್ನ ಮತ್ತೊಂದು ದೊಡ್ಡ ಮಟ್ಟದ ಷಡ್ಯಂತ್ರ ರೂಪಿಸಿರುವ ಬಗ್ಗೆ ಸ್ಥಳೀಯರಲ್ಲಿ ಸಂಶಯ ಮೂಡಿದೆ. ಅದರ ಆರಂಭಿಕ ಹಂತವಾಗಿ ದೀಪಕ್ ರಾವ್ ಹತ್ಯೆ ಆರೋಪಿಯ ಮನೆ ಸಮೀಪವೇ ಇರುವ ಪ್ರಮುಖ ಸಾಕ್ಷಿ ಯತೀಶ್ ಎಂಬುವರ ಬೈಕ್ ಸುಟ್ಟು ಹಾಕಿರುವುದು, ಎಂಬ ಬಗ್ಗೆ ಸಂಶಯ ದಟ್ಟವಾಗಿದೆ.

ಒಟ್ಟಾರೆಯಾಗಿ ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಈಗಾಗಲೇ ಪ್ರಕರಣ ದಾಖಲಾಗಿದೆ. ಪೊಲೀಸರು ಸಹ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದು ಈ ಗ್ಯಾಂಗ್ ನ ಸಕ್ರಿಯ ಸದಸ್ಯರನ್ನು ತೀವ್ರ ವಿಚಾರಣೆಗೊಳಪಡಿಸಿದರೆ ಮತ್ತಷ್ಟು ಸತ್ಯಾಂಶ ಬೆಳಕಿಗೆ ಬರಲಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

0
Shares
  • Share On Facebook
  • Tweet It




Trending Now
ರಸ್ತೆಗೆ ಅಡ್ಡಬಂದ ನಾಯಿ- ತಪ್ಪಿಸಲು ಹೋಗಿ ಕಾರು ಪಲ್ಟಿ -ಖ್ಯಾತ ಡಿಜೆ ಮಾರ್ಮಿನ್ ಮೆಂಡೋನ್ಸಾ ನಿಧನ
Tulunadu News August 23, 2025
ಮಹೇಶ್ ಶೆಟ್ಟಿ ತಿಮರೋಡಿ ವಶಕ್ಕೆ ಪಡೆಯುವ ವೇಳೆ ಪೊಲೀಸ್ ಕಾರಿಗೆ ಗುದ್ದಿದ ಮೂವರು ಅರೆಸ್ಟ್
Tulunadu News August 22, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ರಸ್ತೆಗೆ ಅಡ್ಡಬಂದ ನಾಯಿ- ತಪ್ಪಿಸಲು ಹೋಗಿ ಕಾರು ಪಲ್ಟಿ -ಖ್ಯಾತ ಡಿಜೆ ಮಾರ್ಮಿನ್ ಮೆಂಡೋನ್ಸಾ ನಿಧನ
    • ಮಹೇಶ್ ಶೆಟ್ಟಿ ತಿಮರೋಡಿ ವಶಕ್ಕೆ ಪಡೆಯುವ ವೇಳೆ ಪೊಲೀಸ್ ಕಾರಿಗೆ ಗುದ್ದಿದ ಮೂವರು ಅರೆಸ್ಟ್
    • ನಮಸ್ತೆ ಸದಾ ವತ್ಸಲೆ... ಆರ್ ಎಸ್ ಎಸ್ ಗೀತೆ ಹಾಡಿದ ಡಿಕೆಶಿವಕುಮಾರ್!
    • ಸ್ನೇಹಮಯಿ ಕೃಷ್ಣ ಅವರಿಂದ ಸುಜಾತ ಭಟ್ ಹಾಗೂ ಇತರರ ಮೇಲೆ ಪ್ರಕರಣ ದಾಖಲು!
    • ಕಾನೂನು ಸ್ಪಷ್ಟವಾಗಿದೆ, ಡಿಜೆಗಳಿಗೆ ಅವಕಾಶ ನೀಡುವುದಿಲ್ಲ: ಕಮಿಷನ‌ರ್ ಸುಧೀರ್ ಕುಮಾರ್ ರೆಡ್ಡಿ
    • ಡಿಜೆ ಬಳಕೆಗೆ ವಿರೋಧವಿದೆ, ಆದರೆ ಧಾರ್ಮಿಕ ಕಾರ್ಯಕ್ರಮಗಳ ಆಚರಣೆಗೆ ಅಡ್ಡಿ ಪಡಿಸುವ ನಿಯಮ ಸಲ್ಲದು!
    • ಚುನಾವಣೆ ಜಂಟಿ ಎದುರಿಸಿದ ಠಾಕ್ರೆ ಸಹೋದರರಿಗೆ ಶೂನ್ಯ ಸಂಪಾದನೆಯಿಂದ ತೀವ್ರ ಮುಖಭಂಗ!
    • ಧರ್ಮಸ್ಥಳದ ವಿರುದ್ಧದ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂದು ಗೊತ್ತು, ಸಾಕ್ಷ್ಯವಿಲ್ಲ ಎಂದ ಹೆಗ್ಗಡೆ!
    • ಇನ್ನು ವಿಮಾನದಂತೆಯೆ ರೈಲಿನಲ್ಲಿಯೂ ಲಗೇಜ್ ತೂಕದ ಪರಿಶೀಲನೆ! ಪ್ರಯಾಣಿಕರು ತಿಳಿದುಕೊಳ್ಳಬೇಕಾದ ವಿಷಯಗಳು...
    • ಧರ್ಮಸ್ಥಳದ ಷಡ್ಯಂತ್ರದ ಹಿಂದೆ ಸಸಿಕಾಂತ್ ಸೆಂಥಿಲ್ ಕೈವಾಡ ಎಂದ ಜನಾರ್ಧನ ರೆಡ್ಡಿ!
  • Popular Posts

    • 1
      ರಸ್ತೆಗೆ ಅಡ್ಡಬಂದ ನಾಯಿ- ತಪ್ಪಿಸಲು ಹೋಗಿ ಕಾರು ಪಲ್ಟಿ -ಖ್ಯಾತ ಡಿಜೆ ಮಾರ್ಮಿನ್ ಮೆಂಡೋನ್ಸಾ ನಿಧನ
    • 2
      ಮಹೇಶ್ ಶೆಟ್ಟಿ ತಿಮರೋಡಿ ವಶಕ್ಕೆ ಪಡೆಯುವ ವೇಳೆ ಪೊಲೀಸ್ ಕಾರಿಗೆ ಗುದ್ದಿದ ಮೂವರು ಅರೆಸ್ಟ್
    • 3
      ನಮಸ್ತೆ ಸದಾ ವತ್ಸಲೆ... ಆರ್ ಎಸ್ ಎಸ್ ಗೀತೆ ಹಾಡಿದ ಡಿಕೆಶಿವಕುಮಾರ್!
    • 4
      ಸ್ನೇಹಮಯಿ ಕೃಷ್ಣ ಅವರಿಂದ ಸುಜಾತ ಭಟ್ ಹಾಗೂ ಇತರರ ಮೇಲೆ ಪ್ರಕರಣ ದಾಖಲು!
    • 5
      ಕಾನೂನು ಸ್ಪಷ್ಟವಾಗಿದೆ, ಡಿಜೆಗಳಿಗೆ ಅವಕಾಶ ನೀಡುವುದಿಲ್ಲ: ಕಮಿಷನ‌ರ್ ಸುಧೀರ್ ಕುಮಾರ್ ರೆಡ್ಡಿ

  • Privacy Policy
  • Contact
© Tulunadu Infomedia.

Press enter/return to begin your search