ಜಗತ್ತಿನ ಅತೀ ಹೆಚ್ಚು ಮಾವು ಬೆಳೆಯುವುದು ಅಂಬಾನಿ!
ಮುಕೇಶ್ ಅಂಬಾನಿ ಅವರು ಜಗತ್ತಿನ ಖ್ಯಾತ ಉದ್ಯಮಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವುದು ಮಾತ್ರವಲ್ಲ, ಅವರೊಬ್ಬರು ಕೃಷಿ ಬೆಳೆಗಾರರು ಎನ್ನುವುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಹೌದು. ಮುಖೇಶ್ ಅಂಬಾನಿ ಸುಮಾರು 600 ಎಕರೆ ಪ್ರದೇಶದಲ್ಲಿ ಮಾವು ಬೆಳೆಯುತ್ತಾರೆ.
ಮೂಲತ: ಉದ್ಯಮ ರಂಗದಲ್ಲಿ ಬಿಝಿಯಾಗಿರುವ ಅಂಬಾನಿ ಯಾಕೆ ಮಾವಿನ ಫಸಲಿಗೆ ಕೈ ಹಾಕಿದ್ರು ಎನ್ನುವುದೇ ಕುತೂಹಲಕಾರಿ ವಿಷಯ. ತುಂಬಾ ಹಣ ಇದೆ, ಏನು ಬೇಕಾದರೂ ಮಾಡಬಹುದು ಎಂದು ನೀವು ಅಂದುಕೊಂಡಿರಬಹುದು. ಆದರೆ ವಿಷಯ ಹಾಗಲ್ಲ, ಏನೂ ಕಾರಣವಿಲ್ಲದೇ ಗುಜರಾತಿಗಳು ಏನೂ ಮಾಡುವುದಿಲ್ಲ ಎನ್ನುವುದು ವ್ಯಾಪಾರಿ ಕ್ಷೇತ್ರದಲ್ಲಿ ತಿಳಿದವರು ಹೇಳುವ ಮಾತು. ಹಾಗೆಯೇ ಅಂಬಾನಿಯವರಿಗೂ ಕೃಷಿಗೆ ಹಣ ತೊಡಗಿಸಬೇಕಾಗಿ ಬಂದದ್ದೇ ಅನಿವಾರ್ಯ ಕಾರಣಗಳಿಂದ.
ಗುಜರಾತಿನ ಜಾಮ್ ನಗರದಲ್ಲಿ ಅಂಬಾನಿ ಒಡೆತನದ ಅನೇಕ ಕೈಗಾರಿಕೆಗಳಿವೆ. ಅಲ್ಲಿ 5000 ಹೆಕ್ಟೇರ್ ಪ್ರದೇಶದಲ್ಲಿ ಅವರು ಅನೇಕ ಕೈಗಾರಿಕೆಗಳನ್ನು ಸ್ಥಾಪಿಸಿದ್ದಾರೆ. ಆ ಕಾರ್ಖಾನೆಗಳಿಂದ ಹೊರಬಿಡಲಾಗುವ ಹೊಗೆಯಿಂದ ಸ್ಥಳೀಯರ ದೂರು ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಅಂಬಾನಿ ಕಂಪೆನಿಗೆ ನೋಟಿಸ್ ನೀಡಲಾರಂಭಿಸಿದ್ದವು. ಇದಕ್ಕಾಗಿ ರಿಲಾಯನ್ಸ್ ಶಬ್ದ ಮಾಲಿನ್ಯ, ವಾಯು ಮಾಲಿನ್ಯವನ್ನು ತಡೆಗಟ್ಟಲು ವಿಶೇಷ ಕ್ರಮ ಕೈಗೊಳ್ಳಲು ಮುಂದಾಗಿತ್ತು. ತನ್ನ ಕೈಗಾರಿಕೆಗಳ ಸುತ್ತ ಕೃಷಿಗಾಗಿ ಮತ್ತು ಉತ್ತಮ ಪರಿಸರಕ್ಕಾಗಿ 7500 ಎಕರೆಗಳನ್ನು ಮೀಸಲಿಟ್ಟಿತ್ತು. ಇಲ್ಲಿ ಹೈನುಗಾರಿಕೆ ಮತ್ತು ಕೃಷಿ ಸಂಬಂಧಿ ಪರಿಸರ ಸ್ನೇಹಿ ಯೋಜನೆಗಳಿಗೆ ಒತ್ತು ನೀಡಲಾಗಿದೆ.
ಈ ಜಾಗದಲ್ಲಿ 600 ಎಕರೆಯಲ್ಲಿ ವಿಶೇಷವಾಗಿ ಕೃಷಿಯನ್ನು ಮಾಡಲಾಗುತ್ತದೆ. ಪ್ರಸ್ತುತ ಇದು ವಿಶ್ವದ ಅತೀ ದೊಡ್ಡ ಮಾವಿನ ತೋಟವಾಗಿದೆ. ಈ ಫಸಲಿಗೆ ಅಗತ್ಯವಾಗಿರುವ ನೀರನ್ನು ಪಕ್ಕದಲ್ಲಿಯೇ ಇರುವ ಸಮುದ್ರದಿಂದ ತೆಗೆದು ಅದನ್ನು ಶುದ್ಧಿಕರಿಸಿ ಬಳಸಲಾಗುತ್ತಿದೆ. ಈ ಮಾವಿನ ಹಣ್ಣಿನ ವಹಿವಾಟನ್ನು ನೋಡಿಕೊಳ್ಳಲು ಪ್ರತ್ಯೇಕ ಕಂಪೆನಿಯನ್ನು ಅಂಬಾನಿ ತೆರೆದಿದ್ದಾರೆ. ಇದಕ್ಕೆ ಆರ್ ಐಎಲ್ ಮ್ಯಾಂಗೋ ಬ್ರಾಂಡ್ ಎಂದು ಹೆಸರಿಡಲಾಗಿದೆ.
Leave A Reply