ಆತಿಶಿ ಸಿಎಂ ಆದ್ರೆ ದೇಶದ ಭದ್ರತೆಗೆ ಅಪಾಯ ಎಂದ ಆಪ್ ಸಂಸದೆ!
ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಭಾ ಸಂಸದೆ ಸ್ವಾತಿ ಮಾಲಿವಾಲ್ ದೆಹಲಿಯ ನೂತನ ಸಿಎಂ ಆಗಿ ನೇಮಕವಾಗಿರುವ ಆತಿಶಿ ಬಗ್ಗೆ ನೇರಾನೇರವಾಗಿ ಆರೋಪಗಳನ್ನು ಮಾಡಿ ತಾವೇ ವಿಡಿಯೋ ಮಾಡಿ ಹರಿಯಬಿಟ್ಟಿದ್ದಾರೆ. ಅದರಲ್ಲಿ ಮಾತನಾಡಿದ ಅವರು ” ಇದು ದೆಹಲಿಯ ಮಟ್ಟಿಗೆ ಬಹಳ ದುರಾದೃಷ್ಟಕರ ದಿನ, ಯಾವ ಕುಟುಂಬ ಭಯೋತ್ಪಾದಕ ಅಫ್ಜಲ್ ಗುರುವನ್ನು ಅಮಾಯಕ ಎಂದು ವಾದಿಸಿ, ಗಲ್ಲು ಶಿಕ್ಷೆಯಿಂದ ತಪ್ಪಿಸಿ, ಆತನ ಬಿಡುಗಡೆಗೆ ನಿರಂತರ ಹೋರಾಟ ಮಾಡಿ ಬರುತ್ತಿತ್ತೋ ಅಂತಹ ಕುಟುಂಬದ ಮಹಿಳೆ ಆತಿಶಿ ದೆಹಲಿಯ ಮುಖ್ಯಮಂತ್ರಿ ಆಗುವುದಾ ಎಂದು ಅವರು ಪ್ರಶ್ನಿಸಿದ್ದಾರೆ. ಆತಿಶಿಯ ಪೋಷಕರು ಅನೇಕ ಬಾರಿ ರಾಷ್ಟ್ರಪತಿಗಳಿಗೆ ಕ್ಷಮಾಪಣೆ ಕೋರಿ ಪತ್ರ ಬರೆದು, ಅಫ್ಜಲ್ ಗುರು ಅಮಾಯಕನಾಗಿರುವುದರಿಂದ ಆತನಿಗೆ ವಿಧಿಸಿದ್ದ ಗಲ್ಲುಶಿಕ್ಷೆ ರದ್ದಾಗಬೇಕು, ಆತನನ್ನು ರಾಜಕೀಯ ಪಿತೂರಿಯ ಕಾರಣದಿಂದ ಬಂಧಿಸಲಾಗಿದೆ ಎಂದು ವಾದಿಸಿದ್ದರು ಎಂದು ಸ್ವಾತಿ ಹೇಳಿದ್ದಾರೆ.
ಅವರು ಇನ್ನು ಮುಂದುವರೆದು ” ಇಂತಹ ಹಿನ್ನಲೆ ಇರುವ ವ್ಯಕ್ತಿ ರಾಜ್ಯದ ಮುಖ್ಯಮಂತ್ರಿಯಾಗುತ್ತಿದ್ದಾರೆ. ಅವರು ಸಿಎಂ ಆಗಿರುವಷ್ಟು ಕಾಲ “ಡಮ್ಮಿ” ಆಗಿಯೇ ಇರುತ್ತಾರೆ ಎನ್ನುವುದು ನಿಜವಾದರೂ ಅವರು ಸಿಎಂ ಆಗಿರುವುದು ಎಂದರೆ ದೇಶದ ಭದ್ರತೆ ಮತ್ತು ದೆಹಲಿ ರಾಜ್ಯದ ಸುರಕ್ಷತೆಗೆ ನೇರ ಬೆದರಿಕೆ ಹಾಕಿದಂತೆ ಆಗುತ್ತದೆ. ದೆಹಲಿಯ ಜನರನ್ನು ದೇವರೇ ಕಾಪಾಡಬೇಕು ಎಂದು ಆಪ್ ಸಂಸದೆ ಹೇಳಿದ್ದಾರೆ.
Leave A Reply