• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಬಿಜೆಪಿ ಶಾಸಕಿ, ಮಾಜಿ ಸಂಸದರ ಪುತ್ರನ ಜಾಗಕ್ಕೂ ವಕ್ಫ್ ಆತಂಕ!

Tulunadu News Posted On October 31, 2024
0


0
Shares
  • Share On Facebook
  • Tweet It

ಉತ್ತರ ಕರ್ನಾಟಕದ ಅನೇಕ ರೈತರ ಭೂಮಿ ವಕ್ಫ್ ಬೋರ್ಡಿನದ್ದು ಎನ್ನುವ ವಿಷಯ ಈಗಾಗಲೇ ಸಾಕಷ್ಟು ಚರ್ಚೆ, ಹೋರಾಟ, ವಾದ, ವಿವಾದಗಳಿಗೆ ಕಾರಣವಾಗುತ್ತಿದ್ದಂತೆ ಈಗ ಈ ವಿಷಯ ಅಕ್ಷರಶ: ಭಾರತೀಯ ಜನತಾ ಪಾರ್ಟಿಯ ಜನಪ್ರತಿನಿಧಿಯ ಮನೆಬಾಗಿಲಿನ ತನಕ ಬಂದಿರುವುದು ನಿಜಕ್ಕೂ ಕುತೂಹಲಕರ ವಿಷಯವಾಗಿದೆ. ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳ ರೈತರ ಭೂಮಿಯ ಹಕ್ಕಿನ ವಿಷಯದಲ್ಲಿ ಈಗಾಗಲೇ ಗೊಂದಲ ಏರ್ಪಟ್ಟಿದ್ದು, ಅಲ್ಲಿನ ಸ್ಥಳೀಯ ಜಿಲ್ಲಾಡಳಿತ, ರಾಜ್ಯ ಸರಕಾರ ಮತ್ತು ವಿಪಕ್ಷಗಳ ನಡುವೆ ಹಗ್ಗ ಜಗ್ಗಾಟಕ್ಕೆ ಕಾರಣವಾಗಿದೆ.  ಇಲ್ಲಿಯ ತನಕ ರೈತರು ಈ ವಿಷಯದಲ್ಲಿ ಪ್ರತಿಭಟನೆ ಮಾಡುತ್ತಿದ್ದರೆ ಈಗ ಬಿಜೆಪಿಯ ಪ್ರತಿಷ್ಟಿತ ಕುಟುಂಬದ ಬುಡಕ್ಕೆ ವಕ್ಫ್ ಭೂಮಿಯ ವಿವಾದ ಬಂದಂತೆ ಕಾಣುತ್ತಿದೆ. ಚಿಕ್ಕೋಡಿಯ ಜೊಲ್ಲೆ ಕುಟುಂಬ ಗೊತ್ತಿಲ್ಲದವರು ಯಾರೂ ಇಲ್ಲ. ರಾಜಕೀಯವಾಗಿ, ಸಾಮಾಜಿಕವಾಗಿ ಪ್ರಬಲ ಪ್ರಭಾವಿ ಕುಟುಂಬವದು. ಅಂತಹ ಕುಟುಂಬದ ಸದಸ್ಯರಿಗೂ ಈಗ ವಕ್ಫ್ ಬಿಸಿ ತಟ್ಟಿದೆ.
ಚಿಕ್ಕೋಡಿಯ ಜೊಲ್ಲೆ ಕುಟುಂಬದ ಜಮೀನಿನಲ್ಲಿಯೂ ವಕ್ಫ್ ಹೆಸರು ನಮೂದಿಸಿದೆ. ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ಮಾಜಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಅವರ ಪುತ್ರ ಬಸವಪ್ರಸಾದ ಅವರ ಹೆಸರಿನಲ್ಲಿರುವ ಜಮೀನು ವಕ್ಫ್ ಬೋರ್ಡಿಗೆ ಸೇರಿದ್ದು ಎಂದು ಹೆಸರಿಸಲಾಗಿದೆ. ಸ್ವಗ್ರಾಮ ಯಕ್ಸಂಬಾ ಗ್ರಾಮದ ಜಮೀನು ಮತ್ತು ಅದರೊಂದಿಗೆ ಜೊಲ್ಲೆ ಕುಟುಂಬದ ಹಲವು ಜನರ ಜಮೀನಿಗೂ ಇದೀಗ ಆತಂಕ ಎದುರಾಗಿದೆ. ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದ ಹಲವಾರು ರೈತರ ಜಮೀನಿಗೆ ವಕ್ಫ್ ಹೆಸರು ನಮೂದು ಮಾಡಲಾಗಿದೆ. ಇಲ್ಲಿಯ ತನಕ ಕೃಷಿಕರ, ಜನಸಾಮಾನ್ಯರ ಜಮೀನುಗಳು ಮಾತ್ರ ವಕ್ಫ್ ಬೋರ್ಡಿನ ಹೆಸರಿಗೆ ನಮೂದನೆಯಾಗಿದ್ದು, ಈಗ ಪ್ರಭಾವಿಗಳ ಭೂಮಿಯೂ ಅದೇ ದಾರಿಯಲ್ಲಿ ಸಾಗುತ್ತಿರುವುದು ಈ ಒಟ್ಟು ಪ್ರಕರಣವನ್ನು ಇನ್ನಷ್ಟು ಕಗ್ಗಂಟಾಗಿ ಪರಿವರ್ತಿಸಿದೆ.

0
Shares
  • Share On Facebook
  • Tweet It




Trending Now
ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
Tulunadu News June 16, 2026
Najlepsze bonusy i sloty w polskim kasynie online
Tulunadu News May 29, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
    • Najlepsze bonusy i sloty w polskim kasynie online
    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
  • Popular Posts

    • 1
      ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ

  • Privacy Policy
  • Contact
© Tulunadu Infomedia.

Press enter/return to begin your search