ರಾಹುಲ್ ಪ್ರಚಾರ ಮಾಡಿದ ಏಳು ಕ್ಷೇತ್ರಗಳಲ್ಲಿ ಆರರಲ್ಲಿ ಬಿಜೆಪಿ ಗೆಲುವು!
ಮಹಾರಾಷ್ಟ್ರ ವಿಧಾನಸಭಾ ಕ್ಷೇತ್ರಗಳಲ್ಲಿ ನಿರೀಕ್ಷೆಗೂ ಮೀರಿ ಭಾರತೀಯ ಜನತಾ ಪಾರ್ಟಿ ನೇತೃತ್ವದ ಮಹಾಯುತಿ ಒಕ್ಕೂಟ ಅಭೂತಪೂರ್ವ ಸಾಧನೆ ಮಾಡಿದೆ. ಒಟ್ಟು 288 ಕ್ಷೇತ್ರಗಳಲ್ಲಿ 230 ಗೆಲ್ಲುವ ಮೂಲಕ ಸುಸ್ಥಿರ ಸರಕಾರ ನೀಡಲು ಚುನಾವಣಾ ಪೂರ್ವ ಮೈತ್ರಿ ಪಕ್ಷಗಳು ಒಟ್ಟಾಗಿದೆ. ಸರಳ ಬಹುಮತಕ್ಕೆ 145 ಸೀಟುಗಳು ಸಾಕಿದ್ದರೂ ಮಹಾಯುತಿ ಒಕ್ಕೂಟಕ್ಕೆ ದೊರಕಿರುವ ಈ ಸೀಟುಗಳನ್ನು ನೋಡಿ ರಾಜಕೀಯ ಪಂಡಿತರು ಕೂಡ ಅವಕ್ಕಾಗಿದ್ದಾರೆ. ಮಹಾ ವಿಕಾಸ ಅಘಾಡಿ ಯಲ್ಲಿರುವ ಕಾಂಗ್ರೆಸ್, ಉದ್ದವ್ ಬಣ ಮತ್ತು ಶರದ್ ಪವಾರ್ ಬಣ ಸಹಜವಾಗಿ ನಿರಾಸೆಯ ಮಡುವಿನಲ್ಲಿ ಇದೆ.
ಈಗ ಬಂದಿರುವ ಮಾಹಿತಿ ಪ್ರಕಾರ ಕಾಂಗ್ರೆಸ್ಸಿನ ರಾಷ್ಟ್ರೀಯ ಮುಖಂಡ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಹಾರಾಷ್ಟ್ರದಲ್ಲಿ ಏಳು ಬೃಹತ್ ಸಭೆಗಳಲ್ಲಿ ಭಾಗವಹಿಸಿ ವಿಪಕ್ಷ ಮೈತ್ರಿಕೂಟದ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದರು. ಅದರಲ್ಲಿ ಆರರಲ್ಲಿ ಭಾರತೀಯ ಜನತಾ ಪಾರ್ಟಿ ನೇತೃತ್ವದ ಒಕ್ಕೂಟ ಗೆಲ್ಲುವ ಮೂಲಕ ಹೊಸ ಸಾಧನೆ ಮಾಡಿದೆ. ಅಷ್ಟೇ ಅಲ್ಲ, 2019 ರಲ್ಲಿ ಗೆದ್ದಿರುವ ಅಂತರಕ್ಕಿಂತ ಈ ಬಾರಿ ಗೆದ್ದ ಶಾಸಕರ ಅಂತರ ಜಾಸ್ತಿ ಇರುವುದು ಕೂಡ ಕಾಂಗ್ರೆಸ್ಸಿಗೆ ತೀವ್ರ ಇರಿಸುಮುರಿಸು ಉಂಟಾಗುವಂತೆ ಮಾಡಿದೆ.
ಮಹಾರಾಷ್ಟ್ರದ ನಂದೂರಬರ್, ದಾಮಾನಗಾಂವ್, ನಾಗಪುರ ಈಸ್ಟ್, ಗೊಂಡಿಯಾ, ಚಿಮ್ಮೂರ್, ನಾಡೆಡ್ ಉತ್ತರ, ಬಾಂದ್ರಾ ಈಸ್ಟ್ ನಲ್ಲಿ ರಾಹುಲ್ ಗಾಂಧಿ ವ್ಯಾಪಕ ಪ್ರಚಾರ ಮಾಡಿದ್ದರು. ಅದರಲ್ಲಿ ಬಾಂದ್ರಾ ಈಸ್ಟ್ ನಲ್ಲಿ ಉದ್ದವ್ ಠಾಕ್ರೆಯ ಬಣದ ಅಭ್ಯರ್ಥಿ ಗೆದ್ದದ್ದು ಬಿಟ್ಟರೆ ಉಳಿದ ಆರು ಕಡೆಗಳಲ್ಲಿ ಮಹಾ ವಿಕಾಸ್ ಅಘಾಡಿ ಅಭ್ಯರ್ಥಿಗಳು ಗೆದ್ದಿಲ್ಲ. ಇದು ಒಟ್ಟಾರೆಯಾಗಿ ರಾಹುಲ್ ಗಾಂಧಿಯವರ ವರ್ಚಸ್ಸು ಮತ್ತು ಕಾಂಗ್ರೆಸ್ ಇಮೇಜಿಗೆ ಹೊಡೆತ ಬಿದ್ದಂತೆ ಕಾಣುತ್ತದೆ.
ಹಾಗಂತ ನರೇಂದ್ರ ಮೋದಿಯವರು ಪ್ರಚಾರ ಮಾಡಿದ ಎಲ್ಲಾ ಕಡೆಗಳಲ್ಲಿ ಬಿಜೆಪಿ ಗೆಲ್ಲುತ್ತೆ ಎಂದಲ್ಲ. ಆದರೆ ಗೆಲುವಿನ ಶೇಕಡಾವಾರು ಪ್ರಮಾಣ ರಾಹುಲ್ ಅವರಿಗೆ ಹೋಲಿಸಿದರೆ ಹೆಚ್ಚಿದೆ. ಈ ಬಾರಿ ಮೋದಿಯವರು ಮಹಾರಾಷ್ಟ್ರದ 11 ಕಡೆಗಳಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಪ್ರಚಾರ ಮಾಡಿದ್ದಾರೆ. ದುಲೆ ಸಿಟಿ, ನಾಸಿಕ್, ಅಕೋಲ, ನಾಂಡೆಡ್, ಪುಣೆ, ಸೋಲಾಪುರ ಸಿಟಿ ಸೆಂಟ್ರಲ್, ಚಿಮ್ಮೂರು, ಅಮರಾವತಿ, ಪವೇಲ್, ಛತ್ರಪತಿ ಸಂಬಾಜಿ ನಗರ ಮತ್ತು ಮುಂಬೈ. ಇದರಲ್ಲಿ ಅಕೋಲ (ವೆಸ್ಟ್) ಮಾತ್ರ ಭಾಜಪಾ ಮೈತ್ರಿಕೂಟಕ್ಕೆ ಒಲಿಯಲಿಲ್ಲ ಬಿಟ್ಟರೆ ಬೇರೆ ಎಲ್ಲಾ ಕಡೆ ನರೇಂದ್ರ ಮೋದಿಯವರ ಪ್ರಚಾರ ವ್ಯರ್ಥವಾಗಲಿಲ್ಲ. ಬಿಜೆಪಿ ಪದಾಧಿಕಾರಿಯೊಬ್ಬರ ಪ್ರಕಾರ ” ಪ್ರಧಾನಿ ನರೇಂದ್ರ ಮೋದಿಯವರು ಒಂದು ಕ್ಷೇತ್ರದಲ್ಲಿ ಸಾರ್ವಜನಿಕ ರ್ಯಾಲಿಗಳಲ್ಲಿ ಭಾಗವಹಿಸುವಾಗ ಅದರ ಪ್ರಭಾವ ಸುತ್ತಲಿನ ಎಲ್ಲಾ ಕ್ಷೇತ್ರಗಳಿಗೂ ಆಗುತ್ತದೆ. ಅವರು ಹನ್ನೊಂದು ಕ್ಷೇತ್ರದಲ್ಲಿ ಸ್ವತ: ಪ್ರಚಾರ ಮಾಡಿದರೂ ಇದರ ಪ್ರಭಾವ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸರಾಸರಿ 106 ಕ್ಷೇತ್ರಗಳಲ್ಲಿ ಆಗಿದೆ. ಇನ್ನು ಆ 106 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳು ಮಾತ್ರ ವಿಪಕ್ಷಗಳ ಬುಟ್ಟಿಗೆ ಹೋಗಿವೆ.
Leave A Reply