ಮನೆಗೆ ಗಣ್ಯರು ಕಳುಹಿಸುವ ಸ್ವೀಟ್ಸ್ ತಿನ್ನುವ ಮೊದಲು ಈ ಸುದ್ದಿ ಓದಿ!
ಅವನ ಹೆಸರು ಸೌಹಾರ್ದ ಪಟೇಲ್. ಇವನು ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕಾನೂನು ಮಹಾವಿದ್ಯಾಲಯದಲ್ಲಿ ಪದವಿ ಪಡೆಯುತ್ತಿದ್ದ. ಅಲ್ಲಿ ಓರ್ವ ಯುವತಿಯ ಮೇಲೆ ಇವನಿಗೆ ಪ್ರೇಮಾಂಕುರವಾಗಿದೆ. ಈ ವಿಷಯ ತಿಳಿದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್ ಎಂಬುವರು ಆ ಯುವತಿಯನ್ನು ಸೌಹಾರ್ದ್ ಪಟೇಲ್ ನಿಂದ ದೂರ ಮಾಡಿದ್ದರು. ಇದು ಪಟೇಲ್ ಗೆ ನಾಗರಾಜ್ ಮೇಲೆ ಆಕ್ರೋಶ ಬರುವಂತೆ ಮಾಡಿತ್ತು.
ಲವ್ ತಪ್ಪಿ ಹೋದ ಕಾರಣ ಪಟೇಲ್ ಡಿಪ್ರೇಶನ್ ಗೆ ಒಳಗಾಗಿದ್ದ. ಇವನ ಕಿರಿಕಿರಿಯಿಂದ ಇವನ ತಂದೆ, ತಾಯಿ ಬೇರೆಡೆ ವಾಸಿಸುತ್ತಿದ್ದರು. ಇವನಿಗೆ ಮಾನಸಿಕ ಚಿಕಿತ್ಸೆ ನೀಡುತ್ತಿದ್ದ ತಜ್ಞ ವೈದ್ಯರಾದ ಅರವಿಂದ್ ಮತ್ತು ಕೆಎಸ್ ಪವಿತ್ರ ಅವರು ನೀಡುತ್ತಿದ್ದ ಮಾತ್ರೆಗಳು ಇವನಿಗೆ ತಾನು ರೋಗಿ ಎನ್ನುವ ಕೀಳರಿಮೆಯನ್ನು ತಂದು ವೈದ್ಯರ ಮೇಲೆಯೂ ಈತ ಸಿಟ್ಟಾಗಿದ್ದ. ಇವರಿಗೆಲ್ಲಾ ಏನಾದರೂ ಮಾಡಬೇಕು ಎನ್ನುವ ಹಟಕ್ಕೆ ಬಿದ್ದ ಪಟೇಲ್ ಮಾನಸಿಕ ಅಸ್ವಸ್ಥನಾಗಿದ್ದರೂ ಮಾಡಿದ ಉಪಾಯ ಮಾತ್ರ ದಂಗುಬಡಿಸುವಂತಿತ್ತು.
ಇವನು ತನಗೆ ದ್ವೇಷ ಇರುವಂತಹ ಮೂವರಿಗೂ ಸ್ವೀಟ್ಸ್ ಬಾಕ್ಸ್ ಕಳುಹಿಸಿಕೊಡಲು ನಿರ್ಧರಿಸಿದ. ಹೀಗೆ ಪಾರ್ಸೆಲ್ ಹೋದರೆ ಅವರು ತಿನ್ನುವುದು ಡೌಟು ಎನ್ನುವ ಕಾರಣಕ್ಕೆ ಕಳುಹಿಸಿಕೊಟ್ಟಿದ್ದು ಒಬ್ಬ ವಿಐಪಿ ಎನ್ನುವ ಇಪ್ರೆಶನ್ ಬರಲು ಬಾಕ್ಸ್ ಮೇಲೆ ಶಿವಮೊಗ್ಗದ ಈಗ ವಿಧಾನಪರಿಷತ್ ಸದಸ್ಯರೂ ಆಗಿರುವ ಡಾ. ಧನಂಜಯ್ ಸರ್ಜಿ ಹೆಸರು ಬರೆಯುತ್ತಾನೆ.
ಮೂಲತ: ಭದ್ರವಾತಿ ನಿವಾಸಿಯಾಗಿರುವ ಈ ಮಾನಸಿಕ ರೋಗಿ ಸೌಹಾರ್ದ್ ಪಟೇಲ್ ಧನಂಜಯ್ ಸರ್ಜಿ ಹೆಸರಿನಲ್ಲಿ ಈ ಮೂವರು ಗಣ್ಯರಿಗೆ ಕಳುಹಿಸಿಕೊಟ್ಟ ಸ್ಪೀಟ್ಸ್ ಬಾಕ್ಸಿನಲ್ಲಿ ವಿಷಪೂರಿತ ಅಂಶಗಳನ್ನು ಹಾಕಿ ಕಳುಹಿಸಿಕೊಟ್ಟಿದ್ದ. ಸ್ವೀಟ್ಸ್ ಬಾಕ್ಸ್ ತೆರೆದ ಒಬ್ಬರು ಅದನ್ನು ಬಾಯಿಗೆ ಹಾಕಿಕೊಂಡ ತಕ್ಷಣ ಕಹಿ ಅಂಶ ಪತ್ತೆಯಾಗಿದೆ. ಕೂಡಲೇ ಪ್ರಕರಣ ಬೆಳಕಿಗೆ ಬಂದಿದ್ದು, ದೊಡ್ಡ ಅಪಾಯ ತಪ್ಪಿದೆ. ಸದ್ಯ ಸ್ವೀಟ್ಸ್ ಬಾಕ್ಸ್ ಲ್ಯಾಬಿಗೆ ರವಾನೆಯಾಗಿದೆ. ಸರ್ಜಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಆರೋಪಿ ಸೌಹಾರ್ದ ಪಟೇಲ್ ಈಗ ನ್ಯಾಯಾಂಗ ಬಂಧನದಲ್ಲಿದ್ದಾನೆ
Leave A Reply