ಪಾಕ್ ನಲ್ಲಿ ಮತಾಂತರದ ಒತ್ತಡ ಹೇಗಿರುತ್ತೆ ಎಂದು ಮತ್ತೆ ಧ್ವನಿ ಎತ್ತಿದ ಕನೇರಿಯಾ!

ಕನೇರಿಯಾ ಅವರಿಗೆ ತಮ್ಮ ವೃತ್ತಿ ಬದುಕಿನ ಕರಾಳತೆಯನ್ನು ಮರೆಯಲು ಆಗುತ್ತಿಲ್ಲ. ಸದ್ಯ ಅಮೇರಿಕಾದಲ್ಲಿ ನೆಲೆಸಿರುವ ಕನೇರಿಯಾ ಒಂದು ವೇಳೆ ಹಿಂದೂ ಅಲ್ಲದೇ ಮುಸಲೀಯರಾಗಿದ್ದರೆ ಅವರಿಗೆ ಇನ್ನಷ್ಟು ಅವಕಾಶ ಸಿಗುತ್ತಿತ್ತೇನೋ ಎನ್ನುವುದು ಅವರ ಅಭಿಪ್ರಾಯದಿಂದ ಯಾವಾಗಲೂ ಚರ್ಚೆಯಲ್ಲಿರುವ ಸಂಗತಿ. ಯಾಕೆಂದರೆ ಅವರೇ ಹೇಳುವ ಹಾಗೆ ” ಪಾಕ್ ತಂಡದಲ್ಲಿ ತಾರತಮ್ಯ ನೀತಿಯಿಂದಾಗಿ ನನಗೆ ಸಿಗಬೇಕಾದ ಗೌರವ ಸಿಕ್ಕಿರಲಿಲ್ಲ. ಧರ್ಮದ ಕಾರಣದಿಂದಾಗಿಯೇ ನನ್ನ ಕ್ರಿಕೆಟ್ ಭವಿಷ್ಯ ನಾಶಪಡಿಸಿದರು. ಅಖ್ತರ್, ಅಫ್ರಿದಿ ಸೇರಿದಂತೆ ಹಲವರು ಬಹಳ ತೊಂದರೆ ನೀಡಿದರು. ನನ್ನೊಂದಿಗೆ ಕುಳಿತು ತಿನ್ನಲು ಹಿಂಜರಿಯುತ್ತಿದ್ದರು. ಆಫ್ರಿದಿಯಂತೂ ನನ್ನನ್ನು ಬಹಳ ಬಾರಿ ಮತಾಂತರವಾಗಲು ಒತ್ತಾಯಿಸಿದ್ದ” ಎಂದು ಹೇಳಿದ್ದಾರೆ. ಕನೇರಿಯಾ 2000 ದಿಂದ 2010 ರವರೆಗೆ ಪಾಕ್ ಪರ 61 ಟೆಸ್ಟ್ ಹಾಗೂ 18 ಏಕದಿನ ಪಂದ್ಯಗಳನ್ನು ಆಡಿದ್ದಾರೆ.
44 ರ ಹರೆಯದ ಕನೇರಿಯಾ ಈ ವಿಷಯವನ್ನು ಈ ಹಿಂದೆನೂ ಒಮ್ಮೆ ಹೇಳಿದಾಗ ಅವರಿಗೆ ಬೆದರಿಕೆಗಳು ಬಂದಿದ್ದವು. ಆದರೆ ತಮ್ಮ ಮಾತಿಗೆ ಬದ್ಧರಾಗಿರುವ ಕನೇರಿಯಾ ಅವರು ಯಾವ ಕಾರಣಕ್ಕೂ ಧರ್ಮ ಬಿಡುವ ಪ್ರಶ್ನೆಯೇ ಇಲ್ಲ ಎಂದು ಒತ್ತಿ ಹೇಳಿದ್ದರು. ವೃತ್ತಿಗಿಂತ ಧರ್ಮ ಮುಖ್ಯ ಎಂದು ಹೇಳುವ ಕನೇರಿಯಾ ವೃತ್ತಿ ಬೇಕಾದರೂ ತೊರೆಯುತ್ತೇನೆ. ಆದರೆ ಧರ್ಮವನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದರು. ಆ ಸಂದರ್ಭದಲ್ಲಿ ಕನೇರಿಯಾ ಭಾರತಕ್ಕೆ ಬಂದು ನೆಲೆಸುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ ಅವರು ಪ್ರಸ್ತುತ ಅಮೇರಿಕಾದಲ್ಲಿ ನೆಲೆಸಿದ್ದಾರೆ.
Leave A Reply